- Home
- Karnataka Districts
- Vande Bharat Success: ದಕ್ಷಿಣ ರೈಲ್ವೆಯಲ್ಲೇ ನಂ.1! ತಿರುವನಂತಪುರಂ–ಮಂಗಳೂರು ವಂದೇ ಭಾರತ್ ಆದಾಯದಲ್ಲಿ ದಾಖಲೆ
Vande Bharat Success: ದಕ್ಷಿಣ ರೈಲ್ವೆಯಲ್ಲೇ ನಂ.1! ತಿರುವನಂತಪುರಂ–ಮಂಗಳೂರು ವಂದೇ ಭಾರತ್ ಆದಾಯದಲ್ಲಿ ದಾಖಲೆ
:2025 ರ ಆಗಸ್ಟ್ ನಿಂದ ಅಕ್ಟೋಬರ್ ಅವಧಿಯಲ್ಲ 73.35 ಲಕ್ಷ ರೂ. ಆದಾಯ ಗಳಿಸಿರುವ 20632 ತಿರುವನಂತಪುರಂ-ಮಂಗಳೂರು ವಂದೇ ಭಾರತ್ (ವಿಬಿ) ಎಕ್ಸ್‌ಪ್ರೆಸ್ ದಕ್ಷಿಣ ರೈಲ್ವೆ ನಡೆಸುತ್ತಿರುವ ವಂದೇ ಭಾರತ್ ಸೇವೆಗಳಲ್ಲಿ ಅಗ್ರಸ್ಥಾನದಲ್ಲಿದೆ. ಪ್ರಯಾಣಿಕರು ಹೆಚ್ಚಳ ಮತ್ತು ಆದಾಯ ಗಳಿಕೆಯಲ್ಲೂ ಮುಂದಿದೆ.

20632 ತಿರುವನಂತಪುರಂ-ಮಂಗಳೂರು ವಂದೇ ಭಾರತ್ (ವಿಬಿ) ಎಕ್ಸ್‌ಪ್ರೆಸ್
ಕೊಚ್ಚಿ: 2025 ರ ಆಗಸ್ಟ್ ನಿಂದ ಅಕ್ಟೋಬರ್ ಅವಧಿಯಲ್ಲಿ ಅಂದರೆ ಕೇವಲ ಎರಡು ತಿಂಗಳಲ್ಲಿ 73.35 ಲಕ್ಷ ರೂ. ಆದಾಯ ಗಳಿಸಿರುವ 20632 ತಿರುವನಂತಪುರಂ-ಮಂಗಳೂರು ವಂದೇ ಭಾರತ್ (VB) ಎಕ್ಸ್‌ಪ್ರೆಸ್(Thiruvananthapuram-Mangaluru VB) ದಕ್ಷಿಣ ರೈಲ್ವೆ ನಡೆಸುತ್ತಿರುವ ವಂದೇ ಭಾರತ್ ಸೇವೆಗಳಲ್ಲಿ ಅಗ್ರಸ್ಥಾನದಲ್ಲಿದೆ.
ದಕ್ಷಿಣ ರೈಲ್ವೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶದಾದ್ಯಂತ ಪ್ರಮುಖ ನಗರಗಳನ್ನು ಸಂಪರ್ಕಿಸುವ 24 ವಂದೇ ಭಾರತ್ ಸೇವೆಗಳಲ್ಲಿ ಆದಾಯ ಗಳಿಕೆಯಲ್ಲಿ ಮುಂದು.
ದಕ್ಷಿಣ ರೈಲ್ವೆ ಆದಾಯ ಗಳಿಕೆಯಲ್ಲೂ ನಂಬರ್ ಒನ್ ಸ್ಥಾನ!
20627 ಚೆನ್ನೈ ಎಗ್ಮೋರ್-ನಾಗರ್‌ಕೋಯಿಲ್ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ 2,832 ಮತ್ತು 20642 ಕೊಯಮತ್ತೂರು ಜಂಕ್ಷನ್-ಬೆಂಗಳೂರು ಕಂಟೋನ್ಮೆಂಟ್ ವಂದೇ ಭಾರತ್‌ನ 835 ಬುಕಿಂಗ್‌ಗಳಿಗೆ ಹೋಲಿಸಿದರೆ, ರೈಲು ಸೇವೆಗೆ 11,896 ಬುಕಿಂಗ್‌ಗಳ ಸಂಖ್ಯೆಯೂ ಅತಿ ಹೆಚ್ಚು ಎಂದು ಅಂಕಿ-ಅಂಶಗಳು ಬಹಿರಂಗಪಡಿಸಿವೆ.
2025-26ರ ವೇಳೆಗೆ, ದಕ್ಷಿಣ ರೈಲ್ವೆಯ ವಂದೇ ಭಾರತ್ ಸೇವೆಗಳು ಒಟ್ಟಾಗಿ 77.38 ಲಕ್ಷ ಪ್ರಯಾಣಿಕರನ್ನು ಸಾಗಿಸಿದ್ದು, 803.86 ಕೋಟಿ ರೂ.ಗಳ ಆದಾಯವನ್ನು ಗಳಿಸಿದೆ. 2024-25ರಲ್ಲಿ 54.12 ಲಕ್ಷ ಪ್ರಯಾಣಿಕರು ಮತ್ತು 540.65 ಕೋಟಿ ರೂ.ಗಳ ಆದಾಯವಿತ್ತು.
ಆದಾಯ ಗಳಿಕೆ ಮಾತ್ರವಲ್ಲ. ಪ್ರಯಾಣಿಕರ ಮೊದಲ ಆಯ್ಕೆ ಇದೇ!
ಮಂಗಳೂರು-ತಿರುವನಂತಪುರಂ, ಚೆನ್ನೈ ಎಗ್ಮೋರ್-ನಾಗರ್‌ಕೋಯಿಲ್ ಮತ್ತು ಕಾಸರಗೋಡು-ತಿರುವನಂತಪುರಂ ವಂದೇ ಭಾರತ್ ಸೇವೆಗಳು ಸೇರಿದಂತೆ ಹಲವಾರು ರೈಲುಗಳು ನಿರಂತರವಾಗಿ ಶೇ. 100 ಕ್ಕಿಂತ ಹೆಚ್ಚಿನ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುತ್ತವೆ. ಇದು ಪ್ರಯಾಣಿಕರಲ್ಲಿ ಅವುಗಳ ಜನಪ್ರಿಯತೆಯನ್ನು ತೋರಿಸುತ್ತದೆ. 2026-27ರ ಮೊದಲ ಎರಡು ತಿಂಗಳಲ್ಲಿ (ಏಪ್ರಿಲ್-ಮೇ 2026) ಈ ರೈಲುಗಳು 15.21 ಲಕ್ಷ ಪ್ರಯಾಣಿಕರನ್ನು ಸಾಗಿಸುವ ಮೂಲಕ 162.96 ಕೋಟಿ ರೂ.ಗಳನ್ನು ಆದಾಯ ಗಳಿಸಿ ಹೊಸ ದಾಖಲೆ ಸೃಷ್ಟಿಸಿತು., ಪ್ರಯಾಣಿಕರು ಹೆಚ್ಚು ಪ್ರಯಾಣ ಬೆಳೆಸಲು ಇಷ್ಟಪಡುವ ಟ್ರೈನ್ ಇದು. ಇದರ ಮೂಲಕವೇ ಬಯಸುವುದರಿಂದಲೇ ಯಾವಾಗಲೂ ಬೇಡಿಕೆ. ಯಾವುದೇ ಅಡ್ಡಿ ಆತಂಕವಿಲ್ಲದೆ ಆದಾಯ ಗಳಿಕೆಯಲ್ಲಿ ಮುಂದುವರಿದಿರುವುದು ಮಾತ್ರವಲ್ಲ, ದಿನೇದಿನೆ ಹೆಚ್ಚುತ್ತಿದೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಳ
ಪ್ರಯಾಣಿಕರ ಸಂಖ್ಯೆ ದಿನೇದಿನೆ ಹೆಚ್ಚಿದ್ದರೂ, ಪ್ರಯಾಣಿಕರಿಗೆ ರೈಲು ಹೊರಡುವ 15 ನಿಮಿಷಗಳ ಮೊದಲು ಮೂಲ ನಿಲ್ದಾಣಗಳು ಮತ್ತು ಮಾರ್ಗಮಧ್ಯದಲ್ಲಿರುವ ಎಲ್ಲಾ ನಿಲ್ದಾಣಗಳಲ್ಲಿ ಖಾಲಿ ವಸತಿ ಸೌಕರ್ಯಗಳನ್ನು ಕಾಯ್ದಿರಿಸಲು, ಬಳಸಲು ದಕ್ಷಿಣ ರೈಲ್ವೆ ಅವಕಾಶ ಮಾಡಿಕೊಟ್ಟಿದೆ. ಎಂಟು ಪೈಲಟ್ ರೈಲುಗಳಿಗೆ ಅನುಷ್ಠಾನದ ನಂತರದ ಅವಧಿಯನ್ನು (ಆಗಸ್ಟ್-ಅಕ್ಟೋಬರ್ 2025) ಹೋಲಿಸಿದಾಗ, ಬಹುತೇಕ ಪ್ರತಿಯೊಂದು ಮಾರ್ಗದಲ್ಲೂ ಬುಕಿಂಗ್ ಮಾಡುವ ಪ್ರಯಾಣಿಕರ ಸಂಖ್ಯೆ ಮತ್ತು ಆದಾಯ ಎರಡರಲ್ಲೂ ಗಮನಾರ್ಹ ಹೆಚ್ಚಳ ಕಂಡುಬಂದಿದೆ.
ವರ್ಷ ವರ್ಷ ಹೆಚ್ಚು ಆದಾಯ ತರುತ್ತಿದೆ!
ದಕ್ಷಿಣ ರೈಲ್ವೆಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಮೂಹವು ಪ್ರಯಾಣಿಕರಿಂದ ಅಗಾಧ ಪ್ರಮಾಣದ ಪ್ರೋತ್ಸಾಹವನ್ನು ಪಡೆಯುತ್ತಲೇ ಇದೆ, ಪ್ರಯಾಣಿಕರ ಸಂಖ್ಯೆ ಮತ್ತು ಗಳಿಕೆ ಎರಡೂ ವರ್ಷದಿಂದ ವರ್ಷಕ್ಕೆ ನಿರಂತರ ಬೆಳವಣಿಗೆಯನ್ನು ದಾಖಲಿಸುತ್ತಿವೆ.

