MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ತಮಿಳುನಾಡು ಸಿಎಂ ಸ್ಟಾಲಿನ್ ಮೇಲಿನ ಆರೋಪಕ್ಕೆ ಬೆಂಗಳೂರಲ್ಲಿರೋ ವಿದೇಶಿ ರಾಯಭಾರಿ ಕಚೇರಿಗೆ ಬಾಂಬ್! ಹೈ ಅಲರ್ಟ್

ತಮಿಳುನಾಡು ಸಿಎಂ ಸ್ಟಾಲಿನ್ ಮೇಲಿನ ಆರೋಪಕ್ಕೆ ಬೆಂಗಳೂರಲ್ಲಿರೋ ವಿದೇಶಿ ರಾಯಭಾರಿ ಕಚೇರಿಗೆ ಬಾಂಬ್! ಹೈ ಅಲರ್ಟ್

ಬೆಂಗಳೂರಿನಲ್ಲಿರುವ ಜಪಾನ್ ಮತ್ತು ಡಚ್ ರಾಯಭಾರ ಕಚೇರಿಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಈ ಬೆದರಿಕೆ ಸಂದೇಶದಲ್ಲಿ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ಹೆಸರನ್ನು ಪ್ರಸ್ತಾಪಿಸಲಾಗಿದ್ದು, ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ.

2 Min read
Author : Sathish Kumar KH
Published : Feb 09 2026, 03:18 PM IST
Share this Photo Gallery
  • FB
  • TW
  • Linkdin
  • Whatsapp
15
ತಮಿಳುನಾಡು ಸಿಎಂ ಹೆಸರು ಪ್ರಸ್ತಾಪ
Image Credit : Asianet News

ತಮಿಳುನಾಡು ಸಿಎಂ ಹೆಸರು ಪ್ರಸ್ತಾಪ

ಬೆಂಗಳೂರು (ಫೆ.09): ರಾಜಧಾನಿ ಬೆಂಗಳೂರಿನಲ್ಲಿರುವ ವಿದೇಶಿ ರಾಯಭಾರ ಕಚೇರಿಗಳಿಗೆ ಮತ್ತೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕೇವಲ 10 ದಿನಗಳ ಅಂತರದಲ್ಲಿ ಎರಡನೇ ಬಾರಿಗೆ ಇಂತಹ ಬೆದರಿಕೆ ಮೇಲ್ ಬಂದಿರುವುದು ಪೊಲೀಸರಿಗೆ ಮತ್ತು ಭದ್ರತಾ ಸಿಬ್ಬಂದಿಗೆ ದೊಡ್ಡ ತಲೆನೊವಾಗಿ ಪರಿಣಮಿಸಿದೆ. 

ಸೋಮವಾರ (ಇಂದು) ಬೆಳಿಗ್ಗೆ 8:40ರ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬನಿಂದ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ರವಾನೆಯಾಗಿದ್ದು, ಇದರಲ್ಲಿ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರ ಹೆಸರನ್ನು ಪ್ರಸ್ತಾಪಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

25
ಬೆದರಿಕೆ ಮೇಲ್‌ನಲ್ಲೇನಿದೆ?
Image Credit : Asianet News

ಬೆದರಿಕೆ ಮೇಲ್‌ನಲ್ಲೇನಿದೆ?

ನಗರದಲ್ಲಿರುವ ಜಪಾನ್ ಹಾಗೂ ಡಚ್ (ನೆದರ್ಲ್ಯಾಂಡ್ಸ್) ರಾಯಭಾರ ಕಚೇರಿಗಳಿಗೆ ಈ ಬೆದರಿಕೆ ಮೇಲ್ ಬಂದಿದೆ. ಮೇಲ್ ಕಳುಹಿಸಿರುವ ಕಿಡಿಗೇಡಿಗಳು ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ವಿರುದ್ಧ ಅತ್ಯಂತ ಗಂಭೀರ ಹಾಗೂ ಆಘಾತಕಾರಿ ಆರೋಪಗಳನ್ನು ಮಾಡಿದ್ದಾರೆ. 'ಕೋರಮಂಡಲ್ ಹೋಟೆಲ್‌ನ (Coromandel Hotel) ರೂಮ್ ನಂಬರ್ 536ರಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾ*ಚಾರ ನಡೆಸಲಾಗಿದೆ. 

ಅರ್ಜುನ್ ದೊರೆ ರಾಜಶೇಖರ್ ಎಂಬ ವ್ಯಕ್ತಿ, ವಿಐಪಿಯೊಬ್ಬರನ್ನು ಪರಿಚಯಿಸುವುದಾಗಿ ನಂಬಿಸಿ ಮಹಿಳೆಯನ್ನು ಕರೆದೊಯ್ದಿದ್ದ. ಅಲ್ಲಿ ಉದಯನಿಧಿ ಸ್ಟಾಲಿನ್ ಅರೆಬೆತ್ತಲೆಯಾಗಿ ಕುಳಿತಿದ್ದರು ಮತ್ತು ಅವರು ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ' ಎಂದು ಮೇಲ್‌ನಲ್ಲಿ ಆರೋಪಿಸಲಾಗಿದೆ.

Related Articles

Related image1
₹27.72 ಕೋಟಿ ಮೌಲ್ಯದ ಸರ್ಕಾರಿ ಜಮೀನು ವಶಕ್ಕೆ ಪಡೆದ ಬೆಂಗಳೂರು ನಗರ ಜಿಲ್ಲಾಡಳಿತ
Related image2
ಇಸ್ರೇಲ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ: ಹಳೇ ಆರೋಪಿ ರಾಜಗಿರಿ ಕೈವಾಡ?
35
ಪೊಲೀಸರ ವಿರುದ್ಧ ಆಕ್ರೋಶ, ಬಾಂಬ್ ಬೆದರಿಕೆ:
Image Credit : Asianet News

ಪೊಲೀಸರ ವಿರುದ್ಧ ಆಕ್ರೋಶ, ಬಾಂಬ್ ಬೆದರಿಕೆ:

ಮೇಲ್‌ನಲ್ಲಿ ಮುಂದುವರಿದು, 'ಈ ಘಟನೆಗೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಪೊಲೀಸ್ ದೂರು ನೀಡಲು ಹೋದರೆ, ಅಲ್ಲಿನ ಪೊಲೀಸರು ಪ್ರಭಾವಕ್ಕೆ ಮಣಿದು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ನಮಗೆ ನ್ಯಾಯ ಸಿಗುತ್ತಿಲ್ಲ. ಈ ಕಾರಣಕ್ಕಾಗಿ ನಾವು ಜಪಾನ್ ರಾಯಭಾರ ಕಚೇರಿಯ ವಾಶ್ ರೂಮ್ ಸೇರಿದಂತೆ ಕಚೇರಿಯ ಆವರಣದಲ್ಲಿ 4 ಆರ್‌ಡಿಎಕ್ಸ್ (RDX) ಹಾಗೂ ಐಇಡಿ (IED) ಬಾಂಬ್‌ಗಳನ್ನು ಇರಿಸಿದ್ದೇವೆ' ಎಂದು ಬೆದರಿಕೆ ಹಾಕಲಾಗಿದೆ. ಈ ಸಂದೇಶವು ರಾಯಭಾರ ಕಚೇರಿಯ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ.

45
ಸ್ಥಳಕ್ಕೆ ದೌಡಾಯಿಸಿದ ಬಾಂಬ್ ಸ್ಕ್ವಾಡ್
Image Credit : Asianet News

ಸ್ಥಳಕ್ಕೆ ದೌಡಾಯಿಸಿದ ಬಾಂಬ್ ಸ್ಕ್ವಾಡ್

ಬೆದರಿಕೆ ಮೇಲ್ ಬಂದ ತಕ್ಷಣ ಎಚ್ಚೆತ್ತುಕೊಂಡ ರಾಯಭಾರ ಕಚೇರಿಯ ಅಧಿಕಾರಿಗಳು ಕೂಡಲೇ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿ ಸೇರಿದಂತೆ ಸಂಬಂಧಪಟ್ಟ ಠಾಣಾ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ (Bomb Squad) ಮತ್ತು ಶ್ವಾನ ದಳದೊಂದಿಗೆ (Dog Squad) ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ, ಇಡೀ ಕಚೇರಿಯನ್ನು ಜಾಲಾಡಲಾಗಿದೆ. ವಾಶ್ ರೂಮ್ ಸೇರಿದಂತೆ ಕಚೇರಿಯ ಮೂಲೆ ಮೂಲೆಯನ್ನೂ ತಪಾಸಣೆ ನಡೆಸಲಾಗುತ್ತಿದೆ.

55
10 ದಿನದಲ್ಲಿ 2ನೇ ಬಾರಿ
Image Credit : Asianet News

10 ದಿನದಲ್ಲಿ 2ನೇ ಬಾರಿ

ಕಳೆದ ಹತ್ತು ದಿನಗಳ ಹಿಂದೆಯಷ್ಟೇ ಇದೇ ರೀತಿ ಬೆಂಗಳೂರಿನ ಹಲವು ಕಡೆಗಳಲ್ಲಿ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದವು. ಈಗ ಮತ್ತೆ ವಿದೇಶಿ ರಾಯಭಾರ ಕಚೇರಿಗಳನ್ನೇ ಗುರಿಯಾಗಿಸಿಕೊಂಡು, ರಾಜಕೀಯ ನಾಯಕರ ಹೆಸರನ್ನು ಬಳಸಿಕೊಂಡು ಬೆದರಿಕೆ ಹಾಕಿರುವುದು ಇದೊಂದು ಹುಸಿ ಬೆದರಿಕೆ ಅಥವಾ ಕಿಡಿಗೇಡಿಗಳ ಕೃತ್ಯವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೂ, ಭದ್ರತೆಯ ದೃಷ್ಟಿಯಿಂದ ಪೊಲೀಸರು ಹೈ ಅಲರ್ಟ್ ಆಗಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸೈಬರ್ ಕ್ರೈಮ್ ಪೊಲೀಸರು ಮೇಲ್ ಬಂದ ಐಪಿ ಅಡ್ರೆಸ್ (IP Address) ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಬೆಂಗಳೂರು
ತಮಿಳುನಾಡು
ಬಾಂಬ್ ಸ್ಫೋಟ

Latest Videos
Recommended Stories
Recommended image1
ಮಂಗಳೂರು ಕಾಲೇಜಿಗೆ ಹೊರಟಿದ್ದ ಪಿಯುಸಿ ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನ; ಬಾಲಕಿ ರಕ್ಷಣೆ ಮಾಡಿದ ಅಬ್ಬುಸಾಲಿ!
Recommended image2
ದೇವಸ್ಥಾನದ ಹಿಂಭಾಗ ಐದು ಹೆಡೆ ನಾಗಮೂರ್ತಿ, ಶಿವಲಿಂಗ, ಶಾಸನ, ಸರ್ಪ ರೂಪದ ಶಿಲ್ಪ ಪತ್ತೆ
Recommended image3
ಸರಣಿ ಕಾಮದಾಟದ 'ಕಲಾಕಾರ' ಈ ಕಮಲಾಕರ ಭಟ್: ಸುಚಿತ್ರಾಗೂ ಮೊದಲೇ, ಮುಸ್ಲಿಂ ಮಹಿಳೆ ಸೇರಿ ನಾಲ್ವರೊಂದಿಗೆ ಪಲ್ಲಂಗದಾಟ!
Related Stories
Recommended image1
₹27.72 ಕೋಟಿ ಮೌಲ್ಯದ ಸರ್ಕಾರಿ ಜಮೀನು ವಶಕ್ಕೆ ಪಡೆದ ಬೆಂಗಳೂರು ನಗರ ಜಿಲ್ಲಾಡಳಿತ
Recommended image2
ಇಸ್ರೇಲ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ: ಹಳೇ ಆರೋಪಿ ರಾಜಗಿರಿ ಕೈವಾಡ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved