ದೇಗುಲದ ನಂಬಿಕೆ ಗೌರವಿಸದ ಅನ್ಯ ಧರ್ಮೀಯರಿಗೆ ಪ್ರವೇಶ ಸಲ್ಲದು: ಮದ್ರಾಸ್ ಹೈಕೋರ್ಟ್!
ಹಿಂದೂ ದೇವರ ಮೇಲೆ ನಂಬಿಕೆ ಇಲ್ಲದ ಹಾಗೂ ಸಂಪ್ರದಾಯ ಪಾಲಿಸದ ಹಿಂದೂಯೇತರರಿಗೆ ದೇವಸ್ಥಾನದ ಆವರಣದೊಳಗೆ ಪ್ರವೇಶ ನೀಡಬಾರದು ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಧಾರ್ಮಿಕ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಈ ಆದೇಶ ನೀಡಲಾಗಿದೆ.

ಹಿಂದೂಯೇತರರಿಗೆ ದೇಗುಲ ಪ್ರವೇಶ
ಹಿಂದೂ ದೇವರ ಮೇಲೆ ನಂಬಿಕೆ ಇಲ್ಲದ, ತಮ್ಮ ಧಾರ್ಮಿಕ ಚಿಹ್ನೆಗಳನ್ನು ಪ್ರದರ್ಶಿಸುವ ಹಾಗೂ ದೇಗುಲದ ಸಾಂಪ್ರದಾಯಿಕ ಆಚಾರ ವಿಚಾರ ಪಾಲಿಸಲು ನಿರಾಕರಿಸುವ ಹಿಂದೂಯೇತರರಿಗೆ ಆಗಮಿಕ (ಆಗಮ ಶಾಸ್ತ್ರದ ಪ್ರಕಾರ ನಿರ್ಮಿಸಿರುವ) ದೇವಸ್ಥಾನಗಳಿಗೆ ಪ್ರವೇಶ ನೀಡುವುದು ಸರಿಯಲ್ಲ, ಅಂಥವರಿಗೆ ಪ್ರವೇಶ ನೀಡುವುದರಿಂದ ಧಾರ್ಮಿಕ ಪಾವಿತ್ರ್ಯಕ್ಕೆ ಧಕ್ಕೆಯಾಗಲಿದೆ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ದೇವಸ್ಥಾನ ಪ್ರವೇಶ ಅಧಿಕಾರ
ಇಂಥವರಿಗೆ ದೇವಸ್ಥಾನದ ಒಳಗೆ ಮಾತ್ರವಲ್ಲ, ದೇವಸ್ಥಾನದ ಆವರಣಕ್ಕೂ ಪ್ರವೇಶ ನೀಡಬಾರದು ಎಂದು ಕೋರ್ಟ್ ತಿಳಿಸಿದೆ. ತಮಿಳುನಾಡು ದೇವಸ್ಥಾನ ಪ್ರವೇಶ ಅಧಿಕಾರ ಕಾಯ್ದೆಯ ಕಟ್ಟುನಿಟ್ಟಿನ ಜಾರಿ ಹಾಗೂ ಶಾಸನಬದ್ಧ ಉಲ್ಲಂಘನೆಗಳಿಗೆ ಉತ್ತರದಾಯಿತ್ವ ನಿಗದಿಪಡಿಸುವುದನ್ನು ಕಟ್ಟುನಿಟ್ಟುಗೊಳಿಸುವಂತೆ ಕೋರಿ ಕೆ.ತಂಗಂ ವೆಂಕಟೇಷ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಸಿಎಂ ವಿಜಯ್ ಪ್ರಸ್ತಾಪ
ಇದೇ ವೇಳೆ ಸಿಎಂ ವಿಜಯ್ (C. Joseph Vijay) ಕ್ರೈಸ್ತರಾಗಿದ್ದರೂ ಮದುರೈ ದೇಗುಲದ ನಿಯಮಾವಳಿ ಪಾಲಿಸಿ ದೇವರ ಮೇಲೆ ನಂಬಿಕೆ ಇದೆ ಎಂದು ಪ್ರಮಾಣಮಾಡಿ ಮೀನಾಕ್ಷಿ ಅಮ್ಮನ ದರ್ಶನ ಪಡೆದಿದ್ದಾರೆ ಎಂದು ಕೋರ್ಟ್ ಉಲ್ಲೇಖಿಸಿತು.
ತಿರುವಣ್ಣಮಲೈನ ಅರುಣಾಚಲೇಶ್ವರ ದೇಗುಲ
ಇತ್ತೀಚೆಗೆ ಭಕ್ತರ ಪ್ರತಿಭಟನೆ ನಡುವೆಯೂ ತಿರುವಣ್ಣಮಲೈನ ಅರುಣಾಚಲೇಶ್ವರ ದೇಗುಲಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬರು ಹಾಕಿಕೊಂಡು ಪ್ರವೇಶಿಸಲು ಅವಕಾಶ ನೀಡಿದ್ದಕ್ಕೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ದೇಗುಲದ ಸಿಬ್ಬಂದಿ ಈ ವಿಚಾರದಲ್ಲಿ ಮೌನಪ್ರೇಕ್ಷಕರಾಗಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ





