- Home
- News
- India News
- ವಯನಾಡು ಭೂಕುಸಿತದ ಮಣ್ಣಲ್ಲಿ ಮಣ್ಣಾದವರಾರೂ, ಕೇರಳದಲ್ಲಿ ಹುಟ್ಟಿದವರಲ್ಲ; ಹೊಟ್ಟೆಪಾಡಿಗೆ ಬಂದವರ ನುಂಗಿದ ದೇವರ ನಾಡು!
ವಯನಾಡು ಭೂಕುಸಿತದ ಮಣ್ಣಲ್ಲಿ ಮಣ್ಣಾದವರಾರೂ, ಕೇರಳದಲ್ಲಿ ಹುಟ್ಟಿದವರಲ್ಲ; ಹೊಟ್ಟೆಪಾಡಿಗೆ ಬಂದವರ ನುಂಗಿದ ದೇವರ ನಾಡು!
ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೃತಪಟ್ಟವರು ಮತ್ತು ನಾಪತ್ತೆಯಾದವರು ಸ್ಥಳೀಯರಲ್ಲ, ಬದಲಿಗೆ ಸುರಂಗ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಹಾಗಾದರೆ ಅವರ ಮೂಲ ಎಲ್ಲಿ? ಹೆಚ್ಚಿನ ಮಾಹಿತಿ ಇಲ್ಲಿದೆ.

ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸಾವನ್ನಪ್ಪಿದವರು ಮತ್ತು ನಾಪತ್ತೆಯಾದವರು ಸ್ಥಳೀಯರಲ್ಲ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ. ಮೃತರ ಪಟ್ಟಿಯಲ್ಲಿರುವವರೆಲ್ಲರೂ ವಿವಿಧ ರಾಜ್ಯಗಳಿಂದ ಬಂದ ಕಾರ್ಮಿಕರಾಗಿದ್ದಾರೆ.
ಕೇರಳದ ವಯನಾಡು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಮುಂದುವರಿದಿದ್ದು, ಇತ್ತೀಚೆಗೆ ಸಂಭವಿಸಿದ ಭೂಕುಸಿತದಲ್ಲಿ ಭಾರೀ ಸಾವು-ನೋವು ಸಂಭವಿಸಿದೆ. ಆದರೆ, ಈ ದುರಂತದ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಮೇಘಶ್ರೀ ಅವರು, ಘಟನೆಯಲ್ಲಿ ಮೃತಪಟ್ಟವರು ಅಥವಾ ನಾಪತ್ತೆಯಾದವರಲ್ಲಿ ಯಾರೂ ಕೂಡ ಸ್ಥಳೀಯರಲ್ಲ (ಕೇರಳದವರಲ್ಲ) ಎಂದು ಸ್ಪಷ್ಟಪಡಿಸಿದ್ದಾರೆ. ಇವರೆಲ್ಲರೂ ಸುರಂಗ ಕಾಮಗಾರಿಗೆ ನಿಯೋಜನೆಗೊಂಡಿದ್ದ ಹೊರರಾಜ್ಯದ ಸಿಬ್ಬಂದಿಗಳಾಗಿದ್ದಾರೆ.
ಮೃತರ ಮತ್ತು ನಾಪತ್ತೆಯಾದವರ ಮಾಹಿತಿ:
ಭೂಕುಸಿತದ ವೇಳೆ ಮಣ್ಣಿನಡಿ ಸಿಲುಕಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.
ಅವರ ವಿವರ ಇಲ್ಲಿದೆ:
- ಚಂದ್ರ ಬಾನ್ (ಆಪರೇಟರ್): ಮಧ್ಯಪ್ರದೇಶ
- ಬಿಕಾಶ್ ಕುಮಾರ್ (ಸಿವಿಲ್ ಫೋರ್‌ಮ್ಯಾನ್): ಬಿಹಾರ
- ಅನ್ಮೋಲ್ (ಕಾರ್ಮಿಕ): ಜಾರ್ಖಂಡ್
ಇದಲ್ಲದೆ, ಇನ್ನೂ ಐವರು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ:
- ವಿಕ್ರಮ್ ರಾಣಾ (ನಿರ್ಮಾಣ ವ್ಯವಸ್ಥಾಪಕ): ಹಿಮಾಚಲ ಪ್ರದೇಶ
- ರಾಹುಲ್ (ಎಂಜಿನಿಯರ್): ಹಿಮಾಚಲ ಪ್ರದೇಶ
- ಮೊಹಮ್ಮದ್ ಇಮ್ರಾನ್ (ಅಗೆಯುವ ಯಂತ್ರ ನಿರ್ವಾಹಕ): ಬಿಹಾರ
- ರಾಕೇಶ್ ಗುಚೈತ್ (ಸರ್ವೇಯರ್): ಪಶ್ಚಿಮ ಬಂಗಾಳ
- ಅಜರುದ್ದೀನ್ ಅನ್ಸಾರಿ (ಸರ್ವೇಯರ್): ಉತ್ತರ ಪ್ರದೇಶ
ದೊಡ್ಡ ಅನಾಹುತ ತಪ್ಪಿದೇಗೆ?
ಜೂನ್ 27 ರಂದೇ ಭಾರೀ ಮಳೆಯ ಮುನ್ಸೂಚನೆ ಇದ್ದಿದ್ದರಿಂದ ಸುರಂಗ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಅಧಿಕಾರಿಗಳ ಈ ಮುನ್ನೆಚ್ಚರಿಕಾ ಕ್ರಮದಿಂದಾಗಿ ಕಾಮಗಾರಿ ನಿಂತಿತ್ತು, ಇಲ್ಲದಿದ್ದರೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜೀವಹಾನಿ ಸಂಭವಿಸುವ ಸಾಧ್ಯತೆಯಿತ್ತು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಸ್ಥಳೀಯ ನಿವಾಸಿಗಳಿಗೆ ಯಾವುದೇ ಹಾನಿಯಾಗಿಲ್ಲವಾದರೂ, ಒಂದು ಮನೆ ಮತ್ತು ಒಂದು ಧಾರ್ಮಿಕ ಕೇಂದ್ರಕ್ಕೆ ಹಾನಿಯಾಗಿದೆ.
ಸ್ನೈಪರ್ ಡಾಗ್‌ಗಳಿಂದ ಶೋಧ ಕಾರ್ಯ
ಸದ್ಯ ಕೆಸರು ಮಣ್ಣಿನಲ್ಲಿ ಹೂತುಹೋಗಿರುವವರನ್ನು ಪತ್ತೆಹಚ್ಚಲು ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ. ಇದಕ್ಕಾಗಿ ವಿಶೇಷವಾಗಿ ತರಬೇತಿ ನೀಡಲಾದ ಎರಡು ಸ್ನೈಪರ್ ಡಾಗ್‌ಗಳನ್ನು (Sniffer Dogs) ಬಳಸಲಾಗುತ್ತಿದೆ. ಹಿಟಾಚಿ ಅಥವಾ ಹಟಾಚಿ ಯಂತ್ರಗಳು ಮಣ್ಣು ತೆಗೆಯುವ ಮೊದಲು, ಸ್ಥಳದಲ್ಲಿ ಮೃತದೇಹಗಳು ಅಡಗಿವೆಯೇ ಎಂಬುದನ್ನು ಈ ನಾಯಿಗಳು ಪತ್ತೆಹಚ್ಚಲಿವೆ. ಸುಮಾರು 160 ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಪ್ರಕೃತಿ ವಿಕೋಪದ ಈ ಘಟನೆಗೆ ನಿಜವಾದ ಕಾರಣವೇನು ಎಂಬ ಬಗ್ಗೆ ಈಗಾಗಲೇ ತನಿಖೆ ಆರಂಭವಾಗಿದ್ದು, ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

