Chinese social media influencer story: ಆ ಮಗುವನ್ನು 20 ವರ್ಷಗಳ ಹಿಂದೆ ಪಾಕಿಸ್ತಾನಿ ಪೋಷಕರು ಬೇಡವೆಂದು ಬಾಕ್ಸ್‌ನಲ್ಲಿ ತುಂಬಿ ತಿಪ್ಪೆಗೆಸೆದು ಹೋಗಿದ್ದರು ಆದರೆ ಆ ಮಗು ಇಂದು ಚೀನಾದಲ್ಲಿ ಫೇಮಸ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಎನಿಸಿದ್ದು, ಲಕ್ಷಾಂತರ ಜನ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ಪೋಷಕರು ಬೇಡವೆಂದು ತಿಪ್ಪೆಗೆಸೆದ ಮಗು ಈಗ ಫೇಮಸ್ ಇನ್‌ಫ್ಲುಯೆನ್ಸರ್

ಆ ಮಗುವನ್ನು ಪೋಷಕರು ಬೇಡವೆಂದು ಬಾಕ್ಸ್‌ನಲ್ಲಿ ತುಂಬಿ ತಿಪ್ಪೆಗೆಸೆದು ಹೋಗಿದ್ದರು. ಆದರೆ ಆ ಮಗುವಿನ ಅದೃಷ್ಟ ಚೆನ್ನಾಗಿತ್ತೋ ಏನೋ ಹೀಗಾಗಿ ಪೋಷಕರು ಬೇಡವೆಂದು ಬೀದಿಗೆಸೆದ ಮಗುವನ್ನು ಚೀನಾ ದಂಪತಿ ದತ್ತು ಪಡೆದರು. ಈಗ ಆ ಮಗು ಚೀನಾದಲ್ಲಿ ಮಿಲಿಯನ್‌ಗಟ್ಟಲೇ ಫಾಲೋವರ್ಸ್‌ಗಳನ್ನು ಹೊಂದಿರುವ ಸೋಶಿಯಲ್ ಮೀಡಿಯಾ ಸ್ಟಾರ್‌. ಆಕೆಯ ಕತೆ ಇಲ್ಲಿದೆ. ಆಯಸ್ಸು ಅದೃಷ್ಟವಿದ್ದರೆ ಎಂತಹ ಅನಾಹುತಗಳಿಂದಲೂ ನಾವು ಪಾರಾಗಿ ಬರಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 

ಪೋಷಕರು ಎಸೆದ ಮಗುವನ್ನು ದತ್ತು ಪಡೆದ ಚೀನಾ ದಂಪತಿ

ಹೌದು ಚೀನಾದಲ್ಲಿ ಈಗ ಸಾಕಷ್ಟು ಫೇಮಸ್ ಆಗಿರುವ ಸೋಶಿಯಲ್ ಮೀಡಿಯಾ ಸ್ಟಾರ್ ಕತೆ ಇದು. ಆಕೆಯ ಹೆಸರು ಫ್ಯಾನ್ ಝಿಹೆ, ಮೂಲತಃ ಪಾಕಿಸ್ತಾನಿ, 20 ವರ್ಷಗಳ ಹಿಂದೆ ಈಕೆಯನ್ನು ಪೋಷಕರು ಬೇಡವೆಂದು ಕಾರ್ಡ್ಬೋರ್ಡ್‌ ಬಾಕ್ಸ್‌ಗೆ ತುಂಬಿಸಿ ಮನೆಯಿಂದ ಹೊರಗೆ ಎಸೆದಿದ್ದರು. ಆದರೆ ಅದೃಷ್ಟ ಚೆನ್ನಾಗಿತ್ತು ನೋಡಿ, ಚೀನಾ ಮೂಲದ ಮಕ್ಕಳಿಲ್ಲದ ದಂಪತಿ ಈ ಮಗುವನ್ನು ದತ್ತು ಪಡೆದರು. ನಂತರ ಚೀನಾದ ಹೆನಾನ್ ಗ್ರಾಮೀಣ ಪ್ರಾಂತ್ಯದಲ್ಲಿ ಆಕೆಯನ್ನು ಸಾಕಿ ಬೆಳೆಸಿದರು. ಆದರೆ 2023ರಲ್ಲಿ ಆಕೆಯ ಜೀವನ ನಾಟಕೀಯವೆನಿಸುವ ತಿರುವ ಪಡೆದುಕೊಂಡಿತು. ಆಕೆ ಸ್ಪಷ್ಟವಾದ ಹೆನಾನ್ ಉಚ್ಚಾರಣೆಯಲ್ಲಿ ಮಾತಾನಾಡುತ್ತಾ ನೂಡಲ್ಸಸ್‌ನ್ನು ತಿನ್ನುತ್ತಿರುವ ಪುಟ್ಟ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಯ್ತು. ಇದು ಆಕೆಗೆ ಚೀನಾ ಸೋಶಿಯಲ್ ಮೀಡಿಯಾದಲ್ಲಿ 1.8 ಮಿಲಿಯನ್ ಫಾಲೋವರ್ಸ್‌ಗಳನ್ನು ಗಳಿಸುವಂತೆ ಮಾಡಿತು.

ತನ್ನ ಮೊದಲ ಅಭಿಮಾನಿಯ ಜೊತೆ ಸಪ್ತಪದಿ ತುಳಿದ ಫ್ಯಾನ್ ಝಿಹೆ

ತನ್ನ ಆಕರ್ಷಕ ನೋಟ ಮತ್ತು ನೈಜವಾದ ಮಾತುಗಳಿಂದ ಹೆಸರುವಾಸಿಯಾದ ಫ್ಯಾನ್ ಝೇನ್, ಸೋಶಿಯಲ್ ಮೀಡಿಯಾದಲ್ಲಿ ದಿನವೂ ಕೃಷಿ ಜೀವನದ ದೈನಂದಿನ ಚಟುವಟಿಕೆಗಳನ್ನು ಹಂಚಿಕೊಳ್ಳುತ್ತಿದ್ದಳು, ಸ್ಥಳೀಯ ಗ್ರಾಮಸ್ಥರ ಉತ್ಪನ್ನಗಳನ್ನು ಈಕೆ ಆನ್‌ಲೈನ್‌ನಲ್ಲಿ ಪ್ರಚಾರ ಮಾಡುವ ಮೂಲಕ ಅವರನ್ನು ಬೆಂಬಲಿಸುತ್ತಿದ್ದಳು. ಇಂತಹ ಫ್ಯಾನ್ ಝೇನ್‌ ಈಗ ತನಗೆ ಸೋಶಿಯಲ್ ಮೀಡಿಯಾದಲ್ಲಿ ಮೊದಲು ಅಭಿಮಾನಿ ಫಾಲೋವರ್ಸ್ ಆದವನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಲಿಯು ಕ್ಸಿಯಾವೋಶುವೈ ಎಂಬ ಹುಡುಗನೊಂದಿಗೆ ಈಕೆಯ ನಿಶ್ಚಿತಾರ್ಥದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.

ಈ ಜೋಡಿ ಮೊದಲಿಗೆ ಸ್ನೇಹಿತರ ಮೂಲಕ ಆಕಸ್ಮಿಕವಾಗಿ ಭೇಟಿಯಾಗಿದ್ದು, ನಂತರ ಪ್ರೀತಿಯಲ್ಲಿ ಬಿದ್ದಿದ್ದಾರೆ. ಲಿಯು ಕ್ಸಿಯಾವೋಶುವೈ ತನ್ನ ಪ್ರೇಯಸಿಯ ಕೆಲಸಗಳಿಗೆ ಸಹಾಯ ಮಾಡುವುದಕ್ಕಾಗಿ ತನ್ನ ಕೆಲಸವನ್ನೇ ತೊರೆದು ಪತ್ನಿಯ ಪ್ರೀತಿಯ ದಾಸನಾಗಲು ಮುಂದಾಗಿದ್ದಾರೆ. ಮೂರು ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ, ಫ್ಯಾನ್ ತಮ್ಮ ಮುಂಬರುವ ವಿವಾಹವನ್ನು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದು,ಇವರ ಮದುವೆ ವೀಡಿಯೋ ವೈರಲ್ ಆಗಿದೆ. ಚೀನಾದ ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಜನ ಅಭಿಮಾನಿಗಳನ್ನು ಹೊಂದಿರುವ ಫ್ಯಾನ್ ಝೇನ್ ಈಗ ಅಲ್ಲಿನ ಫೇಮಸ್ ಇನ್‌ಫ್ಲುಯೆನ್ಸರ್ ಎನಿಸಿದ್ದಾರೆ. ಇವರ ಮದುವೆ ವೀಡಿಯೋ ನೋಡಿದ ಅನೇಕರು ನವಜೋಡಿಗೆ ಶುಭಹಾರೈಸಿದ್ದಾರೆ.

ಇದನ್ನೂ ಓದಿ: ಲಡಾಖ್‌ನ ಲೇಹ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಬಿಜೆಪಿ ಕಚೇರಿ, ಪೊಲೀಸ್ ವಾಹನಕ್ಕೆ ಬೆಂಕಿ

ಇದನ್ನೂ ಓದಿ: ಹಾವು ಹಿಡಿಯಲು ಬಂದವನನ್ನೇ ಬಂಧಿಯಾಗಿಸಿದ ಹೆಬ್ಬಾವು

ಇದನ್ನೂ ಓದಿ: ಡಿಸಾಸ್ಟರ್ ಸಿನಿಮಾಗಳಂತೆ ಕಾರುಗಳು ಚಲಿಸುತ್ತಿದ್ದಂತೆ ಬಾಯ್ತರೆದ ಭೂಮಿ: 50 ಅಡಿ ಆಳಕ್ಕೆ ಬಿದ್ದ ಕಾರುಗಳು

ಇದನ್ನೂ ಓದಿ: ಸ್ವಾಮೀಜಿಯಿಂದಲೇ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಕಿರುಕುಳ: ಕೇಸ್ ದಾಖಲಾಗುತ್ತಿದ್ದಂತೆ ಚೈತನ್ಯಾನಂದ ಸರಸ್ವತಿ ನಾಪತ್ತೆ

YouTube video player