ಕೋಳಿ ಪುಕ್ಕ ತರ ಇರೋ ಕೂದಲು ಕುದುರೆ ಬಾಲ ತರ ಆಗ್ಬೇಕಾ? ಈ ಎಣ್ಣೆ ಬಳಸಿ
ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆ ಕೂದಲು ಬೆಳವಣಿಗೆಗೆ ಬಹಳ ಒಳ್ಳೆಯದು ಆದರೆ ಅದರ ಮಂದವಾದ ರೀತಿಗೆ ಅನೇಕರು ಇದನ್ನು ಬಳಸಲು ಹಿಂಜರಿಯುತ್ತಾರೆ. ಆದರೆ ನಿಮಗೆ ದಪ್ಪನೆಯ ಕೂದಲು ಬೇಕು ಎಂದು ಬಯಸಿದರೆ ಈ ಎಣ್ಣೆ ಒಳ್ಳೆಯ ಆಯ್ಕೆ

ಕೋಳಿ ಪುಕ್ಕದಂತಹ ಕೂದಲಿಗೆ ಹೇಳಿ ಬಾಯ್ ಬಾಯ್
ಬ್ಯುಸಿ ಲೈಫ್‌ನಲ್ಲಿ ಕೂದಲಿನ ಆರೈಕೆಗೆ ಸಮಯ ಕೊಡೋಕೆ ಆಗ್ತಿಲ್ವಾ? ಕೂದಲು ಉದುರಿ ಕೋಳಿ ಪುಕ್ಕ ತರ ಆಗಿದೆಯಾ? ಹಾಗಿದ್ರೆ ಚಿಂತೆ ಬಿಟ್ಟು ಕೂದಲಿಗೆ ಸ್ವಲ್ಪ ಟೈಮ್ ಕೊಡಿ. ಸರಿಯಾದ ಆರೈಕೆಯಿಂದ ಚೆಂದದ ಕೂದಲು ನಿಮ್ಮದಾಗುತ್ತೆ. ಕೂದಲು ಆರೈಕೆಗೆ ಒಳ್ಳೆಯ ಆಯಿಲ್ ಇಲ್ಲಿದೆ.
ಕೂದಲಿಗೆ ಯಾವ ಆಯಿಲ್ ಬೆಸ್ಟ್?
ಕೂದಲು ಬೆಳೆಯೋಕೆ ಜಾಸ್ತಿ ಜನ ತೆಂಗಿನ ಎಣ್ಣೆ ಹಚ್ಚ್ತಾರೆ. ಇದು ಕೂದಲಿಗೆ ಒಳ್ಳೆಯದು. ಆದ್ರೆ ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆ ಕೂಡ ಕೂದಲಿನ ಬೆಳವಣಿಗೆಗೆ ಸೂಪರ್ ಅಂತ ಗೊತ್ತಾ? ಹೌದು, ಹಳಿಯ ಕಡೆ ಜನ ಈ ಎಣ್ಣೆಯನ್ನು ಹಲವು ವರ್ಷಗಳಿಂದ ಕೂದಲಿನ ಆರೈಕೆಗೆ ಬಳಸುತ್ತಿದ್ದಾರೆ.
ಕ್ಯಾಸ್ಟರ್ ಆಯಿಲ್ ಅಥವಾ ಹರಳೆಣ್ಣೆ
ಕ್ಯಾಸ್ಟರ್ ಆಯಿಲ್ ಕೂದಲು ಚೆನ್ನಾಗಿ ಬೆಳೆಯೋಕೆ, ಗಟ್ಟಿಮುಟ್ಟಾಗಿರೋಕೆ ಮತ್ತು ಆರೋಗ್ಯಕರ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತೆ. ಹಾಗಾಗಿ ಕೂದಲು ಉದುರುವುದನ್ನ ಮತ್ತು ತೆಳ್ಳಗಾಗುವುದನ್ನ ತಡೆಯಲು ಕ್ಯಾಸ್ಟರ್ ಆಯಿಲ್ ಹೇಗೆ ಸಹಾಯ ಮಾಡುತ್ತೆ ಅಂತ ನೋಡೋಣ.
ರಕ್ತ ಸಂಚಾರ ಹೆಚ್ಚಿಸುತ್ತದೆ
ಕ್ಯಾಸ್ಟರ್ ಆಯಿಲ್‌ನಿಂದ ತಲೆಗೆ ಮಸಾಜ್ ಮಾಡಿದ್ರೆ, ಕೂದಲಿನ ಬುಡಕ್ಕೆ ರಕ್ತ ಸಂಚಾರ ಹೆಚ್ಚಾಗಿ, ಕೂದಲಿಗೆ ಹೆಚ್ಚು ಆಮ್ಲಜನಕ ಮತ್ತು ಪೋಷಕಾಂಶಗಳು ಸಿಗುತ್ತೆ. ಇದರಿಂದ ಕೂದಲು ಬೆಳವಣಿಗೆ ಹೆಚ್ಚಾಗಿ, ಕೂದಲು ತೆಳ್ಳಗಾಗೋದು ನಿಂತು, ಗಟ್ಟಿಯಾಗುತ್ತೆ.
ಬ್ಯಾಕ್ಟೀರಿಯಾ ವಿರೋಧಿ ಗುಣಗಳು:
ಕ್ಯಾಸ್ಟರ್ ಆಯಿಲ್‌ನಲ್ಲಿರುವ ರಿಸಿನೋಲಿಕ್ ಆಮ್ಲವು ಅಲರ್ಜಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಉರಿಯೂತ ಕಡಿಮೆ ಮಾಡಿ, ತಲೆಹೊಟ್ಟು ತಡೆಯುತ್ತೆ. ಇದರಲ್ಲಿರುವ ಒಮೆಗಾ 6 ಮತ್ತು ಒಮೆಗಾ 9 ಕೊಬ್ಬಿನಾಮ್ಲಗಳು ತಲೆಗೆ ತೇವಾಂಶ ನೀಡಿ, ಕೂದಲು ಉದುರುವುದನ್ನು ತಡೆಯುತ್ತೆ.
ಬಳಸುವ ವಿಧಾನ:
ಕ್ಯಾಸ್ಟರ್ ಆಯಿಲ್ ಅನ್ನು ಕೂದಲಿಗೆ ಹಚ್ಚಿ ಕನಿಷ್ಠ 30 ನಿಮಿಷಗಳ ಕಾಲ ಹಾಗೆ ಬಿಡಿ. ರಾತ್ರಿಯಿಡೀ ಹಚ್ಚಿಟ್ಟು ಬೆಳಗ್ಗೆ ಶಾಂಪೂ ಹಾಕಿ ತೊಳೆಯಬಹುದು. ಕ್ಯಾಸ್ಟರ್ ಆಯಿಲ್ ಕೂದಲಿಗೆ ಹೊಳಪು, ಮೃದುತ್ವ ಮತ್ತು ಗಟ್ಟಿತನ ನೀಡುತ್ತದೆ. ಕೂದಲು ಉದುರುವುದು, ತುದಿಗಳು ಸೀಳಾಗುವುದು ಕಡಿಮೆ ಮಾಡಿ ಕೂದಲನ್ನು ದಟ್ಟವಾಗಿಸುತ್ತದೆ.