ಉತ್ತರಾಖಂಡದಲ್ಲಿ ನಮಾಮಿ ಗಂಗೆ ಯೋಜನೆ ಅಡಿ ಕೋಟಿಗಟ್ಟಲೆ ಖರ್ಚು ಮಾಡಿದರೂ, ಗಂಗಾ ನದಿಯ ನೀರು ಸ್ನಾನಕ್ಕೂ ಯೋಗ್ಯವಲ್ಲ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ. ದೇವಪ್ರಯಾಗದಿಂದ ಹರಿದ್ವಾರದವರೆಗೆ ನೀರಿನಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾದ ಪ್ರಮಾಣವು ನಿಗದಿತ ಮಿತಿಗಿಂತ 32 ಪಟ್ಟು ಹೆಚ್ಚಾಗಿದೆ.

ಗೈರ್ಸೈನ್ (ಮಾ.12): ಉತ್ತರಾಖಂಡದ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಂಡಿಸಲಾದ ಭಾರತೀಯ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪಾಲರ (CAG) ವರದಿಯು ಗಂಗಾ ನದಿಯ ಸ್ವಚ್ಛತೆಯ ಬಗ್ಗೆ ಆತಂಕಕಾರಿ ಸತ್ಯಗಳನ್ನು ಬಹಿರಂಗಪಡಿಸಿದೆ. ನಮಾಮಿ ಗಂಗೆ ಯೋಜನೆಯಡಿ ಕೋಟಿಗಟ್ಟಲೆ ಹಣ ವ್ಯಯಿಸಿದರೂ, ಗಂಗೆಯ ನೀರು ಕುಡಿಯಲು ಇರಲಿ, ಸ್ನಾನಕ್ಕೂ ಯೋಗ್ಯವಾಗಿಲ್ಲ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

32 ಪಟ್ಟು ಹೆಚ್ಚಾದ ಮಾಲಿನ್ಯ!

ಸಿಎಜಿ ವರದಿಯ ಪ್ರಕಾರ, ದೇವಪ್ರಯಾಗದಿಂದ ಹರಿದ್ವಾರದವರೆಗಿನ ಪವಿತ್ರ ಗಂಗಾ ನದಿಯ ನೀರಿನಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾದ ಪ್ರಮಾಣವು ನಿಗದಿತ ಮಿತಿಗಿಂತ ಬರೋಬ್ಬರಿ 32 ಪಟ್ಟು ಹೆಚ್ಚಾಗಿದೆ. 2018 ರಿಂದ 2023ರ ಅವಧಿಯಲ್ಲಿ ನಡೆಸಲಾದ ಈ ಆಡಿಟ್‌ನಲ್ಲಿ, ನದಿಗೆ ಸೇರುತ್ತಿರುವ ಸಂಸ್ಕರಿಸದ ಕೊಳಚೆ ನೀರೇ ಈ ಭೀಕರ ಮಾಲಿನ್ಯಕ್ಕೆ ಮುಖ್ಯ ಕಾರಣವಾಗಿದೆ.

ಮಾನದಂಡ ಗಾಳಿಗೆ ತೂರಿದ ಒಳಚರಂಡಿ ಘಟಕ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಸೂಚಿಸಿರುವ ಕಟ್ಟುನಿಟ್ಟಿನ ನಿಯಮಗಳನ್ನು ರಾಜ್ಯದ ಅನೇಕ ಒಳಚರಂಡಿ ಸಂಸ್ಕರಣಾ ಘಟಕಗಳು (STP) ಪಾಲಿಸುತ್ತಿಲ್ಲ. ಸುಮಾರು 32 ಪ್ರತಿಶತದಷ್ಟು ಎಸ್‌ಟಿಪಿಗಳು ಯಾವುದೇ ಶುದ್ಧೀಕರಣ ಪ್ರಕ್ರಿಯೆ ನಡೆಸದೆ, ನೇರವಾಗಿ ಕಲುಷಿತ ನೀರನ್ನು ಗಂಗೆಯ ಒಡಲಿಗೆ ಬಿಡುತ್ತಿವೆ. ಇದರಿಂದಾಗಿ ಪವಿತ್ರ ನದಿ ದಿನದಿಂದ ದಿನಕ್ಕೆ ವಿಷಕಾರಿಯಾಗುತ್ತಿದೆ.

ಕಾಗದಕ್ಕಷ್ಟೇ ಸೀಮಿತವಾದ ಯೋಜನೆಗಳು

ನಮಾಮಿ ಗಂಗೆ ಯೋಜನೆಯಡಿ ಮಂಜೂರಾದ ಬಜೆಟ್‌ನಲ್ಲಿ ಕೇವಲ 16 ಪ್ರತಿಶತ ಹಣವನ್ನು ಮಾತ್ರ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ ಎಂದು ವರದಿ ಹೇಳಿದೆ. ಅರಣ್ಯೀಕರಣ ಯೋಜನೆಗಳು ಕುಂಟುತ್ತಾ ಸಾಗಿವೆ. ಅಷ್ಟೇ ಅಲ್ಲದೆ, ರಾಜ್ಯ ಸ್ವಚ್ಛ ಗಂಗಾ ಮಿಷನ್ ಅಡಿಯಲ್ಲಿ ನಿರ್ಮಿಸಲಾದ ಸ್ಮಶಾನಗಳು ಸಾರ್ವಜನಿಕರಲ್ಲಿ ಜಾಗೃತಿ ಇಲ್ಲದ ಕಾರಣ ಬಳಕೆಯಾಗದೆ ಪಾಳುಬಿದ್ದಿವೆ.

ಕಲುಷಿತ ನೀರು ಕುಡಿದರೆ ಯಾವ ಕಾಯಿಲೆಗಳು ಬರುತ್ತವೆ?

ಗಂಗಾ ನದಿಯ ಈ ಕಲುಷಿತ ನೀರನ್ನು ಸೇವಿಸುವುದರಿಂದ ಅಥವಾ ಬಳಸುವುದರಿಂದ ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ. ಮುಖ್ಯವಾಗಿ:

ಜೀರ್ಣಾಂಗವ್ಯೂಹದ ಕಾಯಿಲೆಗಳು: ಕಾಲರಾ, ಟೈಫಾಯಿಡ್ ಮತ್ತು ಭೇದಿಯಂತಹ ರೋಗಗಳು ಹರಡುತ್ತವೆ.

ಚರ್ಮದ ಸಮಸ್ಯೆಗಳು: ನೀರಿನಲ್ಲಿರುವ ಬ್ಯಾಕ್ಟೀರಿಯಾಗಳಿಂದ ತುರಿಕೆ, ಅಲರ್ಜಿ ಮತ್ತು ಚರ್ಮದ ಸೋಂಕುಗಳು ಕಾಣಿಸಿಕೊಳ್ಳುತ್ತವೆ.

ಹೆಪಟೈಟಿಸ್: ಕಲುಷಿತ ನೀರು ಯಕೃತ್ತಿನ ಮೇಲೆ ಪರಿಣಾಮ ಬೀರಿ ಕಾಮಾಲೆ (Hepatitis A & E) ರೋಗಕ್ಕೆ ದಾರಿ ಮಾಡಿಕೊಡುತ್ತದೆ.

ಇತರೆ ಸೋಂಕುಗಳು: ಕೋಲಿಫಾರ್ಮ್ ಬ್ಯಾಕ್ಟೀರಿಯಾದ ಅತಿಯಾದ ಪ್ರಮಾಣವು ಹೊಟ್ಟೆ ನೋವು ಮತ್ತು ವಾಂತಿಗೆ ಕಾರಣವಾಗುತ್ತದೆ.

ಈ ವರದಿಯ ಆಧಾರದ ಮೇಲೆ ಗಂಗಾ ನದಿ ಸ್ವಚ್ಛಗೊಳಿಸಲು ಸರ್ಕಾರ