Bungee jumping viral video: ಯುವತಿ ಎತ್ತರದಿಂದ ಜಿಗಿಯುತ್ತಿದ್ದಂತೆ ಜೋರಾಗಿ ಕಿರುಚಿದಳು. ಕೆಲವು ಕ್ಷಣಗಳ ನಂತರ ಅವಳ ಧ್ವನಿ ಶಾಂತವಾಯಿತು. ದೇಹವು ಸಡಿಲಗೊಳ್ಳಲು ಪ್ರಾರಂಭಿಸಿತು. ಇದು ಅಲ್ಲಿದ್ದ ಎಲ್ಲರಿಗೂ ಆಘಾತವನ್ನುಂಟು ಮಾಡಿತು.

ಉಜ್ಬೇಕಿಸ್ತಾನ್‌ನ ತಾಷ್ಕೆಂಟ್‌ನಲ್ಲಿ ನಡೆದ ಘಟನೆಯ ಭಯಾನಕ ವಿಡಿಯೋವೊಂದು ಅಂತರ್ಜಾಲದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಸಾಹಸ ಪ್ರಿಯರನ್ನು ಇದು ಬೆಚ್ಚಿಬೀಳಿಸುವಂತಿದೆ. ಬಂಗೀ ಜಂಪಿಂಗ್ ಮಾಡುವಾಗ ಹೃದಯಾಘಾತದಿಂದ ಯುವತಿಯೊಬ್ಬಳು ಆಕಾಶದಲ್ಲಿ ಸಾವನ್ನಪ್ಪಿದ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆಕೆಯ "ಕೊನೆಯ ಕಿರುಚಾಟ" ವೈರಲ್ ವಿಡಿಯೋದಲ್ಲಿ ದಾಖಲಾಗಿದೆ ಎಂದು ಹೇಳಲಾಗುತ್ತದೆ.

ಈ ವೈರಲ್ ವಿಡಿಯೋದಲ್ಲಿ ಯುವತಿ ಬಂಗೀ ಜಂಪಿಂಗ್ ಮಾಡುವ ಮೊದಲು ತುಂಬಾ ಹೆದರುತ್ತಿದ್ದಳು. ಆದರೂ ಅವಳು ರೋಮಾಂಚನವನ್ನು ಆನಂದಿಸಲು ಸಿದ್ಧಳಾಗಿದ್ದಳು. ಎತ್ತರದಿಂದ ಜಿಗಿಯುತ್ತಿದ್ದಂತೆ ಜೋರಾಗಿ ಕಿರುಚಿದಳು. ಕೆಲವು ಕ್ಷಣಗಳ ನಂತರ ಅವಳ ಧ್ವನಿ ಶಾಂತವಾಯಿತು. ದೇಹವು ಸಡಿಲಗೊಳ್ಳಲು ಪ್ರಾರಂಭಿಸಿತು. ಇದು ಅಲ್ಲಿದ್ದ ಎಲ್ಲರಿಗೂ ಆಘಾತವನ್ನುಂಟು ಮಾಡಿತು. ಇದನ್ನು ನೋಡಿ ಹತ್ತಿರದ ಸಿಬ್ಬಂದಿ ಮತ್ತು ಸ್ನೇಹಿತರು ಭಯಭೀತರಾಗಿ ಹುಡುಗಿಯನ್ನು ಕೆಳಗೆ ಕರೆತಂದರು. ಆದರೆ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಹುಡುಗಿಯನ್ನು ಮತ್ತು ಅವಳ ನಿರ್ಜೀವ ದೇಹವನ್ನು ನೋಡಿ ಎಲ್ಲರೂ ಗಾಬರಿಗೊಂಡರು. ಸಂಪೂರ್ಣ ವಿಡಿಯೋ ಅಪ್‌ಲೋಡ್ ಮಾಡಿಲ್ಲ. ಆದರೆ ಅದರ ಕೆಲವು ಸೆಕೆಂಡುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಯಿತು.

ಸಂಪೂರ್ಣ ವಿಡಿಯೋ ಇಲ್ಲಿದೆ

ಅನೇಕ ನೆಟಿಜನ್‌ಗಳು ಈ ವಿಡಿಯೋವನ್ನು X (ಹಿಂದೆ ಟ್ವಿಟರ್) ನಲ್ಲಿ ಶೇರ್ ಮಾಡಿದ್ದಾರೆ. ಹುಡುಗಿ ಭಯದಿಂದ ಗಾಳಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಈ ವೈರಲ್ ಹೇಳಿಕೆಯ ಹಿಂದಿನ ಸತ್ಯ ಬೇರೆಯೇ ಆಗಿದೆ. ಹುಡುಗಿ ಸಂಪೂರ್ಣವಾಗಿ ಸುರಕ್ಷಿತಳಾಗಿದ್ದಾಳೆ. ಅಂತಿಮವಾಗಿ ಹುಡುಗಿಯ ಸಂಪೂರ್ಣ ವಿಡಿಯೋ ಇಲ್ಲಿದೆ.

ಈಗ ಸತ್ಯವೇನೆಂದು ನೋಡುವುದಾದರೆ.. ವಿಡಿಯೋದಲ್ಲಿರುವ ಹುಡುಗಿ ಉಕ್ರೇನಿಯನ್ ವ್ಲಾಗರ್ ಯೆಸೇನಿಯಾ. ಅವರು ತಮ್ಮ YouTube ಚಾನೆಲ್ @esenia__ua ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಸಾಹಸದ ಸಮಯದಲ್ಲಿ ಅವರು ಭಯದಿಂದ ಮೂರ್ಛೆ ಹೋದರು ಎಂದು ವಿವರಿಸಿದ್ದಾರೆ. ಯೆಸೇನಿಯಾ ಅವರ ವಿಡಿಯೋದಲ್ಲಿ ಸ್ನೇಹಿತರು ಮಾತನಾಡುವಾಗಲೇ ಇದ್ದಕ್ಕಿದ್ದಂತೆ ಅವರು ಪ್ರಜ್ಞೆಯನ್ನು ಮರಳಿ ಪಡೆಯುತ್ತಾರೆ ಮತ್ತು ಮತ್ತೆ ಉತ್ಸುಕರಾಗುತ್ತಾರೆ.

ಈ ವಿಡಿಯೋವನ್ನು X ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರಿಂದಾಗಿ ಹುಡುಗಿ ಸತ್ತಿಲ್ಲ. ಬಂಗೀ ಜಂಪಿಂಗ್ ಮಾಡುವಾಗ ಸ್ವಲ್ಪ ಸಮಯದವರೆಗೆ ಪ್ರಜ್ಞೆ ತಪ್ಪಿದಳು ಎಂದು ಜನರಿಗೆ ಹೇಳಲಾಗುತ್ತಿದೆ. 

YouTube video player

ವೈರಲ್ ಆಗಿದೆ ಮತ್ತೊಂದು ವಿಡಿಯೋ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ಹೆಚ್ಚು ವೀಕ್ಷಣೆ ಗಳಿಸುತ್ತಿದೆ. ಇದರಲ್ಲಿ ಯುವಕನೊಬ್ಬ ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಹೂವು ಮಾರುವ ಮಹಿಳೆಗೆ ಸಣ್ಣ, ಆದರೆ ಸಿಹಿಯಾದ ಸರ್‌ಪ್ರೈಸ್ ಕೊಡ್ತಾನೆ. ಆ ವಿಡಿಯೋ ನೋಡಿದ ನಂತರ ಜನರು ನಿರಂತರವಾಗಿ ಹೊಗಳುತ್ತಿದ್ದಾರೆ.

ಸಾಮಾನ್ಯವಾಗಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವ ಜನರು ನಿಲ್ದಾಣದ ದ್ವಾರಗಳ ಬಳಿ ಹೂವಿನ ವ್ಯಾಪಾರಿಗಳು ನಿಂತಿರುವುದನ್ನು ಹೆಚ್ಚಾಗಿ ನೋಡುತ್ತಾರೆ. ಕನ್ನಾಟ್ ಪ್ಲೇಸ್ ನಿಲ್ದಾಣದಲ್ಲಿಯೂ ವಿಶೇಷಚೇತನ ಮಹಿಳೆಯೊಬ್ಬರು ಪ್ರತಿದಿನ ಹೂವುಗಳನ್ನು ಮಾರಾಟ ಮಾಡಲು ಬರುತ್ತಾರೆ. ಅವರು ಯಾವಾಗಲೂ ದಾರಿಹೋಕರನ್ನು ಹೂವುಗಳನ್ನು ಖರೀದಿಸಲು ಬೇಡಿಕೊಳ್ಳುತ್ತಾರೆ. ವಿಡಿಯೋದಲ್ಲಿ ಒರ್ವ ಯುವಕ ನಿಲ್ದಾಣದಿಂದ ಹೊರಬರುವುದನ್ನು ತೋರಿಸಲಾಗಿದೆ ಮತ್ತು ಆ ಮಹಿಳೆ ಅವನನ್ನು ಕರೆಯುತ್ತಾಳೆ. ಅವನು ಆಕೆಯ ಹತ್ತಿರ ಹೋಗಿ ಗುಲಾಬಿಯನ್ನು ಖರೀದಿಸುತ್ತಾನೆ.

ಈ ವಿಡಿಯೋ ಏಕೆ ವಿಶೇಷ?
ಮಹಿಳೆಯ ಅವಸ್ಥೆ ಮತ್ತು ಕಠಿಣ ಪರಿಶ್ರಮವನ್ನು ನೋಡಿ ಯುವಕ ಆಕೆಯಿಂದ ಹೂವುಗಳನ್ನು ಖರೀದಿಸುತ್ತಾನೆ. ವಿಡಿಯೋ ಹೃದಯಸ್ಪರ್ಶಿ ಅನಿಸುವುದು ಇಲ್ಲಿಯೇ. ಹೂವುಗಳನ್ನು ಪಡೆದ ನಂತರ ಅವನು ಮಹಿಳೆಗೆ ಒಪ್ಪಿಕೊಂಡ ಬೆಲೆಗಿಂತ ಹೆಚ್ಚಿನ ಹಣವನ್ನು ನೀಡುತ್ತಾನೆ. ಆಕೆಯ ಮುಖವು ತಕ್ಷಣವೇ ಸಂತೋಷದಿಂದ ಅರಳುತ್ತದೆ. ಆದರೆ ಮುಂದಿನ ಕ್ಷಣ ಇನ್ನೂ ವಿಶೇಷವಾಗಿದೆ. ಯುವಕ ತಾನು ಖರೀದಿಸಿದ ಗುಲಾಬಿಯನ್ನು ಅವಳಿಗೆ ಪುನಃ ಹಿಂದಿರುಗಿಸುತ್ತಾನೆ.

ಇದನ್ನು ನೋಡಿದ ಮಹಿಳೆ ಮತ್ತಷ್ಟು ಸಂತೋಷಪಡುತ್ತಾಳೆ. ಅವನು ತನ್ನ ಹೂವುಗಳನ್ನು ಖರೀದಿಸಿದ್ದಲ್ಲದೆ, ಅವಳನ್ನು ಸಂತೋಷಪಡಿಸಲು ಪ್ರಯತ್ನಿಸಿದ್ದಾನೆಂದು ಅವಳು ಅರಿತುಕೊಂಡಳು. ನಂತರ ಯುವಕ ತನ್ನ ಕೈಗಳನ್ನು ಮಡಚಿ ಆ ಮಹಿಳೆಗೆ ನಮಸ್ಕರಿಸಿ ಹೊರಟುಹೋಗುತ್ತಾನೆ. ವಿಡಿಯೋದಲ್ಲಿ ಮಹಿಳೆ ಮುಖದ ಮೇಲಿನ ಅಭಿವ್ಯಕ್ತಿ ಎಷ್ಟು ಪ್ರಾಮಾಣಿಕವಾಗಿದೆಯೆಂದರೆ ಅದು ಎಂಥವರ ಹೃದಯವನ್ನೂ ಕರಗಿಸಬಹುದು.

View post on Instagram