MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಸಿಎಂ ಖುರ್ಚಿ ಗುದ್ದಾಟದಲ್ಲಿ 5 ಲಕ್ಷ ಮಕ್ಕಳು ಅತಂತ್ರ: ಪಾಲಿಸದ ಹೈಕೋರ್ಟ್​ ಆದೇಶ- ಪಾಲಕರ ಕಣ್ಣೀರು

ಸಿಎಂ ಖುರ್ಚಿ ಗುದ್ದಾಟದಲ್ಲಿ 5 ಲಕ್ಷ ಮಕ್ಕಳು ಅತಂತ್ರ: ಪಾಲಿಸದ ಹೈಕೋರ್ಟ್​ ಆದೇಶ- ಪಾಲಕರ ಕಣ್ಣೀರು

1ನೇ ತರಗತಿ ದಾಖಲಾತಿ ವಯೋಮಿತಿ ಸಡಿಲಿಕೆ ಕುರಿತು ಹೈಕೋರ್ಟ್​ ನಿರ್ದೇಶನ ನೀಡಿ ವಾರ ಕಳೆದರೂ ಸರ್ಕಾರ ಆದೇಶ ಹೊರಡಿಸಿಲ್ಲ. ಇದರಿಂದಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ಮುಗಿಸಿರುವ 5 ಲಕ್ಷಕ್ಕೂ ಅಧಿಕ ಮಕ್ಕಳ ಭವಿಷ್ಯ ಅತಂತ್ರವಾಗಿದೆ. ಈ ಆದೇಶದಿಂದ ಮಕ್ಕಳ ಒಂದು ಶೈಕ್ಷಣಿಕ ವರ್ಷ ವ್ಯರ್ಥವಾಗುವ ಭೀತಿ ಎದುರಾಗಿದೆ.

2 Min read
Author : Suchethana D
Published : May 28 2026, 06:19 PM IST
Share this Photo Gallery
  • FB
  • TW
  • Linkdin
  • Whatsapp
16
ಮುಖ್ಯಮಂತ್ರಿ ವಿವಾದ
Image Credit : ANI

ಮುಖ್ಯಮಂತ್ರಿ ವಿವಾದ

ಇತ್ತ ಮುಖ್ಯಮಂತ್ರಿ ಬದಲಾವಣೆ ಕುರಿತು ರಾಜ್ಯದ ರಾಜಕೀಯ ವಲಯದಲ್ಲಿ ನಡೆಯುತ್ತಿದ್ದ ಗೊಂದಲಕ್ಕೆ ಒಂದು ಹಂತದಲ್ಲಿ ತೆರೆ ಬಿದ್ದಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಆಗಿದೆ. ಇನ್ನು ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಹೈಕಮಾಂಡ್​ ಆದೇಶ ಹೊರಡಿಸಬೇಕು ಎಂದು ಹೇಳಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಪಾಲಕರ ಕಣ್ಣೀರು
Image Credit : AI Meta

ಪಾಲಕರ ಕಣ್ಣೀರು

ಆದರೆ ಇವೆಲ್ಲವುಗಳ ನಡುವೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ ಐದು ಲಕ್ಷಕ್ಕೂ ಅಧಿಕ ಮಕ್ಕಳ ಪಾಲಕರು. ಇದಕ್ಕೆ ಕಾರಣ, ಹೈಕೋರ್ಟ್​ ಆದೇಶವನ್ನು ಸರ್ಕಾರ ಇನ್ನೂ ಪಾಲನೆ ಮಾಡಿಲ್ಲ. ಅದು 1ನೇ ಕ್ಲಾಸ್​ಗೆ ಪ್ರವೇಶ ಪಡೆಯುವಾಗ ಇರುವ ವಯೋಮಿತಿಗೆ ಸಂಬಂಧಿಸಿದ ಆದೇಶ.ಆದರೆ ಇವೆಲ್ಲವುಗಳ ನಡುವೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ ಐದು ಲಕ್ಷಕ್ಕೂ ಅಧಿಕ ಮಕ್ಕಳ ಪಾಲಕರು. ಇದಕ್ಕೆ ಕಾರಣ, ಹೈಕೋರ್ಟ್​ ಆದೇಶವನ್ನು ಸರ್ಕಾರ ಇನ್ನೂ ಪಾಲನೆ ಮಾಡಿಲ್ಲ. ಅದು 1ನೇ ಕ್ಲಾಸ್​ಗೆ ಪ್ರವೇಶ ಪಡೆಯುವಾಗ ಇರುವ ವಯೋಮಿತಿಗೆ ಸಂಬಂಧಿಸಿದ ಆದೇಶ.

Related Articles

Related image1
ಇದ್ದರೆಷ್ಟು, ಹೋದರೆಷ್ಟು? ಹಲ್​ಚಲ್ ಸೃಷ್ಟಿಸಿದ ಎಂ.ಬಿ.ಪಾಟೀಲ್ ​ ಟ್ವೀಟ್, ಯಾರಿಗೆ ಟಾಂಟ್​ ಕೊಟ್ರು ಸಚಿವರು?
Related image2
ಅಂದು ರಾಯರಿಗೆ ಮಾಡಿದ್ದ ಅಪಮಾನವೇ ಸಿದ್ದರಾಮಯ್ಯಗೆ ಮುಳುವಾಯ್ತಾ? ಜಗ್ಗೇಶ್​ ಭವಿಷ್ಯ ನಿಜವಾಯ್ತಾ
36
ಐದು ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆ
Image Credit : Social Media

ಐದು ಲಕ್ಷ ವಿದ್ಯಾರ್ಥಿಗಳಿಗೆ ತೊಂದರೆ

ಶಿಕ್ಷಣ ಇಲಾಖೆಯು ಮಾರ್ಚ್ 28 ರಂದು ಹೊರಡಿಸಿದ್ದ ಆದೇಶದ ಪ್ರಕಾರ, 1ನೇ ತರಗತಿ ದಾಖಲಾತಿಗೆ ಕನಿಷ್ಠ ವಯಸ್ಸನ್ನು ಕಡ್ಡಾಯಗೊಳಿಸಲಾಗಿತ್ತು. ಬಳಿಕ ಅದನ್ನು 5 ವರ್ಷ 10 ತಿಂಗಳಿಗೆ ಬದಲಾಯಿಸಲಾಯಿತು. ಆದರೆ, ಈ ಆದೇಶದಿಂದಾಗಿ 2025-26ನೇ ಸಾಲಿನಲ್ಲಿ ಈಗಾಗಲೇ ಪೂರ್ವ ಪ್ರಾಥಮಿಕ ಶಿಕ್ಷಣವನ್ನು (LKG/UKG) ಯಶಸ್ವಿಯಾಗಿ ಪೂರೈಸಿರುವ ಸುಮಾರು 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದೊಡ್ಡ ಸಮಸ್ಯೆಯಾಗಿದೆ.

46
ಪಾಲಕರ ಮೊರೆ
Image Credit : ANI

ಪಾಲಕರ ಮೊರೆ

ಇದನ್ನು ಪ್ರಶ್ನಿಸಿ ಹಲವಾರು ಪಾಲಕರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಐದು ಲಕ್ಷಕ್ಕೂ ಅಧಿಕ ಮಕ್ಕಳು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಮುಂದಿನ ತರಗತಿಗೆ ಹೋಗಲು ಸಿದ್ಧರಾಗಿದ್ದಾರೆ. ಪ್ರಸ್ತುತ 5 ವರ್ಷ 5 ತಿಂಗಳು ಪೂರೈಸಿರುವ ಮಕ್ಕಳಿಗೂ ಒಂದನೇ ತರಗತಿ ದಾಖಲಾತಿಗೆ ಅವಕಾಶ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ ಮಕ್ಕಳ ಒಂದು ಅಮೂಲ್ಯ ವರ್ಷ ವ್ಯರ್ಥವಾಗುತ್ತದೆ ಎಂದು ಅವರ ಕೋರ್ಟ್​ಗೆ ಮನವಿ ಮಾಡಿಕೊಂಡಿದ್ದರು.

56
ವಾರದಲ್ಲಿ ಆದೇಶ
Image Credit : our own

ವಾರದಲ್ಲಿ ಆದೇಶ

ಇದರ ವಾದ, ಪ್ರತಿವಾದ ಆಲಿಸಿದ್ದ ಹೈಕೋರ್ಟ್​, ವಯೋಮಿತಿ ಸಡಿಲಿಕೆ (Age Relaxation) ಮಾಡುವ ವಿಚಾರವನ್ನು ಕೇವಲ ಒಂದು ವಾರದೊಳಗೆ ಮರುಪರಿಶೀಲಿಸಿ, ಸೂಕ್ತ ಆದೇಶ ಹೊರಡಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ನಿರ್ದೇಶಿಸಿತ್ತು. ಒಂದು ವಾರ ಕಳೆದರೂ ಸರ್ಕಾರದಿಂದ ಯಾವುದೇ ಆದೇಶ ಹೊರಡದೇ ಇರುವುದು ಪಾಲಕರಿಗೆ ಆತಂಕ ತಂದಿದೆ.

66
ಪಾಲಕರು ಗೋಳು
Image Credit : Getty

ಪಾಲಕರು ಗೋಳು

ಜಾಲತಾಣಗಳಲ್ಲಿ ಪಾಲಕರು ನೋವು ಹೊರಹಾಕುತ್ತಿದ್ದಾರೆ. ಇನ್ನು ಎರಡೇ ದಿನ ಬಾಕಿ ಇದೆ. ದಯವಿಟ್ಟು ಈ ಬಗ್ಗೆ ಗಮನ ಹರಿಸಿ. ನಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿ ಇದೆ ಎಂದು ನೋವಿನಿಂದ ಹೇಳುತ್ತಿದ್ದಾರೆ..

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ನಾಟಕ ಸರ್ಕಾರ
ರಾಜಕೀಯ ಸುದ್ದಿ
ಶಿಕ್ಷಣ
ಮಕ್ಕಳು

Latest Videos
Recommended Stories
Recommended image1
ಕೃಷಿಕನಾಗಿ ಬದುಕು ಕಟ್ಟಿಕೊಳ್ಳುವ ಕನಸು ಕಂಡ ಟೆಕ್ಕಿಯ ಜೀವ ಕಸಿದ ಸಿಡಿಲು: ಕೊಡಗಿನ ಯುವಕ ಬಲಿ
Recommended image2
ರಾಜ್ಯದಲ್ಲಿ ಹೊಸ ಸಿಎಂ ಬಂದರೂ ಸರ್ಕಾರ ಉಳಿಯಲ್ಲ: ಬಿ.ವೈ.ವಿಜಯೇಂದ್ರ ಸ್ಫೋಟಕ ಹೇಳಿಕೆ
Recommended image3
ಬೆಂಗಳೂರಿನ ಪ್ರಸಿದ್ಧ ಸ್ಟಾರ್ಟಪ್ ಕಂಪೆನಿ ಸಂಸ್ಥಾಪಕನಿಗೆ ಸಿಂಗಾಪುರ ಕೋರ್ಟಿಂದ 6 ತಿಂಗಳು ಜೈಲು, 90,000 ಡಾಲರ್ ದಂಡ!
Related Stories
Recommended image1
ಇದ್ದರೆಷ್ಟು, ಹೋದರೆಷ್ಟು? ಹಲ್​ಚಲ್ ಸೃಷ್ಟಿಸಿದ ಎಂ.ಬಿ.ಪಾಟೀಲ್ ​ ಟ್ವೀಟ್, ಯಾರಿಗೆ ಟಾಂಟ್​ ಕೊಟ್ರು ಸಚಿವರು?
Recommended image2
ಅಂದು ರಾಯರಿಗೆ ಮಾಡಿದ್ದ ಅಪಮಾನವೇ ಸಿದ್ದರಾಮಯ್ಯಗೆ ಮುಳುವಾಯ್ತಾ? ಜಗ್ಗೇಶ್​ ಭವಿಷ್ಯ ನಿಜವಾಯ್ತಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved