MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ನಿಮ್ಮ ಒಂದು ತಪ್ಪು ಕಾಮೆಂಟ್ ಜೈಲು ಕಂಬಿ ಎಣಿಸುವಂತೆ ಮಾಡಬಹುದು! ಕಠಿಣ UAPA ಕಾಯ್ದೆಯ ಈ ನಿಯಮಗಳು ತಿಳಿದಿರಲಿ

ನಿಮ್ಮ ಒಂದು ತಪ್ಪು ಕಾಮೆಂಟ್ ಜೈಲು ಕಂಬಿ ಎಣಿಸುವಂತೆ ಮಾಡಬಹುದು! ಕಠಿಣ UAPA ಕಾಯ್ದೆಯ ಈ ನಿಯಮಗಳು ತಿಳಿದಿರಲಿ

ಇತ್ತೀಚೆಗೆ ಕೇರಳ ಪೊಲೀಸರು ದೇಶ ವಿರೋಧಿ ಕಾಮೆಂಟ್ಸ್ ಮಾಡಿದ ಪ್ರಕರಣ ಸಂಬಂಧ ವ್ಯಕ್ತಿಯೊಬ್ಬನನ್ನು ಯುಎಪಿಎ ಅಡಿ ಬಂಧಿಸಿದ್ದಾರೆ. ವ್ಯಕ್ತಿ ವಿದೇಶದಲ್ಲಿದ್ದಾಗ ಪಹ್ಲಾಂ ಟೆರರಿಸ್ಟ್ ದಾಳಿ ಬೆಂಬಲಿಸಿ ಕಾಮೆಂಟ್ ಮಾಡಿದ್ದನೆಂದು ಆರೋಪಿಸಲಾಗಿದೆ. ಫೇಸ್‌ಬುಕ್‌ನಲ್ಲಿ ಮಾಡುವ ಕಾಮೆಂಟ್ಸ್ ಯುಎಪಿಎ ಅಡಿ ಕ್ರಮ?

2 Min read
Author : Ravi Janekal
Published : Jul 08 2026, 01:52 PM IST
Share this Photo Gallery
  • FB
  • TW
  • Linkdin
  • Whatsapp
14
ಸೋಷಿಯಲ್ ಮೀಡಿಯಾದ್ಲಲಿ ಮಾಡುವ ಕಾಮೆಂಟ್‌ಗೆ ಯುಎಪಿಎ ಕ್ರಮ ಆಗುತ್ತಾ?
Image Credit : Asianet News

ಸೋಷಿಯಲ್ ಮೀಡಿಯಾದ್ಲಲಿ ಮಾಡುವ ಕಾಮೆಂಟ್‌ಗೆ ಯುಎಪಿಎ ಕ್ರಮ ಆಗುತ್ತಾ?

ಸೋಶಿಯಲ್ ಮೀಡಿಯಾದಲ್ಲಿ ಏನು ಬೇಕಾದ್ರೂ ಕಾಮೆಂಟ್ ಮಾಡಬಹುದ? ಇಲ್ಲ, ಬಹುತೇಕ ಬಳಕೆದಾರರು ಹಾಗೆ ಭಾವಿಸಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ ಏನು ಬೇಕಾದ್ರೂ ಮಾಡಿದ್ರೂ ನಡೆಯುತ್ತೆ. ಇಲ್ಲಿ ಮಾಡುವ ಕಾಮೆಂಟ್‌ಗೆ ಯಾವ ಕಾನೂನು ಇಲ್ಲ, ಯಾರೂ ಏನೂ ಮಾಡ್ಕೊಳ್ಳೋಕೆ ಆಗೋಲ್ಲ ಅಂತಾ. ಹೀಗಾಗಿ ದಿನನಿತ್ಯದ ಸೋಷಿಯಲ್ ಮೀಡಿಯಾದಲ್ಲಿ ದೇಶ, ರಾಜಕೀಯ, ಧರ್ಮದ ಕುರಿತ ಪೋಸ್ಟ್‌ಗೆ ಕಾಮೆಂಟ್ ಬಾಕ್ಸ್‌ನಲ್ಲಿ ಅಶ್ಲೀಲ, ದೇಶ ವಿರೋಧಿ ಕಾಮೆಂಟ್ಸ್ ಗಳು ಯಾವುದೇ ಭಯ ಆತಂಕವಿಲ್ಲದೆ ಬರೆದಿರುವುದು ಕಾಣಬಹುದು. ನಿಮಗೆ ಗೊತ್ತಿರಲಿ, ಈ ರೀತಿ ದೇಶ ವಿರೋಧಿ ಕಾಮೆಂಟ್ಸ್ ಮಾಡಿದಾಗ UAPA(ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವಿಕೆ) ಕಾನೂನಿನಡಿ ಕ್ರಮ ಆಗಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
UAPA: ನಿಮ್ಮ ಒಂದು ತಪ್ಪು ಕಾಮೆಂಟ್ ಕಂಬಿ ಎಣಿಸುವಂತೆ ಮಾಡಬಹುದು
Image Credit : Asianet News

UAPA: ನಿಮ್ಮ ಒಂದು ತಪ್ಪು ಕಾಮೆಂಟ್ ಕಂಬಿ ಎಣಿಸುವಂತೆ ಮಾಡಬಹುದು

ಇತ್ತೀಚೆಗೆ ಸೌದಿ ಅರೇಬಿ(saudi arabia)ಯಾದಿಂದ ಹಿಂದಿರುಗಿದ ಯುವಕನನ್ನು ಪೊಲೀಸರು ವಿಮಾನ ನಿಲ್ದಾಣದಲ್ಲಿ ಬಂಧಿಸಿದರು. ಕೇರಳದ ನಿವಾಸಿಯಾಗಿರುವ ಈ ಯುವಕ ಪಹಲ್ಗಾಮ್ ಭಯೋತ್ಪಾದಕ ದಾಳಿ(Pahalgam terrorist attack)ಯನ್ನು ಬೆಂಬಲಿಸಿ ಕಾಮೆಂಟ್ಸ್ ಮಾಡಿದ್ದ. ತಾನೂ ವಿದೇಶದಲ್ಲಿರುವುದರಿಂದ ಯಾವುದೇ ಕ್ರಮ ಆಗುವುದಿಲ್ಲ ಎಂದು ಭಾವಿಸಿದ್ದಿರಬೇಕು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ದೇಶ ವಿರೋಧಿ ಕಾಮೆಂಟ್ಸ್ ಮಾಡಿದ ಆ ವ್ಯಕ್ತಿಯ ಮೇಲೆ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಆರೋಪದಡಿ ದೂರು ನೀಡಲಾಗಿತ್ತು.. 

ಕೆಲವರು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಏನು ಬೇಕಾದರೂ ಬರೆಯಬಹುದು ಎಂದು ಭಾವಿಸಿದ್ದಾರೆ ಆದರೆ  ರಾಷ್ಟ್ರೀಯ ಭದ್ರತೆಯ ವಿಷಯಕ್ಕೆ ಬಂದಾಗ, ಈ ಕ್ರಮವು ನಿಮ್ಮನ್ನು ಜೈಲಿಗೆ ಹಾಕಬಹುದು. ಯುಎಪಿಎಯ ನಿಬಂಧನೆಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.

Related Articles

Related image1
ಪೆಹಲ್ಗಾಂ ಸಂತ್ರಸ್ತನ ಪುತ್ರಿ ಹಾಕಿದ ವಿಡಿಯೋಗೆ ಕೆಟ್ಟ ಕಮೆಂಟ್, UAPA ಅಡಿಯಲ್ಲಿ ಯುವಕನ ಬಂಧನ
Related image2
UAPA ಆರೋಪಿಗಳೂ ಬೇಲ್‌ಗೆ ಅರ್ಹರು: ಸುಪ್ರೀಂ ಸ್ಪಷ್ಟನೆ | ಉಮರ್ ಖಾಲಿದ್‌ಗೆ ಜಾಮೀನು ಸಿಗುವುದೇ?
34
UAPA ಎಂದರೇನು?
Image Credit : Asianet News

UAPA ಎಂದರೇನು?

UAPA (Unlawful Activities Prevention Act) ಭಾರತದಲ್ಲಿ ಭಯೋತ್ಪಾದನೆ, ರಾಷ್ಟ್ರದ ಏಕತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆ ಉಂಟುಮಾಡುವ ಚಟುವಟಿಕೆಗಳನ್ನು ತಡೆಯಲು ಜಾರಿಯಲ್ಲಿರುವ ಕಠಿಣ ಕಾನೂನು. ಈ ಕಾಯ್ದೆಯಡಿ ವ್ಯಕ್ತಿ ಅಥವಾ ಸಂಘಟನೆಗಳ ವಿರುದ್ಧ ಪ್ರಕರಣ ದಾಖಲಿಸಬಹುದು.

ಯಾವ ರೀತಿಯ ಪೋಸ್ಟ್‌ಗಳು ಸಮಸ್ಯೆಗೆ ಕಾರಣವಾಗಬಹುದು?

ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪ್ರತಿಯೊಂದು ಕಾಮೆಂಟ್‌ಗೂ UAPA ಅನ್ವಯವಾಗುವುದಿಲ್ಲ. ಆದರೆ ತನಿಖಾ ಸಂಸ್ಥೆಗಳ ಪ್ರಕಾರ, ಕೆಳಗಿನ ರೀತಿಯ ವಿಷಯಗಳು ಗಂಭೀರ ಕಾನೂನು ಕ್ರಮಕ್ಕೆ ಕಾರಣವಾಗಬಹುದು:

  • ಭಯೋತ್ಪಾದಕ ದಾಳಿ ಅಥವಾ ಉಗ್ರ ಸಂಘಟನೆಗಳನ್ನು ಬೆಂಬಲಿಸುವ ಪೋಸ್ಟ್‌ಗಳು.
  • ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಅಥವಾ ಪ್ರೇರಣೆ ನೀಡುವ ವಿಷಯ.
  • ದೇಶದ ಸಾರ್ವಭೌಮತ್ವ, ಏಕತೆ ಅಥವಾ ಭದ್ರತೆಗೆ ಧಕ್ಕೆ ಉಂಟುಮಾಡುವ ಉದ್ದೇಶದ ಸಂದೇಶಗಳು.
  • ಉಗ್ರವಾದ ಅಥವಾ ತೀವ್ರವಾದ ಚಿಂತನೆಗಳನ್ನು ಪ್ರಚಾರ ಮಾಡುವ ವಿಷಯಗಳು.
44
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಮಿತಿ ಇದೆ
Image Credit : Asianet News

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಮಿತಿ ಇದೆ

ಭಾರತದ ಸಂವಿಧಾನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುತ್ತದೆ. ಆದರೆ ಸಾರ್ವಜನಿಕ ಸುವ್ಯವಸ್ಥೆ, ರಾಷ್ಟ್ರದ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಹೇಳಿಕೆಗಳು ಅಥವಾ ಪೋಸ್ಟ್‌ಗಳು ಕಾನೂನು ಕ್ರಮಕ್ಕೆ ಒಳಪಡಬಹುದು ಎಂದು ನ್ಯಾಯಾಲಯಗಳು ಹಲವು ಪ್ರಕರಣಗಳಲ್ಲಿ ಸ್ಪಷ್ಟಪಡಿಸಿವೆ.

ಪೋಸ್ಟ್ ಮಾಡುವ ಮುನ್ನ ಎಚ್ಚರ

ಕಾನೂನು ತಜ್ಞರ ಪ್ರಕಾರ, ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಅಥವಾ ಕಾಮೆಂಟ್ ಮಾಡುವ ಮುನ್ನ ಅದರ ಪರಿಣಾಮಗಳನ್ನು ಯೋಚಿಸುವುದು ಅಗತ್ಯ. ಹಿಂಸಾಚಾರವನ್ನು ಸಮರ್ಥಿಸುವ ಅಥವಾ ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡುವ ರೀತಿಯ ವಿಷಯಗಳನ್ನು ಹಂಚಿಕೊಳ್ಳುವುದು ಗಂಭೀರ ಕಾನೂನು ಪರಿಣಾಮಗಳಿಗೆ ಕಾರಣವಾಗಬಹುದು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಭಾರತ ಸುದ್ದಿ
ಸಾಮಾಜಿಕ ಮಾಧ್ಯಮ

Latest Videos
Recommended Stories
Recommended image1
'ನಾನು ಬಿಹಾರದ ಸಿಂಹ..' ಝಡ್ ಪ್ಲಸ್ ಭದ್ರತೆ ಹಿಂಪಡೆದ ಸರ್ಕಾರದ ವಿರುದ್ಧ ಲಾಲು ಗುಡುಗು
Recommended image2
ಫುಡ್ ಡೆಲಿವರಿ ಎಜೆಂಟ್ ಮೇಲೆ ಚಿರತೆ ದಾಳಿ, ಕೂದಲೆಳೆ ಅಂತರದಿಂದ ಪಾರಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
Recommended image3
Gold Rate Today: 8 ದಿನದಲ್ಲಿ 5ನೇ ಬಾರಿ ಕುಸಿತ ಕಂಡ ಬಂಗಾರ; ಹಣ ಇದ್ರೆ ಇಂದೇ ಖರೀದಿಸಿ ಚಿನ್ನ
Related Stories
Recommended image1
ಪೆಹಲ್ಗಾಂ ಸಂತ್ರಸ್ತನ ಪುತ್ರಿ ಹಾಕಿದ ವಿಡಿಯೋಗೆ ಕೆಟ್ಟ ಕಮೆಂಟ್, UAPA ಅಡಿಯಲ್ಲಿ ಯುವಕನ ಬಂಧನ
Recommended image2
UAPA ಆರೋಪಿಗಳೂ ಬೇಲ್‌ಗೆ ಅರ್ಹರು: ಸುಪ್ರೀಂ ಸ್ಪಷ್ಟನೆ | ಉಮರ್ ಖಾಲಿದ್‌ಗೆ ಜಾಮೀನು ಸಿಗುವುದೇ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved