ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಕ್ನೋದಲ್ಲಿ ಜಪಾನ್ ವಿದ್ಯಾರ್ಥಿಗಳನ್ನು ಭೇಟಿಯಾದರು. ಈ ಸಭೆಯು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಗೆಯ ಕ್ಷಣಗಳಿಂದ ಕೂಡಿತ್ತು, ವಿದ್ಯಾರ್ಥಿಗಳು ಯೋಗಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಜಪಾನ್ ವಿದ್ಯಾರ್ಥಿಗಳ ನಡುವಿನ ಒಂದು ಸಭೆ, ನಗು ಖುಷಿಯ ಕ್ಷಣಗಳಿಗೆ ಸಾಕ್ಷಿಯಾಯಿತು. ಲಕ್ನೋದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಯೋಗಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ಯುಪಿ-ಜಪಾನ್ ಹೂಡಿಕೆ ಸಭೆ

ಶುಕ್ರವಾರ, ಆಗಸ್ಟ್ 21 ರಂದು ಲಕ್ನೋದಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ 'ಯುಪಿ ಜಪಾನ್ ಹೂಡಿಕೆ ಸಭೆ'ಯ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು. 'ಭವಿಷ್ಯದೊಂದಿಗೆ ಸಂವಾದ' (A Dialogue with the Future) ಹೆಸರಿನ ಈ ಕಾರ್ಯಕ್ರಮದಲ್ಲಿ 13 ಜಪಾನ್ ವಿದ್ಯಾರ್ಥಿಗಳು ಮತ್ತು ಅವರ ಶಿಕ್ಷಕರು ಸ್ಥಳೀಯ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.

ಸೆಲ್ಫಿ ವೇಳೆ ಸಿಎಂ ಹೆಗಲ ಮೇಲೆ ಕೈ, ಯೋಗಿ ಫುಲ್ ಖುಷಿ

ಯೋಗಿ ಆದಿತ್ಯನಾಥ್ ಅವರು ಜಪಾನೀಸ್ ಭಾಷೆಯಲ್ಲಿ 'ಒಹಾಯೋ ಗೊಝೈಮಾಸು' (ಶುಭೋದಯ) ಎಂದು ಹೇಳಿ ಮಾತು ಆರಂಭಿಸಿದರು. ಉತ್ತರ ಪ್ರದೇಶವು 25 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದ ಅತಿದೊಡ್ಡ ರಾಜ್ಯ ಎಂದು ಅವರು ವಿವರಿಸಿದರು.

ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು. ಜಪಾನ್ ವಿದ್ಯಾರ್ಥಿಗಳು ಒಂದು ಜಪಾನೀಸ್ ಹಾಡನ್ನು ಹಾಡಿದರೆ, ಉತ್ತರ ಪ್ರದೇಶದ ಇಶಾನ್ ಎಂಬ ವಿದ್ಯಾರ್ಥಿ 'ಕೌಶಲ್ಯ ದಶರಥ ಕೆ ನಂದನ್' ಗೀತೆಯನ್ನು ಹಾಡಿ ರಂಜಿಸಿದ. ಜಪಾನ್ ವಿದ್ಯಾರ್ಥಿಗಳ ಪ್ರದರ್ಶನಕ್ಕೆ ಯೋಗಿ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದರು.

View post on Instagram

ನಂತರ ವಿದ್ಯಾರ್ಥಿಗಳು ಸಿಎಂ ಜೊತೆ ಫೋಟೋ ತೆಗೆಸಿಕೊಂಡರು. ಕೆಲವು ವಿದ್ಯಾರ್ಥಿಗಳು ಯೋಗಿ ಹತ್ತಿರ ಹೋಗಲು ಹಿಂಜರಿದು ದೂರದಿಂದಲೇ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಇದನ್ನು ಗಮನಿಸಿದ ಯೋಗಿ, ಅವರನ್ನು ಹತ್ತಿರ ಕರೆದು ಖುಷಿಯಿಂದ ಪೋಸ್ ನೀಡಿದರು. ಇದೇ ತಮಾಷೆಯ ಕ್ಷಣದಲ್ಲಿ, ವಿದ್ಯಾರ್ಥಿನಿಯೊಬ್ಬಳು ಯೋಗಿ ಅವರ ಹೆಗಲ ಮೇಲೆ ಕೈ ಹಾಕಿ ಸೆಲ್ಫಿ ಕ್ಲಿಕ್ಕಿಸಿಕೊಂಡಳು. ಈ ಅನಿರೀಕ್ಷಿತ ಸಲುಗೆಯಿಂದ ಯೋಗಿ ಅವರ ಮುಖದಲ್ಲಿ ನಗು ಮೂಡಿತು.

ವಿದ್ಯಾರ್ಥಿಗಳು ಯೋಗಿ ಅವರನ್ನು ಪ್ರೀತಿಯಿಂದ 'ಯೋಗಿ-ಸಾನ್' ಎಂದು ಕರೆಯುತ್ತಿದ್ದರು ಮತ್ತು ತಮ್ಮ ಸರದಿಗಾಗಿ ಕಾತರದಿಂದ ಕಾಯುತ್ತಿದ್ದರು. ಜಪಾನ್ ವಿದ್ಯಾರ್ಥಿನಿ ಮಿಯಾಗಿ ಮೋಟೋ ತನ್ನ ಅನುಭವ ಹಂಚಿಕೊಂಡು, 'ನಾನು ಮೊದಲ ಬಾರಿಗೆ ಬಿಂದಿ ಇಟ್ಟುಕೊಂಡೆ, ನನಗೆ ಇದು ತುಂಬಾ ಇಷ್ಟವಾಯಿತು. ಭಾರತದಲ್ಲಿನ ನನ್ನ ಅನುಭವ ಬಹಳ ವಿಶಿಷ್ಟವಾಗಿತ್ತು' ಎಂದು ಹೇಳಿದಳು.