MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಮಹಾಭಾರತ, ಅರ್ಥಶಾಸ್ತ್ರ, ರಾಜತರಂಗಿಣಿ ಭಾರತದ ಮೂರು ಐತಿಹಾಸಿಕ ಕೃತಿಗಳು UNESCO ಪಟ್ಟಿಗೆ ಸೇರ್ಪಡೆ!

ಮಹಾಭಾರತ, ಅರ್ಥಶಾಸ್ತ್ರ, ರಾಜತರಂಗಿಣಿ ಭಾರತದ ಮೂರು ಐತಿಹಾಸಿಕ ಕೃತಿಗಳು UNESCO ಪಟ್ಟಿಗೆ ಸೇರ್ಪಡೆ!

ಭಾರತದ ಶ್ರೀಮಂತ ಸಾಹಿತ್ಯ, ಇತಿಹಾಸ, ಜ್ಞಾನ ಪರಂಪರೆಗೆ ಮತ್ತೊಂದು ಮಹತ್ವದ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದೆ. ಅಂದರೆ ಭಾರತದ ಮೂರು ಐತಿಹಾಸಿಕ ಕೃತಿಗಳಾದ ಮಹಾಭಾರತ, ಅರ್ಥಶಾಸ್ತ್ರ ಮತ್ತು ರಾಜತರಂಗಿಣಿ ಕೃತಿಗಳು ಯುನೆಸ್ಕೋ MOWCAP ಪಟ್ಟಿಗೆ ಸೇರಿದೆ.

3 Min read
Author : Ravi Janekal
Published : Nov 06 2026, 12:22 PM IST
Share this Photo Gallery
  • FB
  • TW
  • Linkdin
  • Whatsapp
15
ಮಹಾಭಾರತ, ಅರ್ಥಶಾಸ್ತ್ರ, ರಾಜತರಂಗಿಣಿ ಯುನೆಸ್ಕೋ ಪಟ್ಟಿಗೆ!
Image Credit : Asianet News

ಮಹಾಭಾರತ, ಅರ್ಥಶಾಸ್ತ್ರ, ರಾಜತರಂಗಿಣಿ ಯುನೆಸ್ಕೋ ಪಟ್ಟಿಗೆ!

ಭಾರತದ ಶ್ರೀಮಂತ ಸಾಹಿತ್ಯ, ಇತಿಹಾಸ, ಜ್ಞಾನ ಪರಂಪರೆಗೆ ಮತ್ತೊಂದು ಮಹತ್ವದ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದೆ. ಅಂದರೆ ಭಾರತದ ಮೂರು ಐತಿಹಾಸಿಕ ಕೃತಿಗಳಾದ ಮಹಾಭಾರತ, ಅರ್ಥಶಾಸ್ತ್ರ ಮತ್ತು ರಾಜತರಂಗಿಣಿ ಕೃತಿಗಳು ಯುನೆಸ್ಕೋದ 'ಮೆಮೊರಿ ಆಫ್ ದಿ ವರ್ಲ್ಡ್ ಕಮಿಟಿ ಫಾರ್ ಏಷ್ಯಾ ಅಂಡ್ ಪೆಸಿಫಿಕ್' (MOWCAP) ಪ್ರಾದೇಶಿಕ ದಾಖಲಾತಿ ಪಟ್ಟಿಗೆ ಸೇರ್ಪಡೆಯಾಗಿವೆ.

ಹೌದು, ಈ ಬಗ್ಗೆ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರೇ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಯುನೆಸ್ಕೋದ ಈ ಘೋಷಣೆಯನ್ನು ಅತ್ಯಂತ ಸಂತಸದಿಂದ ಸ್ವಾಗತಿಸಿದ್ದಾರೆ. ಮಹಾಭಾರತ, ಅರ್ಥಶಾಸ್ತ್ರ, ರಾಜತರಂಗಿಣಿಯಂತಹ ಐತಿಹಾಸಿಕ ಕೃತಿಗಳಿಗೆ ಮಾನ್ಯತೆ ಸಿಕ್ಕಿರುವುದು ಭಾರತೀಯರಾದ ನಮಗೆಲ್ಲ ಹೆಮ್ಮೆಯ ಕ್ಷಣವಾಗಿದೆ. ಅಷ್ಟೇ ಅಲ್ಲ ಇದು ಭಾರತದ ಐತಿಹಾಸಿಕ ದಾಖಲೆಗಳು, ನಾಗರಿಕತೆಯ ಪರಂಪರೆಗೆ ಸಿಕ್ಕ ಮಹತ್ವದ ಗೌರವವಾಗಿದೆ ಎಂದು ಅವರು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ರಾಜತರಂಗಿಣಿ
Image Credit : Asianet News

ರಾಜತರಂಗಿಣಿ

ಈ ಕುರಿತು ಎಕ್ಸ್ ಪೋಸ್ಟ್‌ನಲ್ಲಿ ಫೋಟೋಗಳ ಸಹಿತ ಬರೆದಿರುವ ಸಚಿವರು, ಮಹಾಭಾರತ, ಅರ್ಥಶಾಸ್ತ್ರ, ರಾಜತರಂಗಿಣಿ ಈ ಮೂರು ಕೃತಿಗಳು ಭಾರತದ ಐತಿಹಾಸಿಕ ಅಧ್ಯಯನ, ತಾತ್ವಿಕ ಚಿಂತನೆ ಮತ್ತು ಆಡಳಿತ ವ್ಯವಸ್ಥೆಯ ಸುದೀರ್ಘ ಪರಂಪರೆಯನ್ನು ತಿಳಿಸುತ್ತವೆ. ಇವುಗಳಲ್ಲಿರುವ ಜ್ಞಾನ ಇಂದಿಗೂ ಜಗತ್ತಿನ ಜನರಿಗೆ ಸ್ಫೂರ್ತಿ ನೀಡುತ್ತಿದೆ ಎಂದು ತಿಳಿಸಿದ್ದಾರೆ. ಈ ಮೂರು ಕೃತಿಗಳು ಭಾರತೀಯ ಉಪಖಂಡದ ಜ್ಞಾನ ಮತ್ತು ಚಿಂತನೆಯ ಬೆಳವಣಿಗೆಯ ವಿಭಿನ್ನ ಆಯಾಮಗಳನ್ನು ಪರಿಚಯಿಸುತ್ತವೆ.

ರಾಜತರಂಗಿಣಿ

ಈ ಮಹಾನ್ ಕೃತಿ 12ನೇ ಶತಮಾನದಲ್ಲಿ ಕಾಶ್ಮೀರದ ಇತಿಹಾಸಕಾರ ಕಲ್ಹಣ ರಚಿಸಿದ್ದಾರೆ. ರಾಜತರಂಗಿಣಿ ಒಂದು ಅಮೂಲ್ಯ ಕೃತಿಯಾಗಿದ್ದು ಮಧ್ಯಕಾಲೀನ ಭಾರತದ ಪ್ರಮುಖ ಐತಿಹಾಸಿಕ ಗ್ರಂಥಗಳಲ್ಲಿ ಒಂದಾಗಿದೆ. ಈ ಕೃತಿ ಸಂಸ್ಕೃತದಲ್ಲಿ ಬರೆಯಲಾಗಿದ್ದು, ಕಾಶ್ಮೀರದ ಇತಿಹಾಸ, ಅದನ್ನು ಆಳಿದ ವಿವಿಧ ರಾಜವಂಶಗಳು, ಅರಸರು, ರಾಜಕೀಯ ಬೆಳವಣಿಗೆಗಳು ಮತ್ತು ಸಾಮಾಜಿಕ ಬದಲಾವಣೆಗಳ ಬಗ್ಗೆ ಸಂಪೂರ್ಣ ವಿವರವಿದೆ.

ಐತಿಹಾಸಿಕ ಘಟನೆಗಳನ್ನು ಕಾಲಾನುಕ್ರಮದಲ್ಲಿ ದಾಖಲಿಸುವುದು, ಮೂಲಗಳ ಪರಿಶೀಲನೆ ನಡೆಸುವುದು ಮತ್ತು ಸಾಹಿತ್ಯಿಕವಾಗಿ ನಿರೂಪಿಸುವುದು ಈ ಕೃತಿಯ ವಿಶೇಷತೆ. ಕಾಶ್ಮೀರದ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ತಿಳಿದುಕೊಳ್ಳಲು ಇದು ಮಹತ್ವದ ಆಕರವಾಗಿದೆ.

Related Articles

Related image1
Now Playing
ಗೋಳಗುಮ್ಮಟಕ್ಕಿಲ್ಲ UNESCO ಸ್ಥಾನಮಾನ: ಅಧಿಕಾರಿಗಳ ನಿರ್ಲಕ್ಷ್ಯ..ಪಾರಂಪರಿಕ ಕಟ್ಟಡಕ್ಕಿಲ್ಲ ವಿಶ್ವ ಮನ್ನಣೆ
Related image2
UNESCO World Heritage List: ವಿಶ್ವ ಪರಂಪರೆ ಪಟ್ಟಿಯಲ್ಲಿ ಕರ್ನಾಟಕದ ಬೇಲೂರು, ಹಳೇಬೀಡು, ಸೋಮನಾಥಪುರ
35
ಮಹಾಭಾರತ
Image Credit : Asianet News

ಮಹಾಭಾರತ

ಮಹಾಭಾರತ ಜಗತ್ತಿನ ಅತ್ಯಂತ ದೊಡ್ಡ ಮಹಾಕಾವ್ಯಗಳಲ್ಲಿ ಒಂದಾಗಿದೆ. ಈ ಮಹಾನ್ ಕಾವ್ಯ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ದಕ್ಷಿಣ ಏಷ್ಯಾದ ಸಾಹಿತ್ಯ, ತತ್ವಶಾಸ್ತ್ರ ಮತ್ತು ಧಾರ್ಮಿಕ ಪರಂಪರೆಯಲ್ಲಿ ಈ ಕೃತಿಗೆ ವಿಶೇಷ ಸ್ಥಾನವಿದೆ. ಕೌರವರು ಮತ್ತು ಪಾಂಡವರ ನಡುವಿನ ಸಂಘರ್ಷದ ಕಥೆಯಷ್ಟೇ ಅಲ್ಲ, ಕರ್ತವ್ಯ, ನ್ಯಾಯ, ಧರ್ಮ, ನೈತಿಕತೆ, ಅಧಿಕಾರ, ಕುಟುಂಬ ಸಂಬಂಧಗಳು ಹಾಗೂ ವ್ಯಕ್ತಿ ಮತ್ತು ಆಡಳಿತಗಾರರ ಜವಾಬ್ದಾರಿಗಳ ಬಗ್ಗೆಯೂ ಈ ಮಹಾಕಾವ್ಯ ಬೆಳಕು ಚೆಲ್ಲುತ್ತದೆ.

ವಿಶೇಷವಾಗಿ ಮಹಾಭಾರತದ ಭಾಗವೇ ಆಗಿರುವ ಭಗವದ್ಗೀತೆ ಹಲವು ತಲೆಮಾರುಗಳ ಚಿಂತಕರು ಮತ್ತು ತತ್ವಜ್ಞಾನಿಗಳ ಮೇಲೆ ಪ್ರಭಾವ ಬೀರಿದೆ. ವಿವಿಧ ಸಂಸ್ಕೃತಿಗಳಲ್ಲಿ ನೈತಿಕತೆ ಮತ್ತು ಮಾನವ ನಡವಳಿಕೆಯ ಕುರಿತ ಚರ್ಚೆಗಳ ಮೇಲೂ ಇದರ ಪ್ರಭಾವ ಇಂದಿಗೂ ಮುಂದುವರಿದಿದೆ.

45
ಅರ್ಥಶಾಸ್ತ್ರ
Image Credit : Asianet News

ಅರ್ಥಶಾಸ್ತ್ರ

ಕೌಟಿಲ್ಯ ಅಥವಾ ಚಾಣಕ್ಯ ಬರೆದಿದಿರುವ ಅರ್ಥಶಾಸ್ತ್ರವು ಆಡಳಿತ ಆರ್ಥಿಕತೆ, ರಾಜತಾಂತ್ರಿಕತೆ ಮತ್ತು ಸೇನಾ ಕಾರ್ಯತಂತ್ರಗಳ ಕುರಿತ ಪ್ರಮುಖ ಪ್ರಾಚೀನ ಗ್ರಂಥವಾಗಿದೆ. ರಾಜ್ಯಾಡಳಿತ, ತೆರಿಗೆ ವ್ಯವಸ್ಥೆ, ಕಾನೂನು ಪಾಲನೆ, ಗುಪ್ತಚರ ಜಾಲ ಮತ್ತು ಸಾರ್ವಜನಿಕ ಆಡಳಿತದ ಕುರಿತು ಈ ಕೃತಿಯಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಪ್ರಾಚೀನ ಭಾರತದ ರಾಜಕೀಯ ವ್ಯವಸ್ಥೆ ಮತ್ತು ಆರ್ಥಿಕ ಚಿಂತನೆಗಳನ್ನು ಅಧ್ಯಯನ ಮಾಡುವ ಸಂಶೋಧಕರಿಗೆ ಇದು ಪ್ರಮುಖ ಆಕರವಾಗಿದೆ.

55
ಯುನೆಸ್ಕೋದ ಮೆಮೊರಿ ಆಫ್ ದಿ ವರ್ಲ್ಡ್ ಕಾರ್ಯಕ್ರಮ
Image Credit : Asianet News

ಯುನೆಸ್ಕೋದ ಮೆಮೊರಿ ಆಫ್ ದಿ ವರ್ಲ್ಡ್ ಕಾರ್ಯಕ್ರಮ

ಯುನೆಸ್ಕೋ 1992ರಲ್ಲಿ 'ಮೆಮೊರಿ ಆಫ್ ದಿ ವರ್ಲ್ಡ್' ಕಾರ್ಯಕ್ರಮವನ್ನು ಆರಂಭಿಸಿತು. ಇದು ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಹೊಂದಿರುವ ದಾಖಲೆಗಳು ನಾಶವಾಗದಂತೆ ಅಥವಾ ಹಾಳಾಗದಂತೆ ಸಂರಕ್ಷಿಸುವುದು ಮತ್ತು ಮುಂದಿನ ಪೀಳಿಗೆಗೆ ಅವುಗಳನ್ನು ತಲುಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಈ ಕಾರ್ಯಕ್ರಮದಡಿ ಅಂತಾರಾಷ್ಟ್ರೀಯ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ದಾಖಲೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಜಾಗತಿಕ ಮಹತ್ವ ಹೊಂದಿರುವ ದಾಖಲೆಗಳಿಗೆ ಅಂತಾರಾಷ್ಟ್ರೀಯ ಪಟ್ಟಿಯಲ್ಲಿ ಸ್ಥಾನ ನೀಡಿದರೆ, ನಿರ್ದಿಷ್ಟ ಭೌಗೋಳಿಕ ಮತ್ತು ಸಾಂಸ್ಕೃತಿಕ ಪ್ರದೇಶಗಳಿಗೆ ಮಹತ್ವದ್ದಾಗಿರುವ ದಾಖಲೆಗಳನ್ನು ಪ್ರಾದೇಶಿಕ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ಪಟ್ಟಿಯನ್ನು MOWCAP ನಿರ್ವಹಿಸುತ್ತದೆ.

ಭಾರತದಲ್ಲಿ ಈ ಕಾರ್ಯಕ್ರಮದ ಜವಾಬ್ದಾರಿಯನ್ನು ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ (IGNCA) ನಿರ್ವಹಿಸುತ್ತಿದೆ. 2014ರಲ್ಲಿ ಇದನ್ನು ಭಾರತದ ನೋಡಲ್ ಸಂಸ್ಥೆಯಾಗಿ ನೇಮಿಸಲಾಯಿತು. ದಾಖಲೆಗಳನ್ನು ನಾಮನಿರ್ದೇಶನ ಮಾಡುವುದು, ಹಳೆಯ ಹಸ್ತಪ್ರತಿಗಳ ಸಂರಕ್ಷಣೆ, ದಾಖಲೆಗಳ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ಹಲವು ಕಾರ್ಯಗಳನ್ನು ಈ ಸಂಸ್ಥೆ ಮಾಡುತ್ತಿದೆ. ಈ ಹಿಂದೆಯೂ ಭಾರತ ಹಲವು ಮಹತ್ವದ ಐತಿಹಾಸಿಕ ದಾಖಲೆಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ಪಡೆದುಕೊಂಡಿದೆ. ಋಗ್ವೇದ, ಶೈವ ಹಸ್ತಪ್ರತಿಗಳು, ತಮಿಳಿನ ವೈದ್ಯಕೀಯ ಗ್ರಂಥಗಳು, ಕಾಲಚಕ್ರ ತಂತ್ರದ ವ್ಯಾಖ್ಯಾನಗಳು ಮತ್ತು ಅಭಿನವಗುಪ್ತನ ಕೃತಿಗಳು ಇವುಗಳಲ್ಲಿ ಸೇರಿವೆ.

ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ಪಟ್ಟಿಯಲ್ಲಿ 2023ರಲ್ಲಿ ಚಿತ್ರಗಳೊಂದಿಗೆ ರಚಿಸಲಾದ ರಾಮಚರಿತಮಾನಸ, ಸಂಸ್ಕೃತ ಕಾವ್ಯಶಾಸ್ತ್ರದ ಕೃತಿ 'ಸಹೃದಯಾಲೋಕ-ಲೋಚನ' ಮತ್ತು 15ನೇ ಶತಮಾನದ ಅಪರೂಪದ ಪಂಚತಂತ್ರ ಹಸ್ತಪ್ರತಿಗೂ ಸ್ಥಾನ ದೊರೆತಿತ್ತು.

ಇದೀಗ ಮೂರು ಪ್ರಮುಖ ಕೃತಿಗಳಿಗೆ ದೊರೆತಿರುವ ಮಾನ್ಯತೆ ಭಾರತದ ದಾಖಲೆಗಳ ಸಂರಕ್ಷಣೆಯ ಪ್ರಯತ್ನಗಳಿಗೆ ಮತ್ತಷ್ಟು ಬಲ ನೀಡಿದೆ. 2025ರಲ್ಲಿ IGNCA ದಕ್ಷಿಣ ಏಷ್ಯಾದಲ್ಲಿ ಯುನೆಸ್ಕೋದ ಮೆಮೊರಿ ಆಫ್ ದಿ ವರ್ಲ್ಡ್ ಕಾರ್ಯಕ್ರಮದ ಕುರಿತು ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಕಾರ್ಯಾಗಾರವನ್ನು ಆಯೋಜಿಸಿತ್ತು. ಪ್ರಾದೇಶಿಕ ಸಹಕಾರ, ಐತಿಹಾಸಿಕ ದಾಖಲೆಗಳ ಸಂರಕ್ಷಣೆ ಮತ್ತು ಜಾಗತಿಕ ಪಾರಂಪರಿಕ ಪಟ್ಟಿಗಳಲ್ಲಿ ದಕ್ಷಿಣ ಏಷ್ಯಾಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯುವ ಅಗತ್ಯದ ಬಗ್ಗೆ ಈ ಕಾರ್ಯಕ್ರಮದಲ್ಲಿ ಚರ್ಚಿಸಲಾಗಿತ್ತು.

ಮಹಾಭಾರತ, ಅರ್ಥಶಾಸ್ತ್ರ ಮತ್ತು ರಾಜತರಂಗಿಣಿಗೆ ದೊರೆತಿರುವ ಈ ಮಾನ್ಯತೆ ಕೇವಲ ಭಾರತದ ಸಾಂಸ್ಕೃತಿಕ ಸಾಧನೆಯಲ್ಲ. ಇವುಗಳ ಜಾಗತಿಕ ಮಹತ್ವಕ್ಕೂ ದೊರೆತಿರುವ ಮನ್ನಣೆಯಾಗಿದೆ. ಇತಿಹಾಸದ ಬರವಣಿಗೆ, ಮಹಾಕಾವ್ಯ ಸಾಹಿತ್ಯ ಮತ್ತು ರಾಜಕೀಯ ತತ್ವಶಾಸ್ತ್ರಗಳು ನಾಗರಿಕತೆಗಳ ಬೆಳವಣಿಗೆಗೆ ಹೇಗೆ ಕೊಡುಗೆ ನೀಡಿವೆ ಹಾಗೂ ತಲೆಮಾರುಗಳಿಂದ ಜ್ಞಾನವನ್ನು ಹೇಗೆ ಮುಂದಕ್ಕೆ ಕೊಂಡೊಯ್ದಿವೆ ಎಂಬುದನ್ನು ಈ ಮೂರು ಕೃತಿಗಳು ತೋರಿಸಿಕೊಡುತ್ತವೆ.

ಐತಿಹಾಸಿಕ ದಾಖಲೆಗಳನ್ನು ಸಂರಕ್ಷಿಸುವುದು ಮತ್ತು ಸಾಂಸ್ಕೃತಿಕ ಜ್ಞಾನವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಇಂದಿನ ದಿನಗಳಲ್ಲಿ ಅತ್ಯಂತ ಮಹತ್ವದ್ದಾಗಿದೆ. ಇಂತಹ ಸಂದರ್ಭದಲ್ಲಿ ಯುನೆಸ್ಕೋದ ಈ ಮಾನ್ಯತೆ ಭಾರತದ ಜ್ಞಾನ ಪರಂಪರೆಯ ಮಹತ್ವವನ್ನು ಮತ್ತೊಮ್ಮೆ ಜಗತ್ತಿಗೆ ಪರಿಚಯಿಸಿದೆ. ಜತೆಗೆ ಏಷ್ಯಾ-ಪೆಸಿಫಿಕ್ ಪ್ರದೇಶದ ಸಾಮೂಹಿಕ ಐತಿಹಾಸಿಕ ದಾಖಲೆಗಳ ಪರಂಪರೆಯಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಭಾರತ ಸುದ್ದಿ
ಸುದ್ದಿ
 
2nd ODI • NZ vs IND 2026
NZNZ
Sat, 7 Nov, 2026
INDIND
07:30 am
Match yet to begin.
Schedule ›
1st ODI • NZ vs IND 2026
Result
NZNZ
185
INDIND
143/5
IND beat NZ by 5 wickets (D/L) method
Schedule ›
5th T20 • NZ vs IND 2026
Result
NZNZ
195/3
INDIND
191/8
NZ beat IND by 7 wickets
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
1st TEST • PAK vs SL 2026
PAKPAK
Mon, 9 Nov, 2026
SLSL
10:00 am
Match yet to begin.
Schedule ›
3rd ODI • NZ vs IND 2026
NZNZ
Tue, 10 Nov, 2026
INDIND
07:30 am
Match yet to begin.
Schedule ›
4th ODI • NZ vs IND 2026
NZNZ
Fri, 13 Nov, 2026
INDIND
07:30 am
Match yet to begin.
Schedule ›
5th ODI • NZ vs IND 2026
NZNZ
Sun, 15 Nov, 2026
INDIND
07:30 am
Match yet to begin.
Schedule ›
Latest Videos
Recommended Stories
Recommended image1
Success story: ಎಂಜಿನಿಯರಿಂಗ್ ಇಲ್ಲ, ವರ್ಕ್‌ಶಾಪ್ ಇಲ್ಲ: 1 ಲಕ್ಷ ರೂ.ಗೆ ಸೋಲಾರ್ ವಾಹನ ನಿರ್ಮಿಸಿದ 17ರ ಬಾಲಕ!
Recommended image2
'ಮುಸ್ಲಿಂ ಮುಂಬೈ' ಸೃಷ್ಟಿಸುವ ಪ್ರಯತ್ನ ನಡೆಯುತ್ತಿದ್ದೆಯೇ? ಸಿಎಂ ಫಡ್ನವೀಸ್‌ಗೆ ಬಿಜೆಪಿ ನಾಯಕ ಬರೆದ ಪತ್ರ ಸಂಚಲನ!
Recommended image3
ಇನ್ನು ಮುಂದೆ ಬ್ಯಾಂಕ್ ಲಾಕರ್‌ನಲ್ಲೂ ನಿಮ್ಮ ಚಿನ್ನ ಸೇಫ್ ಇಲ್ಲವೇ? ₹47 ಲಕ್ಷ ಆಭರಣ ಕಳೆದುಕೊಂಡ ಮಹಿಳೆ!
Related Stories
Recommended image1
Now Playing
ಗೋಳಗುಮ್ಮಟಕ್ಕಿಲ್ಲ UNESCO ಸ್ಥಾನಮಾನ: ಅಧಿಕಾರಿಗಳ ನಿರ್ಲಕ್ಷ್ಯ..ಪಾರಂಪರಿಕ ಕಟ್ಟಡಕ್ಕಿಲ್ಲ ವಿಶ್ವ ಮನ್ನಣೆ
Recommended image2
UNESCO World Heritage List: ವಿಶ್ವ ಪರಂಪರೆ ಪಟ್ಟಿಯಲ್ಲಿ ಕರ್ನಾಟಕದ ಬೇಲೂರು, ಹಳೇಬೀಡು, ಸೋಮನಾಥಪುರ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved