ಬೆಂಗಳೂರು ಮಂಗಳೂರು ವಂದೇ ಭಾರತ್ ರೈಲಿನ ಟ್ರಯಲ್ ಆರಂಭ, ಪ್ರಕೃತಿ ಸೊಬಗಿನ ನಡುವೆ ಎಕ್ಸ್‌ಪ್ರೆಸ್
ಬಹುನಿರೀಕ್ಷಿತ ಬೆಂಗಳೂರು ಮಂಗಳೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಟ್ರಯಲ್ ಆರಂಭಗೊಂಡಿದೆ. ಶೀಘ್ರದಲ್ಲೇ ಪ್ರಯಾಣಿಕರಿಗೆ ಮುಕ್ತವಾಗಲಿದ್ದು, ರೈಲಿನ ಟಿಕೆಟ್, ಸಮಯ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

ಬೆಂಗಳೂರು-ಮಂಗಳೂರು ವಂದೇ ಭಾರತ್
ಬೆಂಗಳೂರು ಮಂಗಳೂರಿನ ನಡುವೆ ರೈಲು ಸೇವೆ ವಿಸ್ತರಣೆಯಾಗುತ್ತಿದೆ. ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಟ್ರಯಲ್ ಈ ವಾರದಿಂದ ಆರಂಭಗೊಳ್ಳುತ್ತಿದೆ. ಬೆಂಗಳೂರು ಮಂಗಳೂರು ನಡುವೆ ಪರ್ರಯಾಣಿಸುತ್ತಿದ್ದ ರೈಲು ಪ್ರಯಾಣಿಕರ ಸಂಭ್ರಮ ಇಮ್ಮಡಿಗೊಳಿಸಿದೆ. ಶೀಘ್ರದಲ್ಲೇ ಹೊಸ ವಂದೇ ಭಾರತ್ ರೈಲು ಬೆಂಗಳೂರು-ಮಂಗಳೂರು ನಡುವೆ ಕಾರ್ಯಾರಂಭಗೊಳ್ಳಲಿದೆ.
ವಿಶೇಷ 8 ಕೋಚ್‌ಗಳ ವಂದೇ ಭಾರತ್ ರೈಲು
ಯಶವಂತಪುರ ಮಂಗೂರು ರೈಲ್ವೇ ನಿಲ್ದಾಣಗಳ ವಂದೇ ಭಾರತ್ ರೈಲು ಟ್ರಯಲ್‌ಗಾಗಿ ಈಗಾಗಲೇ ಅಧಿಕಾರಿಗಳು ಸಜ್ಜಾಗಿದ್ದಾರೆ. ಮೈಸೂರು ಡಿವಿಶನ್‌ಗೂ ಮಾಹಿತಿ ನೀಡಲಾಗಿದೆ. ದುರ್ಗಮ ಹಾದಿಯಲ್ಲಿ ವಂದೇ ಭಾರತ್ ರೈಲು ಸೇವೆ ನೀಡುವುದು ಭಾರತೀಯ ರೈಲ್ವೇಗೆ ಸವಾಲಿನ ಪ್ರಶ್ನೆಯಾಗಿದೆ. ವಿಶೇಷ 8 ಕೋಚ್‌ಗಳ ವಂದೇ ಭಾರತ್ ರೈಲಿನ ಮೂಲಕ ಪ್ರಯೋಗಿಕ ಸಂಚಾರ ನಡೆಯಲಿದೆ.
ಪಶ್ಚಿಮ ಘಟ್ಟಗಳ ನಡುವೆ ವಂದೇ ಭಾರತ್
ಪಶ್ಚಿಮ ಘಟ್ಟಗಳ ನಡುವೆ ಸಾಗುವ ಹಾದಿಯಲ್ಲಿ ಬ್ರೇಕಿಂಗ್ ಸಿಸ್ಟಮ್, ಸುರಕ್ಷತೆ ಸೇರಿದಂತೆ ಹಲವು ವಿಚಾರಗಳ ಕುರಿತು ಅಧಿಕಾರಿಗಳ ತೀವ್ರ ನಿಗಾ ಇಟ್ಟಿದ್ದಾರೆ. ಈ ಪೈಕಿ ಸಕಲೇಶಪುರದಿಂದ ಸುಬ್ರಹ್ಮಣ್ಯದ ನಡುವಿನ 55 ಕಿಲೋಮೀಟರ್ ಮಾರ್ಗ ಅತ್ಯಂತ ಸವಾಲಿನಿಂದ ಕೂಡಿದೆ. ದಟ್ಟ ಕಾಡು, ಪ್ರಕೃತಿ ಸೊಬಿಗನ ನಡುವೆ ರೈಲು ಹಾದು ಹೋಗಲಿದೆ. ಸುರಂಗ ಮಾರ್ಗ, ಜಲಪಾತ ಸೇರಿದಂತೆ ಹಲವು ಪ್ರಕೃತಿ ರಮಣೀಯ ದೃಶ್ಯಗಳು ಈ ಪ್ರಯಾಣದಲ್ಲಿ ಕಾಣಸಲಿದೆ.
ಘಾಟ್ ಹಳಿಗಳಲ್ಲಿ ವೇಗದ ಮಿತಿ ನಿಗದಿ
ವಂದೇ ಭಾರತ್ ರೈಲು ಎಕ್ಸ್‌ಪ್ರೆಸ್ ರೈಲು. ಹಲವು ಮಾರ್ಗಗಳಲ್ಲಿ 180 ಕಿಲೋಮೀಟರ್ ಮಾರ್ಗದಲ್ಲಿ ಸಂಚರಿಸುತ್ತದೆ. ಆದರೆ ಸಕಲೇಶಪುರದಿಂದ ಪಶ್ಚಿಮ ಘಟ್ಟಗಳ ನಡುವೆ ಸಂಚಾರದ ವೇಳೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಗ ಪ್ರತಿ ಗಂಟೆಗೆ 30 ಕಿಲೋಮೀಟರ್ ನಿಗದಿ ಮಾಡಲಾಗಿದೆ.
ವಂದೇ ಭಾರತ್ ಪ್ರಯಾಣ ಅವಧಿ
ಬೆಂಗಳೂರು ಮಂಗಳೂರು ವಂದೇ ಭಾರತ್ ರೈಲು ಪ್ರಯಾಣ ಟ್ರಯಲ್ ರನ್ ವೇಳೆ 8.5 ಗಂಟೆ ತೆಗೆದುಕೊಳ್ಳುವ ಸಾಧ್ಯತ ಇದೆ. ಇನ್ನು ನಿಲ್ದಾಣಗಳ ನಿಲುಗಡೆ ಸೇರಿದಂತೆ ಇತರ ಸಮಯಗಳ ಕುರಿತು ಟ್ರಯಲ್ ರನ್ ಬಳಿಕ ಸೂಕ್ತ ಮಾಹಿತಿ ಹೊರಬೀಳಲಿದೆ. ಟೆಸ್ಟ್ ಬಳಿಕ ವಂದೇ ಭಾರತ್ ಬೆಂಗಳೂರು ಮಂಗಳೂರು ಪ್ರಯಾಣ ಸಮಯದ ಸಂಪೂರ್ಣ ಚಿತ್ರಣ ಹೊರಬೀಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

