MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಜಪಾನ್‌ನ ಶೇ.80ಕ್ಕೂ ಹೆಚ್ಚು ದೇವರುಗಳ ಮೂಲ ಭಾರತದ್ದು; ಮಾಜಿ ರಾಯಭಾರಿ ಯಸುಕುನಿ ಹೇಳಿಕೆ ವೈರಲ್

ಜಪಾನ್‌ನ ಶೇ.80ಕ್ಕೂ ಹೆಚ್ಚು ದೇವರುಗಳ ಮೂಲ ಭಾರತದ್ದು; ಮಾಜಿ ರಾಯಭಾರಿ ಯಸುಕುನಿ ಹೇಳಿಕೆ ವೈರಲ್

Yasukuni Enoki: ಇಂದು ಜಪಾನ್‌ನಲ್ಲಿ ಪೂಜಿಸಲ್ಪಡುವ ಶೇ.80ಕ್ಕೂ ಹೆಚ್ಚು ದೇವತೆಗಳ ಮೂಲ ಭಾರತದ್ದು. ಬೌದ್ಧ ಧರ್ಮದ ಪ್ರಸಾರದ ಮೂಲಕ ಭಾರತೀಯ ಪರಂಪರೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ಭಾರತದ್ದು; ಮಾಜಿ ರಾಯಭಾರಿ ಯಸುಕುನಿ ಹೇಳಿಕೆ ವೈರಲ್ ಆಗಿದೆ. ಪೂರ್ಣ ಓದಿ.

2 Min read
Author : Ravi Janekal
Published : Aug 23 2026, 11:16 AM IST
Share this Photo Gallery
  • FB
  • TW
  • Linkdin
  • Whatsapp
18
ಜಪಾನ್‌ನ ಶೇ.80ಕ್ಕೂ ಹೆಚ್ಚು ದೇವರುಗಳ ಮೂಲ ಭಾರತದ್ದು
Image Credit : Asianet News

ಜಪಾನ್‌ನ ಶೇ.80ಕ್ಕೂ ಹೆಚ್ಚು ದೇವರುಗಳ ಮೂಲ ಭಾರತದ್ದು

ಭಾರತ ಮತ್ತು ಜಪಾನ್‌ ನಡುವಿನ ಸಂಬಂಧ ರಾಜತಾಂತ್ರಿಕ ಸಂಬಂಧಕ್ಕಿಂತ ಹಳೆಯದು. ಅಂತಹ ಶತಮಾನಗಳ ಹಿಂದಿನ ಸಾಂಸ್ಕೃತಿಕ ಸಂಬಂಧದ ಬಗ್ಗೆ ಭಾರತದಲ್ಲಿನ ಜಪಾನ್‌ನ ಮಾಜಿ ರಾಯಭಾರಿ ಯಸುಕುನಿ ಎನೋಕಿ ಇತ್ತೀಚೆಗೆ ನೀಡಿರುವ ಹೇಳಿಕೆಯಿಂದ ಗಮನ ಸೆಳೆದಿದ್ದಾರೆ. ಅವರು ಹೇಳಿದ್ದೇನೆಂದರೆ ಇಂದು ಜಪಾನ್‌ನಲ್ಲಿ ಪೂಜಿಸಲ್ಪಡುವ ಶೇ.80ಕ್ಕೂ ಹೆಚ್ಚು ದೇವತೆಗಳ ಮೂಲ ಭಾರತದ್ದು. ಬೌದ್ಧ ಧರ್ಮದ ಪ್ರಸಾರದ ಮೂಲಕ ಭಾರತೀಯ ಪರಂಪರೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಯಸುಕುನಿ ಎನೋಕಿ ಅವರು 2004ರಿಂದ 2007ರವರೆಗೆ ಭಾರತದಲ್ಲಿನ ಜಪಾನ್‌ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಜಪಾನ್‌ನ ಶೇ.80ಕ್ಕೂ ಹೆಚ್ಚು ದೇವರುಗಳ ಮೂಲ ಭಾರತದ್ದು
Image Credit : Asianet News

ಜಪಾನ್‌ನ ಶೇ.80ಕ್ಕೂ ಹೆಚ್ಚು ದೇವರುಗಳ ಮೂಲ ಭಾರತದ್ದು

ಹಲವು ಶತಮಾನಗಳ ಹಿಂದೆಯೇ ಬೌದ್ಧ ಧರ್ಮದ ಗ್ರಂಥಗಳು, ಸಾಂಸ್ಕೃತಿಕ ವಿನಿಮಯ ಮತ್ತು ರೇಷ್ಮೆ ಮಾರ್ಗದ ಮೂಲಕ ಭಾರತದ ಹಲವು ಹಿಂದೂ ದೇವತೆಗಳ ಆರಾಧನಾ ಪರಂಪರೆ ಪೂರ್ವ ಏಷ್ಯಾದ ದೇಶಗಳಿಗೆ ಹರಡಿತು. ಕಾಲಕ್ರಮೇಣ ಈ ದೇವತೆಗಳು ಜಪಾನ್‌ನಲ್ಲಿ ವಿಭಿನ್ನ ಹೆಸರುಗಳು ಮತ್ತು ಸ್ಥಳೀಯ ರೂಪಗಳಲ್ಲಿ ಪರಿಚಿತರಾದರು.

Related Articles

Related image1
ಜಪಾನ್ ವಿದ್ಯಾರ್ಥಿಗಳ ಜೊತೆ ಜೆನ್‌ಝಿ ಸ್ಟೈಲ್‌ನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸೆಲ್ಫಿ ವೈರಲ್
Related image2
ಸಿಎಂ ಹೆಗಲ ಮೇಲೆ ಕೈ ಹಾಕಿ ಜಪಾನ್ ವಿದ್ಯಾರ್ಥಿಗಳು ಸೆಲ್ಫಿ ಫೋಟೋ! ವೈರಲ್ ವಿಡಿಯೋ
38
ಸರಸ್ವತಿ ಜಪಾನ್‌ನಲ್ಲಿ ಬೆಂಜೈಟೆನ್!
Image Credit : Asianet News

ಸರಸ್ವತಿ ಜಪಾನ್‌ನಲ್ಲಿ ಬೆಂಜೈಟೆನ್!

ಉದಾಹರಣೆಗೆ, ಹಿಂದೂ ದೇವತೆ ಸರಸ್ವತಿಯನ್ನು ಜಪಾನ್‌ನಲ್ಲಿ ಬೆಂಜೈಟೆನ್‌ (Benzaiten) ಎಂದು ಪೂಜಿಸಲಾಗುತ್ತದೆ. ಅದೇ ರೀತಿ ಗಣೇಶನನ್ನು ಕಂಗಿಟೆನ್‌ (Kangiten), ಇಂದ್ರನನ್ನು ತೈಶಕುಟೆನ್‌ (Taishakuten) ಮತ್ತು ಬ್ರಹ್ಮನನ್ನು ಬೊಂಟೆನ್‌ (Bonten) ಎಂದು ಕರೆಯಲಾಗುತ್ತದೆ.

ಜಪಾನ್‌ನ ನಾಲ್ವರು ಸ್ವರ್ಗದ ದೇವತೆಗಳ (Four Heavenly Kings) ಪರಂಪರೆಯೂ ಹಿಂದೂ ಮತ್ತು ಬೌದ್ಧ ಧಾರ್ಮಿಕ ನಂಬಿಕೆಗಳೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತದೆ.

48
ಭಾರತ-ಜಪಾನ್ ಸಂಬಂಧ ಶತಮಾನಗಳ ಹಿಂದಿನದು
Image Credit : Asianet News

ಭಾರತ-ಜಪಾನ್ ಸಂಬಂಧ ಶತಮಾನಗಳ ಹಿಂದಿನದು

ಕಾಲ ಕಳೆದಂತೆ ಈ ದೇವತೆಗಳು ಜಪಾನ್‌ನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಭಾಗವಾಗಿದ್ದಾರೆ. ಭಾರತ ಮತ್ತು ಜಪಾನ್‌ ನಡುವಿನ ಶತಮಾನಗಳಷ್ಟು ಹಳೆಯ ನಾಗರಿಕತೆಯ ನಂಟಿನ ಕುರಿತು ಮಾತನಾಡಿದ ಎನೋಕಿ, ಈ ಪರಂಪರೆಗಳು ಜಪಾನ್‌ ಮೇಲೆ ಭಾರತೀಯ ತತ್ವಶಾಸ್ತ್ರ, ಬೌದ್ಧ ಧರ್ಮ ಮತ್ತು ಆಧ್ಯಾತ್ಮಿಕತೆಯ ಆಳವಾದ ಪ್ರಭಾವವನ್ನು ತೋರಿಸುತ್ತವೆ ಎಂದು ಹೇಳಿದ್ದಾರೆ.

58
ರಾಜತಾಂತ್ರಿಕ ಸಂಬಂಧಕ್ಕಿಂತಲೂ ಹಳೆಯ ನಂಟು
Image Credit : Asianet News

ರಾಜತಾಂತ್ರಿಕ ಸಂಬಂಧಕ್ಕಿಂತಲೂ ಹಳೆಯ ನಂಟು

ಭಾರತ ಮತ್ತು ಜಪಾನ್‌ ನಡುವಿನ ಸಂಬಂಧ ಕೇವಲ ಇಂದಿನ ರಾಜತಾಂತ್ರಿಕ, ಆರ್ಥಿಕ ಹಾಗೂ ತಂತ್ರಜ್ಞಾನ ಸಹಕಾರಕ್ಕೆ ಸೀಮಿತವಾಗಿಲ್ಲ. ಎರಡೂ ದೇಶಗಳ ನಡುವೆ ಶತಮಾನಗಳ ಹಿಂದಿನಿಂದಲೂ ತತ್ವಶಾಸ್ತ್ರ, ಆಧ್ಯಾತ್ಮಿಕತೆ, ಕಲೆ ಮತ್ತು ಧಾರ್ಮಿಕ ಪರಂಪರೆಗಳ ಮೂಲಕ ಆಳವಾದ ನಂಟಿದೆ.

68
ಸಂಸ್ಕೃತಿಗಳು ಪರಸ್ಪರ ಬೆರೆತು ಬೆಳೆದಿವೆ
Image Credit : Asianet News

ಸಂಸ್ಕೃತಿಗಳು ಪರಸ್ಪರ ಬೆರೆತು ಬೆಳೆದಿವೆ

ಯಾವುದೇ ಸಂಸ್ಕೃತಿ ಸಂಪೂರ್ಣವಾಗಿ ಪ್ರತ್ಯೇಕವಾಗಿ ಬೆಳೆಯುವುದಿಲ್ಲ. ಒಂದು ದೇಶದ ವಿಚಾರಗಳು, ನಂಬಿಕೆಗಳು ಮತ್ತು ಪರಂಪರೆಗಳು ಮತ್ತೊಂದು ದೇಶದ ಮೇಲೆ ಪ್ರಭಾವ ಬೀರುತ್ತವೆ. ನಂತರ ಅವು ಅಲ್ಲಿನ ಸ್ಥಳೀಯ ಸಂಪ್ರದಾಯಗಳಿಗೆ ಹೊಂದಿಕೊಂಡು ಹೊಸ ರೂಪ ಪಡೆದುಕೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಎನೋಕಿ ಅವರ ಹೇಳಿಕೆ ಏಷ್ಯಾದಾದ್ಯಂತ ಭಾರತದ ಪ್ರಾಚೀನ ಸಾಂಸ್ಕೃತಿಕ ಪ್ರಭಾವದ ಬಗ್ಗೆ ಆಸಕ್ತಿ ಹೊಂದಿರುವವರ ಗಮನ ಸೆಳೆದಿದೆ.

78
ಪುರಾತನ ಪರಂಪರೆ ಮತ್ತು ಆಧುನಿಕ ಸಹಕಾರ
Image Credit : Asianet News

ಪುರಾತನ ಪರಂಪರೆ ಮತ್ತು ಆಧುನಿಕ ಸಹಕಾರ

ಭಾರತ–ಜಪಾನ್‌ ಸಂಬಂಧವು ಪುರಾತನ ಸಾಂಸ್ಕೃತಿಕ ಪರಂಪರೆ ಮತ್ತು ಆಧುನಿಕ ಸಹಕಾರದ ಅಪರೂಪದ ಸಂಯೋಜನೆಯಾಗಿದೆ. ಎರಡೂ ದೇಶಗಳ ನಡುವಿನ ಈ ಹಂಚಿಕೊಂಡಿರುವ ಪರಂಪರೆಯನ್ನು ತಿಳಿದುಕೊಳ್ಳುವುದು ಪರಸ್ಪರ ಗೌರವ, ತಿಳುವಳಿಕೆ ಮತ್ತು ಸ್ನೇಹವನ್ನು ಮತ್ತಷ್ಟು ಬಲಪಡಿಸಲು ಸಹಾಯ ಮಾಡಬಹುದು.

88
ಜಪಾನ್ ಮಾಜಿ ರಾಯಭಾರಿ ಹೇಳಿಕೆ ವೈರಲ್
Image Credit : Asianet News

ಜಪಾನ್ ಮಾಜಿ ರಾಯಭಾರಿ ಹೇಳಿಕೆ ವೈರಲ್

ಯಸುಕುನಿ ಅವರ ಈ ಹೇಳಿಕೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು. ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಭಾರತ
ಜಪಾನ್
 
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
2nd TEST • SA vs AUS
Result
SASA
425/9
AUSAUS
99 & 295
SA beat AUS by 31 runs
Schedule ›
5th T20 • IND vs WI
abandoned
INDIND
118/5
WIWI
-
Match abandoned
Schedule ›
3rd T20 • NZ vs IND 2026
NZNZ
Tue, 27 Oct, 2026
INDIND
12:30 pm
Match yet to begin.
Schedule ›
3rd TEST • SA vs AUS
SASA
Tue, 27 Oct, 2026
AUSAUS
02:00 pm
Match yet to begin.
Schedule ›
4th T20 • NZ vs IND 2026
NZNZ
Fri, 30 Oct, 2026
INDIND
12:30 pm
Match yet to begin.
Schedule ›
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›

Latest Videos
Recommended Stories
Recommended image1
Bank Loan: ಸಾಲ ಪಡೆಯುವಾಗ ಆತುರ, ಎಲ್ಲರೂ ಮಾಡುವ ಐದು ದೊಡ್ಡ ತಪ್ಪುಗಳು
Recommended image2
6 ತಿಂಗಳ ಪ್ರಯಾಣದ ಬಳಿಕ ಕೊನೆಗೂ ಗುರಿ ತಲುಪಿದ 200 ಟನ್‌ ತೂಕ ಹೊತ್ತಿದ್ದ 308 ಚಕ್ರದ ಬಾಹುಬಲಿ ಟ್ರಕ್‌
Recommended image3
ಡಾರ್ಕ್‌ ಚಾಕೊಲೇಟ್‌ ಸಿಕ್ತು ಅಂತಾ ಕಣ್ಮುಚ್ಚಿ ಬಾಯಿಗೆ ಹಾಕಿದ್ರೆ ಅಷ್ಟೇ ಕತೆ, ಚೂರು ಯಾಮಾರಿದ್ರೂ ಜೀವಕ್ಕೆ ಕಾದಿದೆ ಅಪಾಯ
Related Stories
Recommended image1
ಜಪಾನ್ ವಿದ್ಯಾರ್ಥಿಗಳ ಜೊತೆ ಜೆನ್‌ಝಿ ಸ್ಟೈಲ್‌ನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸೆಲ್ಫಿ ವೈರಲ್
Recommended image2
ಸಿಎಂ ಹೆಗಲ ಮೇಲೆ ಕೈ ಹಾಕಿ ಜಪಾನ್ ವಿದ್ಯಾರ್ಥಿಗಳು ಸೆಲ್ಫಿ ಫೋಟೋ! ವೈರಲ್ ವಿಡಿಯೋ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved