MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • BREAKING: ಕೊನೆಗೂ ಮ್ಯಾಜಿಕ್ ನಂಬರ್ ತಲುಪಿದ ದಳಪತಿ ವಿಜಯ್, ಡಿಎಂಕೆಗೆ ಕೈಕೊಟ್ಟು ಟಿವಿಕೆಗೆ ಸಾಥ್ ನೀಡಿದ ಎಡಪಕ್ಷ ಮತ್ತು ವಿಸಿಕೆ!

BREAKING: ಕೊನೆಗೂ ಮ್ಯಾಜಿಕ್ ನಂಬರ್ ತಲುಪಿದ ದಳಪತಿ ವಿಜಯ್, ಡಿಎಂಕೆಗೆ ಕೈಕೊಟ್ಟು ಟಿವಿಕೆಗೆ ಸಾಥ್ ನೀಡಿದ ಎಡಪಕ್ಷ ಮತ್ತು ವಿಸಿಕೆ!

ನಟ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' ಪಕ್ಷವು ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಲು ಬೇಕಾದ ಬಹುಮತವನ್ನು ಪಡೆದುಕೊಂಡಿದೆ. ದ್ರಾವಿಡ ಪಕ್ಷಗಳ 62 ವರ್ಷಗಳ ಆಡಳಿತಕ್ಕೆ ತೆರೆ ಎಳೆದು, ವಿಜಯ್ ಅವರು ರಾಜ್ಯಪಾಲರನ್ನು ಭೇಟಿಯಾಗಿ ಅಧಿಕೃತವಾಗಿ ಹಕ್ಕು ಮಂಡಿಸಲಿದ್ದಾರೆ.

2 Min read
Author : Santosh Naik
Published : May 08 2026, 04:36 PM IST
Share this Photo Gallery
  • FB
  • TW
  • Linkdin
  • Whatsapp
16
ಇಂದು ಸಂಜೆ ವಿಜಯ್‌,ರಾಜ್ಯಪಾಲರ ಭೇಟಿ
Image Credit : ANI

ಇಂದು ಸಂಜೆ ವಿಜಯ್‌,ರಾಜ್ಯಪಾಲರ ಭೇಟಿ

ಕಳೆದ ನಾಲ್ಕು ದಿನಗಳಿಂದ ತಮಿಳುನಾಡು ರಾಜಕಾರಣದಲ್ಲಿ ಮನೆಮಾಡಿದ್ದ ಅನಿಶ್ಚಿತತೆ ಮತ್ತು ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ಸೂಪರ್ ಸ್ಟಾರ್ ವಿಜಯ್ ಅವರ ಚೆನ್ನೈ ನಿವಾಸದ ಮುಂದೆ ಈಗ 'ಟಿವಿಕೆ.. ಟಿವಿಕೆ..' ಎಂಬ ಹರ್ಷೋದ್ಗಾರಗಳು ಮೊಳಗುತ್ತಿವೆ. ಮೂಲಗಳ ಪ್ರಕಾರ, ಸರ್ಕಾರ ರಚಿಸಲು ಅಗತ್ಯವಿರುವ ಶಾಸಕರ ಬೆಂಬಲವನ್ನು ಕ್ರೋಢೀಕರಿಸುವಲ್ಲಿ ವಿಜಯ್ ಯಶಸ್ವಿಯಾಗಿದ್ದು, ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗುವುದು ಈಗ ಖಚಿತವಾಗಿದೆ. ವಿಜಯ್ ಅವರು ಇಂದು ಸಂಜೆ 6 ಗಂಟೆಗೆ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಅಧಿಕೃತವಾಗಿ ಹಕ್ಕು ಮಂಡಿಸಲಿದ್ದಾರೆ.

26
ದ್ರಾವಿಡ ಪಕ್ಷಗಳ 62 ವರ್ಷಗಳ ಪಾರುಪತ್ಯಕ್ಕೆ ಬ್ರೇಕ್
Image Credit : ANI

ದ್ರಾವಿಡ ಪಕ್ಷಗಳ 62 ವರ್ಷಗಳ ಪಾರುಪತ್ಯಕ್ಕೆ ಬ್ರೇಕ್

ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ಚೊಚ್ಚಲ ಪ್ರಯತ್ನದಲ್ಲೇ 234 ಸ್ಥಾನಗಳ ಪೈಕಿ 108 ಸ್ಥಾನಗಳನ್ನು ಗೆದ್ದು ಅಚ್ಚರಿ ಮೂಡಿಸಿತ್ತು. ಈ ಮೂಲಕ ದಶಕಗಳಿಂದ ತಮಿಳುನಾಡು ರಾಜಕಾರಣವನ್ನು ಆಳುತ್ತಿದ್ದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳ 62 ವರ್ಷಗಳ ಏಕಸ್ವಾಮ್ಯವನ್ನು ವಿಜಯ್ ಮುರಿದಿದ್ದರು. ಆದರೆ, ಜಯ ಗಳಿಸಿದರೂ ಬಹುಮತದ ಕೊರತೆಯಿಂದಾಗಿ ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡಿರಲಿಲ್ಲ.

Related Articles

Related image1
'ಭಾರತದ ರಾಜಕೀಯವನ್ನೇ ನಡುಗಿಸಿದ ಮಿರಾಕಲ್‌..' ತಮಿಳುನಾಡು ಚುನಾವಣಾ ಫಲಿತಾಂಶದ ಬಗ್ಗೆ ವಿಜಯ್ ಭಾವುಕ ನುಡಿ
Related image2
ತ್ರಿಷಾ ಪ್ರೀತಿಯ ಬಲೆಯಲ್ಲಿ ದಳಪತಿ ವಿಜಯ್? ವಿರೋಧಿಗಳಿಗೆ ಹಬ್ಬ: ಈಗ ತಮಿಳುನಾಡು ಅಧಿಪತಿ!
36
ರಾಜ್ಯಪಾಲರ ಕಠಿಣ ನಿಲುವು ಮತ್ತು ಸಂಖ್ಯಾಬಲದ ಆಟ
Image Credit : X

ರಾಜ್ಯಪಾಲರ ಕಠಿಣ ನಿಲುವು ಮತ್ತು ಸಂಖ್ಯಾಬಲದ ಆಟ

ಬುಧವಾರ ಮತ್ತು ಗುರುವಾರ ನಡೆದ ಸತತ ಎರಡು ಸಭೆಗಳಲ್ಲಿ ರಾಜ್ಯಪಾಲ ಅರ್ಲೇಕರ್ ಅವರು ತಮ್ಮ ನಿಲುವಿನಿಂದ ಹಿಂದೆ ಸರಿದಿರಲಿಲ್ಲ. 118 ಶಾಸಕರ ಲಿಖಿತ ಬೆಂಬಲವಿಲ್ಲದೆ ಸರ್ಕಾರ ರಚಿಸಲು ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು. ವಿಜಯ್ ಅವರು ತಿರುಚಿರಾಪಳ್ಳಿ (ಪೂರ್ವ) ಮತ್ತು ಪೆರಂಬೂರ್ ಎಂಬ ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ, ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಅವರ ಪಕ್ಷದ ಬಲ 107ಕ್ಕೆ ಇಳಿದಿತ್ತು. ಸರ್ಕಾರ ರಚಿಸಲು ಅವರಿಗೆ ಕನಿಷ್ಠ 11 ಶಾಸಕರ ಬೆಂಬಲದ ಅಗತ್ಯವಿತ್ತು.

46
ವಿಜಯ್ ಕೈ ಹಿಡಿದ ಮಿತ್ರಪಕ್ಷಗಳು
Image Credit : ChatGPT

ವಿಜಯ್ ಕೈ ಹಿಡಿದ ಮಿತ್ರಪಕ್ಷಗಳು

ಡಿಎಂಕೆ ಮೈತ್ರಿಕೂಟದಿಂದ ಹೊರಬಂದಿದ್ದ ಕಾಂಗ್ರೆಸ್‌ನ ಐವರು ಶಾಸಕರು ಮೊದಲೇ ವಿಜಯ್‌ಗೆ ಬೆಂಬಲ ಘೋಷಿಸಿದ್ದರು. ಆದರೂ ಮ್ಯಾಜಿಕ್ ನಂಬರ್ ತಲುಪಲು ಇನ್ನೂ 6 ಶಾಸಕರ ಕೊರತೆಯಿತ್ತು. ಇದಕ್ಕಾಗಿ ವಿಜಯ್ ಅವರು ತೋಳ್ ತಿರುಮಾವಳವನ್ ನೇತೃತ್ವದ ವಿಸಿಕೆ (VCK) ಹಾಗೂ ಎಡಪಕ್ಷಗಳಾದ ಸಿಪಿಐ(ಎಂ) ಮತ್ತು ಸಿಪಿಐ ಜೊತೆ ಮಾತುಕತೆ ನಡೆಸುತ್ತಿದ್ದರು.

56
ಬೆಂಬಲ ನೀಡಿದ ವಿಸಿಕೆ, ಎಡಪಕ್ಷ
Image Credit : X

ಬೆಂಬಲ ನೀಡಿದ ವಿಸಿಕೆ, ಎಡಪಕ್ಷ

ಒಂದೆಡೆ ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿದ್ದ ಎಂ.ಕೆ. ಸ್ಟಾಲಿನ್ ಅವರು ತಮ್ಮ ಹಳೆಯ ಮಿತ್ರರಾದ ವಿಸಿಕೆ ಮತ್ತು ಎಡಪಕ್ಷಗಳನ್ನು ಉಳಿಸಿಕೊಳ್ಳಲು ಅಂತಿಮ ಪ್ರಯತ್ನ ನಡೆಸಿದ್ದರು. ಅಷ್ಟೇ ಅಲ್ಲದೆ, ತಮ್ಮ ಬದ್ಧವೈರಿ ಎಐಎಡಿಎಂಕೆ ಜೊತೆಗೂ 'ಅಪವಿತ್ರ ಮೈತ್ರಿ' ಮಾಡಿಕೊಳ್ಳುವ ಮಾತುಕತೆ ನಡೆಸುತ್ತಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಆದರೆ, ಇಂದು ಮಧ್ಯಾಹ್ನ ಹೊರಬಿದ್ದಿರುವ ಮಾಹಿತಿಯಂತೆ, ವಿಸಿಕೆ ಮತ್ತು ಎಡಪಕ್ಷಗಳು ಕೊನೆಗೂ ವಿಜಯ್ ಅವರನ್ನು ಬೆಂಬಲಿಸಲು ನಿರ್ಧರಿಸಿವೆ.

66
ಸಂಖ್ಯೆಗಳ ಲೆಕ್ಕಾಚಾರ
Image Credit : X

ಸಂಖ್ಯೆಗಳ ಲೆಕ್ಕಾಚಾರ

ಟಿವಿಕೆ: 107 (ವಿಜಯ್ ಅವರ ಒಂದು ಸ್ಥಾನ ಹೊರತುಪಡಿಸಿ)

ಕಾಂಗ್ರೆಸ್: 05

ವಿಸಿಕೆ: 02

ಸಿಪಿಐ (ಎಂ): 02

ಸಿಪಿಐ: 02

ಒಟ್ಟು: 118 (ಅಗತ್ಯವಿರುವ ನಿಖರ ಬಹುಮತ)

ಈ ಮೂಲಕ ತಮಿಳುನಾಡಿನಲ್ಲಿ ಹೊಸ ಯುಗ ಆರಂಭವಾಗುತ್ತಿದ್ದು, ಚಿತ್ರರಂಗದ ಸೂಪರ್ ಸ್ಟಾರ್ ಆಗಿದ್ದ ವಿಜಯ್ ಈಗ ಅಧಿಕೃತವಾಗಿ ರಾಜಕೀಯದ 'ತಲೈವಾ' ಆಗಿ ಹೊರಹೊಮ್ಮುತ್ತಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ದಳಪತಿ ವಿಜಯ್
ತಮಿಳಗ ವೆಟ್ರಿ ಕಳಗಂ
ತಮಿಳುನಾಡು
ದ್ರಾವಿಡ ಮುನ್ನೇತ್ರ ಕಳಗಂ
ಸುದ್ದಿ
ಭಾರತ ಸುದ್ದಿ

Latest Videos
Recommended Stories
Recommended image1
ತೆಲಂಗಾಣದಲ್ಲಿ ಶಾಲಾ ಕಟ್ಟಡಕ್ಕಾಗಿ 800 ವರ್ಷ ಹಳೆಯ ಶಿವ ದೇವಾಲಯ ಧ್ವಂಸ, ಅಧಿಕಾರಿಗಳ ವಿರುದ್ಧ ಕೇಸ್ ದಾಖಲು
Recommended image2
ವಿಜಯ್‌ ಸಿಎಂ ಕನಸಿಗೆ ಅಡ್ಡಗಾಲಾಯ್ತಾ ಕಾಂಗ್ರೆಸ್? ಮೈತ್ರಿಯೊಂದಿಗೆ ಸರ್ಕಾರ ರಚನೆಗೆ ಹೋಗಿದ್ದೇ ಪ್ರಮಾದವಾಯ್ತಾ?
Recommended image3
ಒಂದೇ ತಪ್ಪಿನಿಂದ ನಟ ವಿಜಯ್ ಸಿಎಂ ಪಟ್ಟ ಮಿಸ್? ಅನುಭವ ಕೊರತೆಯಿಂದ ಟಿವಿಕೆ ಮಾಡಿದ ಎಡವಟ್ಟು
Related Stories
Recommended image1
'ಭಾರತದ ರಾಜಕೀಯವನ್ನೇ ನಡುಗಿಸಿದ ಮಿರಾಕಲ್‌..' ತಮಿಳುನಾಡು ಚುನಾವಣಾ ಫಲಿತಾಂಶದ ಬಗ್ಗೆ ವಿಜಯ್ ಭಾವುಕ ನುಡಿ
Recommended image2
ತ್ರಿಷಾ ಪ್ರೀತಿಯ ಬಲೆಯಲ್ಲಿ ದಳಪತಿ ವಿಜಯ್? ವಿರೋಧಿಗಳಿಗೆ ಹಬ್ಬ: ಈಗ ತಮಿಳುನಾಡು ಅಧಿಪತಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved