Women Health: ಈ ಐದು ಆಹಾರ ಸೇವಿಸಿದ್ರೆ 40ರ ನಂತರವೂ ಮಹಿಳೆಯರು ಫಿಟ್ ಆಗಿರುತ್ತಾರೆ
Women Health: ಮನೆ, ಮಕ್ಕಳ ಕುರಿತು ಹೆಚ್ಚು ಯೋಚನೆ ಮಾಡಿ, ತಮ್ಮ ಆರೋಗ್ಯವನ್ನು ಮರೆಯುವ ಮಹಿಳೆಯರು ಈ ಐದು ಆಹಾರವನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ, 40ರ ನಂತರವೂ ನೀವು ಫಿಟ್ ಜೊತೆ ಆರೋಗ್ಯಯುತವಾಗಿರುತ್ತೀರಿ. ನಿಮ್ಮ ದಯಟ್ ನಲ್ಲಿ ಈ ಆಹಾರವನ್ನು ಸೇರಿಸಲು ಮರೆಯಬೇಡಿ.

ಮಹಿಳೆಯರ ಆರೋಗ್ಯ
ಮಹಿಳೆಯರು ಯಾವಾಗಲೂ ಎಲ್ಲರ ಊಟದ ಬಗ್ಗೆ ಕಾಳಜಿ ವಹಿಸುತ್ತಾರೆ. ಕುಟುಂಬದ ಪೋಷಣೆ, ಮಕ್ಕಳ ಆರೋಗ್ಯ, ಸಂಗಾತಿಯ ಏಳಿಗೆ, ಇವೆಲ್ಲದುದರ ಕಡೆಗೆ ಗಮನ ಇರುತ್ತೆ. ಆದರೆ ತಮ್ಮ ಸ್ವಂತ ದೇಹದ ವಿಷಯಕ್ಕೆ ಬಂದಾಗ... "ತಮಗೆ ಏನು ಬೇಕು?" ಎಂದು ಮಹಿಳೆಯರು ಕೇಳೋದೇ ಇಲ್ಲ.. ಬಹುಶಃ ಅದನ್ನು ಬದಲಾಯಿಸುವ ಸಮಯ ಬಂದಿದೆ. ಪ್ರತಿದಿನ ನಮ್ಮನ್ನು ಪೋಷಿಸಿಕೊಳ್ಳಲು ಮಹಿಳೆಯರು ಕಲಿಯಬೇಕು. ಅದಕ್ಕಾಗಿ, ಪ್ರತಿದಿನ ಈ ಡಯಟ್ ಫಾಲೋ ಮಾಡಿದ್ರೆ, ನೀವು ಚೆನ್ನಾಗಿರ್ತೀರಿ, ನಿಮ್ಮ ಮನೆಯವರು ಚೆನ್ನಾಗಿರುತ್ತಾರೆ.
ನೆಲ್ಲಿಕಾಯಿ ಜ್ಯೂಸ್
ನೆಲ್ಲಿಕಾಯಿ ಜ್ಯೂಸ್ ಪ್ರತಿದಿನ ಕುಡಿಯುವುದರಿಂದ ಈಸ್ಟ್ರೊಜೆನ್ ಮತ್ತು ಕಾರ್ಟಿಸೋಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು PMS ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು, ಮುಟ್ಟಿನ ಸೆಳೆತದಿಂದ ಪರಿಹಾರವನ್ನು ನೀಡಬಹುದು ಮತ್ತು ಆಯುರ್ವೇದ ಪದ್ಧತಿಯಲ್ಲಿ ಇದು ಅಂಡಾಶಯದ ಆರೋಗ್ಯ ಮತ್ತು ಫಲವತ್ತತೆಗೆ ಬೆಂಬಲ ನೀಡುತ್ತದೆ. ಜೊತೆಗೆ ಸ್ಕಿನ್, ಆರೋಗ್ಯ, ಇಮ್ಯೂನಿಟಿ ಪವರ್ ಹೆಚ್ಚಿಸಲು ಸಹ ಇದು ಸಹಾಯ ಮಾಡುತ್ತದೆ.
ಮೊಳಕೆ ಕಾಳುಗಳು
ಮೊಳಕೆ ಕಾಳುಗಳು ಮಹಿಳೆಯರ ಆರೋಗ್ಯಕ್ಕೆ ಅತ್ಯುತ್ತಮ ಆಹಾರ, ಇದರಲ್ಲಿ ಫೋಲೇಟ್ (ಗರ್ಭಧಾರಣೆ ಮತ್ತು ಮಿದುಳಿನ ಆರೋಗ್ಯಕ್ಕೆ ಉತ್ತಮ), ಪ್ರೋಟೀನ್, ಕಬ್ಬಿಣ, ಮತ್ತು ಫೈಬರ್ ಇದ್ದು, ನಿಯಮಿತವಾಗಿ ಸೇವಿಸಿದರೆ ಹೊಳೆಯುವ ಚರ್ಮ ಜೊತೆಗೆ ಕೂದಲು ಕೂಡ ನಿಮ್ಮದಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ, ಕಣ್ಣುಗಳಿಗೆ ವಿಟಮಿನ್ ಎ ಮತ್ತು ಸಿಗಳನ್ನು ನೀಡುತ್ತೆ, ಹೃದಯದ ಆರೋಗ್ಯವನ್ನು ಬೆಂಬಲಿಸುತ್ತವೆ, ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನಗೊಳಿಸುತ್ತವೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತವೆ, ಇದು ಒಟ್ಟಾರೆ ಗರ್ಭಧಾರಣೆ ಮತ್ತು ಋತುಬಂಧದ ಸಂದರ್ಭದಲ್ಲಿ ಸೂಪರ್ ಫುಡ್ ಆಗಿ ಕಾರ್ಯನಿರ್ವಹಿಸುತ್ತದೆ.
ಬೂದು ಕುಂಬಳಕಾಯಿ ಜ್ಯೂಸ್
ಪ್ರತಿದಿನ ಕುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ದೇಹವು ಹೈಡ್ರೇಟ್ ಆಗಿರುತ್ತದೆ, ದೇಹವನ್ನು ನಿರ್ವಿಷಗೊಳಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ತೂಕ ಇಳಿಕೆಗೆ ಸಹಾಯ ಮಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದಾಗಿ ಹೊಳೆಯುವ ಚರ್ಮ ಮತ್ತು ಆರೋಗ್ಯಕರ ಕೂದಲನ್ನು ಉತ್ತೇಜಿಸುತ್ತದೆ, ಜೊತೆಗೆ ಇದು ದೇಹಕ್ಕೆ ಶಕ್ತಿ ಮತ್ತು ಮೂಳೆಯ ಆರೋಗ್ಯಕ್ಕೆ ಅಗತ್ಯವಾದ ಖನಿಜಗಳನ್ನು ಒದಗಿಸುತ್ತದೆ.
ಮಿಲೆಟ್ಸ್
ಮಿಲೆಟ್ಸ್ ಮಹಿಳೆಯರ ಆರೋಗ್ಯಕ್ಕೆ ಅತ್ಯುತ್ತಮವಾಗಿವೆ. ಏಕೆಂದರೆ ಅವು ಫೈಬರ್, ಖನಿಜಗಳು ಮತ್ತು ಫೈಟೊಈಸ್ಟ್ರೊಜೆನ್‌ಗಳಲ್ಲಿ ಸಮೃದ್ಧವಾಗಿವೆ, ಜೀರ್ಣಕ್ರಿಯೆ, ತೂಕ ನಿರ್ವಹಣೆ, ಹಾರ್ಮೋನುಗಳ ಸಮತೋಲನ, ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮತ್ತು ಮೂಳೆಯ ಆರೋಗ್ಯಕ್ಕಾಗಿ ಮಿಲೆಟ್ಸ್ ಸಹಾಯ ಮಾಡುತ್ತದೆ.
ಡ್ರೈ ಫ್ರುಟ್ಸ್
ಡ್ರೈ ಫ್ರುಟ್ಸ್ ಮಹಿಳೆಯರ ಆರೋಗ್ಯಕ್ಕೆ ಉತ್ತಮವಾಗಿರುವ ಆಹಾರವಾಗಿದೆ. ಇದು, ರಕ್ತಹೀನತೆ ನಿವಾರಾಣೆಗೆ ಬೇಕಾದ ಕಬ್ಬಿಣಾಂಶ (ಒಣದ್ರಾಕ್ಷಿ), ಮೂಳೆಗಳಿಗೆ ಕ್ಯಾಲ್ಸಿಯಂ (ಬಾದಾಮಿ, ಅಂಜೂರ), ಜೀರ್ಣಕ್ರಿಯೆಗೆ ಫೈಬರ್ (ಅಂಜೂರ, ಖರ್ಜೂರ), ಮತ್ತು ಮೆದುಳು/ಹೃದಯಕ್ಕೆ ಒಮೆಗಾ-3 (ವಾಲ್ನಟ್ಸ್), ಜೊತೆಗೆ ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲ ಇದು ಮಹಿಳೆಯರಿಗೆ ದೇಹಕ್ಕೆ ಶಕ್ತಿ ಮತ್ತು ಹಾರ್ಮೋನ್ ಸಮತೋಲನವನ್ನು ನೀಡುತ್ತವೆ, ಇದು ಎಲ್ಲಾ ವಯಸ್ಸಿನವರಿಗೆ, ವಿಶೇಷವಾಗಿ ಗರ್ಭಾವಸ್ಥೆಯಲ್ಲಿ, ಮುಟ್ಟಿನ ಸಮಯದಲ್ಲಿ ಮತ್ತು ಋತುಬಂಧದ ಸಮಯದಲ್ಲಿ ನೆರವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

