MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Bengaluru Tunnel Road Project
BRICS Summit 2026
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Bigg Boss Kannada 13
Ganesh Festival Restrictions
Karnataka Guarantee Schemes
Karnataka Apex Bank Election
Prajwal Revanna Case
  • Home
  • Karnataka Districts
  • Mysuru: ವೀಕೆಂಡ್ ಪಾರ್ಟಿಯಲ್ಲಿ ಗಲಾಟೆ; ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಟೆಕ್ಕಿ

Mysuru: ವೀಕೆಂಡ್ ಪಾರ್ಟಿಯಲ್ಲಿ ಗಲಾಟೆ; ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ ಟೆಕ್ಕಿ

ಮೈಸೂರಿನ ಪಬ್‌ನಲ್ಲಿ ವೀಕೆಂಡ್ ಪಾರ್ಟಿ ಮುಗಿಸಿ ಹೊರಬರುವಾಗ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆಯಲ್ಲಿ 32 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಸಾವನ್ನಪ್ಪಿದ್ದಾರೆ. ಪಬ್‌ನ ಎರಡನೇ ಮಹಡಿಯಿಂದ ತಳ್ಳಲ್ಪಟ್ಟ ಪರಿಣಾಮವಾಗಿ, ನಿಶಾಂತ್ ಎಂಬ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

2 Min read
Author : Mahmad Rafik
Published : Apr 19 2026, 03:00 PM IST
Share this Photo Gallery
  • FB
  • TW
  • Linkdin
  • Whatsapp
15
ಸಾವಿನಲ್ಲಿ ಅಂತ್ಯವಾದ ಗಲಾಟೆ
Image Credit : Asianet News

ಸಾವಿನಲ್ಲಿ ಅಂತ್ಯವಾದ ಗಲಾಟೆ

ವೀಕೆಂಡ್ ಪಾರ್ಟಿ ಅಂತ ಸ್ನೇಹಿತರ ಜೊತೆ ಪಬ್‌ಗೆ ಹೋಗಿದ್ದ 32 ವರ್ಷದ ಟೆಕ್ಕಿಯ ಪ್ರಾಣಪಕ್ಷಿ ಹಾರಿ ಹೋಗಿದೆ. ಕುಡಿದು ಬಿಲ್ ಕಟ್ಟಿ ಹೊರ ಬರುವ ವೇಳೆ ಯುವಕರ ಗುಂಪಿನಲ್ಲಿ ಗಲಾಟೆಯಾಗಿದೆ. ಈ ಗಲಾಟೆ ಸಾವಿನಲ್ಲಿ ಅಂತ್ಯವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಎರಡು ಗುಂಪಿನ ನಡುವೆ ಗಲಾಟೆ
Image Credit : our own

ಎರಡು ಗುಂಪಿನ ನಡುವೆ ಗಲಾಟೆ

ಕ್ಷುಲ್ಲಕ ಕಾರಣಕ್ಕೆ ಯುವಕರ ಎರಡು ಗುಂಪಿನ ನಡುವೆ ನಡೆದ ಗಲಾಟೆ ಯುವಕನ ಸಾವಿನಲ್ಲಿ ಅಂತ್ಯವಾದ ಘಟನೆ ಮೈಸೂರಿನ ವಿಜಯನಗರ ಎರಡನೇ ಹಂತದ ಪರ್ಪಲ್ ಹೆಜ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ. ಗೋಕುಲಂ ನಿವಾಸಿ ನಿಶಾಂತ್ (32) ಕೊಲೆಯಾದ ದುರ್ದೈವಿ. ವಿಜಯ ನಗರ ನಿವಾಸಿ ಟ್ಯಾಂಕ್ ರಾಕಿ ಸಹಚರರಿಂದ ನಿಶಾಂತ್ ಕೊ*ಲೆ ಆಗಿರುವ ಆರೋಪ ಕೇಳಿ ಬಂದಿದೆ.

Related Articles

Related image1
6 ನಿಮಿಷದ ಸೀನ್‌ಗಾಗಿ 90 ಕೋಟಿ ಖರ್ಚು ಮಾಡಿದ್ರು; ಕೊನೆಗೆ ಸಿನಿಮಾದಿಂದಲೇ ಡಿಲೀಟ್ ಆಯ್ತು ದೃಶ್ಯ
Related image2
ನಿಂಬೆ ಹಣ್ಣಿಗೆ ಉದುರಿದ ವಿಕೆಟ್! ಚೆನ್ನೈ ಎದುರು ವಾಮಾಚಾರ ಮಾಡಿ ಪಂದ್ಯ ಗೆದ್ದಿತಾ ಸನ್‌ರೈಸರ್ಸ್ ಹೈದರಾಬಾದ್? ವಿಡಿಯೋ ವೈರಲ್
35
 ಕ್ಷುಲ್ಲಕ ವಿಚಾರಕ್ಕೆ ಗಲಾಟೆ
Image Credit : X

ಕ್ಷುಲ್ಲಕ ವಿಚಾರಕ್ಕೆ ಗಲಾಟೆ

ಪಬ್ ನಲ್ಲಿ ಪಾರ್ಟಿ ಮುಗಿಸಿ ಹೊರಬರುವಾಗ ಕೈ ತಾಕಿದ ವಿಚಾರಕ್ಕೆ ಗಲಾಟೆ ನಡೆದಿದೆ. ಮೃತ ನಿಶಾಂತ್, ಸಂದೀಪ್, ದೀಕ್ಷಿತ್ ಮೂವರು ಸ್ನೇಹಿತರಿಂದ ಪಬ್ ನಲ್ಲಿ ಪಾರ್ಟಿ ಮಾಡಿ ಹೊರ ಬರುವ ವೇಳೆ ಟ್ಯಾಂಕ್ ರಾಕಿ ಸಹಚರರು ಎದುರಾಗಿದ್ದರು. ಆಗ ಕ್ಷುಲ್ಲಕ ವಿಚಾರಕ್ಕೆ ನಿಶಾಂತ್ ಸ್ನೇಹಿತರು ಟ್ಯಾಂಕ್ ರಾಕಿ ಸಹಚರರ ನಡುವೆ ಗಲಾಟೆಯಾಗಿದೆ. ಈ ವೇಳೆ ಪಬ್ ನ ಎರಡನೇ ಮಹಡಿಯಿಂದ ನಿಶಾಂತ್ ತಳ್ಳಿದ್ದಾರೆ. ಕೆಳಗೆ ಬಿದ್ದ ನಿಶಾಂತ್ ಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.

45
ವರ್ಕ್ ಫ್ರಂ ಹೋಮ್ ಮಾಡುತ್ತಿದ್ದ ನಿಶಾಂತ್
Image Credit : X

ವರ್ಕ್ ಫ್ರಂ ಹೋಮ್ ಮಾಡುತ್ತಿದ್ದ ನಿಶಾಂತ್

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನೀಯರ್ ಆಗಿದ್ದ ಮೃತ ನಿಶಾಂತ್, ಮೈಸೂರಿನ ಗೋಕುಲಂ‌ನಲ್ಲಿ ವಾಸವಿದ್ದು, ವರ್ಕ್ ಫ್ರಂ ಹೋಮ್ ಮಾಡುತ್ತಿದ್ದ. ರಾತ್ರಿ 9.30ರ ಸುಮಾರಿಗೆ ಊಟ ಮಾಡಿ, ಹೊರ ಬಂದ ನೀಶಾಂತ್ ಸ್ನೇಹಿತರ ಕರೆ ಬಂತು ಅಂತ ಪಬ್‌ಗೆ ಹೋಗಿದ್ದ. ತಡ ರಾತ್ರಿ ಮನೆಯವರಿವೆ ವಿಷಯ ತಿಳಿದಿದ್ದು, ಬರುವಷ್ಟರಲ್ಲಿ ಮಗನ ಪ್ರಾಣ ಹಾರಿ ಹೋಗಿದೆ.

ಇದನ್ನೂ ಓದಿ: 6 ನಿಮಿಷದ ಸೀನ್‌ಗಾಗಿ 90 ಕೋಟಿ ಖರ್ಚು ಮಾಡಿದ್ರು; ಕೊನೆಗೆ ಸಿನಿಮಾದಿಂದಲೇ ಡಿಲೀಟ್ ಆಯ್ತು ದೃಶ್ಯ

55
ಆರೋಪಿಗಳಿಗಾಗಿ ಹುಡುಕಾಟ
Image Credit : X

ಆರೋಪಿಗಳಿಗಾಗಿ ಹುಡುಕಾಟ

ಕೈ ತುಂಬಾ ಸಂಬಳ ಬರುವ ಒಳ್ಳೆ ಉದ್ಯೋಗ, ಸುಖ ಸಂಸಾರ ಎಲ್ಲವೂ ಇದ್ದ ಯುವಕ‌ ಪಾರ್ಟಿ ಗುಂಗಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಎಸ್ಕೇಪ್ ಆಗಿರೋ ಆರೋಪಿಗಳಿಗಾಗಿ ವಿಜಯನಗರ ಪೊಲೀಸರಿಂದ ಶೋಧ ಕಾರ್ಯ ಮುಂದುವರೆಸಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಜಪ್ತಿ ಮಾಡಿದ್ದ ಟ್ರಕ್ ರಿಲೀಸ್‌ಗೆ 55 ಲಕ್ಷಕ್ಕೆ ಬೇಡಿಕೆ : 10 ಲಕ್ಷ ಲಂಚ ಸ್ವೀಕರಿಸುತ್ತಿದ್ದ GST ಅಧಿಕಾರಿಗಳು ಎಸಿಬಿ ಬಲೆಗೆ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಮೈಸೂರು
ಟೆಕ್ಕಿ
ಕೊಲೆ
ಕ್ರೈಮ್ ನ್ಯೂಸ್

Latest Videos
Recommended Stories
Recommended image1
'ಇಡಿ ದಾಳಿ ಸುಮ್ಮನೆ ನಡೆಯಲ್ಲ': ಸತೀಶ್ ಜಾರಕಿಹೊಳಿ ಪ್ರಕರಣದಲ್ಲಿ ಶಾಸಕ ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ?
Recommended image2
ED Raid: ಪ್ರಧಾನಿ ಮೋದಿ ಹೇಳಿದ್ದನ್ನೇ ಸತೀಶ್ ಜಾರಕಿಹೊಳಿ ಮಾಡುತ್ತಿದ್ದಾರೆ; ಸಚಿವ ಪ್ರಿಯಾಂಕ್ ಖರ್ಗೆ ಅಚ್ಚರಿ ಹೇಳಿಕೆ!
Recommended image3
ಬೆಂಗಳೂರು ಪ್ಯಾಲೇಸ್ ರಸ್ತೆಯಿಂದ ಹೆಬ್ಬಾಳದವರೆಗೂ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ
Related Stories
Recommended image1
6 ನಿಮಿಷದ ಸೀನ್‌ಗಾಗಿ 90 ಕೋಟಿ ಖರ್ಚು ಮಾಡಿದ್ರು; ಕೊನೆಗೆ ಸಿನಿಮಾದಿಂದಲೇ ಡಿಲೀಟ್ ಆಯ್ತು ದೃಶ್ಯ
Recommended image2
ನಿಂಬೆ ಹಣ್ಣಿಗೆ ಉದುರಿದ ವಿಕೆಟ್! ಚೆನ್ನೈ ಎದುರು ವಾಮಾಚಾರ ಮಾಡಿ ಪಂದ್ಯ ಗೆದ್ದಿತಾ ಸನ್‌ರೈಸರ್ಸ್ ಹೈದರಾಬಾದ್? ವಿಡಿಯೋ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved