40 ವರ್ಷ ಹಳೇ ರಿಸರ್ವೇಶನ್ ಸಿಸ್ಟಮ್ ಕೈಬಿಟ್ಟ ಭಾರತೀಯ ರೈಲ್ವೇ, ಹೊಸ ವ್ಯವಸ್ಥೆ ಯಾವಾಗ ಜಾರಿ?
ಭಾರತೀಯ ರೈಲ್ವೇ ಅತೀ ಹೆಚ್ಚು ಬದಲಾವಣೆ ಕಾಣುತ್ತಿರುವ ಕ್ಷೇತ್ರ. ಇದೀಗ 40 ವರ್ಷಗಳಿಂದ ಇರುವ ಹಳೇ ರಿಸರ್ವೇಶನ್ ವ್ಯವಸ್ಥೆಯನ್ನು ಬದಲಾಯಿಸಲಾಗಿದೆ. ಹೊಸ ಸಿಸ್ಟಮ್ ಯಾವಾಗಿಂದ ಜಾರಿಯಾಗುತ್ತಿದೆ?

ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ ಬದಲಾವಣೆ
ಭಾರತೀಯ ರೈಲ್ವೇ ಕಳೆದ ಒಂದು ದಶಕದಲ್ಲಿ ಮಹತ್ತರ ಬದಲಾವಣೆ ಕಂಡಿದೆ. ಹೊಸ ರೈಲು, ವಿದ್ಯುತ್ತೀಕರಣ, ಮೂಲಭೂತ ಸೌಕರ್ಯ ಸೇರಿದಂತೆ ಹಲವು. ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲೂ ಬದಲಾವಣೆ ಮಾಡಲಾಗಿದೆ. ಇದೀಗ ಬರೋಬ್ಬರಿ 40 ವರ್ಷಗಳಿಂದ ಇರುವ ಹಳೇ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ (PRS) ಸಂಪೂರ್ಣ ಬದಲಾವಣೆ ಮಾಡಲಾಗುತ್ತಿದೆ.
ಪಿಆರ್‌ಎಸ್ ಬದಲು ಹೊಸ ಡಿಜಿಟಲ್ ವ್ಯವಸ್ಥೆ
ಪ್ರಯಾಣಕರ ರಿಸರ್ವೇಶನ್ ಸಿಸ್ಟಮ್ ಬದಲು ಇದೀಗ ಹೊಸ ಡಿಜಿಟಲ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಆನ್‌ಲೈನ್ ಮೂಲಕ ಟಿಕೆಟ್ ಬುಕಿಂಗ್ ಹೆಚ್ಚಾಗಿದೆ. ಶೇಕಡಾ 80ರಷ್ಟು ಟಿಕೆಟ್ ಬುಕಿಂಗ್ ಆನ್‌ಲೈನ್ ಮೂಲಕವೇ ನಡೆಯುತ್ತಿದೆ.ಕೌಂಟರ್‌ಗೆ ಹೋಗಿ ಬುಕಿಂಗ್ ಮಾಡುವವರ ಸಂಖ್ಯೆ ವಿರಳವಾಗುತ್ತಿದೆ. ಇದರ ನಡುವೆ ರಿಸರ್ವೇಶನ್ ವ್ಯವಸ್ಥೆ ಬದಲಾಯಿಸಿ ಹೊಸ ಡಿಜಿಟಲ್ ವ್ಯವಸ್ಥೆ ತರಲು ಭಾರತೀಯ ರೈಲ್ವೇ ಸಚಿವಾಲಯ ಮುಂದಾಗಿದೆ.
ಯಾವಾಗಿನಿಂದ ಹೊಸ ವ್ಯವಸ್ಥೆ ಜಾರಿ
40 ವರ್ಷಗಳಿಂದ ಚಾಲ್ತಿಯಲ್ಲಿರುವ ಹಳೇ ರಿಸರ್ವೇಶನ್ ಸಿಸ್ಟಮ್ ಬದಲು ಹೊಸ ಡಿಜಿಟಲ್ ವ್ಯವಸ್ಥೆ ಇದೇ ಆಗಸ್ಟ್ 1 ರಿಂದ ಜಾರಿಯಾಗುತ್ತಿದೆ. ಈ ವೇಳೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
1986ರಲ್ಲಿ ಆಂಭಗೊಂಡ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್
ಪ್ರಯಾಣಿಕರ ಮೀಸಲಾತಿ ವ್ಯವಸ್ಥೆ 1986ರಲ್ಲಿ ಜಾರಿಗೆ ಬಂದಿದೆ. ಬಳಿಕ ಹಲವು ಸಣ್ಣ ಬದಲಾವಣೆಯೊಂದಿಗೆ ಇದುವರೆಗೂ ಚಾಲ್ತಿಯಲ್ಲಿದೆ.ಸದ್ಯ ಡಿಜಿಟಲ್ ಬೇಡಿಕೆಯಲ್ಲಿ ಹಳೇ ಮೀಸಲಾತಿ ವ್ಯವಸ್ಥೆ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಡಿಜಿಟಲ್ ತಂತ್ರಜ್ಞಾನದ ಮೂಲಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನರ್ ರಚಿಸಲಾಗಿದೆ. ಇದರಿಂದ ಬುಕಿಂಗ್ ವೇಗವೂ ಹೆಚ್ಚಾಗಲಿದೆ.
ಪ್ರಯಾಣಿಕರಿಗೆ ಇಲ್ಲ ತೊಂದರೆ
ಹೊಸ ವ್ಯವಸ್ಥೆಯಲ್ಲಿ ಎಐ ಬಳಕೆ ಮಾಡಲಾಗುತ್ತಿದೆ. ಇದರಿಂದ ಟಿಕೆಟ್ ಕನ್‌ಫರ್ಮೇಶನ್, ಬುಕಿಂಗ್ ಬಗ್ಗೆ ನಿಖತರೆ ಸಿಗಲಿದೆ. ಹಳೇ ಪದ್ಧತಿಯಿಂದ ಹೊಸ ಡಿಜಿಟಲ್ ವ್ಯವಸ್ಥೆಗೆ ಬದಲಾಗುವ ವೇಳೆ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಬಾರದು ಎಂದು ಸಚಿವ ಅಶ್ವಿನಿ ವೈಷ್ಣವ್ ಖಡಕ್ ಸೂಚನೆ ನೀಡಿದ್ದಾರೆ. ಟಿಕೆಟ್ ಬುಕಿಂಗ್ ಯಾವುದೇ ಕಾರಣಕ್ಕೆ ಸಮಸ್ಯೆಗೆ ಸಿಲುಕಬಾರದು ಎಂದಿದ್ದಾರೆ. ಇದರಂತೆ ಹೊಸ ವ್ಯವಸ್ಥೆ ಜಾರಿಗೆ ಬರುತ್ತಿದೆ.
ಸಬ್ಸಿಡಿ ಮುಂದುವರಿಕೆ
ಹೊಸ ಪದ್ಥತಿಗಳು ಜಾರಿಯಾಗುತ್ತಿದೆ. ಆದರೆ ಕೆಲ ಹಳೇ ವ್ಯವಸ್ಥೆಗಳನ್ನು ಮುಂದುವರಿಸಲಾಗುತ್ತಿದೆ. ಈ ಬೈಕಿ ಪ್ರಯಾಣಿಕರಿಗೆ ನೀಡುವ ಸಬ್ಸಿಡಿ ಮುಂದುವರಿಸಲಾಗುತ್ತಿದೆ. 2024-25ರ ಸಾಲಿನಲ್ಲಿ ರೈಲ್ವೇ ಬರೋಬ್ಬರಿ 60 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಪ್ರಯಾಣಿಕರಿಗೆ ಸಬ್ಸಿಡಿ ರೂಪದಲ್ಲಿ ನೀಡಿದೆ.
ಸಬ್ಸಿಡಿ ಮುಂದುವರಿಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

