ಎರಡು ವರ್ಷವಾದ್ರೂ ಮಿಲನಕ್ಕೆ ನಿರಾಸಕ್ತಿ ತೋರಿದ ಗಂಡನಿಗೆ ಕಾದಿತ್ತು ಭಯಾನಕ ಆಘಾತ!
violence against men: ಪತ್ನಿ ಪಿಂಕಿ ಶರ್ಮಾ ತನ್ನ ಪತಿ ಅನುಜ್ ಶರ್ಮಾನಿಗೆ ವಿಷವಿಕ್ಕಿ ಕೊಲೆ ಮಾಡಲು ಯತ್ನಿಸಿದ್ದಾಳೆ. ಮದುವೆಯಾಗಿ ಎರಡು ವರ್ಷವಾದರೂ ಪತಿ ದೈಹಿಕವಾಗಿ ಸ್ಪಂದಿಸದ ಕಾರಣ, ಆತನ ನಿರಾಸಕ್ತಿಯಿಂದ ಬೇಸತ್ತು ಈ ಕೃತ್ಯ ಎಸಗಿದ್ದಾಳೆ ಎಂದು ವರದಿಯಾಗಿದೆ.

ಪುರುಷರ ಮೇಲಿನ ದೌರ್ಜನ್ಯ
ಇತ್ತೀಚೆಗೆ ಪುರುಷರ ಮೇಲಿನ ದೌರ್ಜನ್ಯದ ಪ್ರಕರಣಗಳು ದಾಖಲಾಗುತ್ತಿವೆ. ಪತ್ನಿಯಿಂದಲೇ ಪತಿಯ ಕೊ*ಲೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದೀಗ ಮಹಿಳೆಯೊಬ್ಬಳು ಗಂಡನನ್ನು ಕೊಲ್ಲಲು ಪ್ರಯತ್ನಿಸಿದ್ದಾಳೆ. 2023ರಲ್ಲಿ ಈ ಜೋಡಿಯ ಮದುವೆಯಾಗಿತ್ತು.
ಹಾಸಿಗೆಯಲ್ಲಿ ನಿರಾಸಕ್ತಿ
ಅನುಜ್ ಶರ್ಮಾ ಪತ್ನಿಯಿಂದಲೇ ಕೊ*ಲೆಯಾದ ಗಂಡ. 2023ರಲ್ಲಿ ಪಿಂಕಿ ಶರ್ಮಾ ಎಂಬ ಮಹಿಳೆಯೊಂದಿಗೆ ಅನುಜ್ ಶರ್ಮಾ ಮದುವೆಯಾಗಿತ್ತು. ಮದುವೆಯಾದ್ರೂ ಅನುಜ್ ಶರ್ಮಾ ಪತ್ನಿಯೊಂದಿಗೆ ದೈಹಿಕವಾಗಿ ಅನ್ಯೋನ್ಯತೆ ಹೊಂದಿರಲಿಲ್ಲ. ಹಾಸಿಗೆಯಲ್ಲಿ ಅನುಜ್ ಶರ್ಮಾ ನಿರಾಸಕ್ತಿ ಹೊಂದಿದ್ದನು.
ಮಾನಸಿಕವಾಗಿ ನೊಂದಿದ್ದ ಪಿಂಕಿ ಶರ್ಮಾ
ಮದುವೆಯಾದ ಎರಡು ವರ್ಷವಾದ್ರೂ ಪತ್ನಿಯೊಂದಿಗೆ ಮಿಲನ ಕ್ರಿಯೆಯಲ್ಲಿ ಅನುಜ್ ಶರ್ಮಾ ತೊಡಗಿಕೊಳ್ಳುತ್ತಿರಲಿಲ್ಲ. ಎರಡು ವರ್ಷದಲ್ಲಿ ಕೇವಲ ಎರಡು ಬಾರಿ ಮಾತ್ರ ಪತ್ನಿಯೊಂದಿಗೆ ಅನ್ಯೋನ್ಯತೆಯಿಂದ ಸಮಯ ಕಳೆದಿದ್ದನು. ಇದರಿಂದ ಪಿಂಕಿ ಶರ್ಮಾ ಮಾನಸಿಕವಾಗಿ ನೊಂದಿದ್ದಳು.
ಇದನ್ನೂ ಓದಿ: ಬಂಗೀ ಜಂಪಿಂಗ್ ವೇಳೆ ಯುವತಿಗೆ ಹೃದಯಾಘಾತ, ವೈರಲ್ ವಿಡಿಯೋ ಹಿಂದಿನ ಸತ್ಯ ಇಲ್ಲಿದೆ ನೋಡಿ
ಉತ್ತರ ಪ್ರದೇಶದ ಮುಜಾಫರ್‌ನಗರ
ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಘಟನೆ ನಡೆದಿದೆ. ಮಿಲನಕ್ಕಾಗಿ ಪಿಂಕಿ ಪದೇ ಪದೇ ವಿನಂತಿಸಿದ್ರೂ ಅನುಜ್ ಶರ್ಮಾ ನಿರಾಸಕ್ತಿ ತೋರಿಸುತ್ತಿದ್ದನು. ಇದರಿಂದ ಕೋಪಗೊಂಡ ಪಿಂಕಿ, ಗಂಡನ ಆಹಾರದಲ್ಲಿ ವಿಷ ಸೇರಿಸಿ ನೀಡಿ ಕೊ*ಲೆ ಮಾಡಲು ಪ್ರಯತ್ನಿಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರೀಲ್ಸ್ ಮಾಡುವಾಗ ಹುಡುಗಿಯ ಮೇಲೆ ಹಠಾತ್ ದಾಳಿ ಮಾಡಿದ ಕೋತಿ, ಕೊನೆಗೇನಾಯ್ತು ನೋಡಿ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

