- Home
- Business
- ಗುಡ್ ನ್ಯೂಸ್: ಚಿನ್ನದ ಬೆಲೆಯಲ್ಲಿಂದು ಒಂದು ಸಾವಿರ ರುಪಾಯಿ ಕುಸಿತ! ಮಾರ್ಚ್ 12ರಂದು ಚಿನ್ನದ ರೇಟ್ ಎಷ್ಟು?
ಗುಡ್ ನ್ಯೂಸ್: ಚಿನ್ನದ ಬೆಲೆಯಲ್ಲಿಂದು ಒಂದು ಸಾವಿರ ರುಪಾಯಿ ಕುಸಿತ! ಮಾರ್ಚ್ 12ರಂದು ಚಿನ್ನದ ರೇಟ್ ಎಷ್ಟು?
ಬೆಂಗಳೂರು: ಕಳೆದೆರಡು ದಿನ ಕೊಂಚ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಭರ್ಜರಿ ಕುಸಿತ ಕಂಡಿದ್ದು, ಚಿನ್ನ ಖರೀದಿಸುವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಮಾರ್ಚ್ 12ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.

ಸತತ ಎರಡು ದಿನಗಳ ಏರಿಕೆಯ ಬಳಿಕ ಇಂದು ಚಿನ್ನದ ಬೆಲೆಯಲ್ಲಿ ಕುಸಿತ
ಕಳೆದೆರಡು ದಿನಗಳಿಂದ ಅಂದರೆ ಮಾರ್ಚ್ 10 ಹಾಗೂ 11 ರಂದು ನಿರಂತರವಾಗಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿತ್ತು. ಮದುವೆ ಶುಭಸಮಾರಂಭಗಳು ಹತ್ತಿರವಾಗುತ್ತಿದ್ದಂತೆಯೇ ಚಿನ್ನದ ಬೆಲೆ ಏರಿಕೆ ಕಂಡಿದ್ದು, ಚಿನ್ನ ಖರೀದಿಸುವವರ ಮುಖದಲ್ಲಿ ಕೊಂಚ ಆತಂಕ ಮೂಡುವಂತೆ ಮಾಡಿತ್ತು.
ಇಂದು ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ
ಒಂದು ಕಡೆ ಇಸ್ರೇಲ್-ಇರಾನ್ ಯುದ್ದ, ಇದರ ನಡುವೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದು, ಭಾರತೀಯ ಚಿನ್ನ ಖರೀದಿಸುವ ಸಾಮಾನ್ಯ ವರ್ಗದ ಜನರ ಮುಖದಲ್ಲಿ ಒಂದು ರೀತಿ ಆತಂಕಕ್ಕೆ ಈಡು ಮಾಡಿತ್ತು. ಇದೆಲ್ಲದರ ನಡುವೆ ಇಂದು ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದೆ.
24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ 1090 ರುಪಾಯಿ ಕುಸಿತ
ಹೌದು, ಮಾರ್ಚ್ 12ರಂದು 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1,090 ರುಪಾಯಿ ಇಳಿಕೆ ಕಂಡಿದೆ. ಈ ಮೂಲಕ 24 ಕ್ಯಾರಟ್ ಪ್ರತಿ ಗ್ರಾಮ್ ಚಿನ್ನದ ಬೆಲೆ 16,222 ರುಪಾಯಿಗೆ ಬಂದು ನಿಂತಿದೆ. ನಿನ್ನೆ ಒಂದು ಗ್ರಾಮ್ 24 ಕ್ಯಾರಟ್ ಚಿನ್ನದ ಬೆಲೆ 16,331 ರುಪಾಯಿಗಳಾಗಿತ್ತು.
10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಒಂದು ಸಾವಿರ ರುಪಾಯಿ ಕುಸಿತ
ಇನ್ನೊಂದೆಡೆ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಂದು 10 ಗ್ರಾಮ್‌ಗೆ ಬರೋಬ್ಬರಿ ಒಂದು ಸಾವಿರ ರುಪಾಯಿ ಇಳಿಕೆ ಕಂಡಿದೆ. ಈ ಮೂಲಕ ಆಭರಣ ಚಿನ್ನದ ಇಂದಿನ ಒಂದು ಗ್ರಾಮ್ ಬೆಲೆ 14,870 ರುಪಾಯಿಗಳಾಗಿದೆ
ಬೆಳ್ಳಿ ಬೆಲೆಯಲ್ಲಿ 10 ಸಾವಿರ ರುಪಾಯಿ ಕುಸಿತ
ಇನ್ನು ಚಿನ್ನ ಮಾತ್ರವಲ್ಲದೇ ಬೆಳ್ಳಿ ಬೆಲೆಯಲ್ಲೂ ಇಂದು ಇಳಿಕೆ ಕಂಡಿದೆ. ಒಂದು ಕೆಜಿ ಬೆಳ್ಳಿ ಬೆಲೆಯ ಮೇಲೆ ಬರೋಬ್ಬರಿ 10 ಸಾವಿರ ರುಪಾಯಿ ಇಳಿಕೆ ಕಂಡಿದೆ. ಇಂದಿನ ಒಂದು ಕೆಜಿ ಬೆಳ್ಳಿ ಬೆಲೆ 2,80,000 ರುಪಾಯಿಗಳಾಗಿದೆ.
ನೆಮ್ಮದಿಯ ನಿಟ್ಟುಸಿರು ಬಿಟ್ಟ ಭಾರತೀಯ ಆಭರಣ ಗ್ರಾಹಕರು
ಒಟ್ಟಿನಲ್ಲಿ ಮಧ್ಯಪ್ರಾಚ್ಯದಲ್ಲಿ ಯುದ್ದದ ಕಾರ್ಮೋಡದ ನಡುವೆಯೂ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಕುಸಿತ ಕಂಡಿರುವುದು ಭಾರತೀಯ ಆಭರಣ ಗ್ರಾಹಕರ ಮುಖದಲ್ಲಿ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

