- Home
- News
- India News
- ದಿಲ್ಲಿಗೆ ಹೋಗುವೆ ಎಂದು ಪಾಕಿಸ್ತಾನಕ್ಕೆ ಹೋಗ್ತಿದ್ದ ಜ್ಯೋತಿ; ಪಾಕ್ ಗೂಢಚಾರಿಣಿಯ ಮತ್ತಷ್ಟು ರಹಸ್ಯ ಬಯಲು
ದಿಲ್ಲಿಗೆ ಹೋಗುವೆ ಎಂದು ಪಾಕಿಸ್ತಾನಕ್ಕೆ ಹೋಗ್ತಿದ್ದ ಜ್ಯೋತಿ; ಪಾಕ್ ಗೂಢಚಾರಿಣಿಯ ಮತ್ತಷ್ಟು ರಹಸ್ಯ ಬಯಲು
ಪಾಕಿಸ್ತಾನದ ಪರ ಬೇಹುಗಾರಿಕೆ ಆರೋಪದ ಮೇಲೆ ಬಂಧಿತಳಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ದೆಹಲಿಗೆ ಹೋಗುವುದಾಗಿ ಸುಳ್ಳು ಹೇಳಿ ಪಾಕಿಸ್ತಾನಕ್ಕೆ ತೆರಳಿದ್ದಳು ಎಂದು ತಿಳಿದುಬಂದಿದೆ. ಆಕೆಯ ಹಣಕಾಸು ವಹಿವಾಟುಗಳು ಮತ್ತು ಪ್ರಯಾಣದ ವಿವರಗಳ ಬಗ್ಗೆ ತನಿಖೆ ನಡೆಯುತ್ತಿದೆ.

ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಸುಳ್ಳಿನ ಮತ್ತೊಂದು ಕಥೆ ಬಿಚ್ಚಿಕೊಂಡಿದೆ. ಆಕೆಯ ಹೆತ್ತವರಿಗೆ ದೆಹಲಿಗೆ ಹೋಗುತ್ತೇನೆ ಎಂದು ಸುಳ್ಳು ಹೇಳಿ ಪಾಕಿಸ್ತಾನಕ್ಕೆ ತೆರಳಿದ್ದಾಳೆ ಎನ್ನುವುದು ಬಯಲಾಗಿದೆ.
ಈ ಬಗ್ಗೆ ಆಕೆಯ ತಂದೆ ಹರೀಶ್ ಮಲ್ಹೋತ್ರಾ ಮಾಧ್ಯಮಗಳಲ್ಲಿ ಮಾತನಾಡಿದ್ದು, ‘ ಅವಳು ದೆಹಲಿಗೆ ಹೋಗುವುದಾಗಿ ಹೇಳಿ ಹೋಗುತ್ತಿದ್ದಳು. ಅವಳು ನನಗೆ ಏನನ್ನೂ ಹೇಳಿರಲಿಲ್ಲ ಎಂದು ತಿಳಿದು ಬಂದಿದೆ.
ಕೋವಿಡ್‌ಗೂ ಮುನ್ನ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಳು. ಆ ಬಳಿಕ ಅವಳು ಅಲ್ಲಿ ಕೆಲಸ ಬಿಟ್ಟಿದ್ದಳು. ಆಕೆಯ ಯೂಟ್ಯೂಬ್ ಅಥವಾ ಸಾಮಾಜಿಕ ಮಾಧ್ಯಮ ಖಾತೆಗಳ ಬಗ್ಗೆ ನನಗೆ ತಿಳಿದಿಲ್ಲ, ಅವಳು ಮನೆಯಲ್ಲಿ ವಿಡಿಯೋಗಳನ್ನು ಮಾಡುತ್ತಿದ್ದಳು’ ಎಂದಿದ್ದಾರೆ. ಈ ಮೂಲಕ ದಿಲ್ಲಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಆಕೆ ಪಾಕಿಸ್ತಾನಿಗಳ ಸಂಗ ನಡೆಸುತ್ತಿರುವುದು ಈಗ ಬಯಲಾಗಿದೆ.
ಸತತ ವಿಚಾರಣೆ:
ಈ ನಡುವೆ, ಜ್ಯೋತಿ ಮಲ್ಹೋತ್ರಾಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ, ಗುಪ್ತಚರ ಬ್ಯೂರೋ ಮತ್ತು ಮಿಲಿಟರಿ ಗುಪ್ತಚರ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಆಕೆಯ ಹಣಕಾಸು ವಹಿವಾಟುಗಳು ಮತ್ತು ಪ್ರಯಾಣದ ವಿವರಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.