TVK Govt: ಮತ್ತೊಂದು ಮಹತ್ವದ ನಿರ್ಧಾರ ಪ್ರಕಟಿಸಿದ ಸಿಎಂ ವಿಜಯ್; ತಮಿಳುಗರು ಫುಲ್ ಖುಷ್
ತಮಿಳುನಾಡಿನ ಸಿಎಂ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ. ಈ ಬಗ್ಗೆ ಸಿಎಂ ಜೋಸೆಫ್ ವಿಜಯ್ ಮಾಧ್ಯಮಗಳೊಂದಿಗೆ ಮಾತನಾಡಿ ಮಾಹಿತಿಯನ್ನು ನೀಡಿದ್ದಾರೆ.

ಟಿವಿಕೆ ಸರ್ಕಾರ ಮಹತ್ವದ ನಿರ್ಧಾರ
ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ನು ಮುಂದೆ ಸಾರ್ವಜನಿಕರ ಅನುಕೂಲಕ್ಕಾಗಿ, ಸಾಮಾನ್ಯ ಬಸ್ಸುಗಳ ಬದಲು ಕೇವಲ ಹವಾನಿಯಂತ್ರಿತ ಸಾರಿಗೆ ಬಸ್‌ಗಳನ್ನು ಮಾತ್ರ ಖರೀದಿಸಲು ನಿರ್ಧರಿಸಿದೆ.
ಹವಾನಿಯಂತ್ರಿತವಲ್ಲದ ಬಸ್
ಅರ್ಥಾತ್ ಹಂತ ಹಂತವಾಗಿ ಹವಾನಿಯಂತ್ರಿತವಲ್ಲದ ಬಸ್ಸುಗಳು ನೇಪಥ್ಯಕ್ಕೆ ಸರಿಯಲಿವೆ ಹಾಗೂ ಹಳ್ಳಿಹಳ್ಳಿಗೂ ಎಸಿ ಬಸ್ ಸಂಚಾರ ಆರಂಭವಾಗಲಿದೆ. ಮುಖ್ಯಮಂತ್ರಿ ವಿಜಯ್ ಈ ಸೂಚನೆ ನೀಡಿದ್ದಾರೆ ಎಂದು ತಮಿಳುನಾಡು ಸಾರಿಗೆ ಸಚಿವ ವಿಜಯ್ ತಮಿಳನ್ ಪಾರ್ಥಿಬನ್+ ಮಂಗಳವಾರ ತಿಳಿಸಿದ್ದಾರೆ.
ಆರಾಮದಾಯಕ ಪ್ರಯಾಣ
ಪತ್ರಕರ್ತರ ಜತೆ ಮಾತನಾಡಿದ ಸಿಎಂ ವಿಜಯ್, ‘ಜನಸಾಮಾನ್ಯರೂ ಹವಾನಿಯಂತ್ರಿತ ಬಸ್‌ಗಳಲ್ಲಿ ಆರಾಮವಾಗಿ ಪ್ರಯಾಣಿಸಬೇಕೆಂದು ಸಿಎಂ ವಿಜಯ್ ಬಯಸುತ್ತಾರೆ. ಪ್ರತಿಯೊಬ್ಬ ವ್ಯಕ್ತಿಗೂ ಆರಾಮವಾಗಿ ಪ್ರಯಾಣಿಸಲು ಬಸ್‌ಗಳಲ್ಲಿ ಅಗತ್ಯವಾದ ಸೌಲಭ್ಯಗಳಿರಬೇಕು ಎಂದು ಹೇಳಿದ್ದಾರೆ.
ಮುಂದೆ ಖರೀದಿಸುವ ಎಲ್ಲ ಬಸ್‌ಗಳಿಗೆ ಹವಾನಿಯಂತ್ರಣ ಸೌಲಭ್ಯವಿರಬೇಕು ಎನ್ನುವುದು ಅವರ ಆಸೆ’ ಎಂದು ಹೇಳಿದರು.
ಇದನ್ನೂ ಓದಿ: ರಾಮಮಂದಿರದಲ್ಲಿ ದೇಣಿಗೆ ಕಳವು: ಚಂಪತ್ ರಾಯ್ ಮುಂದೆ 4 ಪ್ರಶ್ನೆ ಮುಂದಿಟ್ಟ ಎಸ್‌ಐಟಿ
ಸಿಎಂ ಜೋಸೆಫ್ ವಿಜಯ್ ಅವರ ಹಿಂದಿನ ಕ್ರಮಗಳು
ಇತ್ತೀಚೆಗೆ ವಿಜಯ್ ಮಂದಿರ ಹಾಗೂ ಶಾಲೆಗಳ ಸುತ್ತಮುತ್ತಲಿನ ಬಾರ್‌ಗಳನ್ನು ರದ್ದುಗೊಳಿಸಲು ಆದೇಶಿಸಿದ್ದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಮಕ್ಕಳಿಗೆ ಚಿನ್ನದ ಸರ, ರೈತರ ಸಾಲ ಮನ್ನಾ ಸೇರಿ ಅನೇಕ ಜನಾನುರಾಗಿ ಕ್ರಮ ಪ್ರಕಟಿಸಿದ್ದರು.
ಇದನ್ನೂ ಓದಿ: Illegal Bangladeshi in Bengaluru: ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ 12 ಮಂದಿ ಬಾಂಗ್ಲಾದೇಶಿಗರ ಬಂಧನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

