MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಕೇಕ್ ಅಲ್ಲ, ಕಲ್ಲಂಗಡಿ-ಬಾಳೆಹಣ್ಣುಗಳಿಂದ ಬರ್ತ್‌ಡೇ: ಬನ್ನೇರುಘಟ್ಟದ ರೀಟಾ ಮರಿಯಾನೆಯ ಸಂಭ್ರಮ ವೈರಲ್

ಕೇಕ್ ಅಲ್ಲ, ಕಲ್ಲಂಗಡಿ-ಬಾಳೆಹಣ್ಣುಗಳಿಂದ ಬರ್ತ್‌ಡೇ: ಬನ್ನೇರುಘಟ್ಟದ ರೀಟಾ ಮರಿಯಾನೆಯ ಸಂಭ್ರಮ ವೈರಲ್

ಬನ್ನೇರುಘಟ್ಟ ಸಫಾರಿಯ ಸೀಗೆಕಟ್ಟೆ ಪ್ರದೇಶದಲ್ಲಿರುವ ಹೆಣ್ಣು ಆನೆ ರೀಟಾನ ಗಂಡು ಮರಿಗೆ ಎರಡನೇ ವರ್ಷದ ಹುಟ್ಟುಹಬ್ಬವನ್ನು ಉದ್ಯಾನವನದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶೇಷವಾಗಿ ಆಚರಿಸಿದರು.

1 Min read
Author : Govindaraj S
Published : Jul 08 2026, 06:47 PM IST
Share this Photo Gallery
  • FB
  • TW
  • Linkdin
  • Whatsapp
15
ಹುಟ್ಟುಹಬ್ಬದ ಸಂಭ್ರಮ
Image Credit : Asianet News

ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು (ಜು.08): ಸಾಮಾನ್ಯವಾಗಿ ಮನುಷ್ಯರು ತಮ್ಮ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಭ್ರಮದಿಂದ ಆಚರಿಸಿಕೊಳ್ಳುತ್ತಾರೆ. ಆದರೆ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಈ ಬಾರಿ ನಡೆದಿರುವ ಹುಟ್ಟುಹಬ್ಬದ ಸಂಭ್ರಮ ಮಾತ್ರ ಎಲ್ಲರ ಗಮನ ಸೆಳೆದಿದೆ. ಕಾರಣ, ಇಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಯಾವುದೇ ವ್ಯಕ್ತಿಯದ್ದಲ್ಲ, ಎರಡು ವರ್ಷ ಪೂರೈಸಿದ ಮುದ್ದಾದ ಮರಿಯಾನೆಯದ್ದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಎರಡನೇ ವರ್ಷದ ಹುಟ್ಟುಹಬ್ಬ
Image Credit : Asianet News

ಎರಡನೇ ವರ್ಷದ ಹುಟ್ಟುಹಬ್ಬ

ಬನ್ನೇರುಘಟ್ಟ ಸಫಾರಿಯ ಸೀಗೆಕಟ್ಟೆ ಪ್ರದೇಶದಲ್ಲಿರುವ ಹೆಣ್ಣು ಆನೆ ರೀಟಾನ ಗಂಡು ಮರಿಗೆ ಎರಡನೇ ವರ್ಷದ ಹುಟ್ಟುಹಬ್ಬವನ್ನು ಉದ್ಯಾನವನದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶೇಷವಾಗಿ ಆಚರಿಸಿದರು. ಹುಟ್ಟುಹಬ್ಬದ ಅಂಗವಾಗಿ ಮರಿಯಾನೆಗೆ ಕಲ್ಲಂಗಡಿ, ಆಪಲ್, ದ್ರಾಕ್ಷಿ, ಬಾಳೆಹಣ್ಣು, ಜೋಳ ಸೇರಿದಂತೆ ವಿವಿಧ ಬಗೆಯ ಹಣ್ಣು ಹಾಗೂ ತರಕಾರಿಗಳನ್ನು ನೀಡಿ ಸಂಭ್ರಮಿಸಿದರು.

Related Articles

Related image1
ಬನ್ನೇರುಘಟ್ಟ ಸಫಾರಿಯಲ್ಲಿ ಸಾಕಾನೆ 'ವನರಾಜ' ಅಟ್ಯಾಕ್: ಪ್ರವಾಸಿಗರ ವಾಹನ ಜಖಂ, ಕ್ಷಣಕಾಲ ಆತಂಕ ಸೃಷ್ಟಿಸಿದ ಕ್ಯಾಪ್ಟನ್!
Related image2
ಕೆಎಸ್‌ಟಿಡಿಸಿಯಿಂದ ಬನ್ನೇರುಘಟ್ಟ-ಮುತ್ಯಾಲಮಡು ಪ್ರವಾಸ: ಈ ಪ್ಯಾಕೇಜ್‌ನ ಸಂಪೂರ್ಣ ಮಾಹಿತಿ
35
ವಿಶೇಷ ಆಚರಣೆ
Image Credit : Asianet News

ವಿಶೇಷ ಆಚರಣೆ

ಮರಿಯಾನೆ ಹಣ್ಣುಗಳನ್ನು ಸವಿಯುತ್ತಿರುವ ದೃಶ್ಯವನ್ನು ಸಿಬ್ಬಂದಿ ಸಂತಸದಿಂದ ವೀಕ್ಷಿಸಿದರೆ, ಅಲ್ಲಿದ್ದ ಪ್ರವಾಸಿಗರೂ ಈ ವಿಶೇಷ ಕ್ಷಣವನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಖುಷಿಪಟ್ಟರು. ಪ್ರಾಣಿಗಳ ಮೇಲಿನ ಕಾಳಜಿ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುವ ಉದ್ದೇಶದಿಂದ ಪ್ರತಿವರ್ಷ ಉದ್ಯಾನವನದಲ್ಲಿ ಇಂತಹ ವಿಶೇಷ ಆಚರಣೆಗಳನ್ನು ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

45
ಮತ್ತೊಂದು ವಿಶೇಷ ಅವಕಾಶ
Image Credit : Asianet News

ಮತ್ತೊಂದು ವಿಶೇಷ ಅವಕಾಶ

ಪ್ರಸ್ತುತ ಬನ್ನೇರುಘಟ್ಟ ಜೈವಿಕ ಉದ್ಯಾನವನ ಮತ್ತು ಸಫಾರಿಯಲ್ಲಿ ಒಟ್ಟು 28 ಆನೆಗಳು ಆಶ್ರಯ ಪಡೆದಿವೆ. ಅವುಗಳ ಆರೈಕೆ, ಆರೋಗ್ಯ ಮತ್ತು ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಇದರ ಜೊತೆಗೆ ಪ್ರಾಣಿಪ್ರಿಯರಿಗೆ ಮತ್ತೊಂದು ವಿಶೇಷ ಅವಕಾಶವನ್ನೂ ಉದ್ಯಾನವನ ಕಲ್ಪಿಸಿದೆ.

55
ಸಂತಸದ ವಾತಾವರಣ
Image Credit : Asianet News

ಸಂತಸದ ವಾತಾವರಣ

ರೀಟಾ ಮರಿಯನ್ನು ಐದು ವರ್ಷಗಳ ಕಾಲ ದತ್ತು ಪಡೆಯುವವರು ಆ ಮರಿಯಾನೆಗೆ ತಮ್ಮ ಇಷ್ಟದ ಹೆಸರನ್ನು ಇಡುವ ಅವಕಾಶ ಪಡೆಯಲಿದ್ದಾರೆ. ಈ ಯೋಜನೆಯ ಮೂಲಕ ವನ್ಯಜೀವಿ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಉದ್ದೇಶವನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನ ಹೊಂದಿದೆ. ಒಟ್ಟಾರೆ, ಮುದ್ದಾದ ಮರಿಯಾನೆಯ ಎರಡನೇ ವರ್ಷದ ಹುಟ್ಟುಹಬ್ಬದ ಸಂಭ್ರಮ ಪ್ರಾಣಿಪ್ರಿಯರ ಮನ ಗೆದ್ದಿದ್ದು, ಬನ್ನೇರುಘಟ್ಟದಲ್ಲಿ ಸಂತಸದ ವಾತಾವರಣ ಮೂಡಿಸಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಆನೆಗಳು
ಹುಟ್ಟುಹಬ್ಬ
ಮೃಗಾಲಯ
ಬೆಂಗಳೂರು

Latest Videos
Recommended Stories
Recommended image1
Bengaluru: 'ಕ್ಯಾಶ್‌ ಯಾಕೆ ಕೊಡ್ತಿಯಾ, ಯುಪಿಐ ಮಾಡು.. ನಾನೇನು ಭಿಕ್ಷುಕನಾ..' ಟೆಕ್ಕಿ ವಿರುದ್ಧ ಆಟೋ ಚಾಲಕ ಗರಂ!
Recommended image2
ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿಯ ಬೆಲೆಬಾಳುವ 5 ಎಕರೆ ಜಾಗ ರೈಲ್ವೇಸ್‌ನದ್ದು; ಹೈಕೋರ್ಟ್ ಮಹತ್ವದ ತೀರ್ಪು!
Recommended image3
ಹೆಬ್ಬಾಳ ಬಳಿಕ ಬೆಂಗಳೂರಿಗೆ 6 ಪಥಗಳ ಮತ್ತೊಂದು ಸುರಂಗ ರಸ್ತೆ, ಡಾ.ರಾಜ್ ಸ್ಮಾರಕದಿಂದ ಬಿಇಎಲ್ ವೃತ್ತದವರೆಗೆ ನಿರ್ಮಾಣ
Related Stories
Recommended image1
ಬನ್ನೇರುಘಟ್ಟ ಸಫಾರಿಯಲ್ಲಿ ಸಾಕಾನೆ 'ವನರಾಜ' ಅಟ್ಯಾಕ್: ಪ್ರವಾಸಿಗರ ವಾಹನ ಜಖಂ, ಕ್ಷಣಕಾಲ ಆತಂಕ ಸೃಷ್ಟಿಸಿದ ಕ್ಯಾಪ್ಟನ್!
Recommended image2
ಕೆಎಸ್‌ಟಿಡಿಸಿಯಿಂದ ಬನ್ನೇರುಘಟ್ಟ-ಮುತ್ಯಾಲಮಡು ಪ್ರವಾಸ: ಈ ಪ್ಯಾಕೇಜ್‌ನ ಸಂಪೂರ್ಣ ಮಾಹಿತಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved