- Home
- News
- India News
- ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಬಸ್‌ಗೆ ಡಿಕ್ಕಿ ಹೊಡೆದ ಟಿಪ್ಪರ್; ಪ್ರಯಾಣಿಕರ ಮೇಲೆ ಬಿದ್ದ ಜಲ್ಲಿಕಲ್ಲು, 20 ಸಾವು!
ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಬಸ್‌ಗೆ ಡಿಕ್ಕಿ ಹೊಡೆದ ಟಿಪ್ಪರ್; ಪ್ರಯಾಣಿಕರ ಮೇಲೆ ಬಿದ್ದ ಜಲ್ಲಿಕಲ್ಲು, 20 ಸಾವು!
Tipper lorry bus collision Telangana: ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಮತ್ತು ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ 20 ಜನರು ಸಾವನ್ನಪ್ಪಿದ್ದಾರೆ. ಬಸ್‌ನೊಳಗೆ ಜಲ್ಲಿಕಲ್ಲು ತುಂಬಿದ್ದರಿಂದ ಅನೇಕ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

70 ಪ್ರಯಾಣಿಕರಿದ್ದ ಬಸ್‌ಗೆ ಡಿಕ್ಕಿ
ಇಂದು ಬೆಳಗ್ಗೆ ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯೊಂದು 70 ಪ್ರಯಾಣಿಕರಿದ್ದ ಬಸ್‌ಗೆ ಡಿಕ್ಕಿಯಾದ್ದು, 20 ಜನರು ಸಾವನ್ನಪ್ಪಿದ್ದಾರೆ. 20ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳನ್ನು ಚೆವೆಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
20 ಜನರು ಮೃತ
ಚಾಲಕರಿಬ್ಬರು ಬಸ್‌ನೊಳಗೆ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸದ್ಯ ವರದಿಗಳ ಪ್ರಕಾರ 20 ಜನರು ಮೃತರಾಗಿದ್ದು, ಬಸ್‌ನೊಳಗೆ ಟಿಪ್ಪರ್‌ನಲ್ಲಿದ್ದ ಜಲ್ಲಿಕಲ್ಲು ತುಂಬಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು, ಅವಶೇಷಗಳಡಿ ಸಿಲುಕಿದ್ದ ಪ್ರಯಾಣಿಕರ ರಕ್ಷಣೆಗೆ ಮುಂದಾಗಿದ್ದರು.
ಹೈದರಾಬಾದ್-ಬಿಜಾಪುರ ಹೆದ್ದಾರಿ
ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಮಿರ್ಜಗುಡ ಬಳಿ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ತಂಡೂರ್ ನಿಂದ ಹೈದರಾಬಾದ್ ತೆರಳುತ್ತಿತ್ತು. ಈ ವೇಳೆ ಎದುರಿಗೆ ಬರುತ್ತಿದ್ದ ಆರ್‌ಟಿಎಸ್ ಬಸ್‌ಗೆ (Telangana Road Transport Corporation) ಡಿಕ್ಕಿ ಹೊಡೆದಿದೆ. ಏನಾಗ್ತಿದೆ ಅಂತ ಪ್ರಯಾಣಿಕರು ನೋಡುವಷ್ಟರಲ್ಲಿ ಬಸ್‌ನೊಳಗೆ ಜಲ್ಲಿಕಲ್ಲು ತುಂಬಿತ್ತು.
ಬಸ್‌ನೊಳಗೆ ಜಲ್ಲಿಕಲ್ಲು
ಬಸ್‌ನೊಳಗೆ ಜಲ್ಲಿಕಲ್ಲು ತುಂಬಿದ್ದರಿಂದ ಹೊರ ಬರಲಾಗದೇ ಪ್ರಯಾಣಿಕರು ಮೃತರಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಟಿಪ್ಪರ್‌ನಲ್ಲಿದ್ದ ಜಲ್ಲಿಕಲ್ಲು ಬಸ್‌ನೊಳಗೆ ಬಿದ್ದ ಕಾರಣ ನಮಗೆ ಪ್ರಯಾಣಿಕರನ್ನು ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಕೂಡಲೇ ಪೊಲೀಸರಿಗೆ ಮಾಹಿತಿ ತಲುಪಿಸಲಾಯ್ತು ಎಂದು ಸ್ಥಳೀಯರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ರಾಮನಗರದಲ್ಲಿ ರೇವ್ ಪಾರ್ಟಿ ಮೇಲೆ ಪೊಲೀಸ್ ದಾಳಿ: 130ಕ್ಕೂ ಹೆಚ್ಚು ಯುವಕ-ಯುವತಿಯರ ಬಂಧನ!
ವಾಹನದಟ್ಟಣೆ
ಅಪಘಾತದಿಂದ ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ವಾಹನದಟ್ಟಣೆ ಹೆಚ್ಚಾಗಿದ್ದರಿಂದ ಘಟನಾ ಸ್ಥಳಕ್ಕೆ ಅಂಬುಲೆನ್ಸ್ ತಲುಪಲು ವಿಳಂಬವಾಯ್ತು. ಸದ್ಯ ಸ್ಥಳಕ್ಕಾಗಮಿಸಿದ ಪೊಲೀಸರು ಜೆಸಿಬಿ ಮೂಲಕ ಜಲ್ಲಿಕಲ್ಲು, ಟಿಪ್ಪರ್ ಮತ್ತು ಬಸ್ ತೆರವುಗೊಳಿಸಿ ಟ್ರಾಫಿಕ್ ತಿಳಿಗೊಳಿಸಿದ್ದಾರೆ.
ಇದನ್ನೂ ಓದಿ: Bengaluru Vehicle Vandal Attack: ನಿಂತಿದ್ದ ಕಾರು ಬೈಕ್ ವಾಹನಗಳ ಗಾಜು ಒಡೆದ ಪುಂಡರು!