ಭಾರತದಲ್ಲಿ ಫೇಸ್‌ಬುಕ್ ಬ್ಯಾನ್ ಆಗುತ್ತಾ? ಪ್ರಧಾನಿ ಮೋದಿ ವಿಡಿಯೋ ಡಿಲೀಟ್ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಮೆಟಾಗೆ ಇದೀಗ ಸಂಸದೀಯ ಸಮಿತಿ ಕೇವಲ 3 ದಿನದ ಡೆಡ್‌ಲೈನ್ ನೀಡಿದೆ. ಮೂರು ದಿನ ಬಳಿಕ ಫೇಸ್‌ಬುಕ್ ಬಂದ್ ಆಗುತ್ತಾ?

ನವದೆಹಲಿ (ಆ.05) ಭಾರತದಲ್ಲಿ ಮೆಟಾ ಮಾಲೀಕತ್ವದ ಫೇಸ್‌ಬುಕ್ ಅತ್ಯಂತ ಜನಪ್ರಿಯ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್. ಅತೀ ಹೆಚ್ಚು ಮಂದಿ ಫೇಸ್‌ಬುಕ್ ಬಳಕೆ ಮಾಡುತ್ತಿದ್ದಾರೆ. ಮೆಟಾಗೆ ಇರುವ ಮಾರುಕಟ್ಟೆಯಲ್ಲಿ ಭಾರತ ಪ್ರಮುಖವಾಗಿದೆ. ಇದೀಗ ಭಾರತದಲ್ಲಿ ಸಂಕಷ್ಟಗಳ ಸರಮಾಲೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿಯ ಜೆನ್‌ಝಿ ಪ್ರತಿಭಟನಾಕಾರರ ಉದ್ದೇಶಿಸಿ ಪೋಸ್ಟ್ ಮಾಡಿದ್ದ ಸೆಲ್ಫಿ ವಿಡಿಯೋವನ್ನು ಡಿಲೀಟ್ ಮಾಡಿ ಇದೀಗ ಸಬೂಬು ನೀಡುತ್ತಿದೆ. ಇದೀಗ ಸಂಸದೀಯ ಸಮತಿ ಖಡಕ್ ವಾರ್ನಿಂಗ್ ನೀಡಿದೆ. ಇಷ್ಟೇ ಅಲ್ಲ ಮೂರು ದಿನಗಳ ಕಾಲಾವಕಾಶ ನೀಡಿದೆ.

ಏನಿದು ಮೂರು ದಿನದ ಡೆಡ್‌ಲೈನ್

ಕೇಂದ್ರದ ಮಾಹಿತಿ ತಂತ್ರಜ್ಞಾನ ಹಾಗೂ ಸಂವಹನ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿ ಖಡಕ್ ವಾರ್ನಿಂಗ್ ನೀಡಿದೆ.ಸಂಸದೀಯ ಸಮಿತಿ ಮುಂದೆ ಹಾಜರಾಗಿ ಸ್ಪಷ್ಟನೆ ನೀಡುವಂತೆ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್‌ ಸಮನ್ಸ್ ನೀಡಲಾಗಿತ್ತು. ಆದರೆ ಈ ಸಮನ್ಸ್‌ಗ್ ಸ್ಪಂದಿಸದ ಕಾರಣ ಮುಂದಿನ ಮೂರು ದಿನದ ಒಳಗೆ ಭೇಷರತ್ ಕ್ಷಮೆ ಕೇಳಬೇಕು. ಇಲ್ಲದಿದ್ದರೂ ಕಾನೂನು ಕ್ರಮ ಎದುರಿಸಬೇಕು ಎಂದು ಸಮಿತಿ ಎಚ್ಚರಿಸಿದೆ. ಡಿಜಿಟಲ್ ವೇದಿಕೆಗಳಲ್ಲಿ ನಾಗರಿಕರ ಹಕ್ಕುಗಳ ರಕ್ಷಣೆ, ದ್ವೇಷದ ಭಾಷಣ ಹಾಗೂ ಬಳಕೆದಾರರ ಡೇಟಾ ಭದ್ರತೆಗೆ ಸಂಬಂಧಿಸಿದಂತೆ ವಿವರಣೆ ನೀಡಲು ಮೆಟಾ ಮುಖ್ಯಸ್ಥರಿಗೆ ಸಮನ್ಸ್ ಕಳುಹಿಸಲಾಗಿತ್ತು.

ಭಾರತದ ಮೆಟಾ ಮುಖ್ಯಸ್ಥರು ಸಂಸದೀಯ ಸ್ಥಾಯಿ ಸಮಿತಿ ಮುಂದೆ ಹಾಜರಾಗಿ ಉತ್ತರ ನೀಡಿದ್ದರು. ಆದರೆ ಸಂಸದೀಯ ಸ್ಥಾಯಿ ಸಮಿತಿಯ ಹಲವು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಪ್ರಮುಖ ನೀತಿ ನಿರ್ಧಾರಗಳು, ಕಂಪನಿಯ ಜಾಗತಿಕ ನಿಯಮಗಳ ಕುರಿತು ಮಾತನಾಡಲು ಮೆಟಾ ಭಾರತದ ಮುಖ್ಯಸ್ಥರಿಗೆ ಅಧಿಕಾರ ಇರಲಿಲ್ಲ. ಹೀಗಾಗಿ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್‌ಗೆ ಸಮನ್ಸ್ ನೀಡಲಾಗಿತ್ತು. ಆದರೆ ಸಮನ್ಸ್ ನೀಡಿ ದಿನಗಳು ಉರುಳಿದರೂ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್‌ನಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿರಲಿಲ್ಲ. ಇದರಿಂದ ಗರಂ ಆಗಿರುವ ಸ್ಥಾಯಿ ಸಮಿತಿ, ಮೂರು ದಿನಗಳಲ್ಲಿ ಭೇಷರತ್ ಕ್ಷಮೆ ಯಾಚಿಸಲು ಸೂಚಿಸಿದೆ.

ಮೆಟಾ ಮೇಲೆ ಕಾನೂನು ಕ್ರಮ

ಮೆಟಾದ ನಿರ್ಲಕ್ಷ್ಯ ಧೋರಣೆ ಭಾರತದ ಸಂಸತ್ತು ಹಾಗೂ ಸಂಸದೀಯ ಹಕ್ಕುಗಳಿಗೆ ಮಾಡಿದ ಅಪಚಾರ ಎಂದು ಸಂಸದೀಯ ಸ್ಥಾಯಿ ಸಮಿತಿ ಸದಸ್ಯರು ಆಕ್ರೋಶ ಹೊರಹಾಕಿದ್ದಾರೆ. ಮೂರು ದಿನಗಳ ಒಳಗೆ ಮಾರ್ಕ್ ಜುಕರ್‌ಬರ್ಗ್ ಲಿಖಿತವಾಗಿ ಕ್ಷಮೆ ಕೇಳಿ ಪತ್ರ ಬರೆಯಬೇಕು. ಸಂಸದೀಯ ಸಮಿತಿಯ ಪ್ರಶ್ನೆಗಳಿಗೆ ವಿವರವಾಗಿ ಉತ್ತರ ನೀಡಬೇಕು. ಸಂಸದೀಯ ಸಮಿತಿ ನೀಡಿದ ಎಚ್ಚರಿಕೆಯನ್ನು ಕಡೆಗಣಿಸಿದರೆ ಕಾನೂನು ಕ್ರಮ ಎದುರಿಸೇಕಾಗುತ್ತದೆ ಎಂದಿದೆ.

ಮೆಟಾ ಕ್ಷಮೆ ಕೇಳದಿದ್ದರೆ ಬ್ಯಾನ್ ಆಗುತ್ತಾ?

ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಕ್ಷಮೆ ಕೇಳದಿದ್ದರೆ ಭಾರತದಲ್ಲಿ ಫೇಸ್‌ಬುಕ್ ಬ್ಯಾನ್ ಆಗುತ್ತಾ? ಬ್ಯಾನ್ ಆಗುವ ಸಾಧ್ಯತೆಗಳು ಕಡಿಮೆ . ಆದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಸದ್ಯ ಮೂರು ದಿನಗಳ ಕಾಲವಕಾಶ ನೀಡಲಾಗಿದೆ.