- Home
- Karnataka Districts
- ಬಕೆಟ್ ನೀರಲ್ಲಿ ಮುಳುಗಿ ಸತ್ತ 11 ತಿಂಗಳ ಮಗು; ಪತ್ರ ಬರೆದಿಟ್ಟು ನೇಣಿಗೆ ಶರಣಾದ ಟೆಕ್ಕಿ ತಾಯಿ
ಬಕೆಟ್ ನೀರಲ್ಲಿ ಮುಳುಗಿ ಸತ್ತ 11 ತಿಂಗಳ ಮಗು; ಪತ್ರ ಬರೆದಿಟ್ಟು ನೇಣಿಗೆ ಶರಣಾದ ಟೆಕ್ಕಿ ತಾಯಿ
ಬೆಂಗಳೂರಿನ ಚಂದ್ರಲೇಔಟ್‌ನಲ್ಲಿ 11 ತಿಂಗಳ ಮಗು ಆಕಸ್ಮಿಕವಾಗಿ ಬಕೆಟ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ. ಇದರಿಂದ ತೀವ್ರವಾಗಿ ನೊಂದ ಟೆಕ್ಕಿ ತಾಯಿ, ಮಗುವಿನ ಸಾವಿಗೆ ನಾನೇ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ.

ಹೃದಯವಿದ್ರಾವಕ ಘಟನೆ
11 ತಿಂಗಳು ಮಗು ಬಕೆಟ್ ನೀರಿನಲ್ಲಿ ಮುಳುಗಿ ಸತ್ತಿದ್ದರಿಂದ ನೊಂದ ತಾಯಿ ಆತ್ಮ*ಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಚಂದ್ರಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನನ್ನ ಮಗುವನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಮಹಿಳೆ ಡೆತ್‌ನೋಟ್ ಬರೆದಿದ್ದಾರೆ.
ಟೆಕ್ಕಿ ದಂಪತಿ
11 ತಿಂಗಳ ಗಂಡು ಮಗು ಅಗಸ್ತ್ಯ ಮತ್ತು ಪ್ರತಿಭಾ (29) ಮೃತರು. ಭೈರವೇಶ್ವರ ನಗರದಲ್ಲಿ ವಾಸವಾಗಿದ್ದ ಪ್ರತಿಭಾ ಸಾಫ್ಟ್‌ವೇರ್ ಇಂಜಿನೀಯರ್ ಆಗಿದ್ದು, ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಗಂಡ ಮಹಾಂತೇಶ್ ಸಹ ಟೆಕ್ಕಿಯಾಗಿದ್ದು, ಘಟನೆ ನಡೆದ ಸಂದರ್ಭದಲ್ಲಿ ಮಗು ಮತ್ತು ಪ್ರತಿಭಾ ಮಾತ್ರ ಇದ್ರು ಎಂದು ತಿಳಿದು ಬಂದಿದೆ. (ತಂದೆ ಮಹಾಂತೇಶ್)
ಪ್ರತಿಭಾ ದುಡುಕಿನ ನಿರ್ಧಾರ
ಒಣಗಲು ಹಾಕಿದ್ದ ಬಟ್ಟೆ ತೆಗೆದುಕೊಂಡು ಬರಲು ಪ್ರತಿಭಾ ಮನೆಯಿಂದ ಹೊರಗೆ ಬಂದಿದ್ದಾರೆ. ಅಷ್ಟರಲ್ಲಿ ನೀರು ತುಂಬಿಸಿದ್ದ ಬಕೆಟ್‌ಗೆ ಬಿದ್ದು ಸಾವನ್ನಪ್ಪಿದೆ. ಇದರಿಂದ ನೊಂದ ಪ್ರತಿಭಾ, ಯಾರಿಗೂ ವಿಷಯ ತಿಳಿಸದೇ ಡೆತ್ ನೋಟ್ ಬರೆದಿಟ್ಟು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ಕೈಕುಯ್ದುಕೊಂಡು ಆತ್ಮ*ಹತ್ಯೆ ಮಾಡಿಕೊಳ್ಳಲು ಪ್ರತಿಭಾ ಪ್ರಯತ್ನಿಸಿದ್ದಾರೆ.
ಗಂಡ ಬಂದಾಗ ಪ್ರಕರಣ ಬೆಳಕಿಗೆ
ರಾತ್ರಿ ಮಹಾಂತೇಶ್ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಪತ್ನಿ ಬಾಗಿಲು ಓಪನ್ ಮಾಡದಿದ್ದಾಗ ತನ್ನ ಬಳಿ ಇದ್ದ ಕೀಲಿಯಿಂದ ಬಾಗಿಲು ಓಪನ್ ಮಾಡಿದ್ದಾರೆ. ಪ್ರತಿಭಾ ಶವ ನೇತಾಡುತ್ತಿದ್ರೆ, ಬೆಡ್ ಮೇಲೆ ಮಗುವಿನ ಶವವಿತ್ತು ಎಂದು ಮಹಾಂತೇಶ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಿಸರ್ವೇಶನ್ ಇರಲಿಲ್ಲ, ಟಾಯ್ಲೆಟ್ ಬಳಿ ಮಲಗಿದ್ದ ಸೈನಿಕರಿಗೆ ಸೀಟ್ ಕೊಟ್ಟ TTE; ಹೃದಯ ಗೆದ್ದ ವಿಡಿಯೋ
ಡೆತ್‌ನೋಟ್
ನಾನು ಬಟ್ಟೆ ಒಣಹಾಕಿದ್ದು ಅದನ್ನ ತರಲು ಟೆರೆಸ್ ಗೆ ಹೋಗಿದ್ದೆ. ಈ ವೇಳೆ ಮಗು ಆಟ ಆಡಿಕೊಂಡು ಬಚ್ಚಲು ಮನೆಗೆ ಹೋಗಿದೆ. ಆ ವೇಳೆ ಬಕೆಟ್ ನಲ್ಲಿ ಮುಳುಗಿ ಸತ್ತಿದೆ. ನನ್ನ ಮಗುವನ್ನ ಉಳಿಸಿಕೊಳ್ಳಲು ಆಗಿಲ್ಲ. ನನ್ನ ಮಗುವಿನ ಸಾವಿಗೆ ನಾನೇ ಕಾರಣ. ಹೀಗಾಗಿ ನಾನು ಆತ್ಮ*ಹತ್ಯೆ ಮಾಡಿಕೊಳ್ಳುತ್ತಿರೋದಾಗಿ ಪ್ರತಿಭಾ ಡೆತ್ ನೋಟ್‌ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: Chitradurga: ಅಧ್ಯಾಪಕನೊಂದಿಗೆ ಸಂಬಂಧ ಅಪಪ್ರಚಾರ; ನೇಣಿಗೆ ಶರಣಾದ BAMS ವಿದ್ಯಾರ್ಥಿನಿ ನಿಖಿತಾ

