MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಈ ಅಪಾಯಕಾರಿ ಕಾಯಿಲೆ ಬಂದ್ರೆ ದಿನಕ್ಕೆ 30 ಸಲ ಶೌಚಕ್ಕೆ ಹೋಗಬೇಕಾಗುತ್ತೆ!

ಈ ಅಪಾಯಕಾರಿ ಕಾಯಿಲೆ ಬಂದ್ರೆ ದಿನಕ್ಕೆ 30 ಸಲ ಶೌಚಕ್ಕೆ ಹೋಗಬೇಕಾಗುತ್ತೆ!

cyclosporiasis outbreak Cyclospora outbreak: ಸೈಕ್ಲೋಸ್ಪೊರಾ ಎಂಬ ಸೂಕ್ಷ್ಮ ಪರಾವಲಂಬಿಯಿಂದ ಹರಡುವ ಈ ರೋಗ ಎಷ್ಟು ಅಪಾಯಕಾರಿಯಾಗಿದೆ ಎಂದರೆ ಸೋಂಕು ತಗುಲಿದ ವ್ಯಕ್ತಿ ದಿನಕ್ಕೆ ಮೂವತ್ತು ಬಾರಿ ಶೌಚಾಲಯಕ್ಕೆ ಹೋಗಬೇಕಾಗಿ ಬಂತು! ಈ ಕಾಯಿಲೆ ಬಗ್ಗೆ ತಿಳಿದುಕೊಳ್ಳಿ, 

2 Min read
Author : Ravi Janekal
Published : Jul 21 2026, 10:43 AM IST
Share this Photo Gallery
  • FB
  • TW
  • Linkdin
  • Whatsapp
15
Cyclosporiasis outbreak: ಹೆಚ್ಚುತ್ತಿದೆ ಮತ್ತೊಂದು ಅಪಾಯಕಾರಿ ಕಾಯಿಲೆ
Image Credit : Asianet News

Cyclosporiasis outbreak: ಹೆಚ್ಚುತ್ತಿದೆ ಮತ್ತೊಂದು ಅಪಾಯಕಾರಿ ಕಾಯಿಲೆ

ಆಂಧ್ರಪ್ರದೇಶದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಆತಂಕದವ ನಡುವೆ ಇದೀಗ ಮತ್ತೊಂದು ಅಪಾಯಕಾರಿ ರೋಗ ಹರಡುತ್ತಿರುವುದು ಆತಂಕ ಹೆಚ್ಚಿಸಿದೆ. ಸೈಕ್ಲೋಸ್ಪೊರಾ ಎಂಬ ಸೂಕ್ಷ್ಮ ಪರಾವಲಂಬಿಯಿಂದ ಉಂಟಾಗುವ ಸೋಂಕು ಸದ್ಯ ನಮ್ಮ ದೇಶದಲ್ಲಿಲ್ಲವಾದರೂ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವೇಗವಾಗಿ ಹರಡುತ್ತಿದೆ. ಪರಿಸ್ಥಿತಿ ಎಷ್ಟು ತೀವ್ರವಾಗಿದೆಯೆಂದರೆ ಒಬ್ಬ ಸೋಂಕಿತ ಮಹಿಳೆ ದಿನಕ್ಕೆ ಸುಮಾರು 30 ಬಾರಿ ಶೌಚಾಲಯಕ್ಕೆ ಹೋಗಬೇಕಾಗಿತ್ತು. ಈ ಸೋಂಕು ಆರೋಗ್ಯ ತಜ್ಞರಲ್ಲಿ ಆತಂಕ ಹುಟ್ಟುಹಾಕಿದೆ. ಇದು ನಿರಂತರ ನೀರಿನಂಶದ ಅತಿಸಾರ, ನಿರ್ಜಲೀಕರಣ ಮತ್ತು ಆಸ್ಪತ್ರೆಗೆ ದಾಖಲಾಗಲು ಕಾರಣವಾಗಿದೆ. ಈ ವರ್ಷ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸೈಕ್ಲೋಸ್ಪೊರಾ ಪ್ರಕರಣಗಳು 2019 ರ ದಾಖಲೆಯನ್ನು ಮೀರಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಸೈಕ್ಲೋಸ್ಪೊರಾ ಎಷ್ಟು ಅಪಾಯಕಾರಿ?
Image Credit : Asianet News

ಸೈಕ್ಲೋಸ್ಪೊರಾ ಎಷ್ಟು ಅಪಾಯಕಾರಿ?

ಹೆಪಟಾಲಜಿಸ್ಟ್ ಕ್ಲಿನಿಕಲ್ ವಿಜ್ಞಾನಿ, ಸಾರ್ವಜನಿಕ ಆರೋಗ್ಯ ಸಂಶೋಧಕರಾದ ಡಾ. ಸಿರಿಯಾಕ್ ಎ.ಬಿ. ಫಿಲಿಪ್ಸ್ ಹೇಳುವ ಪ್ರಕಾರ, ಸೈಕ್ಲೋಸ್ಪೊರಾ ಸೋಂಕನ್ನು ಸಾಮಾನ್ಯವಾಗಿ ಸಾಮಾನ್ಯ ಫುಡ್‌ ಪಾಯ್ಸನ್ ಅಥವಾ ವೈರಲ್ ಗ್ಯಾಸ್ಟ್ರೋಎಂಟರೈಟಿಸ್ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ. ಇದರ ಪ್ರಮುಖ ಲಕ್ಷಣವೆಂದರೆ ಒಮ್ಮೆ ಈ ಕಾಯಿಲೆ ಬಂದ್ರೆ ಕೆಲವೇ ದಿನಗಳಲ್ಲಿ ಗುಣವಾಗುವುದಿಲ್ಲ. ಸಾಮಾನ್ಯ ಫುಡ್‌ಪಾಯ್ಸನ್ ಆದಾಗ ಅದು ಒಂದರಿಂದ ಮೂರು ದಿನಗಳಲ್ಲಿ ವಾಸಿಯಾಗುತ್ತೆ. ಆದರೆ ಸೈಕ್ಲೋಸ್ಪೊರಾ ವಾಸಿಯಾಗುವಂತದ್ದಲ್ಲ. ಹಲವಾರು ವಾರಗಳವರೆಗೆ ಮುಂದುವರಿಯಬಹುದು. ಅಷ್ಟೇ ಅಲ್ಲ, ಚಿಕಿತ್ಸೆ ಪಡೆದು ರೋಗಿಗಳು ಚೇತರಿಸಿಕೊಂಡ ನಂತರವೂ ಮರುಕಳಿಸಬಹುದು. ಈ ಕಾಯಿಲೆ ಒಮ್ಮೆ ಬಂದರೆ ವಾಸಿಯಾಗುವ ಲಕ್ಷಣವಿಲ್ಲ. ಮುಂಜಾಗ್ರತೆ ಇದ್ದರೆ ರೋಗ ತಡೆಗಟ್ಟಬಹುದು. ಅದರ ಗುಣಲಕ್ಷಣಗಳೇನೆಂದು ಇಳಿಯೋಣ.

Related Articles

Related image1
ನೋಡಲು ಫಿಟ್ ಆಗಿರುವ ಈ ಸುಂದರ ನಟಿಯರಿಗಿದೆ ಬಲು ಅಪರೂಪದ ಕಾಯಿಲೆ
Related image2
ಫ್ಯಾಟಿ ಲಿವರ್: ಮೂವರಲ್ಲಿ ಒಬ್ಬರಿಗಿದೆ ಈ ಅಪಾಯಕಾರಿ ಕಾಯಿಲೆ, ಇಂತಹ ಲಕ್ಷಣ ಕಾಣಿಸಿಕೊಂಡ್ರೆ ಜೀವಕ್ಕೇ ಆಪತ್ತು!
35
Cyclospora: ಸೈಕ್ಲೋಸ್ಪೊರಾ ಲಕ್ಷಣಗಳೇನು?
Image Credit : Asianet News

Cyclospora: ಸೈಕ್ಲೋಸ್ಪೊರಾ ಲಕ್ಷಣಗಳೇನು?

ಇದು ಏಕಕೋಶೀಯ ಸೂಕ್ಷ್ಮಜೀವಿಯಾದ ಪ್ರೊಟೊಜೋವನ್ ಆಗಿದ್ದು ದೇಹದೊಳಗೆ ಬೆಳೆಯುತ್ತದೆ. ಎಂದು ಡಾ ಫಿಲಿಪ್ಸ್ ವಿವರಿಸುತ್ತಾರೆ. ಇದರ ಲಕ್ಷಣಗಳು ತೀವ್ರವಾದ ನೀರಿನಂಶದ ಅತಿಸಾರ, ಹಸಿವಿನ ಕೊರತೆ, ತ್ವರಿತ ತೂಕ ನಷ್ಟ, ಹೊಟ್ಟೆ ನೋವು ಮತ್ತು ಉಬ್ಬುವುದು, ಅನಿಲ ಮತ್ತು ದೀರ್ಘಕಾಲದ ಆಯಾಸ. ವಾಂತಿ ಆಗುವುದಿಲ್ಲ, ಮಲವು ರಕ್ತ ಅಥವಾ ಕೀವು ಹೊಂದಿರುವುದಿಲ್ಲ. ಆದರೆ ಸಾಮಾನ್ಯವೆಂದು ನಿರ್ಲಕ್ಷ್ಯಿಸಿದರೆ ಅಪಾಯ ತಪ್ಪದು.

45
ಸೈಕ್ಲೋಸ್ಪೊರಾ ಕಾಯಿಲೆ ಹೇಗೆ ಗುರುತಿಸಲಾಗುತ್ತದೆ?
Image Credit : Asianet News

ಸೈಕ್ಲೋಸ್ಪೊರಾ ಕಾಯಿಲೆ ಹೇಗೆ ಗುರುತಿಸಲಾಗುತ್ತದೆ?

ಟ್ರೀಟ್ಮೆಂಟ್ ವಿಷ್ಯದಲ್ಲಿ ಈ ಸೋಂಕು ಮುಖ್ಯವಾಗಿ. ಒಬ್ಬ ವ್ಯಕ್ತಿಗೆ ಎರಡು ವಾರಗಳಿಗಿಂತ ಹೆಚ್ಚು ಕಾಲ ನೀರಿನಂಶದ, ರಕ್ತಸಿಕ್ತವಲ್ಲದ ಅತಿಸಾರ ಇದ್ದರೆ, ವೈದ್ಯರು ಸೈಕ್ಲೋಸ್ಪೊರಾ ಪರೀಕ್ಷೆಯನ್ನು ಶಿಫಾರಸು ಮಾಡುತ್ತಾರೆ. ಇದನ್ನು ಸರಳ ಮಲ ಪರೀಕ್ಷೆಯಿಂದ ರೋಗನಿರ್ಣಯ ಮಾಡಲಾಗುವುದಿಲ್ಲ ಇದಕ್ಕೆ ವಿಶೇಷ ಪರೀಕ್ಷೆಯ ಅಗತ್ಯವಿರುತ್ತದೆ.

ಸೈಕ್ಲೋಸ್ಪೊರಾ ಮೊದಲ ಪ್ರಕರಣ?

ಸೈಕ್ಲೋಸ್ಪೊರಾ ಕ್ಯಾಯೆಟನೆನ್ಸಿಸ್ ಅನ್ನು ಮೊದಲು ಮಾನವರಲ್ಲಿ 1979 ರಲ್ಲಿ ಗುರುತಿಸಲಾಯಿತು ಮತ್ತು ಅಧಿಕೃತವಾಗಿ 1994 ರಲ್ಲಿ ಹೆಸರಿಸಲಾಯಿತು. 2023 ರಲ್ಲಿ, ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ನಡೆಸಿದ ಸಂಶೋಧನೆಯು ಕನಿಷ್ಠ ಮೂರು ವಿಭಿನ್ನ ತಳಿಗಳು ಮಾನವ ಸೋಂಕುಗಳಿಗೆ ಕಾರಣವಾಗಬಹುದು ಎಂದು ಬಹಿರಂಗಪಡಿಸಿತು. ಈ ಪರಾವಲಂಬಿಯು ಸಣ್ಣ ಕರುಳಿನ ಒಳಪದರದಲ್ಲಿ ಅಡಗಿಕೊಂಡು ಬೆಳೆಯುತ್ತದೆ, ದೇಹವು ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳುವುದನ್ನು ತಡೆಯುತ್ತದೆ ಮತ್ತು ಅತಿಸಾರ ಕಡಿಮೆಯಾದ ನಂತರವೂ ದೌರ್ಬಲ್ಯ ಮತ್ತು ತೂಕ ನಷ್ಟಕ್ಕೆ ಕಾರಣವಾಗುತ್ತದೆ.

55
ಭಾರತದಲ್ಲಿ ಸೈಕ್ಲೋಸ್ಪೊರಾ ಪ್ರಕರಣಗಳಿವೆಯೇ?
Image Credit : Asianet News

ಭಾರತದಲ್ಲಿ ಸೈಕ್ಲೋಸ್ಪೊರಾ ಪ್ರಕರಣಗಳಿವೆಯೇ?

ಭಾರತದಲ್ಲಿ ಈ ಸೋಂಕಿನ ಸಂಭವದ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಕೋಲ್ಕತ್ತಾದ ಐಸಿಎಂಆರ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕಾಲರಾ ಮತ್ತು ಎಂಟರಿಕ್ ಡಿಸೀಸಸ್ 2025 ರಲ್ಲಿ ನಡೆಸಿದ ಅಧ್ಯಯನವು ಪೂರ್ವ ಭಾರತದಲ್ಲಿ ಸುಮಾರು 2 ಪ್ರತಿಶತದಷ್ಟು ಅತಿಸಾರ ರೋಗಿಗಳಲ್ಲಿ ಸೋಂಕು ಇರುವಿಕೆ ಪತ್ತೆಹಚ್ಚಿದೆ. ಜುಲೈ ಮತ್ತು ಆಗಸ್ಟ್‌ನಲ್ಲಿ ಈ ಅಂಕಿ ಅಂಶವು 7 ಪ್ರತಿಶತಕ್ಕೆ ಏರಿತು, 5 ರಿಂದ 12 ವರ್ಷ ವಯಸ್ಸಿನ ಮಕ್ಕಳಲ್ಲಿ ಇದು ಅತಿ ಹೆಚ್ಚು.

ಅಪಾಯಕರಿ ಕಾಯಿಲೆ ತಪ್ಪಿಸುವುದು ಹೇಗೆ?

ಈ ಪರಾವಲಂಬಿಯು ಕಲುಷಿತ ನೀರಾವರಿ ನೀರು, ಹಸಿ ತರಕಾರಿಗಳು, ಎಲೆಗಳ ಸೊಪ್ಪು ಮತ್ತು ಹಣ್ಣುಗಳ ಮೂಲಕ ಹರಡುತ್ತದೆ. ಇದರ ಹೊರ ಪದರವು ಎಷ್ಟು ಪ್ರಬಲವಾಗಿದೆಯೆಂದರೆ ಕ್ಲೋರಿನ್ ಕೂಡ ಅದನ್ನು ಸುಲಭವಾಗಿ ನಾಶಮಾಡಲು ಸಾಧ್ಯವಿಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಆರೋಗ್ಯ ಸಮಸ್ಯೆಗಳು
ಆರೋಗ್ಯಕರ ಆಹಾರಗಳು
ಜೀವನಶೈಲಿ
ಆಹಾರ

Latest Videos
Recommended Stories
Recommended image1
ಹಲವು ದಿನಗಳು ಉಪವಾಸ ಮಾಡಿದ ವ್ಯಕ್ತಿಗೆ ಎಳನೀರು, ಜ್ಯೂಸ್ ಕುಡಿಸುವುದೇಕೆ?ನೇರ ಊಟ ಮಾಡಿದ್ರೆ ಏನಾಗುತ್ತೆ?
Recommended image2
ಭಾರತದ ಮೊದಲ ಡೆಂಗ್ಯೂ ಲಸಿಕೆ ‘ಕ್ಯೂಡೆಂಗಾ’, 4ರಿಂದ 60 ವರ್ಷದವರಿಗೆ ನೀಡಲು ಡಿಸಿಜಿಐ ಒಪ್ಪಿಗೆ
Recommended image3
Belly Fat Loss: ಹೊಟ್ಟೆಯ ಬೊಜ್ಜು ಕರಗಿಸಲು ಸಹಾಯ ಮಾಡುವ 5 ಪಾನೀಯಗಳಿವು!
Related Stories
Recommended image1
ನೋಡಲು ಫಿಟ್ ಆಗಿರುವ ಈ ಸುಂದರ ನಟಿಯರಿಗಿದೆ ಬಲು ಅಪರೂಪದ ಕಾಯಿಲೆ
Recommended image2
ಫ್ಯಾಟಿ ಲಿವರ್: ಮೂವರಲ್ಲಿ ಒಬ್ಬರಿಗಿದೆ ಈ ಅಪಾಯಕಾರಿ ಕಾಯಿಲೆ, ಇಂತಹ ಲಕ್ಷಣ ಕಾಣಿಸಿಕೊಂಡ್ರೆ ಜೀವಕ್ಕೇ ಆಪತ್ತು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved