ಬೆಂಗಳೂರು, ಮೈಸೂರು, ಹುಬ್ಬಳ್ಳಿಯಿಂದ ಹೊರಡುವ ಹಲವು ರೈಲು ರದ್ದು, ಮಾರ್ಗ ಬದಲಾವಣೆ
ಬೆಂಗಳೂರು, ಮೈಸೂರು, ಹುಬ್ಬಳಿಯಿಂದ ಹೊರಡುವ ಹಲವು ರೈಲು ಸಂಚಾರ ಭಾಗಶಃ ರದ್ದು, ಹಲವು ರೈಲುಗಳ ಮಾರ್ಗ ಬದಲಾವಣೆ , ಕೆಲ ರೈಲು ಸಂಚಾರ ವಿಳಂಬವಾಗುವ ಕುರಿತು ಭಾರತೀಯ ರೈಲ್ವೇ ಮಹತ್ವದ ಅಪ್‌ಡೇಟ್ ನೀಡಿದೆ?

ರೈಲು ಪ್ರಯಾಣಿಕರೇ ಗಮನಿಸಿ
ಪುಣೆ-ಮಿರಜ್ ಭಾಗದ ಜೋಡಿ ಮಾರ್ಗ ಕಾಮಗಾರಿಗೆ ಸಂಬಂಧಿಸಿದಂತೆ, ನೀರಾ ಯಾರ್ಡ್ ನಲ್ಲಿ ಇಂಜಿನಿಯರಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ರೈಲುಗಳ ಸಂಚಾರದಲ್ಲಿ ನಿಯಂತ್ರಣ, ಭಾಗಶಃ ರದ್ದು ಮತ್ತು ಮಾರ್ಗ ಬದಲಾವಣೆ ಮಾಡಲಾಗುತ್ತಿದೆ.ಪರಿಣಾಮ ಬೆಂಗಳೂರು, ಮೈಸೂರು, ಹುಬ್ಭಳ್ಳಿ ಸೇರಿದಂತೆ ಕೆಲ ಪ್ರಮುಖ ರೈಲು ನಿಲ್ದಾಣದಿಂದ ಹೊರಡುವ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಬೆಂಗಳೂರಿನಿಂದ ಹೊರಡುವ ಯಾವ ರೈಲು ವ್ಯತ್ಯಯ
ದಿನಾಂಕ 06.06.2026 ಮತ್ತು 13.06.2026 ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 20686 ಕೆಎಸ್‌ಆರ್ ಬೆಂಗಳೂರು - ಗಾಂಧಿಧಾಮ್ ವೀಕ್ಷಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಲೋನಂದ್ ನಿಲ್ದಾಣದಲ್ಲಿ 25 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
06.06.2026, 09.06.2026 2 13.06.2026 0 तं ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16553 ಎಸ್‌ಎಂವಿಟಿ ಬೆಂಗಳೂರು - ಲೋಕಮಾನ್ಯ ತಿಲಕ್ ಟರ್ಮಿನಸ್ ಬೈ-ವೀಕ್ಲಿ ಎಕ್ಸ್ಪ್ರೆಸ್ ರೈಲನ್ನು ಮಿರಜ್-ಲೋನಂದ್ ಭಾಗದಲ್ಲಿ 2 ಗಂಟೆ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ಮೈಸೂರಿನಿಂದ ಹೊರಡುವ ಯಾವ ರೈಲು ವ್ಯತ್ಯಯ
ದಿನಾಂಕ 09.06.2026 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 16210 ಮೈಸೂರು ಅಜೀರ್ ಬೈ-ವೀಕ್ಲಿ ಎಕ್ಸ್ಪ್ರೆಸ್ ರೈಲನ್ನು ಸಲ್ಮಾ ನಿಲ್ದಾಣದಲ್ಲಿ 25 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ದಿನಾಂಕ 10.06.2026 ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 20694 ಕೆಎಸ್‌ಆರ್ ಬೆಂಗಳೂರು - ಜೋದ್‌ಪುರ ಬೈ-ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಸಲ್ಫಾ ನಿಲ್ದಾಣದಲ್ಲಿ 25 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ಬೆಂಗಳೂರು, ಹುಬ್ಬಳ್ಳಿಯಿಂದ ಯಾವ ರೈಲು ವ್ಯತ್ಯಯ
ದಿನಾಂಕ 14.06.2026 ರಂದು ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 16534 ಕೆಎಸ್‌ಆರ್ ಬೆಂಗಳೂರು - ಜೋದ್‌ಪುರ ವೀಕ್ಲಿ ಎಕ್ಸ್ಪ್ರೆಸ್ ರೈಲನ್ನು ಸಲ್ಮಾ ನಿಲ್ದಾಣದಲ್ಲಿ 25 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ದಿನಾಂಕ 19.06.2026 ರಂದು ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 20669 ಎಸ್‌ಎಸ್‌ಎಸ್ ಹುಬ್ಬಳ್ಳಿ - ಪುಣೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸತಾರಾ ನಿಲ್ದಾಣದಲ್ಲೇ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ. ಅಂದರೆ ಈ ರೈಲು ಸತಾರಾದಿಂದ ಪುಣೆ ನಡುವೆ ಸಂಚರಿಸುವುದಿಲ್ಲ.
ಇತರ ರೈಲು ಸಂಚಾರದಲ್ಲಿನ ವ್ಯತ್ಯಯ
ದಿನಾಂಕ 24.06.2026 ರಂದು ಹಜರತ್ ನಿಜಾಮುದ್ದೀನ್‌ನಿಂದ ಹೊರಡುವ ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದೀನ್ - ವಾಸ್ಕೋ-ಡ-ಗಾಮಾ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ನಿಯಮಿತ ಮಾರ್ಗದ ಬದಲಾಗಿ ಮಿರಜ್ - ದೌಂಡ್ - ಕುರ್ದುವಾಡಿ ಮಿರಜ್ ಮಾರ್ಗದ ಮೂಲಕ ಸಂಚರಿಸಲಿದೆ.
ಪ್ರಯಾಣಿಕರಿಗೆ ಮನವಿ
ಈ ಕುರಿತು ಸೌತ್ ವೆಸ್ಟರ್ನ್ ರೈಲ್ವೇ ಈಗಾಗಲೇ ಪ್ರಕರಣ ಹೊರಡಿಸಿದೆ. ಈ ಮೂಲಕ ರೈಲು ಪ್ರಯಾಣಿಕರು ಪ್ರಯಾಣಕ್ಕೂ ಮೊದಲೇ ಮಾರ್ಗ ಬದಲಾವಣೆ, ವಿಳಂಬ, ಭಾಗಶಃ ರೈಲು ರದ್ದುಗಳ ವೇಳಾಪಟ್ಟಿ ಗಮನಿಸಿ ಪ್ರಯಾಣ ಬೆಳೆಸಬೇಕಾಗಿ ಮನವಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

