PM Modi Seychelles Visit: ವಿಶ್ವದ ಹಿರಿಯ ಆಮೆ 194 ವರ್ಷದ ಜೋನಾಥನ್ ವೀಕ್ಷಿಸಿದ ಮೋದಿ
PM Modi Meets World s Oldest Living Land Animal ವಿಶ್ವದ ಅತಿ ಹಿರಿಯ ಭೂವಾಸಿ ಪ್ರಾಣಿ ಎಂಬ ದಾಖಲೆ ಬರೆದಿರುವ 194 ವರ್ಷದ ದೈತ್ಯ ಆಮೆ ‘ಜೋನಾಥನ್’ ಅನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ವೀಕ್ಷಿಸಿದರು.

194 ವರ್ಷದ ದೈತ್ಯ ಆಮೆ ‘ಜೋನಾಥನ್’
ವಿಶ್ವದ ಅತಿ ಹಿರಿಯ ಭೂವಾಸಿ ಪ್ರಾಣಿ ಎಂಬ ದಾಖಲೆ ಬರೆದಿರುವ 194 ವರ್ಷದ ದೈತ್ಯ ಆಮೆ ‘ಜೋನಾಥನ್’ ಅನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ವೀಕ್ಷಿಸಿದರು.
ಸೀಶೆಲ್ಸ್ ಪ್ರವಾಸದಲ್ಲಿರುವ ಮೋದಿ, ಅಲ್ಲಿನ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಜತೆ ರಾಷ್ಟ್ರೀಯ ಸಸ್ಯೋದ್ಯಾನಕ್ಕೆ ಭೇಟಿ ನೀಡಿದರು. ಅಲ್ಲಿ ಜಗತ್ತಿನ ಅತಿ ಹಿರಿಯ ಪ್ರಾಣಿ ಎಂಬ ಖ್ಯಾತಿ ಪಡೆದಿರುವ ಜೋನಾಥನ್ ಆಮೆಯನ್ನು ವೀಕ್ಷಿಸಿ, ಅದಕ್ಕೆ ಆಹಾರ ನೀಡಿದರು. ಬಳಿಕ ಸಸ್ಯೋದ್ಯಾನದ ಸಿಬ್ಬಂದಿ ಜತೆ ಮಾತುಕತೆ ನಡೆಸಿದರು. ಇದೇ ವೇಳೆ ಭೇಟಿಯ ನೆನಪಿಗಾಗಿ ಸಸಿಯೊಂದನ್ನು ನೆಟ್ಟರು.
‘ಆಲ್ಡಬ್ರಾ ದೈತ್ಯ ಆಮೆ ಭಾರತ ಮತ್ತು ಸೇಶಲ್ಸ್ ನಡುವಿನ ವಿಶೇಷ ಸಂಬಂಧ ಏನು?
ಈ ಕುರಿತು ಟ್ವೀಟ್ ಮಾಡಿರುವ ಮೋದಿ, ‘ಆಲ್ಡಬ್ರಾ ದೈತ್ಯ ಆಮೆ ಭಾರತ ಮತ್ತು ಸೇಶಲ್ಸ್ ನಡುವಿನ ವಿಶೇಷ ಸ್ನೇಹದೊಂದಿಗೆ ಸಂಬಂಧ ಹೊಂದಿದೆ. 2014ರಲ್ಲಿ ಸೀಶೆಲ್ಸ್ ಕೋಲ್ಕತ್ತಾದ ಅಲಿಪೋರ್ ಮೃಗಾಲಯಕ್ಕೆ 2 ಆಮೆಗಳನ್ನು ಉಡುಗೊರೆಯಾಗಿ ನೀಡಿತು. ಕೆಲವು ವರ್ಷಗಳ ನಂತರ, ಹೈದರಾಬಾದ್ ಮೃಗಾಲಯಕ್ಕೆ ಇನ್ನೂ ಕೆಲವು ಆಮೆಗಳನ್ನು ನೀಡಿತು’ ಎಂದು ಸ್ಮರಿಸಿದ್ದಾರೆ.
ಜೋನಾಥನ್ ಆಮೆ ವಿಶೇಷತೆ:
ಜೋನಾಥನ್ 1832ರಲ್ಲಿ ಜನಿಸಿದ ದೈತ್ಯ ಆಮೆ. ಇದರ ವಯಸ್ಸು ಸುಮಾರು 194 ವರ್ಷಗಳು. ಗಿನ್ನೆಸ್ ವಿಶ್ವ ದಾಖಲೆ ಇದನ್ನು ವಿಶ್ವದ ಅತ್ಯಂತ ಹಿರಿಯ ಭೂವಾಸಿ ಪ್ರಾಣಿ ಎಂದು ಗುರುತಿಸಿದೆ.
194 ವರ್ಷವಾದ್ರೂ ಜೋನಾಥನ್ ಆಮೆ ಆರೋಗ್ಯವಾಗಿದೆ!
ಇಷ್ಟು ವಯಸ್ಸಾದರೂ ದೃಷ್ಟಿದೋಷವನ್ನು ಹೊರತುಪಡಿಸಿ ಆರೋಗ್ಯವಾಗಿದೆ. ವಿಜ್ಞಾನ ಲೋಕದ ಅಚ್ಚರಿಯಾಗಿರುವ ಈ ಆಮೆ, ಸೀಶೆಲ್ಸ್‌ನ ಪ್ರಮುಖ ಆಕರ್ಷಣೆಗಳಲ್ಲಿ ಒಂದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

