MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ನಮ್ಮ ಪಕ್ಕದ ರಾಜ್ಯದಲ್ಲೇ ಇದೆ ಮನುಷ್ಯನಿಗಿಂತ ನಿಧಾನವಾಗಿ ಚಲಿಸುವ ರೈಲು! ಇದರಲ್ಲಿ ಹೋಗೋಕೆ ಜನ ಯಾಕೆ ಮುಗಿಬೀಳ್ತಾರೆ ಗೊತ್ತಾ?

ನಮ್ಮ ಪಕ್ಕದ ರಾಜ್ಯದಲ್ಲೇ ಇದೆ ಮನುಷ್ಯನಿಗಿಂತ ನಿಧಾನವಾಗಿ ಚಲಿಸುವ ರೈಲು! ಇದರಲ್ಲಿ ಹೋಗೋಕೆ ಜನ ಯಾಕೆ ಮುಗಿಬೀಳ್ತಾರೆ ಗೊತ್ತಾ?

ಸಾಮಾನ್ಯವಾಗಿ ಒಬ್ಬ ಮನುಷ್ಯ ಗಂಟೆಗೆ 8 ರಿಂದ 9 ಕಿಲೋಮೀಟರ್ ವೇಗದಲ್ಲಿ ನಡೆಯಬಲ್ಲ. ಆದರೆ, ಮನುಷ್ಯನ ನಡಿಗೆಗಿಂತಲೂ ಕಡಿಮೆ ವೇಗದಲ್ಲಿ ಚಲಿಸುವ ರೈಲೊಂದು ನಮ್ಮ ದೇಶದಲ್ಲಿದೆ. ಅಷ್ಟೊಂದು ನಿಧಾನವಾದರೂ, ಈ ರೈಲನ್ನು ಹತ್ತಲು ಜನರು ಮುಗಿಬೀಳುತ್ತಾರೆ. ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ. 

2 Min read
Author : Naveen Kodase
Published : Jul 06 2026, 01:27 PM IST
Share this Photo Gallery
  • FB
  • TW
  • Linkdin
  • Whatsapp
16
ಭಾರತದ ವಿಶೇಷ ರೈಲು
Image Credit : easemytrip

ಭಾರತದ ವಿಶೇಷ ರೈಲು

ನಮ್ಮ ದೇಶದಲ್ಲಿ ಬಹುತೇಕ ಎಲ್ಲರೂ ಒಂದಲ್ಲ ಒಂದು ಬಾರಿ ರೈಲಿನಲ್ಲಿ ಪ್ರಯಾಣಿಸಿರುತ್ತಾರೆ. ದೂರದ ಪ್ರಯಾಣಕ್ಕೆ ರೈಲುಗಳೇ ಜನರಿಗೆ ಅಚ್ಚುಮೆಚ್ಚು. ಇತ್ತೀಚೆಗೆ ಅತಿ ವೇಗವಾಗಿ ಚಲಿಸುವ ರೈಲುಗಳು ಬಂದಿವೆ. ನಮ್ಮ ದೇಶದಲ್ಲಿ ಪ್ರತಿನಿತ್ಯ 19 ಸಾವಿರ ರೈಲುಗಳು ಕೋಟ್ಯಾಂತರ ಪ್ರಯಾಣಿಕರನ್ನು ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ಕೊಂಡೊಯ್ಯುತ್ತಾ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಈ ರೈಲಿಗಿಂತ ನಾವೇ ಫಾಸ್ಟ್ ಆಗಿ ನಡೀಬಹುದು...!
Image Credit : Gemini

ಈ ರೈಲಿಗಿಂತ ನಾವೇ ಫಾಸ್ಟ್ ಆಗಿ ನಡೀಬಹುದು...!

ಆದರೆ, ಇಂದಿಗೂ ಭಾರತದಲ್ಲಿ ಅತ್ಯಂತ ನಿಧಾನವಾಗಿ ಚಲಿಸುವ ರೈಲೊಂದು ಇದೆ. ಅಷ್ಟು ನಿಧಾನವಾದರೂ, ಈ ರೈಲನ್ನು ಹತ್ತಲು ಪ್ರತಿದಿನ ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಈ ರೈಲು ಎಲ್ಲಿದೆ? ಇದರ ವಿಶೇಷತೆ ಏನು? ನೋಡೋಣ ಬನ್ನಿ.

Related Articles

Related image1
ಶಿವಮೊಗ್ಗ-ತಾಳಗುಪ್ಪ ಮಲೆನಾಡು ರೈಲ್ವೇ ಪ್ರಯಾಣಿಕರಿಗೆ ಗುಡ್‌ ನ್ಯೂಸ್ ಕೊಟ್ಟ ಸಂಸದ ಬಿ.ವೈ ರಾಘವೇಂದ್ರ!
Related image2
ರೈಲು ಎಷ್ಟೇ ವೇಗವಾಗಿ ಚಲಿಸಿದರೂ ನೈಸ್ ಆಗಿರೋ ಹಳಿಗಳ ಮೇಲೆ ಏಕೆ ಜಾರುವುದಿಲ್ಲ?
36
ಅದ್ಭುತವಾದ ರೈಲು ಪ್ರಯಾಣ..!
Image Credit : easemytrip

ಅದ್ಭುತವಾದ ರೈಲು ಪ್ರಯಾಣ..!

ನಮ್ಮ ನೆರೆಯ ತಮಿಳಿನಾಡಿನಲ್ಲಿ ಈ ಟಾಯ್ ಟ್ರೈನ್ ಸಂಚರಿಸುತ್ತದೆ. ಈ ಟ್ರೈನ್‌ನ ಹೆಸರು ಮೆಟ್ಟುಪಾಳಯಂ-ಊಟಿ ಪ್ಯಾಸೆಂಜರ್(ಟ್ರೈನ್ ನಂಬರ್:56136). ಈ ರೈಲು ತುಂಬಾ ನಿಧಾನವಾಗಿ ಹೋದರೂ, ಪ್ರಯಾಣಿಕರಿಗೆ ಇನ್ನಷ್ಟು ನಿಧಾನವಾಗಿ ಹೋದರೆ ಚೆನ್ನಾಗಿತ್ತು ಎನಿಸುತ್ತದೆ. ಏಕೆಂದರೆ, ದಟ್ಟವಾದ ಕಾಡುಗಳು, ಮಂಜು ಮುಸುಕಿದ ಬೆಟ್ಟಗಳು, ಕತ್ತಲೆಯ ಸುರಂಗಗಳು ಮತ್ತು ಚಹಾ ತೋಟಗಳ ನಡುವೆ ಈ ರೈಲು ಸಾಗುತ್ತದೆ. ಈ ಪ್ರಯಾಣವು ಜನರಿಗೆ ಅದ್ಭುತ ಅನುಭವವನ್ನು ನೀಡುತ್ತದೆ.

46
ನೀಲಗಿರಿ ಪರ್ವತಗಳ ಮಧ್ಯೆ ಸಾಗುವ ರೈಲು...!
Image Credit : easemytrip

ನೀಲಗಿರಿ ಪರ್ವತಗಳ ಮಧ್ಯೆ ಸಾಗುವ ರೈಲು...!

ಈ ರೈಲು ಮೆಟ್ಟುಪಾಳಯಂ ಮತ್ತು ಊಟಿ ನಡುವಿನ ನೀಲಗಿರಿ ಬೆಟ್ಟಗಳಲ್ಲಿ ಚಲಿಸುತ್ತದೆ. ಇದು ಭಾರತದ ಅತ್ಯಂತ ನಿಧಾನಗತಿಯ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ರೈಲು ಗಂಟೆಗೆ ಕೇವಲ 9 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಅಂದರೆ, ಮನುಷ್ಯರೇ ಇದಕ್ಕಿಂತ ವೇಗವಾಗಿ ನಡೆಯಬಹುದು. ಒಟ್ಟು 46 ಕಿಲೋಮೀಟರ್ ದೂರವನ್ನು ಕ್ರಮಿಸಲು ಈ ರೈಲು ಐದು ಗಂಟೆ ತೆಗೆದುಕೊಳ್ಳುತ್ತದೆ. ನಿಧಾನವಾದರೂ, ಈ ಪ್ರಯಾಣ ಎಲ್ಲರ ನೆನಪಿನಲ್ಲಿ ಉಳಿಯುತ್ತದೆ.

56
ರೈಲು ನಿಧಾನವಾಗಿ ಚಲಿಸಲು ಕಾರಣವೇನು..?
Image Credit : easemytrip

ರೈಲು ನಿಧಾನವಾಗಿ ಚಲಿಸಲು ಕಾರಣವೇನು..?

ಈ ರೈಲು ನೀಲಗಿರಿ ಪರ್ವತಗಳ ಕಡಿದಾದ ಇಳಿಜಾರಿನಲ್ಲಿ ಚಲಿಸುತ್ತದೆ. ಹಾಗಾಗಿ, ಸುರಕ್ಷತೆಯ ದೃಷ್ಟಿಯಿಂದ ಇತರ ಪ್ಯಾಸೆಂಜರ್ ರೈಲುಗಳಿಗಿಂತ ಕಡಿಮೆ ವೇಗದಲ್ಲಿ ಇದನ್ನು ಚಲಾಯಿಸಲಾಗುತ್ತದೆ. ನಿಧಾನವಾಗಿ ಚಲಿಸಿದರೂ, ಸುತ್ತಮುತ್ತಲಿನ ಸುಂದರ ದೃಶ್ಯಗಳು ಪ್ರಯಾಣಿಕರನ್ನು ಆಕರ್ಷಿಸುತ್ತವೆ. ಈ ಟ್ರೈನ್ 46 ಕಿಲೋ ಮೀಟರ್ ದೂರದಲ್ಲಿ 16 ಸುರಂಗಗಳನ್ನು ಹಾಗೂ 250 ಬ್ರಿಡ್ಜ್‌ಗಳನ್ನು ದಾಟಿ ಸಾಗುತ್ತದೆ.

66
ಬಾಲಿವುಡ್‌ನ ಫೇಮಸ್ ಹಾಡು ಇದೇ ರೈಲಿನಲ್ಲಿ ಚಿತ್ರೀಕರಣಗೊಂಡಿದ್ದು!
Image Credit : easemytrip

ಬಾಲಿವುಡ್‌ನ ಫೇಮಸ್ ಹಾಡು ಇದೇ ರೈಲಿನಲ್ಲಿ ಚಿತ್ರೀಕರಣಗೊಂಡಿದ್ದು!

ಈ ರೈಲು ಪ್ರವಾಸಿಗರ ಪಾಲಿಗೆ ಅವಿಸ್ಮರಣೀಯ ಕ್ಷಣಗಳನ್ನು ಕಟ್ಟಿಕೊಡುವುದರಲ್ಲಿ ಎರಡು ಮಾತಿಲ್ಲ. ಇನ್ನು ವಿಶೇಷವೆಂದರೆ, ಶಾರುಖ್ ಖಾನ್ ಮತ್ತು ಮಲೈಕಾ ಅರೋರಾ ಅಭಿನಯದ 'ದಿಲ್ ಸೆ' ಚಿತ್ರದ ಪ್ರಸಿದ್ಧ 'ಛಯ್ಯಾ ಛಯ್ಯಾ' ಹಾಡನ್ನು ಇದೇ ರೈಲಿನಲ್ಲಿ ಚಿತ್ರೀಕರಿಸಲಾಗಿದೆ. ಇದಷ್ಟೇ ಅಲ್ಲದೇ ಈ ಟ್ರೈನ್‌ನಲ್ಲಿ ನೀವೂ ಪ್ರಯಾಣಿಸಬೇಕು ಎಂದಾದರೇ, ಒಂದು ತಿಂಗಳು ಮುಂಗಡವಾಗಿಯೇ ಟಿಕೆಟ್ ಬುಕ್ ಮಾಡಿಕೊಳ್ಳಬೇಕಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಜೀವನಶೈಲಿ
ಪ್ರವಾಸ
ರೈಲು

Latest Videos
Recommended Stories
Recommended image1
ನೇಲ್ ಪಾಲಿಶ್ ಒಣಗಿದ್ರೆ ಕಸಕ್ಕೆ ಹಾಕ್ಬೇಡಿ, 5 ನಿಮಿಷದ ಈ ಹ್ಯಾಕ್ ಟ್ರೈ ಮಾಡಿ
Recommended image2
ಅಂದು 15 ಸಾವಿರ ಫೀಸ್​ಗೆ ಅಮ್ಮ ಬಳೆ ಮಾರಿದ್ರು: ಈಗ 1.9 ಕೋಟಿ ಸಂಬಳ- ಬೆಂಗಳೂರು ಯವಕನ ಹೃದಯಸ್ಪರ್ಶಿ ಬರಹ
Recommended image3
Viral Kiss Video: ಮದುವೆಯಾಗದೇ ಚುಂಬಿಸಿದ್ದಕ್ಕಾಗಿ ಜೋಡಿಗೆ 21 ಛಡಿಯೇಟಿನ ಕ್ರೂರ ಶಿಕ್ಷೆ- ನಾಲ್ಕು ತಿಂಗಳು ಜೈಲು
Related Stories
Recommended image1
ಶಿವಮೊಗ್ಗ-ತಾಳಗುಪ್ಪ ಮಲೆನಾಡು ರೈಲ್ವೇ ಪ್ರಯಾಣಿಕರಿಗೆ ಗುಡ್‌ ನ್ಯೂಸ್ ಕೊಟ್ಟ ಸಂಸದ ಬಿ.ವೈ ರಾಘವೇಂದ್ರ!
Recommended image2
ರೈಲು ಎಷ್ಟೇ ವೇಗವಾಗಿ ಚಲಿಸಿದರೂ ನೈಸ್ ಆಗಿರೋ ಹಳಿಗಳ ಮೇಲೆ ಏಕೆ ಜಾರುವುದಿಲ್ಲ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved