MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Politics
  • ಅಂದು ರಾಯರಿಗೆ ಮಾಡಿದ್ದ ಅಪಮಾನವೇ ಸಿದ್ದರಾಮಯ್ಯಗೆ ಮುಳುವಾಯ್ತಾ? ಜಗ್ಗೇಶ್​ ಭವಿಷ್ಯ ನಿಜವಾಯ್ತಾ

ಅಂದು ರಾಯರಿಗೆ ಮಾಡಿದ್ದ ಅಪಮಾನವೇ ಸಿದ್ದರಾಮಯ್ಯಗೆ ಮುಳುವಾಯ್ತಾ? ಜಗ್ಗೇಶ್​ ಭವಿಷ್ಯ ನಿಜವಾಯ್ತಾ

ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ರಾಜೀನಾಮೆ ಸಲ್ಲಿಸಲಿದ್ದು, ಈ ಬೆಳವಣಿಗೆಯನ್ನು ಅವರು ಈ ಹಿಂದೆ ರಾಘವೇಂದ್ರ ಸ್ವಾಮಿಗಳ ಫೋಟೋವನ್ನು ತಿರಸ್ಕರಿಸಿದ ಘಟನೆಗೆ ಹೋಲಿಸಲಾಗುತ್ತಿದೆ. ರಾಯರನ್ನು ಅವಮಾನಿಸಿದವರಿಗೆ ಅಧಿಕಾರ ಯೋಗ ಕೊನೆಯಾಗುತ್ತದೆ ಎಂದು ನಟ ಜಗ್ಗೇಶ್ ಅಂದು ನುಡಿದಿದ್ದ ಭವಿಷ್ಯ ವೈರಲ್ ಆಗಿದೆ.

2 Min read
Author : Suchethana D
Published : May 28 2026, 01:57 PM IST
Share this Photo Gallery
  • FB
  • TW
  • Linkdin
  • Whatsapp
16
ಗುರುವಾರದ ರಹಸ್ಯ
Image Credit : Jaggesh FB

ಗುರುವಾರದ ರಹಸ್ಯ

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರಿಗೆ ಇರುವುದು ಇನ್ನು ಕೆಲವೇ ಗಂಟೆಗಳು. ಆ ಬಳಿಕ ಅವರು ಮಾಜಿ ಆಗಲಿದ್ದಾರೆ ಎನ್ನಲಾಗುತ್ತಿದೆ. ಇಂದು ಅರ್ಥಾತ್​ ಮೇ 28ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಅವರು ರಾಜೀನಾಮೆ ಸಲ್ಲಿಸುವುದು ನಿಚ್ಚಳವಾಗಿದೆ. ಕೊನೆಯವರೆಗೂ ಇದು ಸಸ್ಪೆನ್ಸ್​ ಚಿತ್ರದ ರೀತಿಯಲ್ಲಿಯೇ ಮುಂದುವರೆಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸಿದ್ದರಾಮಯ್ಯಗೆ ಶಾಪ?
Image Credit : Asianet News

ಸಿದ್ದರಾಮಯ್ಯಗೆ ಶಾಪ?

ಇದರ ನಡುವೆಯೇ, ಇದೇ ವರ್ಷ ಜನವರಿಯಲ್ಲಿ ನಡೆದ ಘಟನೆಯೊಂದು ಇದೀಗ ಮತ್ತೆ ವೈರಲ್​ ಆಗುತ್ತಿದೆ. ಆ ಘಟನೆಯೇ ಗುರುವಾರದ ಶಾಪವಾಗಿ ಸಿದ್ದರಾಮಯ್ಯ ಅವರು ಅಧಿಕಾರ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎನ್ನ್ಉವ ಮಾತುಗಳು ಜಾಲತಾಣಗಳಲ್ಲಿ ಕೇಳಿಬರುತ್ತಿವೆ.

Related Articles

Related image1
ರಾಜ್ಯ ರಾಜಕೀಯದಲ್ಲಿ ಕೊನೆ ಹಂತದ ಸಸ್ಪೆನ್ಸ್​: ಡಿಕೆಶಿ ಮುಖದಲ್ಲಿ ನಿನ್ನೆಯಿದ್ದ ನಗು ಇಂದಿಲ್ಲ- ಸಿಎಂ ಖುರ್ಚಿ ಅವರಿಗಾ, ಇವರಿಗಾ
Related image2
ಗೃಹಲಕ್ಷ್ಮಿ ಯೋಜನೆ: 2 ಸಾವಿರ ಬೇಕಿದ್ರೆ ಮರು ನೋಂದಣಿ ಕಡ್ಡಾಯ- ಮಾಡೋದು ಹೇಗೆ? ಇಲ್ಲಿದೆ ಫುಲ್​ ಡಿಟೇಲ್ಸ್​
36
ಸಾರ್ವಜನಿಕರ ಅಹವಾಲು
Image Credit : Jaggesh FB

ಸಾರ್ವಜನಿಕರ ಅಹವಾಲು

ಅಷ್ಟಕ್ಕೂ ಅಂದು ಸಿದ್ದರಾಮಯ್ಯನವರು ಸಿಎಂ ನಿವಾಸದಿಂದ ಹೊರಗೆ ಬರುತ್ತಿದ್ದಂತೆ ಕಾರಿನಲ್ಲಿ ಕುಳಿತುಕೊಂಡು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ್ದರು. ಈ ಮಧ್ಯೆ ವ್ಯಕ್ತಿಯೊಬ್ಬರು ರಾಘವೇಂದ್ರ ಸ್ವಾಮಿಗಳ ಫೋಟೋ ನೀಡುತ್ತಾರೆ. ಆದ್ರೆ ಮುಖ್ಯಮಂತ್ರಿಗಳು ಕೋಪದಿಂದಲೇ ರಾಘವೇಂದ್ರ ಸ್ವಾಮಿಗಳ ಫೋಟೋ ಪಡೆದುಕೊಳ್ಳದೇ ಹಿಂದಿರುಗಿಸಿದ್ದರು.

46
ಅಪಮಾನ ಮಾಡಿದ ಇತಿಹಾಸವಿಲ್ಲ
Image Credit : Asianet News

ಅಪಮಾನ ಮಾಡಿದ ಇತಿಹಾಸವಿಲ್ಲ

ಇದೇ ವೇಳೆ ಮತ್ತೋರ್ವ ವ್ಯಕ್ತಿ ನೀಡುವ ಚಾಣಕ್ಯ ನೀತಿ ಹೆಸರಿನ ಪುಸ್ತಕವನ್ನು ಸಿಎಂ ಸಿದ್ದರಾಮಯ್ಯ ತೆಗೆದುಕೊಳ್ಳುತ್ತಾರೆ. ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿಗಳು ತೆರಳಿದ್ದರು. ಇದಕ್ಕೆ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ನಟ, ಸಂಸದ, ರಾಯರ ಭಕ್ತ ಜಗ್ಗೇಶ್​ ಅವರು, ರಾಯರನ್ನು ಅಪಮಾನ ಮಾಡಿದ ಯಾರು ಉದ್ಧಾರವಾದ ಇತಿಹಾಸವಿಲ್ಲ ಎಂದಿದ್ದರು.

56
ಇಂಥ ವ್ಯಕ್ತಿ ಇದೇ ಮೊದಲು ಕಂಡಿದ್ದು
Image Credit : Asianet News

ಇಂಥ ವ್ಯಕ್ತಿ ಇದೇ ಮೊದಲು ಕಂಡಿದ್ದು

ರಾಯರ ಸಣ್ಣ ಕೃಪೆ ನಮ್ಮ ಮೇಲೆ ಬೀಳಲಿ ಎಂದು ಕೋಟ್ಯಂತರ ಭಕ್ತವೃಂದ ಜಪ ತಪ ವೈರಾಗ್ಯ ಉಪವಾಸದಿಂದ ಸೇವೆ ಮಾಡುತ್ತಾರೆ. ಭಕ್ತಿಯಿಂದ ಬಂದದ್ದು ಹೀಗೆ ತಿರಸ್ಕರಿಸಿದ ಪ್ರಥಮ ವ್ಯಕ್ತಿಯನ್ನು ನಾನು ನನ್ನ ಬದುಕಲ್ಲಿ ಕಂಡಿದ್ದು, ರಾಯರಿದ್ದಾರೆ, ಎದ್ದು ಬರುತ್ತಾರೆ, ಯೋಗ ಕೊನೆಯಾಗುವ ದಿನಗಳು ಸಮೀಪಿಸಿವೆ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು.

66
ಯೋಗ ಕೊನೆಯಾಗಲಿದೆ
Image Credit : Social Media

ಯೋಗ ಕೊನೆಯಾಗಲಿದೆ

ಭಕ್ತಿಯಿಂದ ರಾಯರ ಭಕ್ತರು ರಾಯರ ವಿಗ್ರಹ ಅಥವ ಮೃತ್ತಿಗೆ ಯಾರಿಗಾದರು ನೀಡಿದಾಗ ಭಕ್ತಿಯಿಂದ ಪಡೆಯಬೇಕು. ಒಂದು ವೇಳೆ ಅದನ್ನು ತಿರಸ್ಕರಿಸಿದರೆ ಅಂತಹ ವ್ಯಕ್ತಿಗೆ ಯೋಗ ಕೊನೆ ಆಗುವ ದಿನಗಳು ಸಮೀಪಿಸಿದೆ ಎಂದರ್ಥ ಎಂದು ಎಕ್ಸ್ ಖಾತೆ ಮೂಲಕ ಜಗ್ಗೇಶ್ ವಿಡಿಯೋ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದೀಗ ನಿಜವಾಗಿದೆ, ರಾಯರ ದಿನವಾಗಿರುವ ಗುರುವಾರವೇ ಮನಸ್ಸಿಲ್ಲದ ಮನಸ್ಸಿನಿಂದ ರಾಜೀನಾಮೆ ಮಾಡಬೇಕಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ!

ರಾಯರನ್ನ ಅಪಮಾನ ಮಾಡಿದ ಯಾರು ಉದ್ಧಾರ ಆದ ಇತಿಹಾಸವಿಲ್ಲಾ!
ರಾಯರ ಸಣ್ಣ ಕೃಪೆ ನಮ್ಮಮೇಲೆ ಬೀಳಲಿ ಎಂದು ಕೋಟ್ಯಂತರ ಭಕ್ತವೃಂದ ಜಪತಪವೈರಾಗ್ಯ ಉಪವಾಸದಿಂದ ಸೇವೆಮಾಡುತ್ತಾರೆ,
ಭಕ್ತಿಯಿಂದ ಬಂದದ್ದು ಹೀಗೆ ತಿರಸ್ಕರಿಸಿದ ಪ್ರಥಮ ವ್ಯೆಕ್ತಿಯನ್ನು ನಾನು ನನ್ನ ಬದುಕಲ್ಲಿ ಕಂಡದ್ದು 
ರಾಯರಿದ್ದಾರೆ🙏 ಎದ್ದುಬರುತ್ತಾರೆ🙏
ಕಾಯಬೇಕು..!!
ಜೈಹಿಂದ್🙏 pic.twitter.com/WXdSsaZVvK

— ನವರಸನಾಯಕ ಜಗ್ಗೇಶ್ (@Jaggesh2) January 20, 2026

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜಗ್ಗೇಶ್
ಕರ್ನಾಟಕ ಸರ್ಕಾರ
ರಾಜಕೀಯ ಸುದ್ದಿ
ರಾಜಕೀಯ ಪಕ್ಷ
ಸಿದ್ದರಾಮಯ್ಯ
ಡಿ.ಕೆ. ಶಿವಕುಮಾರ್

Latest Videos
Recommended Stories
Recommended image1
Siddaramaiah: ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರೆ ಕಾಂಗ್ರೆಸ್ ತಕ್ಕ ಪಾಠ ಕಲಿಸುತ್ತೇವೆ; ಅಹಿಂದ ಮುಖಂಡರ ಎಚ್ಚರಿಕೆ!
Recommended image2
ಮುಂದಿನ ಸಿಎಂ ಡಿಕೆಶಿಗೆ ಎಲ್ಲರೂ ಸಹಕರಿಸಿ! ವಿದಾಯದ ಕೂಟದಲ್ಲಿ ಸಿದ್ದರಾಮಯ್ಯ ಭಾವುಕ, ಬಹಿರಂಗವಾಯ್ತು 'ರಹಸ್ಯ ಒಪ್ಪಂದ'!
Recommended image3
CM Siddaramaiah Resignation: ಸಿದ್ದರಾಮಯ್ಯರನ್ನ ಕಾಂಗ್ರೆಸ್ ನಡೆಸಿಕೊಂಡ ರೀತಿ ಸರಿಯಿಲ್ಲ: ಪ್ರಲ್ಹಾದ್ ಜೋಶಿ ಸ್ಫೋಟಕ ಹೇಳಿಕೆ!
Related Stories
Recommended image1
ರಾಜ್ಯ ರಾಜಕೀಯದಲ್ಲಿ ಕೊನೆ ಹಂತದ ಸಸ್ಪೆನ್ಸ್​: ಡಿಕೆಶಿ ಮುಖದಲ್ಲಿ ನಿನ್ನೆಯಿದ್ದ ನಗು ಇಂದಿಲ್ಲ- ಸಿಎಂ ಖುರ್ಚಿ ಅವರಿಗಾ, ಇವರಿಗಾ
Recommended image2
ಗೃಹಲಕ್ಷ್ಮಿ ಯೋಜನೆ: 2 ಸಾವಿರ ಬೇಕಿದ್ರೆ ಮರು ನೋಂದಣಿ ಕಡ್ಡಾಯ- ಮಾಡೋದು ಹೇಗೆ? ಇಲ್ಲಿದೆ ಫುಲ್​ ಡಿಟೇಲ್ಸ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved