ಅಜಿತ್ ಪವಾರ್, ಕ್ಯಾಪ್ಟನ್ ಶಾಂಭವಿ ಸೇರಿ ವಿಮಾನ ದುರಂತದಲ್ಲಿ ಅಂತ್ಯಕಂಡು ಐವರು ಯಾರು?
ಅಜಿತ್ ಪವಾರ್, ಕ್ಯಾಪ್ಟನ್ ಶಾಂಭವಿ ಸೇರಿ ವಿಮಾನ ದುರಂತದಲ್ಲಿ ಅಂತ್ಯಕಂಡು ಐವರು ಯಾರು? ನಂ.1 ಏರ್‌ಫೋರ್ಸ್ ಸ್ಕೂಲ್‌ನಿಂದ ಬಂದ ಶಾಂಭವಿ ಸೇರಿದಂತೆ ಬಾರಮತಿ ವಿಮಾನ ಅಪಘಾತದಲ್ಲಿ ಸಾವೀಗೀಡಾದ ಪ್ರಮುಖರು ಯಾರೆಲ್ಲಾ?

ವಿಮಾನ ಪತನ ದುರಂತ
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ಅಪಘಾತ ಮತ್ತೆ ವಿಮಾನ ಸುರಕ್ಷತೆ ಪ್ರಶ್ನೆ ಮೂಡಿಸಿದೆ. ಬಾರಮತಿಯಲ್ಲಿ ನಾಲ್ಕು ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಅಜಿತ್ ಪವಾರ್ ಇಂದು ಬೆಳಗ್ಗೆ ಪ್ರಯಾಣ ಬೆಳೆಸಿದ್ದರು. ಮುಂಬೈನಿಂದ ಬಾರಾಮತಿಗೆ ಪ್ರಯಾಣ ಬೆಳೆಸಿದ ವಿಮಾನ, ಬಾರಮತಿಯಲ್ಲಿ 8.45ರ ವೇಳೆಗೆ ಪತನಗೊಂಡಿದೆ. ಲ್ಯಾಂಡಿಂಗ್ ವೇಳೆ ವಿಮಾನ ಪತನಗೊಂಡಿದೆ. ಎನ್‌ಸಿಪಿ ನಾಯಕ, ಮಹಾರಾಷ್ಟ್ರಯ ರಾಜಕಾರಣದಲ್ಲಿ ಅತ್ಯಂತ ಪ್ರಭಾವಿ ನಾಯಕ ಅಜಿತ್ ಪವಾರ್ ದುರಂತ ಅಂತ್ಯಕಂಡಿದ್ದಾರೆ. ಅಜಿತ್ ಪವಾರ್ ಜೊತೆ ಪ್ರಾಣ ಕಳೆದುಕೊಂಡ ಇತರ ನಾಲ್ವರ ವಿವರ ಇಲ್ಲಿದೆ.
ಕ್ಯಾಪ್ಟನ್ ಶಾಂಭವಿ ಪಾಠಕ್
ಅಜಿತ್ ಪವಾರ್ ಲೆಯರ್ಜಿತ್ 45 ವಿಮಾನಕ್ಕೆ ಕ್ಯಾಪ್ಟನ್ ಶಾಂಭವಿ ಪಾಠಕ್ ಪೈಲೈಟ್ ಆಗಿದ್ದರು. ಅತ್ಯಂತ ಪರಿಣಿತ ಕ್ಯಾಪ್ಟನ್ ಎಂದೇ ಶಾಂಭವಿ ಗುರುತಿಸಿಕೊಂಡಿದ್ದರು. ಗ್ವಾಲಿಯರ್‌ನ ನಂ.1 ಏರ್ ಫೋರ್ಸ್ ಸ್ಕೂಲ್‌ನಲ್ಲಿ 2016-18ರಲ್ಲಿ ವಿದ್ಯಾಭ್ಯಾಸ ಪೂರೈಸಿರುವ ಶಾಂಭವವಿ ಪೈಲೆಟ್ ಆಗಿ ಅಪಾರ ಅನುಭವ ಹೊಂದಿದ್ದಾರೆ. ಮಧ್ಯಪ್ರದೇಶ ಫ್ಲೈಯಿಂಗ್ ಕ್ಲಬ್ ಸದಸ್ಯೆಯಾಗಿದ್ದರು.
ಕ್ಯಾಪ್ಟನ್ ಸುಮಿತ್ ಕಪೂರ್
ಇದೇ ವಿಮಾನದಲ್ಲಿ ಕ್ಯಾಪ್ಟನ್ ಶಾಂಭವಿ ಜೊತೆ ಕ್ಯಾಪ್ಟನ್ ಸುಮಿತ್ ಕಪೂರ್ ಕೂಡ ಮೃತಪಟ್ಟಿದ್ದಾರೆ. 16,000 ಹಾರಾಟದ ಅನುಭವ ಹೊಂದಿರುವ ಕ್ಯಾಪ್ಟನ್ ಸುಮಿತ್ ಜೆಟ್ ಆಪರೇಶನ್‌ನಲ್ಲೂ ಪಳಗಿದ್ದಾರೆ. ಅನುಭವ ಹಾಗೂ ಉತ್ತಮ ಹಾರಾಟದ ಇತಿಹಾಸ ಹೊಂದಿದ್ದ ಸುಮಿತ್ ಹಾಗೂ ಶಾಂಭವಿ ಕೂಡ ಘಟನೆಯಲ್ಲಿ ಸುಟ್ಟು ಕರಕಲಾಗಿದ್ದಾರೆ.
ಪೊಲೀಸ್ ಕಾನ್ಸ್‌ಸ್ಟೇಬಲ್ ವಿದಿಪ್ ಜಾಧವ್
ಅಜಿತ್ ಪವಾರ್ ಜೊತೆ ವಿಮಾನದಲ್ಲಿ ಇನ್ನಿಬ್ಬರು ಪ್ರಯಾಣಿಕರಿದ್ದರು.ಈ ಪೈಕಿ ಒಬ್ಬರು ಅಜಿತ್ ಪವಾರ್ ಪರ್ಸನಲ್ ಸೆಕ್ಯೂರಿಟಿ ಆಫೀಸ್ (PSO) ವಿದಿಪ್ ಜಾದವ್ ಕೂಡ ಜೊತೆಗಿದ್ದರು. ಅಜಿತ್ ಪವಾರ್ ಜೊತೆಗೆ ಇರುವ ವಿದಿಪ್ ಜಾಧವ್ ಭದ್ರತಾ ಜವಾಬ್ದಾರಿ ಹೊತ್ತಿದ್ದರು. ಅಜಿತ್ ಪವಾರ್ ಎಲ್ಲೇ ಹೋದರೂ ಭದ್ರತಾ PSO ಜೊತೆಗಿರುತ್ತಿದ್ದರು.
ಫ್ಲೈಟ್ ಅಟೆಡೆಂಟ್ ಪಿಂಕಿ ಮಾಲಿ
ವಿಮಾನದಲ್ಲಿದ್ದ ಮತ್ತೊಬ್ಬ ಪ್ರಯಾಣಿಕೆ ಅದು ಫ್ಲೈಟ್ ಸಿಬ್ಬಂದಿ ಪಿಂಕಿ ಮಾಲಿ. ಬಹುತೇಕ ವಿವಿಐಪಿಗಳ ವಿಮಾನ ಪ್ರಯಾಣದಲ್ಲಿ ಇದೇ ಪಿಂಕಿ ಮಾಲಿ ಫ್ಲೈಟ್ ಅಟೆಡೆಂಟ್ ಆಗಿರುತ್ತಿದ್ದರು. ಪಿಂಕಿ ಮಾಲಿ ತಂದೆ ಎನ್‌ಸಿಪಿ ಪಕ್ಷದ ಕಾರ್ಯಕರ್ತನ ಪುತ್ರಿಯಾಗಿದ್ದರು. ಕಳೆದ 5 ವರ್ಷಗಳಿಂದ ಫ್ಲೈಟ್ ಅಟೆಟೆಂಟ್ ಆಗಿ ಕೆಲಸ ಮಾಡುತ್ತಿರುವ ಪಿಂಕಿ ಮಾಲ್ ತನ್ನ ತಮ್ಮನನ್ನು ಪೈಲೈಟ್ ಮಾಡಲು ಓದಿಸುತ್ತಿದ್ದಳು.
ಫ್ಲೈಟ್ ಅಟೆಡೆಂಟ್ ಪಿಂಕಿ ಮಾಲಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

