- Home
- News
- India News
- Gold Rate Today: ಚಿನ್ನದ ದರ ಒಂದೇ ತಿಂಗಳಲ್ಲಿ ₹50,000. ಇಳಿಕೆ! ಯುದ್ಧದ ವೇಳೆ ₹1.92 ಲಕ್ಷ ಇದ್ದ ಬೆಲೆ, ಇಂದು ಎಷ್ಟಿದೆ ನೋಡಿ
Gold Rate Today: ಚಿನ್ನದ ದರ ಒಂದೇ ತಿಂಗಳಲ್ಲಿ ₹50,000. ಇಳಿಕೆ! ಯುದ್ಧದ ವೇಳೆ ₹1.92 ಲಕ್ಷ ಇದ್ದ ಬೆಲೆ, ಇಂದು ಎಷ್ಟಿದೆ ನೋಡಿ
Gold Price: ಇರಾನ್-ಅಮೆರಿಕ ಯುದ್ಧದ ವೇಳೆ ₹1,92,991 ರು.ಗೆ ಏರಿಕೆ (10 ಗ್ರಾಂ.) ಕಂಡು ಸಾರ್ವಕಾಲಿಕ ದಾಖಲೆ ಬರೆದಿದ್ದ ಚಿನ್ನದ ದರ, ಇದೀಗ ಜೂನ್ ಒಂದೇ ತಿಂಗಳಲ್ಲಿ 50 ಸಾವಿರ ರು.ನಷ್ಟು ಕುಸಿದಿದೆ.

Gold Price: ಒಂದೇ ತಿಂಗಳಲ್ಲಿ ಚಿನ್ನದ ಬೆಲೆ 50 ಸಾವಿರ ರು. ಕುಸಿತ!
ಮುಂಬೈ: ಇರಾನ್-ಅಮೆರಿಕ ಯುದ್ಧದ ವೇಳೆ ₹1,92,991 ರು.ಗೆ ಏರಿಕೆ (10 ಗ್ರಾಂ.) ಕಂಡು ಸಾರ್ವಕಾಲಿಕ ದಾಖಲೆ ಬರೆದಿದ್ದ ಚಿನ್ನದ ದರ, ಇದೀಗ ಜೂನ್ ಒಂದೇ ತಿಂಗಳಲ್ಲಿ 50 ಸಾವಿರ ರು.ನಷ್ಟು ಕುಸಿದಿದೆ.
Gold price today: ಇಂದಿನ ಚಿನ್ನದ ಬೆಲೆ ಎಷ್ಟು?
ಮಲ್ಟಿ ಕಮಾಡಿಟಿ ಎಕ್ಸ್‌ಚೇಂಚ್‌ನಲ್ಲಿ (ಎಂಸಿಎಕ್ಸ್) 10 ಗ್ರಾಂ. ಚಿನ್ನದ ದರ ಮಂಗಳವಾರ 1,42,413 ಲಕ್ಷಕ್ಕೆ ಇಳಿಕೆಯಾಗಿದೆ. ದೆಹಲಿಯ ಚಿನ್ನದಂಗಡಿಗಳಲ್ಲಿ 1,45,800 ರು.ಗೆ ಇಳಿದಿದೆ. ಈ ಮೂಲಕ ಚಿನ್ನದ ದರ ಸಾರ್ವಕಾಲಿಕ ಗರಿಷ್ಠದಿಂದ ಸುಮಾರು 50 ಸಾವಿರ ರು.ನಷ್ಟು ಕುಸಿತ ಕಂಡಂತಾಗಿದೆ.
Gold price today: 2008ರ ಆರ್ಥಿಕ ಬಿಕ್ಕಟ್ಟಿನ ಬಳಿಕ ಮತ್ತೆ ಚಿನ್ನದ ದರ ಭಾರೀ ಕುಸಿತ!
ಅಕ್ಟೋಬರ್ 2008ರ ಆರ್ಥಿಕ ಬಿಕ್ಕಟ್ಟಿನ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಅತಿದೊಡ್ಡ ಮಾಸಿಕ ಕುಸಿತ ಕಾಣುತ್ತಿರುವುದು ಇದೇ ಮೊದಲಾಗಿದೆ. ಅದರಂತೆ ಭಾರತದಲ್ಲೂ ಚಿನ್ನದ ದರ ಇಳಿಕೆಯಾಗಿದೆ.
Gold rate: ಡಾಲರ್ ಬಲಿಷ್ಠವಾಗುತ್ತಿರುವ ಕಾರಣ ಚಿನ್ನದ ದರ ಕುಸಿತ?
ಅಮೆರಿಕದ ಫೆಡರಲ್ ಬ್ಯಾಂಕ್ ಈ ಬಾರಿ ಬಡ್ಡಿದರ ಹೆಚ್ಚಿಸುವ ನಿರೀಕ್ಷೆ ಹಾಗೂ ಡಾಲರ್ ಬಲಿಷ್ಠವಾಗುತ್ತಿರುವ ಕಾರಣ ಚಿನ್ನದ ದರ ಕುಸಿತ ಕಾಣುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

