- Home
- Karnataka Districts
- Hyena: ಚಾಮರಾಜನಗರದಲ್ಲಿ ಅಪರೂಪದ ಹೈನಾ ಪ್ರತ್ಯಕ್ಷ! ಗ್ರಾಮದಲ್ಲಿ ಆತಂಕ, ರಾತ್ರಿ ಸಂಚಾರಕ್ಕೆ ಡವಡವ!
Hyena: ಚಾಮರಾಜನಗರದಲ್ಲಿ ಅಪರೂಪದ ಹೈನಾ ಪ್ರತ್ಯಕ್ಷ! ಗ್ರಾಮದಲ್ಲಿ ಆತಂಕ, ರಾತ್ರಿ ಸಂಚಾರಕ್ಕೆ ಡವಡವ!
Chamarajanaagar wildlife ಕಾಡನ್ನೇ ಹಾಸುಹೊದ್ದಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಾರೇಮಾಳ ಗ್ರಾಮದಲ್ಲಿ ಅಪರೂಪದ ಕತ್ತೆಕಿರುಬ (ಹೈನಾ) ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಚಾಮರಾಜನಗರದಲ್ಲಿ ಅಪರೂಪದ ಹೈನಾ ಪ್ರತ್ಯಕ್ಷ!
ಚಾಮರಾಜನಗರ(ಜು.4): ಕಾಡನ್ನೇ ಹಾಸುಹೊದ್ದಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಾರೇಮಾಳ ಗ್ರಾಮದಲ್ಲಿ ಅಪರೂಪದ ಕತ್ತೆಕಿರುಬ (ಹೈನಾ) ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ರಾತ್ರಿ ವೇಳೆ ಹೈನಾ ಗ್ರಾಮಕ್ಕೆ ಎಂಟ್ರಿ!
ಬಂಡೀಪುರ ಅರಣ್ಯ ವ್ಯಾಪ್ತಿಯ ಕಾರೇಮಾಳ ಗ್ರಾಮದಲ್ಲಿ ಇದೇ ಮೊದಲಸಲ ರಾತ್ರಿ ವೇಳೆ ಹೈನಾ ಹಲವರ ಕಣ್ಣೀಗೆ ಬಿದ್ದಿದೆ. ಸ್ಥಳೀಯರು ರಸ್ತೆಮಾರ್ಗವಾಗಿ ಸಂಚರಿಸುವಾಗ ಕಾಡಿನಲ್ಲಿ ಹೈನಾ ಓಡಾಟ ಕಂಡು ಬೆಚ್ಚಿಬಿದ್ದಿದ್ದಾರೆ. ಹೈನಾ ಸಂಚರಿಸುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದರಿಂದ ಇದೀಗ ಸೊಷಿಯಲ್ ಮೀಡಿಯಾದಲ್ಲಿ ಹೈನಾ ಸಂಚರಿಸುವ ವಿಡಿಯೋ ವೈರಲ್ ಆಗಿದೆ.
ರಸ್ತೆಗಳ ಮೇಲೆ ರಾತ್ರಿ ಸಂಚರಿಸಲು ಭಯವಾಗುತ್ತಿದೆ. ಈಗಾಗಲೇ ಕಾಡಾನೆ, ಹುಲಿ ಚಿರತೆಗಳ ದಾಳಿಯ ಭಯದಲ್ಲಿರುವ ಸ್ಥಳೀಯ ಗ್ರಾಮಸ್ಥರಿಗೆ ಇದೀಗ ಹೊಸದೊಂದು ಅತಿ ಭಯಂಕರವಾಗಿ ದಾಳಿ ಮಾಡು ಹೈನಾ ಕಂಡು ಆತಂಕ ವ್ಯಕ್ತಪಡಿಸಿದ್ದಾರೆ. ಹೈನಾ ಸಂಚರಿಸುವ ವಿಡಿಯೋ ಗ್ರಾಮಗಳಲ್ಲಿ ವನ್ಯಜೀವಿಗಳ ಸಂಚಾರ ಹೆಚ್ಚುತ್ತಿರುವುದನ್ನ ತೋರಿಸಿದೆ.
ಹೈನಾ ಕಂಡು ಗ್ರಾಮಸ್ಥರಲ್ಲಿ ಆತಂಕ
ಗ್ರಾಮದ ಸಮೀಪವೇ ಹೈನಾ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ರಾತ್ರಿ ವೇಳೆಯಲ್ಲಿ ವನ್ಯಜೀವಿಗಳ ಸಂಚಾರ ಹೆಚ್ಚು ಹಿನ್ನೆಲೆ ಹೊರಗಡೆ ಓಡಾಡದಂತೆ, ರಾತ್ರಿ ವೇಳೆ ಸಂಚರಿಸದಮತೆ ಎಚ್ಚರಿಕೆ ನೀಡಲಾಗಿದೆ.

