UNESCO World Heritage List: ವಿಶ್ವ ಪರಂಪರೆ ಪಟ್ಟಿಯಲ್ಲಿ ಕರ್ನಾಟಕದ ಬೇಲೂರು, ಹಳೇಬೀಡು, ಸೋಮನಾಥಪುರ
* ಕರ್ನಾಟಕ ಮತ್ತು ಇತಿಹಾಸಕ್ಕೆ ವಿಶೇಷ ಗೌರವ
* ಹಾಸನ ಜಿಲ್ಲೆಯ ಬೇಲೂರು, ಹಳೇಬೀಡು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಪರಿಗಣಿಸಲು ನಾಮನಿರ್ದೇಶನ
* ವಿಶ್ವ ಪಾರಂಪರಿಕ ತಾಣದ ಸ್ಥಾನಮಾನ ನಿಶ್ಚಿತ
* ದ್ರಾವಿಡ ಮತ್ತು ನಾಗರ ಶೈಲಿಯ ಮಿಶ್ರಣವನ್ನು ಹೊಯ್ಸಳ ಶೈಲಿ ಎಂದು ಕರೆಯಲಾಗುತ್ತದೆ
ಬೆಂಗಳೂರು(ಜ. 31) ಕರ್ನಾಟಕ (Karnataka) ಮತ್ತು ಇತಿಹಾಸಕ್ಕೆ (History) ಹೆಮ್ಮೆ ತರುವಂತಹ ಸುದ್ದಿ ಒಂದು ಇಲ್ಲಿದೆ. ನಮ್ಮ ರಾಜ್ಯದ ಬೇಲೂರು( Belur) ಹಳೇಬೀಡು (Halebid) ಮತ್ತು ಸೋಮನಾಥಪುರದ ( Somnathapura) ಹೊಯ್ಸಳ (Hoysala) ದೇವಾಲಯಗಳನ್ನು 2022-2023ರ ವರ್ಷಕ್ಕೆ (UNESCO World Heritage List) ವಿಶ್ವ ಪರಂಪರೆಯ ಪಟ್ಟಿಯಲ್ಲಿ ಪರಿಗಣಿಸಲು ಭಾರತ (India) ನಾಮನಿರ್ದೇಶನ ಮಾಡಿದೆ.
ದ್ರಾವಿಡ ಮತ್ತು ನಾಗರ ಶೈಲಿಯ ಮಿಶ್ರಣ ಹೊಯ್ಸಳ ಕಾಲದ ಶಿಲ್ಪಕಲಾ ಶೈಲಿಯ ಸಂಯೋಜನೆ ಏಪ್ರಿಲ್ 15, 2014 ರಿಂದಲೇ ಯುನೆಸ್ಕೋದ ತಾತ್ಕಾಲಿಕ ಪಟ್ಟಿಯಲ್ಲಿದೆ. ನಮ್ಮ ದೇಶದ ಶ್ರೀಮಂತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಇವು ಸಾಕ್ಷಿಯಾಗಿ ನಿಂತಿವೆ ಎಂಬುದನ್ನು ಮನದಟ್ಟು ಮಾಡಿಕೊಡಲಾಗಿದೆ.
ವಿಶ್ವ ಪರಂಪರೆಯ ಕೇಂದ್ರಕ್ಕೆ ದಾಖಲೆಯನ್ನು ಸಲ್ಲಿಸುವುದು, ಅವರು ಅದರ ತಾಂತ್ರಿಕ ಪರಿಶೀಲನೆಯನ್ನು ಮಾಡುವುದು ಮೊದಲ ಹಂತವಾಗಿದೆ. UNESCO ಗೆ ಭಾರತದ ಖಾಯಂ ಪ್ರತಿನಿಧಿಯಾದ ವಿಶಾಲ್ ವಿ. ಶರ್ಮಾ (Vishal V. Sharma) ಅವರು ನಾಮನಿರ್ದೇಶನವನ್ನು UNESCO ವಿಶ್ವ ಪರಂಪರೆಯ ನಿರ್ದೇಶಕ ಲಾಜ್ ಎಲುಂಡೊಗೆ ಸಲ್ಲಿಸಿದ್ದು ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಹೊಯ್ಸಳರ ದೇವಾಲಯಗಳಲ್ಲಿನ ‘ಹೊಯ್ಸಳ ಶಿಲ್ಪಕಲಾ ಶೈಲಿಯ ಸಂಯೋಜನೆ’ಯು ವಿಶ್ವ ಪರಂಪರೆಯ ಪಟ್ಟಿಗೆ ನಾಮನಿರ್ದೇಶನ ಮಾಡಿರುವುದು ಅತ್ಯಂತ ಸಂತಸದ ಕ್ಷಣವಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಅಭಿವೃದ್ಧಿ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದ್ದಾರೆ.
ಈ ಎಲ್ಲಾ ಮೂರು ಹೊಯ್ಸಳ ದೇವಾಲಯಗಳು ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ASI) ಸಂರಕ್ಷಿತ ಸ್ಮಾರಕಗಳಾಗಿವೆ. ಆದ್ದರಿಂದ Archaeological Survey of India ಮೂಲಕ ದೇಗುಲಗಳನ್ನು ಸಂರಕ್ಷಣೆ ಮತ್ತು ನಿರ್ವಹಣೆಯನ್ನು ಮಾಡಲಾಗುವುದು. ಮೂರು ಸ್ಮಾರಕಗಳ ಸುತ್ತಲೂ ಇರುವ ರಾಜ್ಯ ಸಂರಕ್ಷಿತ ಸ್ಮಾರಕಗಳ ಸಂರಕ್ಷಣೆಯನ್ನು ರಾಜ್ಯ ಸರ್ಕಾರವು ನೋಡಿಕೊಳ್ಳುತ್ತದೆ
UNESCO accords Durga Puja: ಯುನೆಸ್ಕೋ ಪಾರಂಪರಿಕ ಸ್ಥಾನಮಾನ ಪಡೆದ ಬಂಗಾಳದ ದುರ್ಗಾಪೂಜೆ, ದೇಶದ ಹೆಮ್ಮೆ ಎಂದ ಮೋದಿ
ಒಂಚೂರು ಇತಿಹಾಸ: ಹೊಯ್ಸಳ ಶೈಲಿ ಎನ್ನುವುದಕ್ಕೆ ಇತಿಹಾಸದಲ್ಲಿ ವ್ಯಾಖ್ಯಾನ ಇದೆ. ಹಳೇಬೀಡು ಹೊಯ್ಸಳ ವಂಶದ ರಾಜಧಾನಿಯಾಗಿತ್ತು. ಹೊಯ್ಸಳರು ಹತ್ತನೆಯ ಶತಮಾನದ ಆರಂಭದಿಂದ ಹದಿಮೂರನೆಯ ಶತಮಾನದ ಅಂತ್ಯದವರೆವಿಗೂ ಕರ್ನಾಟಕವೂ ಸೇರಿದಂತೆ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳನ್ನು ಆಳಿದ್ದರು.
ಹೊಯ್ಸಳರು ಕಲ್ಯಾಣದ ಚಾಲುಕ್ಯರಿಗೆ ಸಾಮಂತರಾಗಿದ್ದುಕೊಂಡೇ ಅಧಿಕಾರವನ್ನು ನೆಡೆಸಿದವರು. 12 ನೇ ಶತಮಾನದ ಆರಂಭದಲ್ಲಿ ರಾಜ ವಿಷ್ಣುವರ್ಧನ ಮತ್ತು ವೀರಬಲ್ಲಾಳ ನ ಕಾಲದಲ್ಲಿ ಚಾಲುಕ್ಯರು ಅವನತಿಯನ್ನು ಕಂಡಾಗ ಇವರು ಹೆಚ್ಚು ಸ್ವತಂತ್ರವಾಗಿ ಆಡಳಿತವನ್ನು ನೆಡೆಸುತ್ತಾರೆ. ಹೊಯ್ಸಳರ ಮೂಲ ಊರು ಚಿಕ್ಕಮಗಳೂರು ಜಿಲ್ಲೆ ಯ ಮೂಡಿಗೆರೆ ತಾಲ್ಲೂಕಿನಲ್ಲಿರುವ ಅಂಗಡಿ ಎಂಬ ಪುಟ್ಟ ಗ್ರಾಮ. ಆಗಿಂದಾಗ್ಗೆ ಉಂಟಾಗುತ್ತಿದ್ದ ನೆರೆಯೆ ಶತ್ರುಗಳ ಕಿರುಕುಳದ ನಡುವೆಯೂ ಇವರು ತಮ್ಮ ರಾಜಕೀಯ ಕಾರ್ಯಕ್ಷ್ತೇತ್ರವನ್ನು ಇಂದಿನ ಹಾಸನ ಜಿಲ್ಲೆ ಯ ಮಧ್ಯಭಾಗದಲ್ಲೇ ಸ್ಠಿರಗೊಳಿಸಿಕೊಂಡು ರಾಜ್ಯಭಾರ ನೆಡೆಸುತ್ತಾರೆ. ಹಳೇಬೀಡು ಹೊಯ್ಸಳರ ಬಹುಕಾಲದ ರಾಜಧಾನಿಯಾಗಿದ್ದ ಊರು. ಹಳೆಯ ಬೀಡು(ಊರು) ನಂತರ ಹಳೇಬೀಡಾಯಿತು.
ರಾಜ ವಿಷ್ಣುವರ್ಧನನ ಕಾಲವನ್ನು ಹೊರತುಪಡಿಸಿ ಮಿಕ್ಕ ಎಂಟು ರಾಜರ ಕಾಲದಲ್ಲೂ ಇಂದಿನ ಹಳೇಬೀಡು ಪಟ್ಟಣವೇ ರಾಜಧಾನಿಯಾಗಿತ್ತು ಎಂಬುದನ್ನು ಇತಿಹಾಸ ತಿಳಿಸುತ್ತದೆ. ಸಂಶೋಧನೆಗಳಿಂದ ತಿಳಿದುಬಂದಿರುತ್ತದೆ. ಹೊಯ್ಸಳರಲ್ಲಿ ಒಂಬತ್ತು ಮಂದಿ ರಾಜರುಗಳು ಆಗಿಹೋಗಿದ್ದರೂ ವೀರಬಲ್ಲಾಳ , ವಿಷ್ಣುವರ್ಧನ ಮತ್ತು ನರಸಿಂಹ ಬಲ್ಲಾಳರು ಕಲೆ ಮತ್ತು ವಾಸ್ತುಶಿಲ್ಪಕ್ಕೆ ಕೊಡುಗೆ ನೀಡಿದರು.
ಅಂದಿನ ಈ ನಗರದಲ್ಲಿ ಸುಮಾರು ಒಂದು ಲಕ್ಷ ಮಂದಿ ವಾಸಿಸುತ್ತಿದ್ದು ನಗರದ ರಕ್ಷಣೆಗಾಗಿ ಹೊರವಲಯದಲ್ಲಿ ಸುತ್ತಲೂ ದೊಡ್ಡ ಕಲ್ಲುಗಳಿಂದ ಎರಡು ಸುತ್ತಿನ ಕೋಟೆಯನ್ನು ನಿರ್ಮಿಲಾಗಿತ್ತು. ಕೋಟೆಯ ಕುರುಹುಗಳನ್ನು ಇಂದೂ ಕಾಣಬಹುದು. ಊರಿನ ಪ್ರವೇಶಕ್ಕೆ ಒಟ್ಟು ಐದು ಹೆಬ್ಬಾಗಿಲುಗಳಿದ್ದುದು ಕೋಟೆಯ ರಚನೆಯಲ್ಲಿ ಕಂಡುಬರುತ್ತದೆ.
ಹಳೇಬೀಡಿನ ಸ್ಥಳಗಳು:
* ಹೊಯ್ಸಳೇಶ್ವರ ದೇವಸ್ಥಾನ- ರಾಷ್ಟ್ರೀಯ ಸ್ಮಾರಕ/ದೇವಾಲಯ
* ಕೇದಾರೇಶ್ವರ ದೇವಾಲಯ - ರಾಷ್ಟ್ರೀಯ ಸ್ಮಾರಕ
* ಹುಲಿಕೆರೆ ಕಲ್ಯಾಣಿ(ಕೊಳ) - ರಾಷ್ಟ್ರೀಯ ಸ್ಮಾರಕ
* ಜೈನ ಬಸದಿಗಳು - ರಾಷ್ಟ್ರೀಯ ಸ್ಮಾರಕ/ದೇವಾಲಯ
* ನಗರೇಶ್ವರ ದೇವಾಲಯ ಸಂಕೀರ್ಣ - ರಾಷ್ಟ್ರೀಯ ಸ್ಮಾರಕ
* ಮಲ್ಲಿಕಾರ್ಜುನ ದೇವಾಲಯ - ಧಾರ್ಮಿಕ ಕೇಂದ್ರ/ಮಠ
* ದೋರಸಮುದ್ರ ಕೆರೆ - ಕೆರೆ/ವಿಹಾರಕೇಂದ್ರ
ಇನ್ನು ಬೇಲೂರು ಮತ್ತೆ ಸೋಮನಾಥಪುರಕ್ಕೂ ಗೌರವ ಸಲ್ಲಿಕೆಯಾಗಿದೆ. ಈಗಾಗಲೇ ವಿಜಯನಗರದ ಹಂಪಿ ಸ್ಥಾನ ಪಡೆದುಕೊಂಡಿದ್ದು ಜೀವ ವೈವಿಧ್ಯಗಳ ತಾಣ ಎಂದು ನಮ್ಮ ಪಶ್ಚಿಮ ಘಟ್ಟಗಳನ್ನು ಕರೆಯಲಾಗುತ್ತದೆ.