ನೀವು ಯೋಗ ಮಾಡುವ ಟೈಮ್ ಸರಿ ಇದ್ಯಾ? ಇಲ್ಲಾಂದ್ರೆ ಆರೋಗ್ಯಕ್ಕೆ ಡೇಂಜರ್
ಯೋಗ ಪದವು ಸಂಸ್ಕೃತದ 'ಯುಜ್' ದಾತುವಿನಿಂದ ಬಂದಿದೆ, ಇದರರ್ಥ ಸಂಪರ್ಕಿಸೋದು ಅಥವಾ ಎಚ್ಚರಗೊಳ್ಳೋದು. ಯೋಗ ಮಾಡೋದು ಅಂದ್ರೆ ಸುಮ್ನೆ ಅಲ್ಲ, ದೈಹಿಕ, ಭಾವನಾತ್ಮಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಮನಸ್ಸು ನೆಮ್ಮದಿಯಿಂದ ಕೂಡಲು ಯೋಗ ಮಾಡಲಾಗುತ್ತೆ. ಯೋಗ ಇಂದು ನಿನ್ನೆಯದಲ್ಲ, ಇದನ್ನು ಸಾವಿರಾರು ವರ್ಷಗಳಿಂದ ಅಭ್ಯಾಸ ಮಾಡಲಾಗುತ್ತಿದೆ, ಆದರೆ ಅನೇಕ ಬಾರಿ ಜನರಿಗೆ ಯೋಗ ಯಾವಾಗ ಅಭ್ಯಾಸ ಮಾಡಬೇಕು ಎಂಬುದರ ಬಗ್ಗೆ ತಿಳಿದಿರೋದಿಲ್ಲ. ಕೆಲವರು ಬೆಳಿಗ್ಗೆ ಯೋಗ ಮಾಡಲು ಸಜೆಸ್ಟ್ ಮಾಡಿದ್ರೆ, ಇನ್ನೂ ಕೆಲವರು ಸಂಜೆ ಯೋಗ ಮಾಡ್ತಾರೆ.
ಯೋಗ(Yoga) ಮಾಡಲು ಸರಿಯಾದ ಸಮಯ ಯಾವುದು? ಯೋಗ ಎಕ್ಸ್ಪರ್ಟ್ ಯೋಗವನ್ನು ಯಾವುದೇ ಸಮಯದಲ್ಲಿ ಮಾಡ್ಬಹುದು ಎಂದು ಸೂಚಿಸ್ತಾರೆ. ಅಭ್ಯಾಸದಲ್ಲಿ ಸ್ಥಿರತೆ ಇರಬೇಕು ಅಷ್ಟೇ. ನಿಮ್ಮ ದೇಹ, ಸುತ್ತಮುತ್ತಲಿನ ಪರಿಸರ, ಬದಲಾಗುತ್ತಿರುವ ಹವಾಮಾನ, ಸಮಯದ ಲಭ್ಯತೆ ಮತ್ತು ದೈನಂದಿನ ಲೈಫ್ ಸ್ಟೈಲ್ ಗೆ ಅನುಗುಣವಾಗಿ ಯೋಗ ಮಾಡಲು ನೀವು ಸರಿಯಾದ ಸಮಯ ಆಯ್ಕೆ ಮಾಡ್ಬಹುದು . ಯೋಗ ಮಾಡಲು ಸಮಯ ನಿರ್ಧರಿಸುವ ಮೊದಲು, ಕಂಪ್ಲೀಟ್ ಇನ್ಫರ್ಮೇಷನ್ ತಿಳ್ಕೊಂಡು ನಿರ್ಧಾರ ತೆಗೆದುಕೊಳ್ಳಿ.
ಬೆಳಿಗ್ಗೆ(Morning) ಯೋಗ ಮಾಡೋದ್ರಿಂದ ಆಗುವ ಪ್ರಯೋಜನ
ಬೆಳಿಗ್ಗೆ ಬೇಗನೆ ಏಳುವ ಜನರು ಬೆಳಿಗ್ಗೆ ಯೋಗ ಮಾಡಲು ಇಷ್ಟಪಡ್ತಾರೆ. ಬೆಳಿಗ್ಗೆ ಯೋಗ ಮಾಡೋದ್ರಿಂದ ಎಂಡಾರ್ಫಿನ್ ಸಕ್ರಿಯಗೊಳಿಸಲು ಸಹಾಯ ಮಾಡುತ್ತೆ. ಇದು ಒತ್ತಡ ಕಡಿಮೆ ಮಾಡುತ್ತೆ ಮತ್ತು ಇಡೀ ದಿನ ದೇಹಕ್ಕೆ ಶಕ್ತಿ ನೀಡುತ್ತೆ .
ಬೆಳಿಗ್ಗೆ ಯೋಗ ಮಾಡೋದ್ರಿಂದ, ನೀವು ಹಗಲಿನಲ್ಲಿ ನಿಮ್ಮ ಕೆಲಸ ಉತ್ತಮ ರೀತಿಯಲ್ಲಿ ಮಾಡಲು ಸಾಧ್ಯವಾಗುತ್ತೆ. ಆದರೆ ಯೋಗ ಬೆಳಿಗ್ಗೆ ಹೆಚ್ಚು ಯೋಗ ಮಾಡಬಾರದು ಎಂಬುದನ್ನು ನೆನಪಿನಲ್ಲಿಡಿ, ಯಾಕಂದ್ರೆ ಹೆಚ್ಚು ಯೋಗ ಮಾಡಿದ್ರೆ ದಿನವಿಡೀ, ದಣಿದ(Tired) ಅನುಭವ ಉಂಟಾಗುತ್ತೆ.
ಬೆಳಿಗ್ಗೆ ಮಾಡಬೇಕಾದ ಯೋಗ
ಬೆಳಗಿನ ಯೋಗದಲ್ಲಿ ಸೂಕ್ಷ್ಮ ವ್ಯಾಯಾಮಗಳನ್ನು ಒಳಗೊಂಡಿರಬೇಕು, ಹಾಗಾಗಿ ಸೂರ್ಯ ನಮಸ್ಕಾರ(Surya namaskar), ಮುಂದಕ್ಕೆ ಬಾಗೋದು, ಹಿಮ್ಮುಖವಾಗಿ ಮತ್ತು ಹಿಂದಕ್ಕೆ ಬಾಗೋದು, ಪ್ರಾಣಾಯಾಮ ಮತ್ತು ಧ್ಯಾನ ಮಾಡೋದು ಉತ್ತಮ.
ನೀವು ಸಂಜೆ(Evening) ಯೋಗ ಮಾಡೋದಾದ್ರೆ, ಇದನ್ನು ತಿಳ್ಕೊಳ್ಳಿ
ಸಾಮಾನ್ಯವಾಗಿ ತಡವಾಗಿ ಏಳುವ ಅಥವಾ ಕೆಲಸದ ಸಮಯ ಶಿಫ್ಟ್ ವೈಸ್ ಆಗಿರುವ ಜನರು ಸಂಜೆ ಯೋಗ ಮಾಡಲು ಬಯಸ್ತಾರೆ. ನೀವು ಸಂಜೆ ಯೋಗ ಮಾಡಿದ್ರೆ, ಅದು ದಿನವಿಡೀ ನಿಮ್ಮ ದಣಿವು ಮತ್ತು ಒತ್ತಡ ನಿವಾರಿಸಲು ಸಹಾಯ ಮಾಡುತ್ತೆ.
ಸಂಜೆ ಯೋಗ ಮಾಡೋದ್ರಿಂದ ನಿಮಗೆ ಫ್ರೆಶ್ನೆಸ್ ಮತ್ತು ಕಾಮ್ ನೆಸ್ ನೀಡುತ್ತೆ. ಆದರೆ ನೆನಪಿಡಿ, ಸಂಜೆ, ನಿಮ್ಮ ದೇಹವು ಅಗತ್ಯಕ್ಕಿಂತ ಹೆಚ್ಚು ಉತ್ಸುಕವಾಗದಂತೆ ನೋಡಿಕೊಳ್ಳಿ, ಇಲ್ಲಾಂದ್ರೆ ರಾತ್ರಿ ನಿದ್ರೆ(Sleep) ಮಾಡುವಾಗ ನೀವು ಸಮಸ್ಯೆ ಎದುರಿಸಬೇಕಾಗಿತು.
ಸಂಜೆ ಯಾವ ರೀತಿಯ ಯೋಗ ಮಾಡಬೇಕು?
ಸಂಜೆಯ ಯೋಗದಲ್ಲಿ ದೇಹವನ್ನು ತಿರುಗಿಸೋದು, ಹಿಂದೆ ಮತ್ತು ಮುಂದೆ ಬಾಗೋದು ಮೊದಲಾದ ಆರಾಮಾದ ಭಂಗಿಗಳನ್ನು ಒಳಗೊಂಡಿರಬೇಕು. ಈ ಸಮಯದಲ್ಲಿ, ಬೆನ್ನನ್ನು ಹೆಚ್ಚು ತಿರುಗಿಸೋದನ್ನು ಮತ್ತು ವೇಗವಾಗಿ ಉಸಿರಾಡೋದನ್ನು ತಪ್ಪಿಸೋದು ತುಂಬಾ ಮುಖ್ಯ ಯಾಕಂದ್ರೆ ಇದು ನಿಮ್ಮ ದೇಹ ಅತಿಯಾಗಿ ಪ್ರಚೋದಿಸಲು ಕಾರಣವಾಗ್ಬಹುದು, ಇದರಿಂದ ನಿದ್ರೆ ಮಾಡಲು ಕಷ್ಟವಾಗಬಹುದು. ಅಂತಿಮವಾಗಿ ದೇಹ ವಿಶ್ರಾಂತಿಗೊಳಿಸಲು ಪ್ರಾಣಾಯಾಮ ಮತ್ತು ಧ್ಯಾನದೊಂದಿಗೆ(Meditation) ಯೋಗ ಕೊನೆಗೊಳಿಸಿ.
2 ಗಂಟೆಗಳ ಕಾಲ ಯೋಗ ಮಾಡುವುದು ಪ್ರಯೋಜನಕಾರಿ
ಆಹಾರ(Food) ಸೇವಿಸಿದ ಕನಿಷ್ಠ 2 ಗಂಟೆಗಳ ನಂತರ ಯೋಗ ಮಾಡಬೇಕು. ನಿಮ್ಮ ಲೈಫ್ ಸ್ಟೈಲ್ ಗೆ ಅನುಗುಣವಾಗಿ ಯೋಗದ ಸರಿಯಾದ ಸಮಯ ನಿರ್ಧರಿಸೋದು ಕರೆಕ್ಟ್ ಮತ್ತು ಅದನ್ನು ಕ್ರಮಬದ್ಧವಾಗಿ ಪ್ರಾಕ್ಟಿಸ್ ಮಾಡಿದ್ರೆ ಮಾತ್ರ ಪ್ರಯೋಜನವಾಗುತ್ತೆ ಎಂಬುದನ್ನು ನೆನಪಿನಲ್ಲಿಡಿ. ನೀವು ಹೆಚ್ಚು ಅಭ್ಯಾಸ ಮಾಡಿದಷ್ಟೂ, ಮನಸ್ಸು ಮತ್ತು ದೇಹದೊಂದಿಗೆ ನಿಮ್ಮನ್ನು ಸಂಪರ್ಕಿಸಲು ನಿಮಗೆ ಸಾಧ್ಯವಾಗುತ್ತೆ.