- Home
- Karnataka Districts
- ಶಿವಮೊಗ್ಗ: ಸೂರಣಗಿ ಗ್ರಾಮದಲ್ಲಿ ಭೀಕರ ದುರಂತ; ಶೆಡ್ಗೆ ಬೆಂಕಿ ಬಿದ್ದು 300ಕ್ಕೂ ಹೆಚ್ಚು ಕುರಿಗಳು ಸಜೀವ ದಹನ!
ಶಿವಮೊಗ್ಗ: ಸೂರಣಗಿ ಗ್ರಾಮದಲ್ಲಿ ಭೀಕರ ದುರಂತ; ಶೆಡ್ಗೆ ಬೆಂಕಿ ಬಿದ್ದು 300ಕ್ಕೂ ಹೆಚ್ಚು ಕುರಿಗಳು ಸಜೀವ ದಹನ!
ಸೊರಬ: ಕುರಿ ಶೆಡ್ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಶೆಡ್ನಲ್ಲಿ 300ಕ್ಕೂ ಹೆಚ್ಚು ಕುರಿ, ಕುರಿಮರಿಗಳು ಸಜೀವ ದಹನಗೊಂಡ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ.

ಶಿವಮೊಗ್ಗದಲ್ಲಿ ಭೀಕರ ಅಗ್ನಿ ಅವಘಡ 300 ಕುರಿಗಳು ಸಜೀವ ದಹನ!
ಸೊರಬ: ಕುರಿ ಶೆಡ್ಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಶೆಡ್ನಲ್ಲಿ 300ಕ್ಕೂ ಹೆಚ್ಚು ಕುರಿ, ಕುರಿಮರಿಗಳು ಸಜೀವ ದಹನಗೊಂಡ ಆಘಾತಕಾರಿ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ.
ಸುಟ್ಟುಕರಕಲಾದ ಕುರಿಗಳು
ತಡರಾತ್ರಿ ಈ ದುರಂತ ಘಟನೆ ಸಂಭವಿಸಿದೆ, ರಾತ್ರಿ ವೇಳೆ ಸೆಡ್ನಲ್ಲಿದ್ದ ಮುನ್ನೂರಕ್ಕೂ ಹೆಚ್ಚು ಕುರಿಗಳು. ರಾತ್ರಿ ವೇಳೆಯಾದ್ದರಿಂದ ಸುರಕ್ಷತೆಗಾಗಿ ಶೆಡ್ ಲಾಕ್ ಮಾಡಲಾಗಿತ್ತು. ಆದರೆ ರಾತ್ರಿ ವೇಳೆ ಆಕಸ್ಮಿಕವಾಗಿ ಶೆಡ್ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಹೊರಬರಲಾಗದ ನೂರಾರು ಕುರಿಗಳು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸಜೀವ ದಹನಗೊಂಡು ಸುಟ್ಟು ಕರಕಲಾಗಿವೆ.
ಶೆಡ್ ಬೆಂಕಿಬಿದ್ದ ಬಗ್ಗೆ ರಾಮಣ್ಣ ಅನುಮಾನ
ಸೂರಣಗಿ ಗ್ರಾಮದ ರಾಮಣ್ಣ ಎಂಬುವವರಿಗೆ ಸೇರಿದ್ದ ಕುರಿಗಳು. ಕುರಿ ಸಾಕಣಿಕೆಯನ್ನ ಕಸುಬು ಮಾಡಿಕೊಂಡಿದ್ದ ರಾಮಣ್ಣ ಈ ಘಟನೆಯಿಂದಾಗಿ ಆಘಾತಗೊಂಡಿದ್ದಾರೆ. ಒಂದೆಡೆ ಸಾಕಿ ಸಲುಹಿದ ನೂರಾರು ಕುರಿಗಳು ಕಣ್ಮುಂದೆ ಸುಟ್ಟುಕರಕಲಾಗಿ ಬಿದ್ದಿರುವ ದೃಶ್ಯಗಳು ನೋವು ಇಮ್ಮಡಿಗೊಳಿಸಿದರೆ, ಇನ್ನೊಂದೆ ಶೆಡ್ಗೆ ಬೆಂಕಿ ಬಿದ್ದಿದ್ದು ಹೇಗೆ ಎಂಬ ಅನುಮಾನವೂ ಬಂದಿದೆ.
ಆಕಸ್ಮಿಕ ದುರಂತವೋ? ಕಿಡಿಗೇಡಿಗಳ ಕೃತ್ಯವೋ?
ಸುತ್ತಮುತ್ತ ಬೆಂಕಿ ಹೊತ್ತಿಕೊಳ್ಳುವಂತಹದ್ದೇನೂ ಇಲ್ಲ. ಇಷ್ಟು ವರ್ಷ ಇಲ್ಲದ್ದು ಈಗ ಅದ್ಹೇಗೆ ಬೆಂಕಿ ಶೆಡ್ಗೆ ಬೆಂಕಿ ತಗುಲಿದೆ ಎಂದು ರಾಮಣ್ಣ ಅನುಮಾನ ವ್ಯಕ್ತಪಡಿಸಿದ್ದಾರೆ. ಕುರಿ ಸಾಕಾಣಿಕೆಯನ್ನೇ ನಂಬಿ ಬದುಕಿದ್ದ ರಾಮಣ್ಣನಿಗೆ ಈಗ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸದ್ಯ ಘಟನೆ ಕುರಿತು ಆನವಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆ ಕುರಿತು ಸೂಕ್ತ ತನಿಖೆ ನಡೆಸಿ ನ್ಯಾಯ ಕೊಡಿಸಬೇಕು ಅಂತ ಪೊಲೀಸರಿಗೆ ಮನವಿ ಮಾಡಿದ್ದಾರೆ. ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಈ ದುರಂತ ಘಟನೆ ಗ್ರಾಮಸ್ಥರನ್ನೇ ಬೆಚ್ಚಿಬಿಳಿಸಿದೆ. ಇದು ಆಕಸ್ಮಿಕ ದುರಂತವೋ? ಕಿಡಿಗೇಡಿಗಳ ಕೃತ್ಯವೋ ಪೊಲೀಸ್ ತನಿಖೆ ಬಳಿಕವೇ ಗೊತ್ತಾಗಲಿದೆ.





