ಕುಂಡಲಿನಿ ಶಕ್ತಿಯ ಜಾಗೃತಿಯಿಂದ ವಿಶಿಷ್ಟ ಅರಿವು, ಜ್ಞಾನೋದಯ ಹಾಗೂ ಅಪರಿಮಿತ ಆನಂದದ ಅರಿವಾಗುತ್ತದೆ. ಆದರೆ, ಕುಂಡಲಿನಿ ಯೋಗವನ್ನು ಗುರುಗಳ ಮೂಲಕವಾಗಿಯೇ ಅಭ್ಯಾಸ ಮಾಡಿಕೊಳ್ಳಬೇಕು. ಅದು ಏಕೆ ಗೊತ್ತೇ? 

ಮಾನವ (Human) ದೇಹವೊಂದು ಅದ್ಭುತ ರಚನೆ. ಅಲ್ಲಿರುವುದು ಬರೀ ದೇಹ, ಮೂಳೆ, ಮಾಂಸಗಳ ಲೋಕವಲ್ಲ. ಬದಲಿಗೆ, ದೇವರು (God) ಅಲ್ಲೊಂದು ಮನಸ್ಸನ್ನು, ಅದಕ್ಕೆ ಅತ್ಯದ್ಭುತ ಶಕ್ತಿಯನ್ನು, ಏಳು ಚಕ್ರಗಳನ್ನು, ಅವುಗಳಿಗೆ ವಿಶಿಷ್ಟವಾದ ಶಕ್ತಿ (Energy) ಹಾಗೂ ತತ್ತ್ವಗಳನ್ನು ಅಳವಡಿಸಿದ್ದಾನೆ. ಒಟ್ಟಾರೆ ದೇಹದ ಆಳ, ಶಕ್ತಿಗಳನ್ನು ಅರಿತರೆ ಮಾನವ ಈ ಲೋಕದಲ್ಲಿದ್ದೂ ಅಪರಿಮಿತ ಆನಂದ (Happiness) ಅನುಭವಿಸುತ್ತಾನೆ. ಆದರೆ ಅದನ್ನು ಸಾಧಿಸುವುದು ಸುಲಭವಲ್ಲ. ಅದಕ್ಕೆ ನೆರವಾಗುವುದೇ ನಮ್ಮ ದೇಹದಲ್ಲಿರುವ ಕುಂಡಲಿನಿ ಶಕ್ತಿ (Kundalini). ಹೀಗಾಗಿ, ಅರಿವು ಹಾಗೂ ಆನಂದವನ್ನು ಸಾಧಿಸುವ ಮಾರ್ಗವಾಗಿ ಕುಂಡಲಿನಿ ಯೋಗದ ಮೊರೆ ಹೋಗುವುದು ಕಂಡುಬರುತ್ತದೆ. 

ಅಸಲಿಗೆ ಕುಂಡಲಿನಿ ಎಂದರೆ ಸಂಸ್ಕೃತದಲ್ಲಿ ಸುರುಳಿಯಾಕಾರ (Coiled) ಅಥವಾ ಉಂಗುರ ಎನ್ನುವ ಅರ್ಥವಿದೆ. ಅರಿವನ್ನು ಜಾಗೃತಗೊಳಿಸಿಕೊಳ್ಳುವ ಮಾರ್ಗವೇ ಕುಂಡಲಿನಿ ಯೋಗ. ಕುಂಡಲಿನಿ ಶಕ್ತಿಯು ಮೂಲಾಧಾರ ಚಕ್ರ (Root Chakra)ದ ತಳದಲ್ಲಿ ಸರ್ಪದಂತೆ ಸುರುಳಿಯಾಕಾರದಲ್ಲಿ ಇರುತ್ತದೆ. ಇದನ್ನು ದೇವಿ ಹಾಗೂ ಸರ್ಪದ (Snake) ರೂಪದಲ್ಲೂ ಚಿತ್ರಿಸಲಾಗುತ್ತದೆ. ರಮಣ ಮಹರ್ಷಿಗಳ ಪ್ರಕಾರ ಕುಂಡಲಿನಿ ಶಕ್ತಿಯು ಆತ್ಮದ ಸ್ವಾಭಾವಿಕ ಶಕ್ತಿ. ಅಂದರೆ, ಆತ್ಮ ಎಷ್ಟು ಪರಿಶುದ್ಧ ಶಕ್ತಿಯನ್ನು ಹೊಂದಿದೆ ಎಂದು ಅಂದಾಜಿಸಬಹುದು. 
ಕುಂಡಲಿನಿ ಧ್ಯಾನ, ಯೋಗ (Yoga) ಅಥವಾ ಪ್ರಾಣಾಯಾಮವನ್ನು ದೀರ್ಘ ಉಸಿರಾಟ, ಕೆಲವು ರೀತಿಯ ಮುದ್ರೆಗಳು, ಮಂತ್ರ ಹಾಗೂ ದೈಹಿಕ ಚಲನೆಗಳೊಂದಿಗೆ ಅಭ್ಯಾಸ ಮಾಡಲಾಗುತ್ತದೆ. ಸುಪ್ತ ಶಕ್ತಿಯನ್ನು ಪ್ರಚೋದಿಸುವುದು ಇದರ ಉದ್ದೇಶ. ಕುಂಡಲಿನಿಯು ದೇಹದಲ್ಲಿರುವ ಎಲ್ಲ ಶಕ್ತಿ ಕೇಂದ್ರಗಳನ್ನು (ಏಳು (Seven) ಚಕ್ರಗಳು) ದಾಟಿ ಏಳನೇ ಚಕ್ರವಾದ ಸಹಸ್ರಾರ ಅಥವಾ ತಲೆಯ ಮೇಲ್ಭಾಗದಲ್ಲಿರುವ ಶಕ್ತಿ ಕೇಂದ್ರದೊಂದಿಗೆ ಒಂದಾಗುತ್ತದೆ. ಆಗ ಆನಂದದೊಂದಿಗೆ ಅರಿವು ಹಾಗೂ ಜಾಗೃತಿ ಉಂಟಾಗುತ್ತದೆ. ಏಳೂ ಚಕ್ರಗಳನ್ನು ಜಾಗೃತಗೊಳಿಸುವುದು ಕುಂಡಲಿನಿಯ ಕೆಲಸ. ಈ ಕಾರಣದಿಂದ ಕುಂಡಲಿನಿ ಯೋಗವನ್ನು “ಯೋಗದ ಜ್ಞಾನ” ಎಂದು ಕರೆಯಲಾಗುತ್ತದೆ. 

ನಿಮಗೆ ಗೊತ್ತೇ? ಎಷ್ಟೋ ಸಾವಿರಾರು ವರ್ಷಗಳಿಂದ ಕುಂಡಲಿನಿ ಯೋಗವನ್ನು ಆಚರಿಸಲಾಗುತ್ತಿದೆ. ಖುಷಿಮುನಿಗಳಿಗೆ ದಕ್ಕಿದ ಅರಿವಿನ ಮೂಲವೇ ಕುಂಡಲಿನಿ ಯೋಗ. ಉಪನಿಷದ್ (Upanishad)ನಲ್ಲಿ ಇದರ ಉಲ್ಲೇಖವಿದೆ. ಕ್ರಿಸ್ತಶಕೆಗೆ ಹೋಲಿಸುವುದಾದರೆ ಕ್ರಿಸ್ತಪೂರ್ವ 800-500ನೇ ಅವಧಿಯಲ್ಲಿ ಉಪನಿಷದ್ ರಚಿತವಾಗಿದ್ದು, ಅಂದೇ ಈ ಶಕ್ತಿಯ ಕುರಿತು ಜ್ಞಾನವಿತ್ತು.

ಇದನ್ನೂ ಓದಿ: ಮಹಿಳೆಯರಲ್ಲಿ ಕಾಡುವ ತಳ್ಳನೆ ಕೂದಲ ಸಮಸ್ಯೆ! ಕಾರಣ ಇಲ್ಲಿದೆ!

ಗುರುಮುಖೇನವೇ ಏಕೆ?
ಕುಂಡಲಿನಿ ಯೋಗವನ್ನು ಇದನ್ನು ಹೇಗೆಂದರೆ ಹಾಗೆ ಮಾಡುವಂತಿಲ್ಲ. ಗುರುಮುಖೇನವೇ (Through Teacher) ಕಲಿತುಕೊಳ್ಳಬೇಕು, ಅವರೊಂದಿಗೆ ಅಭ್ಯಾಸ ಮಾಡಿಕೊಳ್ಳುತ್ತಲೇ ಅರಿವನ್ನು ನಮ್ಮದಾಗಿಸಿಕೊಳ್ಳಬೇಕು. ಹಿಂದಿನಿಂದಲೂ ಇದೇ ಪದ್ಧತಿ ಬೆಳೆದುಬಂದಿರುವುದಕ್ಕೆ ವೈಜ್ಞಾನಿಕ (Scientific) ಕಾರಣವಿದೆ. 
ಕುಂಡಲಿನಿ ಜಾಗೃತಗೊಂಡಾದ ದೇಹದಲ್ಲಿ ವಿಶಿಷ್ಟ ಅನುಭವವಾಗುತ್ತದೆ. ದೇಹ ಬೆಚ್ಚಗಾಗುವ, ಮೈ ಜುಮ್ ಎನ್ನುವ, ದಿಕ್ಕು ತೋರದಂತೆ ಆಗುವ ಅನುಭವಗಳು ಸಾಮಾನ್ಯ. ಮಾನಸಿಕವಾಗಿ ಆಗುವ ಅನುಭವಗಳಿಗೆ ವ್ಯಕ್ತಿ ಸಂಪೂರ್ಣವಾಗಿ ತೆರೆದುಕೊಂಡಿಲ್ಲದೆ ಇರುವಾಗ ದೀರ್ಘಕಾಲದ ನಕಾರಾತ್ಮಕ (Negative) ಪರಿಣಾಮಗಳು ಉಂಟಾಗುತ್ತವೆ. ಹೀಗಾಗಿಯೇ ಇದನ್ನು ಯೋಗಗುರು ಅಥವಾ ಶಿಕ್ಷಕರ ಮೂಲಕವೇ ಅಭ್ಯಾಸ ಮಾಡಬೇಕು. 

ಇದನ್ನೂ ಓದಿ: ಸ್ಮರಣ ಶಕ್ತಿ ಹೆಚ್ಚಿಸಿಕೊಳ್ಳಲು ಈ ಆಸನಗಳನ್ನು ಮಾಡಿ!

ಕುಂಡಲಿನಿ ಜಾಗೃತಿಯಿಂದ ಏನಾಗುತ್ತದೆ?
ಮನಸ್ಸು ತೃಪ್ತಗೊಳ್ಳುತ್ತದೆ. ಪ್ರೀತಿ ಹೆಚ್ಚುತ್ತದೆ. ಸ್ವ ಅರಿವು ಮೂಡುತ್ತದೆ. ಇತರರನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಸ್ಫೂರ್ತಿ (Inspiration) ದೊರೆಯುತ್ತದೆ. ಮನಸ್ಸು ಪರಿಶುದ್ಧವಾಗುತ್ತದೆ. ಮಹೋನ್ನತ ಉದ್ದೇಶ ಹೊಂದಲು ಪ್ರೇರೇಪಿಸುತ್ತದೆ. ಅಧ್ಯಯನಗಳ ಪ್ರಕಾರ, ಕುಂಡಲಿನಿ ಯೋಗದಿಂದ ಒತ್ತಡ (Stress) ಕಡಿಮೆಯಾಗುತ್ತದೆ. ತ್ವರಿತವಾಗಿ ಒತ್ತಡ ನಿವಾರಿಸಿಕೊಳ್ಳುವ ಮಾರ್ಗ. ಅನೇಕ ಆಧುನಿಕ ರೋಗಗಳ ನಿಯಂತ್ರಣಕ್ಕೆ ಸಹಕಾರಿ. 2018ರಲ್ಲಿ ನಡೆಸಲಾದ ಅಧ್ಯಯನದಂತೆ, ಆತಂಕದ ಸಮಸ್ಯೆಯನ್ನು ಇಲ್ಲವಾಗಿಸುತ್ತದೆ.