MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಕಾಲೇಜು ಅರ್ಧಕ್ಕೆ ಬಿಟ್ಟ ಹುಡುಗಿ, 24ನೇ ವಯಸ್ಸಿಗೆ ಮೋದಿ ಜುಕರ್‌ಬರ್ಗ್ ಪಟ್ಟಿಯಲ್ಲಿ ಸ್ಥಾನ

ಕಾಲೇಜು ಅರ್ಧಕ್ಕೆ ಬಿಟ್ಟ ಹುಡುಗಿ, 24ನೇ ವಯಸ್ಸಿಗೆ ಮೋದಿ ಜುಕರ್‌ಬರ್ಗ್ ಪಟ್ಟಿಯಲ್ಲಿ ಸ್ಥಾನ

ಕಾಲೇಜು ಅರ್ಧಕ್ಕೆ ಬಿಟ್ಟ ಹುಡುಗಿ, 24ನೇ ವಯಸ್ಸಿಗೆ ಮೋದಿ ಜುಕರ್‌ಬರ್ಗ್ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. ಮೆಟಾದ ಹೊಸ ವಾಟ್ಸಾಪ್ ಸ್ಟಿಕ್ಕರ್ ಫೀಚರ್‌ಗಾಗಿ ನಟ ವಿಜಯ್ ದೇವರಕೊಂಡ ಜೊತೆ ಅಮಲಾ ಕೂಡ ಆಯ್ಕೆಯಾಗಿದ್ದಾರೆ. 

2 Min read
Author : Chethan Kumar
Published : Apr 06 2026, 11:22 PM IST
Share this Photo Gallery
  • FB
  • TW
  • Linkdin
  • Whatsapp
16
ಸೋಶಿಯಲ್ ಮೀಡಿಯಾ ಸ್ಟಾರ್
Image Credit : Amala Shaji

ಸೋಶಿಯಲ್ ಮೀಡಿಯಾ ಸ್ಟಾರ್

ಸೋಶಿಯಲ್ ಮೀಡಿಯಾ ಬಳಸೋರಿಗೆ ಅಮಲಾ ಶಾಜಿ ಹೆಸರು ಚಿರಪರಿಚಿತ. ಇವರು ಮೂಲ ಕೇರಳ ಆಧರೂ ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದಾರೆ.ರೀಲ್ಸ್, ಪೋಸ್ಟ್, ವಿಡಿಯೋಗಳ ಮೂಲಕ ಅಪಾರ ಅಭಿಮಾನಿಗಳ ಬಳಗ ಸೃಷ್ಟಿಸಿರುವ ಅಮಲಾ ಇದೀಗ ತಮ್ಮ 24ನೇ ವಯಸ್ಸಿಗೆ ಸಾಧನೆ ಮಾಡಿದ್ದಾರೆ.

26
ಮೋದಿ, ಜುಕರ್‌ಬರ್ಗ್ ಲಿಸ್ಟ್‌ನಲ್ಲಿ ಅಮಲಾಗೆ ಸ್ಥಾನ
Image Credit : Instagram

ಮೋದಿ, ಜುಕರ್‌ಬರ್ಗ್ ಲಿಸ್ಟ್‌ನಲ್ಲಿ ಅಮಲಾಗೆ ಸ್ಥಾನ

ವಾಟ್ಸಾಪ್ ಚಾನೆಲ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವವರ ಲಿಸ್ಟ್‌ನಲ್ಲಿ ಅಮಲಾ ಕೂಡ ಒಬ್ಬರು. ವ್ಯಾಟ್ಸಾಪ್ ಚಾನೆಲ್‌ನಲ್ಲಿ ಗರಿಷ್ಠ ಫಾಲೋವರ್ಸ್ ಹೊಂದಿದವರ ಪಟ್ಟಿಯಲ್ಲಿ ಅಮಲಾಗೆ 29ನೇ ಸ್ಥಾನ. ವಿಶೇಷ ಅಂದರೆ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಪಟ್ಟಿಯಲ್ಲಿ ಅಮಲಾ ಕೂಡ ಸ್ಥಾನ ಪಡೆದಿದ್ದಾರೆ.

Related Articles

Related image1
BBK 12: ಗಿಲ್ಲಿ ಜೊತೆ ಕಾಣಿಸಿಕೊಂಡಿದ್ದೇ ತಡ.. ಸೋಶಿಯಲ್‌ ಮೀಡಿಯಾ ಸ್ಟಾರ್ ಆದ ಮೋನಿಕಾ
Related image2
ಪೋಷಕರು ಬೇಡವೆಂದು ತಿಪ್ಪೆಗೆಸೆದ ಮಗು ಈಗ ಫೇಮಸ್ ಇನ್‌ಫ್ಲುಯೆನ್ಸರ್
36
ವ್ಯಾಟ್ಸಾಪ್ ಫೀಚರ್ ಕ್ಯಾಂಪೇನ್‌ನಲ್ಲಿ ಅಮಲಾ
Image Credit : Amala Shaji

ವ್ಯಾಟ್ಸಾಪ್ ಫೀಚರ್ ಕ್ಯಾಂಪೇನ್‌ನಲ್ಲಿ ಅಮಲಾ

ವಾಟ್ಸಾಪ್‌ನ ಒಂದು ಹೊಸ ಫೀಚರ್‌ಗಾಗಿ ಅಮಲಾ ಕ್ಯಾಂಪೇನ್ ಮಾಡುತ್ತಿದ್ದಾರೆ. ಅದುವೇ ಸ್ಟಿಕ್ಕರ್ಸ್. ಭಾರತದಿಂದ ಈ ಅವಕಾಶ ಸಿಕ್ಕಿರುವುದು ಇಬ್ಬರಿಗೆ ಮಾತ್ರ. ಒಬ್ಬರು ಅಮಲಾ, ಇನ್ನೊಬ್ಬರು ನಟ ವಿಜಯ್ ದೇವರಕೊಂಡ ಎಂದು ಅಮಲಾ ಅವರೇ ಹೇಳಿದ್ದಾರೆ. ಪಾಡ್‌ಕಾಸ್ಟ್‌ನಲ್ಲಿ ಅವರು ಈ ವಿಷಯ ಹಂಚಿಕೊಂಡಿದ್ದಾರೆ.

46
ಸಂತಸ ಹಂಚಿಕೊಂಡ ಅಮಲಾ
Image Credit : Amala Shaji

ಸಂತಸ ಹಂಚಿಕೊಂಡ ಅಮಲಾ

ವಾಟ್ಸಾಪ್ ಚಾನೆಲ್ ಶುರು ಮಾಡಿದ ತಕ್ಷಣ 5 ಮಿಲಿಯನ್ ಫಾಲೋವರ್ಸ್ ಆಯ್ತು. ಯೂಟ್ಯೂಬ್, ಇನ್‌ಸ್ಟಾದಲ್ಲಿ ನಾನು ತುಂಬಾ ಕ್ಯಾಂಪೇನ್ ಮಾಡಿದ್ದೀನಿ. ಅದೇ ರೀತಿ ವಾಟ್ಸಾಪ್‌ನಲ್ಲೂ ಮಾಡಿದೆ. ಫೋನ್‌ನಲ್ಲಿ ಎಮೋಜಿ ಬದಲು ಸ್ಟಿಕ್ಕರ್ಸ್ ಬರುತ್ತೆ. ಅಂಥದ್ದೊಂದು ಫೀಚರ್ ಮೆಟಾ ಕಂಪನಿ ರೆಡಿ ಮಾಡ್ತಿದೆ. ನನ್ನ ಸುಮಾರು 20 ಫೋಟೋಗಳನ್ನ ಎಮೋಜಿ ತರ ಮಾಡಿ ಅಪ್‌ಲೋಡ್ ಮಾಡ್ತಾರೆ. ಮುಂದೆ ಇದು ಎಲ್ಲರಿಗೂ ಸಿಗುತ್ತೆ. ಇಂಡಿಯಾದಲ್ಲಿ ನನಗೂ, ನಟ ವಿಜಯ್ ದೇವರಕೊಂಡಗೆ ಮಾತ್ರ ಈ ಚಾನ್ಸ್ ಸಿಕ್ಕಿರೋದು. ಇದು ಯುಎಸ್‌ಡಿ ಪೇಮೆಂಟ್, ಇಂಟರ್‌ನ್ಯಾಷನಲ್ ಪ್ರಾಜೆಕ್ಟ್" ಅಂತ ಅಮಲಾ ವಿವರಿಸಿದ್ದಾರೆ.

56
ಉದ್ಯಮದಲ್ಲಿ ಸೈ
Image Credit : Amala Shaji

ಉದ್ಯಮದಲ್ಲಿ ಸೈ

ಕಾಲೇಜಿನಲ್ಲಿ ಎರಡನೇ ವರ್ಷ ಓದುತ್ತಿದ್ದಾಗ ಅಮಲಾ ಓದು ನಿಲ್ಲಿಸಿದ್ದರು. ಈಗ ತಮ್ಮದೇ ಆದ ಟಿ-ಶರ್ಟ್ ಬ್ರ್ಯಾಂಡ್ ನಡೆಸುತ್ತಿದ್ದಾರೆ. "ನಾನು ಕಾಲೇಜಲ್ಲಿ ಸೆಕೆಂಡ್ ಇಯರ್‌ವರೆಗೆ ಹೋದೆ. ಯಾವ ಟ್ರೆಂಡ್ ಬಂದ್ರೂ ಅದನ್ನ ನಾನು ರೀ-ಕ್ರಿಯೇಟ್ ಮಾಡ್ತಿದ್ದೆ. ಆದ್ರೆ ಜನರಿಗೆ ಅದು ಇಷ್ಟ ಆಗ್ತಿರಲಿಲ್ಲ. ಸಿಕ್ಕಾಪಟ್ಟೆ ಟ್ರೋಲ್ ಮಾಡೋರು. ಹುಡುಗರೆಲ್ಲಾ ನೇರವಾಗಿ ಬಂದು ಒಂಥರಾ ಮಾತಾಡೋರು. ನನ್ನ ಬಣ್ಣದ ಬಗ್ಗೆ ಮಾತಾಡೋರು. ಅದು ಸರಿ ಅಲ್ಲ. ಯಾರನ್ನೂ ಹಾಗೆ ಹೇಳಬಾರದು. ಅದೆಲ್ಲಾ ನನ್ನ ಮೇಲೆ ತುಂಬಾ ಪರಿಣಾಮ ಬೀರಿತು. ಟೀಚರ್‌ ಹತ್ರ ಹೇಳಿದಾಗ, ಡಿಸ್ಟೆನ್ಸ್ ಎಜುಕೇಶನ್ ಮಾಡು ಅಂದ್ರು. ಆದ್ರೆ ನನಗೆ ಇಂಟರೆಸ್ಟ್ ಇರಲಿಲ್ಲ. ಕೊನೆಗೆ ನಾನೇ ಒಂದು ಫ್ಯಾಷನ್ ಹಬ್ ಶುರು ಮಾಡಿದೆ. ಒಂದು ಟಿ-ಶರ್ಟ್ ಬ್ರ್ಯಾಂಡ್ ಶುರು ಮಾಡಿದೆ. ಅದು ಚೆನ್ನಾಗಿ ನಡೀತಿದೆ" ಅಂತ ಅಮಲಾ ಹೇಳಿಕೊಂಡಿದ್ದಾರೆ.

66
ಅಮಲಾ ಶಾಜಿ ಅವರ ಸದ್ಯದ ಫಾಲೋವರ್ಸ್
Image Credit : Amala Shaji

ಅಮಲಾ ಶಾಜಿ ಅವರ ಸದ್ಯದ ಫಾಲೋವರ್ಸ್

  • ಇನ್‌ಸ್ಟಾಗ್ರಾಂ - 4.3 ಮಿಲಿಯನ್
  • ವಾಟ್ಸಾಪ್ ಚಾನೆಲ್ - 7.1 ಮಿಲಿಯನ್
  • ಯೂಟ್ಯೂಬ್ - 1.19 ಮಿಲಿಯನ್
  • ಟಿಕ್‌ಟಾಕ್‌ನಲ್ಲಿ 5 ಮಿಲಿಯನ್ ಇತ್ತು (ಭಾರತದಲ್ಲಿ ಟಿಕ್‌ಟಾಕ್ ಲಭ್ಯವಿಲ್ಲ)

ಅಮಲಾ ಶಾಜಿ ಅವರ ಸದ್ಯದ ಫಾಲೋವರ್ಸ್

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಸಾಮಾಜಿಕ ಮಾಧ್ಯಮ
ಭಾರತ ಸುದ್ದಿ
ನರೇಂದ್ರ ಮೋದಿ

Latest Videos
Recommended Stories
Recommended image1
ಬಂಗಾಳ ಚುನಾವಣೆ ಸಮೀಕ್ಷೆ ಫಲಿತಾಂಶ, ಬಿಜೆಪಿ ಹೋರಾಟ, ಮಮತಾ ಬ್ಯಾನರ್ಜಿ ಟಿಎಂಸಿಗೆ ನಡುಕ
Recommended image2
ನುಸುಳುಕೋರರಿಗೆ ನಡುಕ ಹುಟ್ಟಿಸಲಿದೆ BSF ಹೊಸ ತಂತ್ರ: ಗಡಿಯಲ್ಲಿ ಇನ್ಮುಂದೆ ಮೊಸಳೆ, ಹಾವುಗಳೇ ಸೆಕ್ಯೂರಿಟಿ!
Recommended image3
ತಂದೆ ಮಗನ ಲಾಕಪ್ ಡೆತ್, 9 ಪೊಲೀಸರಿಗೆ ಗಲ್ಲು ಶಿಕ್ಷೆ ವಿಧಿಸಿ ಕೋರ್ಟ್ ಐತಿಹಾಸಿಕ ತೀರ್ಪು
Related Stories
Recommended image1
BBK 12: ಗಿಲ್ಲಿ ಜೊತೆ ಕಾಣಿಸಿಕೊಂಡಿದ್ದೇ ತಡ.. ಸೋಶಿಯಲ್‌ ಮೀಡಿಯಾ ಸ್ಟಾರ್ ಆದ ಮೋನಿಕಾ
Recommended image2
ಪೋಷಕರು ಬೇಡವೆಂದು ತಿಪ್ಪೆಗೆಸೆದ ಮಗು ಈಗ ಫೇಮಸ್ ಇನ್‌ಫ್ಲುಯೆನ್ಸರ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved