MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಕಡಿಮೆ ಹೂಡಿಕೆ, ಲಕ್ಷಾಂತರ ಲಾಭ! ರೈತರನ್ನು 'ರಾಜ'ನನ್ನಾಗಿ ಮಾಡುವ 5 ಬೆಳೆಗಳು ಇಲ್ಲಿವೆ ನೋಡಿ..!

ಕಡಿಮೆ ಹೂಡಿಕೆ, ಲಕ್ಷಾಂತರ ಲಾಭ! ರೈತರನ್ನು 'ರಾಜ'ನನ್ನಾಗಿ ಮಾಡುವ 5 ಬೆಳೆಗಳು ಇಲ್ಲಿವೆ ನೋಡಿ..!

ಸಾಂಪ್ರದಾಯಿಕ ಕೃಷಿಯಲ್ಲಿನ ಸವಾಲುಗಳನ್ನು ಮೆಟ್ಟಿನಿಲ್ಲಲು, ಕಡಿಮೆ ಅವಧಿ ಮತ್ತು ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ತರುವ 5 ಪ್ರಮುಖ ಬೆಳೆಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ. ಕೊತ್ತಂಬರಿ, ಮೆಂತ್ಯ, ತುಳಸಿ, ಚೆಂಡು ಹೂವು ಮತ್ತು ಮೆಣಸಿನಕಾಯಿಯಂತಹ ಬೆಳೆಗಳನ್ನು ಬೆಳೆದು ಅಧಿಕ ಲಾಭ ಗಳಿಸಬಹುದು.

2 Min read
Author : Ganesh Mabla Gowda
Published : Aug 07 2026, 09:08 PM IST
Share this Photo Gallery
  • FB
  • TW
  • Linkdin
  • Whatsapp
16
ಟಾಪ್ 5 ಬೆಳೆಗಳು ಯಾವುವು?
Image Credit : pexels

ಟಾಪ್ 5 ಬೆಳೆಗಳು ಯಾವುವು?

ಇಂದಿನ ಕಾಲದಲ್ಲಿ ಕೃಷಿ ಮಾಡುವುದು ಒಂದು ಸವಾಲಿನ ಕೆಲಸ. ಹೆಚ್ಚುತ್ತಿರುವ ಗೊಬ್ಬರ, ಬಿತ್ತನೆ ಬೀಜದ ಬೆಲೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಸಾಂಪ್ರದಾಯಿಕ ಬೆಳೆಗಳನ್ನು ನಂಬಿ ಕುಳಿತ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಜಾಣ್ಮೆಯ ಕೃಷಿ ಮಾಡುವ ರೈತರಿಗೆ ಎಂದಿಗೂ ಸೋಲಿಲ್ಲ. ಕಡಿಮೆ ಅವಧಿಯಲ್ಲಿ, ಕಡಿಮೆ ಖರ್ಚಿನಲ್ಲಿ ಬೆಳೆದು ಕೈತುಂಬಾ ಹಣ ತರುವ ಕೆಲವು ಬೆಳೆಗಳ ಬಗ್ಗೆ ಕೃಷಿ ತಜ್ಞರು ಮಾಹಿತಿ ನೀಡಿದ್ದಾರೆ. ಅಂತಹ ಟಾಪ್ 5 ಬೆಳೆಗಳು ಯಾವುವು? ಅವುಗಳನ್ನು ಎಲ್ಲಿ ಮಾರಾಟ ಮಾಡಬಹುದು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಕೊತ್ತಂಬರಿ ಕೃಷಿ: ಕೇವಲ 45 ದಿನಗಳಲ್ಲಿ ಕೈ ಸೇರಲಿದೆ ಹಣ!
Image Credit : pexels

ಕೊತ್ತಂಬರಿ ಕೃಷಿ: ಕೇವಲ 45 ದಿನಗಳಲ್ಲಿ ಕೈ ಸೇರಲಿದೆ ಹಣ!

ಪ್ರತಿ ಮನೆಯ ಅಡುಗೆಮನೆಯಲ್ಲಿ ಕೊತ್ತಂಬರಿ ಸೊಪ್ಪಿಗೆ ಭಾರೀ ಬೇಡಿಕೆಯಿದೆ. ಇದನ್ನು ಬೆಳೆಯಲು ಹೆಚ್ಚಿನ ಜಾಗ ಬೇಕಿಲ್ಲ, ಅಂತರ ಬೆಳೆಯಾಗಿಯೂ ಬೆಳೆಯಬಹುದು.

  • ಅವಧಿ: 30 ರಿಂದ 45 ದಿನಗಳು.
  • ಲಾಭ: ಇದನ್ನು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಸ್ಥಳೀಯ ಮಾರುಕಟ್ಟೆಗಳಿಗೆ ನೇರವಾಗಿ ಪೂರೈಸಿ ತ್ವರಿತವಾಗಿ ಹಣ ಗಳಿಸಬಹುದು.

Related Articles

Related image1
ದಕ್ಷಿಣ ಕಾಶಿ 'ಕಾಳೇಶ್ವರ' ದೇಗುಲಕ್ಕೆ ಬುಲ್ಡೋಜರ್ ನುಗ್ಗಿಸಿದ ರೇವಂತ್ ರೆಡ್ಡಿ ಸರ್ಕಾರ..
Related image2
ಇಲ್ಲಿ ದ್ರಾಕ್ಷಿ ತೋಟಗಳ ರಕ್ಷಣೆಗೆ ಗೂಬೆಗಳ ನೇಮಕ.. ಕೋಟಿ, ಕೋಟಿ ಬೆಳೆಗಳಿಗೆ ಸೈನಿಕರಂತೆ ರಕ್ಷಣೆ..!
36
ಮೆಂತ್ಯ ಕೃಷಿ: ಕಡಿಮೆ ನೀರು, ಹೆಚ್ಚಿನ ಬೇಡಿಕೆ
Image Credit : pexels

ಮೆಂತ್ಯ ಕೃಷಿ: ಕಡಿಮೆ ನೀರು, ಹೆಚ್ಚಿನ ಬೇಡಿಕೆ

ಆರೋಗ್ಯದ ದೃಷ್ಟಿಯಿಂದ ಮೆಂತ್ಯ ಸೊಪ್ಪಿಗೆ ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆಯಿದೆ.

  • ವಿಶೇಷತೆ: ಇದಕ್ಕೆ ನೀರು ತುಂಬಾ ಕಡಿಮೆ ಬೇಕು ಮತ್ತು ಕೀಟಗಳ ಬಾಧೆಯೂ ಕಡಿಮೆ.
  • ಮಾರುಕಟ್ಟೆ: ಸಾವಯವ ಅಂಗಡಿಗಳು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಇದಕ್ಕೆ ಉತ್ತಮ ಬೆಲೆಯಿದೆ. ನೈಸರ್ಗಿಕ ಕೃಷಿ ಮಾಡುವವರಿಗೆ ಇದು ಹೇಳಿ ಮಾಡಿಸಿದ ಬೆಳೆ.
46
ತುಳಸಿ: ಔಷಧೀಯ ಗುಣಗಳೇ ಲಾಭದ ಮೂಲ
Image Credit : pexels

ತುಳಸಿ: ಔಷಧೀಯ ಗುಣಗಳೇ ಲಾಭದ ಮೂಲ

ಗಿಡಮೂಲಿಕೆ ಮತ್ತು ಆಯುರ್ವೇದ ಉತ್ಪನ್ನಗಳ ತಯಾರಿಕೆಯಲ್ಲಿ ತುಳಸಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

  • ನಿರ್ವಹಣೆ: ನೆಟ್ಟ 3-4 ತಿಂಗಳ ನಂತರ ಇಳುವರಿ ಆರಂಭವಾಗುತ್ತದೆ. ಇದಕ್ಕೆ ನಿರ್ವಹಣಾ ವೆಚ್ಚ ಅತ್ಯಂತ ಕಡಿಮೆ.
  • ಒಪ್ಪಂದ ಕೃಷಿ: ಅನೇಕ ಆಯುರ್ವೇದ ಕಂಪನಿಗಳು ರೈತರೊಂದಿಗೆ ನೇರ ಒಪ್ಪಂದ ಮಾಡಿಕೊಂಡು ತುಳಸಿಯನ್ನು ಖರೀದಿಸುತ್ತವೆ, ಇದರಿಂದ ರೈತರಿಗೆ ಮಾರಾಟದ ಚಿಂತೆ ಇರುವುದಿಲ್ಲ
56
ಚೆಂಡು ಹೂವು: ಹಬ್ಬದ ಸೀಸನ್‌ನಲ್ಲಿ ಬಂಪರ್ ಆದಾಯ
Image Credit : pexels

ಚೆಂಡು ಹೂವು: ಹಬ್ಬದ ಸೀಸನ್‌ನಲ್ಲಿ ಬಂಪರ್ ಆದಾಯ

ದೇವಸ್ಥಾನಗಳು, ಮದುವೆ ಹಾಗೂ ಹಬ್ಬ ಹರಿದಿನಗಳಲ್ಲಿ ಚೆಂಡು ಹೂವಿಗೆ ಭಾರಿ ಡಿಮ್ಯಾಂಡ್ ಇರುತ್ತದೆ.

  • ಲಾಭ: ಪ್ರತಿ ವಾರ ಹೂವುಗಳನ್ನು ಕೀಳುವ ಮೂಲಕ ನಿರಂತರ ಆದಾಯ ಪಡೆಯಬಹುದು.
  • ಸೀಸನ್: ದಸರಾ, ದೀಪಾವಳಿ ಮತ್ತು ಸಂಕ್ರಾಂತಿ ಸಮಯದಲ್ಲಿ ಬೆಲೆ ಗಗನಕ್ಕೇರುತ್ತದೆ. ವಿವಾಹ ಯೋಜಕರು ಮತ್ತು ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಗಳೊಂದಿಗೆ ಸಂಪರ್ಕ ಹೊಂದಿದ್ದರೆ ಹೆಚ್ಚಿನ ಲಾಭ ಗ್ಯಾರಂಟಿ.
66
ಮೆಣಸಿನಕಾಯಿ: ದೇಶ-ವಿದೇಶಗಳಲ್ಲಿ ಸಖತ್ ಡಿಮ್ಯಾಂಡ್
Image Credit : pexels

ಮೆಣಸಿನಕಾಯಿ: ದೇಶ-ವಿದೇಶಗಳಲ್ಲಿ ಸಖತ್ ಡಿಮ್ಯಾಂಡ್

ಮೆಣಸಿನಕಾಯಿ ಒಂದು ಪ್ರಮುಖ ನಗದು ಬೆಳೆಯಾಗಿದ್ದು, ದೀರ್ಘಾವಧಿಯ ಲಾಭ ನೀಡುತ್ತದೆ.

  • ರಫ್ತು: ಭಾರತೀಯ ಮೆಣಸಿನಕಾಯಿಗೆ ವಿದೇಶಿ ಮಾರುಕಟ್ಟೆಯಲ್ಲೂ ಉತ್ತಮ ಬೇಡಿಕೆಯಿದೆ.
  • ರೂಪ: ಹಸಿ ಮೆಣಸಿನಕಾಯಿ ಅಥವಾ ಒಣ ಮೆಣಸಿನಕಾಯಿಯಾಗಿ ಎರಡೂ ರೂಪದಲ್ಲಿ ಮಾರಾಟ ಮಾಡಬಹುದು. ಮಸಾಲೆ ಕಂಪನಿಗಳು ರೈತರಿಂದ ಇದನ್ನು ನೇರವಾಗಿ ಖರೀದಿಸುತ್ತವೆ.

ರೋಗಗಳು ಬರುವ ಮೊದಲೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಔಷಧಗಳ ಮೇಲಿನ ಖರ್ಚು ಉಳಿಸಬಹುದು. ಬೆಳೆ ಬೆಳೆಯುವ ಮೊದಲೇ ಮಾರುಕಟ್ಟೆಯಲ್ಲಿನ ಬೇಡಿಕೆ ತಿಳಿಯಿರಿ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಪ್ರಯತ್ನಿಸಿ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

GM
Ganesh Mabla Gowda
ಪತ್ರಿಕೋದ್ಯಮದ ಕನಸು ಕಟ್ಟಿಕೊಟ್ಟಿದ್ದು ಕುವೆಂಪು ವಿವಿ. ʼಕನ್ನಡ ಜನಾಂತರಂಗʼ ಮತ್ತು ʼಕರಾವಳಿ ಅಲೆʼ ಮೂಲಕ ವೃತ್ತಿ ಆರಂಭ. ಅದಕ್ಕೆ ರೆಕ್ಕುಪುಕ್ಕ ಕೊಟ್ಟಿದ್ದು ಪಬ್ಲಿಕ್‌ ಟಿವಿ, ಟಿವಿ9 ಹಾಗೂ ನ್ಯೂಸ್‌ಫಸ್ಟ್‌ ಕನ್ನಡ. ಒಂದಷ್ಟು ಅನುಭವ. ಪ್ರಸ್ತುತ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಪತ್ರಕರ್ತನಾಗಿ ಮುಂದುವರಿದಿದ್ದೇನೆ. ಬದುಕು ನಿರಂತರ ಕಲಿಕೆ. ಅದಕ್ಕೆ ಈಗ ʼನೇರ ದಿಟ್ಟ ನಿರಂತರʼ! ಪುಸ್ತಕ ಓದೋದು ನನ್ನ ಅಭ್ಯಾಸ. ಕವನ ಬರೆಯೋದು ನನ್ನಿಷ್ಟ. ರಾಜಕೀಯ ಹಾಗೂ ಕ್ರಿಕೆಟ್‌ ಸುದ್ದಿಗಳ ಮೇಲೆ ಹೆಚ್ಚು ಆಸಕ್ತಿ. ಹಾಂ.. ಅಂದ್ಯಾಗೆ ನನ್ನ ಊರು ಉತ್ತರ ಕನ್ನಡ ಜಿಲ್ಲೆ ದೊಡ್ಮನೆ ಬಳಿಯ ಕೆರೆಕುಳಿ ಎಂಬ ಪುಟ್ಟ ಊರು!
ರೈತರು
ಟ್ರೆಂಡಿಂಗ್ ನ್ಯೂಸ್
ವೈರಲ್ ಸುದ್ದಿ
ವೈರಲ್ ವಿಡಿಯೋ
ಸುದ್ದಿ
Latest Videos
Recommended Stories
Recommended image1
ಸಾಲ ವಸೂಲಾತಿ ನಿಯಮಗಳನ್ನು ಬಿಗಿಗೊಳಿಸಿದ ಆರ್‌ಬಿಐ; ನೂತನ ಮಾರ್ಗದರ್ಶಿ ಸೂತ್ರ ಪ್ರಕಟ
Recommended image2
Life-Changing Success Stories: ಮಗಳಿಗಾಗಿ 5 ಲಕ್ಷದ ಕೆಲಸಬಿಟ್ಟ ಟೆಕ್ಕಿ; ಕಟ್ ಮಾಡಿದ್ರೆ, ವರ್ಷದೊಳಗೆ 50 ಲಕ್ಷ ಮೌಲ್ಯದ ಬ್ಯುಸಿನೆಸ್ ಕಟ್ಟಿದ ಮಹಿಳೆ!
Recommended image3
ಆಟೋ ಹತ್ತಿದ್ರೆ 60 ರೂಪಾಯಿ ಖರ್ಚು; ಬೆಂಗಳೂರಿನ CA ಮಾಡಿದ್ರು ಈ ಕೆಲಸ, ತಿಂಗಳಿಗೆ 1,560 ಉಳಿತಾಯ
Related Stories
Recommended image1
ದಕ್ಷಿಣ ಕಾಶಿ 'ಕಾಳೇಶ್ವರ' ದೇಗುಲಕ್ಕೆ ಬುಲ್ಡೋಜರ್ ನುಗ್ಗಿಸಿದ ರೇವಂತ್ ರೆಡ್ಡಿ ಸರ್ಕಾರ..
Recommended image2
ಇಲ್ಲಿ ದ್ರಾಕ್ಷಿ ತೋಟಗಳ ರಕ್ಷಣೆಗೆ ಗೂಬೆಗಳ ನೇಮಕ.. ಕೋಟಿ, ಕೋಟಿ ಬೆಳೆಗಳಿಗೆ ಸೈನಿಕರಂತೆ ರಕ್ಷಣೆ..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved