MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಜೆನ್ ಝೀ ಆಯ್ತು, ಈಗ ಜೆನ್‌ ಆಲ್ಫಾಗಳಿಂದಲೂ ಪ್ರತಿಭಟನೆ!

ಜೆನ್ ಝೀ ಆಯ್ತು, ಈಗ ಜೆನ್‌ ಆಲ್ಫಾಗಳಿಂದಲೂ ಪ್ರತಿಭಟನೆ!

ಜೆನ್‌ ಝೀ ಪ್ರತಿಭಟನೆಗಳ ನಂತರ, ಇದೀಗ ಜೆನ್ ಆಲ್ಫಾ ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಮತ್ತು ರಾಜಸ್ಥಾನದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಕುಡಿಯುವ ನೀರು, ಮತ್ತು ಶೌಚಾಲಯಗಳಂತಹ ಮೂಲಭೂತ ಸೌಲಭ್ಯಗಳಿಗಾಗಿ ಧರಣಿ ನಡೆಸುತ್ತಿದ್ದಾರೆ.

1 Min read
Author : Santosh Naik
Published : Aug 01 2026, 08:12 AM IST
Share this Photo Gallery
  • FB
  • TW
  • Linkdin
  • Whatsapp
15
ಜೆನ್ ಆಲ್ಫಾ ವಿದ್ಯಾರ್ಥಿಗಳಿಂದಲೂ ಪ್ರತಿಭಟನೆ
Image Credit : X

ಜೆನ್ ಆಲ್ಫಾ ವಿದ್ಯಾರ್ಥಿಗಳಿಂದಲೂ ಪ್ರತಿಭಟನೆ

ಇತ್ತೀಚೆಗೆ ಜೆನ್‌ ಝೀಗಳು ನಡೆಸಿದ ಪ್ರತಿಭಟನೆ ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆಗೆ ನಾಂದಿ ಹಾಡಿದ ಬೆನ್ನಲ್ಲೇ, ಈ ಪ್ರತಿಭಟನೆಯ ಪ್ರಭಾವ ಇದೀಗ ಜೆನ್ ಆಲ್ಫಾ ವಿದ್ಯಾರ್ಥಿಗಳಿಗೂ ವಿಸ್ತರಿಸಿದೆ. ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನದ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯ ವಿರುದ್ಧ ಚಿಕ್ಕ ವಿದ್ಯಾರ್ಥಿಗಳು ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಶಿಕ್ಷಕರ ಕೊರತೆ, ಕುಡಿಯುವ ನೀರು, ಟಾಯ್ಲೆಟ್‌ಗಳು, ಫ್ಯಾನ್‌ಗಳು ಮತ್ತು ಆಸನಗಳ ಕೊರತೆಯಂತಹ ಸಮಸ್ಯೆಗಳಿಗೆ ಪರಿಹಾರ ಬೇಡಿ, ಸಾವಿರಾರು ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
1500 ವಿದ್ಯಾರ್ಥಿಗಳ ಧರಣಿ
Image Credit : X

1500 ವಿದ್ಯಾರ್ಥಿಗಳ ಧರಣಿ

ಉತ್ತರ ಪ್ರದೇಶದ ಫತೇಪುರದ ಸರ್ವೋದಯ ಇಂಟರ್ ಕಾಲೇಜ್‌ನಲ್ಲಿ ಸುಮಾರು 1500 ವಿದ್ಯಾರ್ಥಿಗಳು (6-12ನೇ ತರಗತಿ) ಮಂಗಳವಾರ 6 ಗಂಟೆಗಳ ಕಾಲ ಧರಣಿ ನಡೆಸಿದ್ದಾರೆ. ಶಾಲೆಯಲ್ಲಿ ಫ್ಯಾನ್‌ಗಳು ಮತ್ತು ಬೆಂಚುಗಳ ಕೊರತೆ, ಅಸ್ವಚ್ಛ ಟಾಯ್ಲೆಟ್‌ಗಳು, ಕುಡಿಯುವ ನೀರಿನ ಕೊರತೆ ವಿರುದ್ಧ ಪ್ರತಿಭಟಿಸಿದ್ದಾರೆ.

Related Articles

Related image1
ನೇಪಾಳದ ಹೋಟೆಲ್‌ಗಳು ಜೆನ್‌ಝೀ ಸಿಟ್ಟಿಗೆ ಭಸ್ಮ: ₹2500 ಕೋಟಿ ನಷ್ಟ!
Related image2
Now Playing
ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
35
ತಕ್ಷಣವೇ ಲೋಪ ಸರಿಪಡಿಸಿದ ಅಧಿಕಾರಿಗಳು
Image Credit : X

ತಕ್ಷಣವೇ ಲೋಪ ಸರಿಪಡಿಸಿದ ಅಧಿಕಾರಿಗಳು

ತಕ್ಷಣವೇ ಅಧಿಕಾರಿಗಳು ಫ್ಯಾನ್‌ಗಳನ್ನು ಅಳವಡಿಸಿದ್ದಾರೆ. ಪ್ರತಿ ತರಗತಿಗೆ 4 ಫ್ಯಾನ್‌ಗಳು, ಆರ್‌ಒ ನೀರು, ಹೊಸ ಟಾಯ್ಲೆಟ್‌ಗಳು, ಬೆಂಚುಗಳು ಮತ್ತು ಇತರ ಸೌಲಭ್ಯಗಳನ್ನು ಒದಗಿಸುವುದಾಗಿ ಆಡಳಿತ ಒಪ್ಪಿಕೊಂಡಿದೆ.

45
ಶಿಕ್ಷಕರಿಗಾಗಿ ಪ್ರತಿಭಟನೆ
Image Credit : X

ಶಿಕ್ಷಕರಿಗಾಗಿ ಪ್ರತಿಭಟನೆ

ರಾಜಸ್ಥಾನದ ಬಾರ್ಮರ್ ಮತ್ತು ಜಲೋರ್‌ನಲ್ಲಿ ವಿದ್ಯಾರ್ಥಿಗಳು ಶಾಲೆಯ ಗೇಟ್‌ಗಳನ್ನು ಹಾಕಿ ಧರಣಿ ನಡೆಸಿದ್ದಾರೆ. ಶಿಕ್ಷಕರ ಹುದ್ದೆಗಳು ಖಾಲಿಯಾಗಿರುವುದರಿಂದ ಹಲವು ವಿಷಯಗಳಿಗೆ ಶಿಕ್ಷಕರಿಲ್ಲ, ತಕ್ಷಣ ಶಿಕ್ಷಕರನ್ನು ನಿಯೋಜಿಸುವಂತೆ ಬೇಡಿಕೆ ಇಟ್ಟಿದ್ದಾರೆ.

55
ಬಿಸಿಯೂಟಕ್ಕಾಗಿ ಮುಷ್ಕರ
Image Credit : X

ಬಿಸಿಯೂಟಕ್ಕಾಗಿ ಮುಷ್ಕರ

ಬಿಹಾರದ ಗಯಾ ಜಿಲ್ಲೆಯ ಸಿಮುವಾರ ಶಾಲೆಯ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಟಿಕಾರಿ ಉಪ ಜಿಲ್ಲಾ ಕಚೇರಿಯ ಮುಂದೆ ಮುಷ್ಕರ ನಡೆಸಿದ್ದಾರೆ. ಶಾಲೆಯಿಂದ 4 ಕಿ.ಮೀ ದೂರದಲ್ಲಿನ ಉಪ ಜಿಲ್ಲಾ ಕಚೇರಿಗೆ ಮೆರವಣಿಗೆ ತೆರಳಿದ ವಿದ್ಯಾರ್ಥಿಗಳು ಮಧ್ಯಾಹ್ನದ ಊಟದ ಗುಣಮಟ್ಟ ಕಳಪೆಯಾಗಿರುವುದು, ಹ್ಯಾಂಡ್‌ ಪಂಪು ಹಾಳಾಗಿರುವುದು, ಅಸ್ವಚ್ಛ ಟಾಯ್ಲೆಟ್‌ಗಳು ಮತ್ತು ಕ್ರೀಡಾ ಸಾಮಗ್ರಿಗಳ ಕೊರತೆಯನ್ನು ಎತ್ತಿ ತೋರಿಸಿದ್ದಾರೆ. ಉಪ ಜಿಲ್ಲಾಧಿಕಾರಿ 5 ದಿನಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಶಾಲೆ
ಪ್ರತಿಭಟನೆ
ಉತ್ತರ ಪ್ರದೇಶ
ಬಿಹಾರ
ರಾಜಸ್ಥಾನ
ಭಾರತ ಸುದ್ದಿ
ಸುದ್ದಿ
Latest Videos
Recommended Stories
Recommended image1
National News Live: ಜೆನ್ ಝೀ ಆಯ್ತು, ಈಗ ಜೆನ್‌ ಆಲ್ಫಾಗಳಿಂದಲೂ ಪ್ರತಿಭಟನೆ!
Recommended image2
ಮಕ್ಕಳಲ್ಲವೇ.. ಮಕ್ಕಳಿಂದ ತಪ್ಪಾಗುತ್ತೆ ಅವರನ್ನು ಕೋರ್ಟು ಕಚೇರಿ ಅಲಿಸೋದು ಬೇಡ! ಭಾವುಕ ಕರೆ ಕೊಟ್ಟ ಮೋದಿ!
Recommended image3
Bank Holidays August: ಆಗಸ್ಟ್‌ನಲ್ಲಿ 14 ದಿನ ಬ್ಯಾಂಕ್‌ ಬಂದ್‌, ಹಣಕಾಸು ಕೆಲಸಕ್ಕೂ ಮುನ್ನ ರಜಾ ದಿನಗಳ ಪಟ್ಟಿ ನೋಡಿ
Related Stories
Recommended image1
ನೇಪಾಳದ ಹೋಟೆಲ್‌ಗಳು ಜೆನ್‌ಝೀ ಸಿಟ್ಟಿಗೆ ಭಸ್ಮ: ₹2500 ಕೋಟಿ ನಷ್ಟ!
Recommended image2
Now Playing
ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved