ಅಣ್ವಸ್ತ್ರ ಹೊಂದಿರುವ ರಾಷ್ಟ್ರದ ಮೇಲೆ ದಾಳಿ ಮಾಡಿದ ಮೊದಲ ದೇಶ ಭಾರತ
ಅಣ್ವಸ್ತ್ರ ಹೊಂದಿರುವ ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡಿ, ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದ ಪ್ರಮುಖ ವಾಯುನೆಲೆಗಳಾದ ನೂರ್ ಖಾನ್ ಮತ್ತು ರಾವಲ್ಪಿಂಡಿಯನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿತು. ಕದನವಿರಾಮ ಘೋಷಣೆಯಾದ ನಂತರವೂ ಪಾಕಿಸ್ತಾನದಿಂದ ಭಾರತದ ಮೇಲೆ ದಾಳಿ ಮುಂದುವರೆದಿದೆ.

ಅಣ್ವಸ್ತ್ರ ಹೊಂದಿರುವ ದೇಶವೊಂದರ ಮೇಲೆ ಯಾವ ದೇಶವೂ ದಾಳಿ ಮಾಡಲು ಹಿಂಜರಿಯುತ್ತವೆ. ಆದ್ರೆ ಭಾರತ ಈ ಮಾತನ್ನು ಸುಳ್ಳಾಗಿಸಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುವ ಪಾಕಿಸ್ತಾನದ ಬುಡವನ್ನೇ ಅಲ್ಲಾಡಿಸಿದೆ. ಭಯೋತ್ಪಾದಕ ಉಗ್ರರ ಅಡಗುತಾಣದ ಜೊತೆಯಲ್ಲಿ ಪಾಕಿಸ್ತಾನದ ವಾಯುನೆಲೆಗಳ ಮೇಲೆಯೂ ಭಾರತ ದಾಳಿ ನಡೆಸಿದೆ. ಈ ಮೂಲಕ ಅನಾವಶ್ಯಕವಾಗಿ ಕಾಲ್ಕೆರೆದು ಜಗಳಕ್ಕೆ ಬರೋರನ್ನು ಬಿಡೋದಿಲ್ಲ ಎಂಬ ಸಂದೇಶವನ್ನು ವಿಶ್ವಕ್ಕೆ ಭಾರತ ರವಾನಿಸಿದೆ.
ತನ್ನ ಹತ್ತಿರ ಅಣ್ವಸ್ತ್ರ ಇಟ್ಕೊಂಡಿರುವ ಪಾಕಿಸ್ತಾನ, ಭಾರತದ ಮೇಲೆ ಇದನ್ನು ಪ್ರಯೋಗಿಸುವುದಾಗಿ ಪದೇ ಪದೇ ಬೆದರಿಕೆ ಹಾಕುತ್ತಿರುತ್ತದೆ. ಪಾಕಿಸ್ತಾನದ ಪ್ರಮುಖ ವಾಯುನೆಲೆಗಳಾದ ನೂರ್ ಖಾನ್, ರಾವಲ್ಫಿಂಡಿಯವರೆಗೂ ಭಾರತದ ವಾಯುಸೇನೆ ತಲುಪಿದೆ. ನೂರ್ ಖಾನ್ ವಾಯುನೆಲೆಯು ಪಾಕಿಸ್ತಾನದ ವಾಯು ಇಂಧನ ತುಂಬುವ ಸಾಮರ್ಥ್ಯ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ನೋಡಿಕೊಳ್ಳುವ ಕಾರ್ಯತಂತ್ರದ ಯೋಜನೆ ವಿಭಾಗಕ್ಕೆ ಬಹಳ ಹತ್ತಿರದಲ್ಲಿದೆ.
ನೂರ್ ಖಾನ್ ವಾಯುನೆಲೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ರಾವಲ್ಪಿಂಡಿಯ ಚಕ್ಲಾಲಾದಲ್ಲಿದೆ. ಇದು ಪಾಕಿಸ್ತಾನದ ವಾಯುನೆಲೆಗಳಲ್ಲಿ ಅತ್ಯಂತ ಪ್ರಮುಖವಾಗಿದೆ ಮತ್ತು ಪಾಕಿಸ್ತಾನದ ಪ್ರಮುಖ ವಿಮಾನ ಸಂಚಾರದ ನೆಲೆಯಾಗಿದೆ ಮತ್ತು ಇದನ್ನು ಲಾಜಿಸ್ಟಿಕಲ್ ಮತ್ತು ಕಾರ್ಯತಂತ್ರದ ಏರ್‌ಲಿಫ್ಟ್ ಕಾರ್ಯಾಚರಣೆಗಳಿಗೆ ಬಳಸಲಾಗುತ್ತದೆ. ಈ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿತ್ತು.
zತಮ್ಮ ಪ್ರಮುಖ ವಾಯುನೆಲೆಗಳನ್ನ ಭಾರತದ ಗುರಿಯಾಗಿಸಿದ ಕೂಡಲೇ ಹೆದರಿ ಅಮೆರಿಕದ ಮುಂದೆ ಹೋಗಿ ಕದನ ವಿರಾಮಕ್ಕಾಗಿ ಅಂಗಲಾಚಿತ್ತು. ಅಲ್ಲಿಂದ ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನವಿರಾಮ ಸಂಬಂಧ ಚರ್ಚೆ ನಡೆದಿತ್ತು. ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ, ಕದನವಿರಾಮದ ಮಾಹಿತಿ ನೀಡಿದ್ದರು. ಕದನವಿರಾಮ ಘೋಷಣೆಯಾದ ನಾಲ್ಕು ಗಂಟೆಯಲ್ಲಿ ಪಾಕಿಸ್ತಾನದಿಂದ ಭಾರತದ ಮೇಲೆ ದಾಳಿ ನಡೆದಿತ್ತು.
Nuclear war
ಉದಾಹರಣೆಗೆ ಲಾಹೋರ್ ನಗರದಲ್ಲಿ ಕೇವಲ ಒಂದು ಪರಮಾಣು ಬಾಂಬ್ ಸ್ಫೋಟಗೊಂಡರೆ ಸಾಕು, ಇಡೀ ಲಾಹೋರ್ ನಗರ ಬೂದಿಯಾಗುತ್ತದೆ. ಸ್ಫೋಟದ ಸಮಯದಲ್ಲಿ ಗಾಮಾ ಮತ್ತು ನ್ಯೂಟ್ರಾನ್ ವಿಕಿರಣ ಬಿಡುಗಡೆಯಾಗುತ್ತದೆ. ಬದುಕುಳಿದವರಲ್ಲಿ ಇದು ವಿಕಿರಣ ಕಾಯಿಲೆಯಂತಹ ತಕ್ಷಣದ ಆರೋಗ್ಯ ಪರಿಣಾಮಗಳನ್ನು ಉಂಟುಮಾಡಬಹುದು.