ವಿಶ್ವದ ಟಾಪ್ 10 ಬ್ಯೂಸಿ ರೈಲ್ವೇ ನಿಲ್ದಾಣ ಯಾವುದು? ಪಟ್ಟಿಯಲ್ಲಿದೆ ಭಾರತದ 2 ಸ್ಟೇಶನ್
ವಿಶ್ವದ ಟಾಪ್ 10 ಬ್ಯೂಸಿ ರೈಲ್ವೇ ನಿಲ್ದಾಣ ಯಾವುದು? ಪಟ್ಟಿಯಲ್ಲಿದೆ ಭಾರತದ 2 ಸ್ಟೇಶನ್, ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ರೈಲು ನಿಲ್ದಾಣ ಯಾವುದು? ಭಾರತದ ಬ್ಯೂಸಿಯೆಸ್ಟ್ ರೈಲು ನಿಲ್ದಾಣ ಯಾವುದು? ಮುಂಬೈ, ದೆಹಲಿ ಅಲ್ಲ

ಬ್ಯೂಸಿ ರೈಲು ನಿಲ್ದಾಣ
ಎಲ್ಲಾ ದೇಶಗಳ ಪ್ರಮುಖ ಸಾರಿಗೆ ರೈಲು. ಭಾರತದಲ್ಲಿ ರೈಲು ಸಾರಿಗೆ ಅತ್ಯಂತ ಮಹತ್ವದ್ದಾಗಿದೆ. ಕಡಿಮೆ ದರ, ಆರಾಮದಾಯಕ ದೂರ ಪ್ರಯಾಣಗಳ ಕಾರಣದಿಂದ ಭಾರತೀಯರ ಬಹುಮುಖ್ಯ ಸಾರಿಗೆಯಾಗಿ ಗುರುತಿಸಿಕೊಂಡಿದೆ. ಭಾರತದ ಪ್ರತಿ ರಾಜ್ಯದ ಪ್ರಮುಖ ರೈಲು ನಿಲ್ದಾಣಗಳು ಭಾರಿ ಜನಸಂದಣಿಯಿಂದ ಕೂಡಿರುತ್ತದೆ. ಇದೀಗ ವಿಶ್ವದ ಅತೀ ಹೆಚ್ಚು ಬ್ಯೂಸಿ ಇರುವ ರೈಲು ನಿಲ್ದಾಣದ ಪಟ್ಟಿ ಪ್ರಕಟಗೊಂಡಿದೆ. ವಿಶೇಷ ಅಂದರೆ ಭಾರತದ 2 ರೈಲು ನಿಲ್ದಾಣ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಸದಾ ಬ್ಯೂಸಿ ಇರುವ ವಿಶ್ವದ ಮೊದಲ ನಿಲ್ದಾಣ ಯಾವುದು?
ವಿಶ್ವದ ಅತೀ ಹೆಚ್ಚು ಬ್ಯೂಸಿ ಇರುವ ರೈಲು ನಿಲ್ದಾಣ ಜಪಾನ್‌ನ ಟೋಕಿಯೋ ನಗರದಲ್ಲಿರುವ ಶಿಂಜುಕು ರೈಲು ನಿಲ್ದಾಣ. ಈ ರೈಲು ನಿಲ್ದಾಣವನ್ನು ವಾರ್ಷಿಕ 1.16 ಬಿಲಿಯನ್ ಪ್ರಯಾಣಿಕರು ಬಳಕೆ ಮಾಡುತ್ತಾರೆ. ವಿಶೇಷ ಅಂದರೆ 1885ರಲ್ಲಿ ಈ ರೈಲು ನಿಲ್ದಾಣ ಆರಂಭಗೊಂಡಿತ್ತು. 36 ರೈಲು ಹಳಿಗಳು, 200 ಗೇಟ್‌ಗಳು ಈ ರೈಲು ನಿಲ್ದಾಣಕ್ಕಿದೆ.
ಭಾರತದ ಎರಡು ನಿಲ್ದಾಣಕ್ಕೆ 6 ಮತ್ತು 8ನೇ ಸ್ಥಾನ
ಭಾರತದ ಎರಡು ನಿಲ್ದಾಣ ವಿಶ್ವದ ಅತೀ ಬ್ಯೂಸಿ ನಿಲ್ದಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಸಾಮಾನ್ಯವಾಗಿ ಅತೀ ಹೆಚ್ಚು ಜನದಟ್ಟಣೆ ಇರುವ ನಿಲ್ದಾಣ ಎಂದ ತಕ್ಷಣ ನೆನಪಿಗೆ ಬರುವುದು ಮುಂಬೈ ಹಾಗೂ ದೆಹಲಿ ರೈಲು ನಿಲ್ದಾಣ. ಆದರೆ ಪ್ರಯಾಣಿಕರ ಬಳಕೆ, ಪ್ರಯಾಣದ ಅನುಸಾರದಲ್ಲಿ ಕೋಲ್ಕತಾದ ಹೌರಾ ರೈಲು ನಿಲ್ದಾಣ 6ನೇ ಸ್ಥಾನದಲ್ಲಿದ್ದರೆ, ಕೋಲ್ಕತಾದ ಸೆಲ್ದಾ ನಿಲ್ದಾಣ 8ನೇ ಸ್ಥಾನದಲ್ಲಿದೆ.
1854ರಲ್ಲಿ ಆರಂಭಗೊಂಡಿದೆ ಹೌರಾ ನಿಲ್ದಾಣ
ಕೋಲ್ಕತಾದ ಹೌರಾ ರೈಲು ನಿಲ್ದಾಣ 1854ರಲ್ಲಿ ಆರಂಭಗೊಂಡಿದೆ. ಇದೀಗ ವಾರ್ಷಿಕವಾಗಿ ಸರಾಸರಿ 547 ಮಿಲಿಯನ್ ಪ್ಯಾಸೆಂಜರ್ ಈ ರೈಲು ನಿಲ್ದಾಣ ಬಳಕೆ ಮಾಡುತ್ತಾರೆ. ಹೌರ ಬ್ರಿಡ್ಜ್ ಪಕ್ಕದಲ್ಲೇ ಈ ರೈಲು ನಿಲ್ದಾಣವಿದೆ. ಇದು ಕೋಲ್ಕತಾ ನಗರದ ಬಳಿ ಇರುವ ನಿಲ್ದಾಣವಾಗಿದೆ.
ಕೋಲ್ಕತಾದ ಸಬ್ಅರ್ಬನ್ ನಿಲ್ದಾಣ ಸೆಲ್ದಾ
ಕೋಲ್ಕತಾದ ಸಬ್‌ಅರ್ಬನ್ ರೈಲು ನಿಲ್ದಾಣ ಸೆಲ್ದಾ 1869ರಲ್ಲಿ ಆರಂಭಗೊಂಡಿದೆ. ವಾರ್ಷಿಕವಾಗಿ ಸರಾಸರಿ 438 ಪ್ರಯಾಣಿಕರು ಈ ನಿಲ್ದಾಣ ಬಳಕೆ ಮಾಡುತ್ತಿದ್ದರೆ. ದೇಶದ ಇತರ ಎಲ್ಲಾ ರೈಲು ನಿಲ್ದಾಣಗಳ ಫೂಟ್‌ಫಾಲ್ ಹೌರ ಹಾಗೂ ಸೆಲ್ದಾ ನಿಲ್ದಾಣಕ್ಕಿಂತ ಕಡಿಮೆ ಇದೆ. ಈ ಎರಡು ನಿಲ್ದಾಣ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಕೋಲ್ಕತಾದ ಸಬ್ಅರ್ಬನ್ ನಿಲ್ದಾಣ ಸೆಲ್ದಾ
ವಿಶ್ವದ ಟಾಪ್ 10 ಬ್ಯೂಸಿ ರೈಲು ನಿಲ್ದಾಣ ಪಟ್ಟಿ
ವಿಶೇಷ ಅಂದರೆ ಟಾಪ್ 10 ಪಟ್ಟಿಯಲ್ಲಿ ಭಾರತದ 2 ನಿಲ್ದಾಣ ಹೊರತುಪಡಿಸಿದರೆ ಇನ್ನೆಲ್ಲಾ ನಿಲ್ದಾಣಗಳು ಜಪಾನ್ ನಿಲ್ದಾಣಗಳಾಗಿದೆ.
- ಶಿಂಜುಕು ರೈಲು ನಿಲ್ದಾಣ, ಜಪಾನ್
- ಶಿಬುಯಾ ರೈಲು ನಿಲ್ದಾಣ, ಜಪಾನ್
- ಇಕೆಬುಕುರೊ ರೈಲು ನಿಲ್ದಾಣ, ಜಪಾನ್
- ಒಸಾಕಾ/ಉಮೆಡಾ ರೈಲು ನಿಲ್ದಾಣ, ಜಪಾನ್
- ಯೊಕಮಹಾ ರೈಲು ನಿಲ್ದಾಣ, ಜಪಾನ್
- ಹೌರ ರೈಲು ನಿಲ್ದಾಣ, ಕೋಲ್ಕತಾ ಭಾರತ
- ಕಿಟಾ ಸೆಂಜು , ರೈಲು ನಿಲ್ದಾಣ, ಜಪಾನ್
- ಸೆಲ್ದಾ ರೈಲು ನಿಲ್ದಾಣ, ಕೋಲ್ಕತಾ ಭಾರತ
- ಟೊಕಿಯೋ ರೈಲು ನಿಲ್ದಾಣ, ಜಪಾನ್
- ನಗೋಯ ರೈಲು ನಿಲ್ದಾಣ, ಜಪಾನ್
ವಿಶ್ವದ ಟಾಪ್ 10 ಬ್ಯೂಸಿ ರೈಲು ನಿಲ್ದಾಣ ಪಟ್ಟಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

