Vehicle vandalism in Byadarahalli ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಧ್ರಳ್ಳಿಯಲ್ಲಿ, ಐವರು ಯುವಕರು ಮನೆ ಹಾಗೂ ಅಂಗಡಿಗಳ ಮುಂದೆ ನಿಲ್ಲಿಸಿದ್ದ ಕಾರು ಮತ್ತು ಆಟೋಗಳ ಗ್ಲಾಸ್‌ಗಳನ್ನು ಒಡೆದು ಅಟ್ಟಹಾಸ ಮೆರೆದಿದ್ದಾರೆ. 

ಬ್ಯಾಡರಹಳ್ಳಿ (ನ.3): ಮನೆ, ಅಂಗಡಿಗಳ ಮುಂದೆ ನಿಂತಿದ್ದ ವಾಹನಗಳ ಗ್ಲಾಸ್ ಒಡೆದು ಐವರು ಪುಂಡರು ಅಟ್ಟಹಾಸ ಮೆರೆದ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂಧ್ರಳ್ಳಿಯಲ್ಲಿ ನಡೆದಿದೆ.

ಕಾರು, ಆಟೋ ಗ್ಲಾಸ್ ಪುಡಿಪುಡಿ!

ಕಾರು ಹಾಗೂ ಆಟೋ ಸೇರಿದಂತೆ ಸಿಕ್ಕ ಸಿಕ್ಕ ವಾಹನಗಳ ಗ್ಲಾಸ್ ಒಡೆದುಹಾಕಿದ್ದಾರೆ. ಐವರು ಯುವಕರು ಈ ಕೃತ್ಯಕ್ಕೆ ಕಾರಣವಾಗಿದ್ದು, ಐವರ ಪೈಕಿ ಓರ್ವ ಪುಂಡನನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಗಳಿಗೆ ಬಲೆ ಬೀಸಿದ ಖಾಕಿ:

ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಾರೆ. ಪೊಲೀಸರ ಭಯವಿಲ್ಲದೆ ಕೃತ್ಯವೆಸಗಿ ಪರಾರಿಯಾಗಿದ್ದಾರೆ. ಸದ್ಯ ಓರ್ವನ ಬಂಧಿಸಿದ್ದು, ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರ ಶೋಧ ನಡೆಸುತ್ತಿದ್ದಾರೆ. 

ಯಾವ ಕಾರಣಕ್ಕಾಗಿ ಈ ಕೃತ್ಯ ನಡೆಸಿದ್ದಾರೆ, ಡ್ರಗ್ಸ್ ಅಡಿಕ್ಟ್‌ಗಳೇ? ಸ್ಥಳೀಯರಲ್ಲಿ ಭಯ ಮೂಡಿಸುವ ಉದ್ದೇಶವೇನಾದರೂ ಇತ್ತೆ, ತನಿಖೆಯ ಬಳಿಕ ಸಂಪೂರ್ಣ ಮಾಹಿತಿ ಬಯಲಿಗೆ ಬರಲಿದೆ.