ಪಾಕಿಸ್ತಾನದ ಗೂಢಚಾರನ ಬಲೆಗೆ ಸಿಲುಕಿ ಮಿಲಿಟರಿ ರಹಸ್ಯ ಸೋರಿಕೆ ಮಾಡಿದ ಐಎಎಫ್ ವಿಂಗ್ ಕಮಾಂಡರ್ ಮನೋರತ್ ಸಿಂಗ್ ಸಭರ್ವಾಲ್ ವಿರುದ್ಧ ದೆಹಲಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ನಗ್ನ ಫೋಟೋಗಳಿಗಾಗಿ ಈ ಸೂಕ್ಷ್ಮ ರಹಸ್ಯಗಳನ್ನು ರವಾನಿಸಿದ ಆಘಾತಕಾರಿ ಮಾಹಿತಿ ಈಗ ಹೊರಬಿದ್ದಿದೆ.

ಪಾಕಿಸ್ತಾನದ ಗೂಢಚಾರನೊಬ್ಬ ಹಾಕಿದ್ದ ಬಲೆಗೆ ಸಿಲುಕಿ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಮಿಲಿಟರಿ ರಹಸ್ಯಗಳನ್ನು ಪಾಕ್‌ಗೆ ರವಾನಿಸಿದ IAF ಅಧಿಕಾರಿಯೊಬ್ಬರ ದೇಶದ್ರೋಹ ಕೃತ್ಯಕ್ಕೆ ಸಂಬಂಧಿಸಿದಂತೆ ಒಂದೊಂದಾಗಿ ಬೆಚ್ಚಿಬೀಳಿಸುವ ಮಾಹಿತಿ ಹೊರಬೀಳುತ್ತಿವೆ. ಈ ಪ್ರಕರಣದಲ್ಲಿ ದೆಹಲಿ ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

IAF ಆಫೀಸರ್ ಹನಿಟ್ರ್ಯಾಪ್ ಚಾರ್ಜ್‌ಶೀಟ್‌ನಲ್ಲಿ ಏನಿದೆ?

ಈ ಪ್ರಕರಣದ ಆರೋಪಿಯಾಗಿರುವ ಐಎಎಫ್ ವಿಂಗ್ ಕಮಾಂಡರ್ ಮನೋರತ್ ಸಿಂಗ್ ಸಭರ್ವಾಲ್(IAF Wing Commander Manorath Singh Sabharwal) ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಿತ ಇಲಾಖೆಯಿಂದ ಅನುಮತಿ ಪಡೆದ ನಂತರ ನ್ಯಾಯಾಲಯವು ಚಾರ್ಜ್‌ಶೀಟ್ ಅನ್ನು ಸಂಪೂರ್ಣವಾಗಿ ಪರಿಗಣಿಸುವ ಸಾಧ್ಯತೆಯಿದೆ. ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮೃದುಲ್ ಗುಪ್ತಾ ಈ ಪ್ರಕರಣದಲ್ಲಿ ಮಹತ್ವದ ಆದೇಶಗಳನ್ನು ಹೊರಡಿಸಿದ್ದಾರೆ.

ಇದನ್ನೂ ಓದಿ: ಭಾರತದ ಯುದ್ಧ ತಂತ್ರ, ಡ್ರೋನ್ ಘಟಕದ ಗುಟ್ಟನ್ನೇ ಪಾಕಿಸ್ತಾನಕ್ಕೆ ಬಿಚ್ಚಿಟ್ಟರಾ ವಿಂಗ್ ಕಮಾಂಡರ್? ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ರಹಸ್ಯ ಬಯಲು!

ಆರೋಪಿ ಮನೋರತ್ ಸಿಂಗ್ ಸಭರ್ವಾಲ್ ಅವರನ್ನು ಮುಂದಿನ ತಿಂಗಳು 5 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಮತ್ತು ಅವರ ವಿಚಾರಣೆಗೆ ಅನುಮತಿ ಪಡೆಯುವ ಪ್ರಕ್ರಿಯೆ ಶೀಘ್ರ ಮುಗಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದ್ದಾರೆ.

ಒಂದೊಂದು ನಗ್ನ ಫೋಟೋಕ್ಕೂ ಒಂದೊಂದು ಮಿಲಿಟರಿ ರಹಸ್ಯ ಸೋರಿಕೆ!

ನ ಗ್ನ ಫೋಟೋಗಳನ್ನ ನೋಡುವ ವಿಕೃತ ಆಸೆಗಾಗಿ ದೇಶದ ಭದ್ರತೆಯನ್ನೇ ಪಣಕ್ಕಿಟ್ಟಿದ್ದಾನೆ ಐಎಎಫ್ ಅಧಿಕಾರಿ! IAF ಅಧಿಕಾರಿ ಮನೋರತ್ ಸಿಂಗ್ ಸಭರ್ವಾಲ್ ಅತ್ಯಂತ ನೀಚ ಮಾರ್ಗವನ್ನು ಆರಿಸಿಕೊಂಡಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಪಾಕಿಸ್ತಾನಿ ಗೂಢಚಾರರಿಂದ ಪಡೆದ ಪ್ರತಿಯೊಂದು ನ ಗ್ನ ಫೋಟೋಗೆ ಬದಲಾಗಿ, ನಮ್ಮ ದೇಶದ ಯುದ್ಧ ತಂತ್ರಗಳು, ಮಿಲಿಟರಿಗೆ ಸಂಬಂಧಿಸಿದ ಸೂಕ್ಷ್ಮ, ರಹಸ್ಯ ಮಾಹಿತಿಗಳನ್ನ ಲೀಕ್ ಮಾಡಲು ಒಪ್ಪಿಕೊಂಡಿರುವ ಬಗ್ಗೆ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಸ್ವತಃ ಆರೋಪಿ ಐಎಎಫ್ ಅಧಿಕಾರಿಯೇ ಪ್ರತಿ ನ ಗ್ನ ಫೋಟೋ ಕಳಿಸಿದರೆ ಅದಕ್ಕೆ ಪ್ರತಿಯಾಗಿ ಯುದ್ಧ ತಂತ್ರಕ್ಕೆ ಸಂಬಂಧಿಸಿದ ಹೊಸ ಪುಟವನ್ನು ಕಳುಹಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದರು ಎಂಬ ಆಘಾತಕಾರಿ ಮಾಹಿತಿ ಬಯಲಾಗಿದೆ.

ಪಾಕ್ ಗೂಢಾಚಾರರೊಂದಿಗೆ ವಾಟ್ಸಾಪ್‌ನಲ್ಲೇ ಚಾಟ್!

ದೇಶದ ಭದ್ರತೆ ಜವಾಬ್ದಾರಿ ಹೊತ್ತ ಐಎಎಫ್ ವಿಂಗ್ ಕಮಾಂಡರ್ ಮನೋರತ್ ಸಿಂಗ್ ಸಭರ್ವಾಲ್ ಎಂಥ ವಿಕೃತ ಎಂದರೆ ಯುವತಿಯ ಫೋಟೋಗಳಿಗಾಗಿ ದೇಶದ ಭದ್ರತೆಯನ್ನೇ ಪಣಕ್ಕಿಟ್ಟಿದ್ದ. ಪಾಕಿಸ್ತಾನಿ ಗೂಢಚಾರರು ಇದೇ ವರ್ಷದ ಜನವರಿ 12 ರಿಂದ ಏಪ್ರಿಲ್ 1 ರವರೆಗೆ ನಿಯಮಿತವಾಗಿ ವಾಟ್ಸಾಪ್‌ನಲ್ಲಿ ಚಾಟ್ ಮಾಡುತ್ತಿದ್ದರು. ಅವರ ನಡುವೆ 3,000 ಕ್ಕೂ ಹೆಚ್ಚು Text messeges, 65 ಫೋಟೋಗಳು, 42 ವಾಯ್ಸ್‌ ಕಾಲ್, 4 ವೀಡಿಯೊ ಕಾಲ್ ಮತ್ತು 6 URL ಗಳನ್ನು ಹಂಚಿಕೊಳ್ಳಲಾಗಿದೆ. ದೇಶದ ಡ್ರೋನ್ ಸಾಮರ್ಥ್ಯಗಳು, ರಹಸ್ಯ ಡ್ರೋನ್ ಯುನಿಟ್, ದೇಶದ ಪ್ರಮುಖ ಮಿಲಿಟರಿ ನೆಲೆಗಳಿಗೆ ಸಂಬಂಧಿಸಿದ ಸಂಪೂರ್ಣ ಡೇಟಾವನ್ನು ಅಧಿಕಾರಿ ಪಾಕಿಸ್ತಾನಿ ಗೂಢಚಾರರೊಂದಿಗೆ ಹಂಚಿಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.