ಬಾತ್ ರೂಮ್ ನಲ್ಲಿದ್ದಾನೆ ಸೈಲೆಂಟ್ ಕಿಲ್ಲರ್, ಅಲರ್ಟ್ ಆಗಿಲ್ಲ ಅಂದ್ರೆ ಅನಾರೋಗ್ಯ
Bathroom tips : ಮನೆ ಕ್ಲೀನ್ ಇದ್ರೆ ಸಾಲದು, ಬಾತ್ ರೂಮ್ ಕೂಡ ಸ್ವಚ್ಛವಾಗಿರಬೇಕು. ಬಾತ್ ರೂಮಿನಲ್ಲಿರುವ ಕೆಲ ವಸ್ತುಗಳನ್ನು ಸದ್ದಿಲ್ಲದೆ ನಮ್ಮ ಆರೋಗ್ಯದ ಮೇಲೆ ದಾಳಿ ಮಾಡುತ್ತವೆ. ಸೈಲೆಂಟ್ ಕಿಲ್ಲರ್ ಆಗಿ ಕೆಲಸ ಮಾಡುತ್ತವೆ.

ಬಾತ್ ರೂಮಿನಲ್ಲಿ ಕೊಲೆಗಾರ
ಬಾತ್ ರೂಮ್ ನಮ್ಮ ಮನೆಯ ಪ್ರಮುಖ ಭಾಗಗಳಲ್ಲಿ ಒಂದು. ನಮ್ಮ ದಿನ ಶುರುವಾಗೋದು ಬಾತ್ ರೂಮಿನಿಂದ. ಆದ್ರೆ ನಾವು ರಿಫ್ರೆಶ್ ಆಗುವ ಬಾತ್ ರೂಮಿನಲ್ಲಿರುವ ಕೆಲ ವಸ್ತುಗಳನ್ನು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ತಜ್ಞರ ಪ್ರಕಾರ, ಕೆಲ ವಸ್ತುಗಳು ಕ್ರಮೇಣ ಸೈಲೆಂಟ್ ಕಿಲ್ಲರ್ ಆಗಿ ಕೆಲ್ಸ ಮಾಡುತ್ತದೆ. ಬಾತ್ರೂಮಿನಲ್ಲಿರುವ ಕೆಲ ವಸ್ತುಗಳನ್ನು ನಾವು ಆಗಾಗ ಬದಲಿಸುವುದು ಬಹಳ ಅಗತ್ಯ.
ಟೂತ್ ಬ್ರಷ್
ಮೂರು ತಿಂಗಳಿಗಿಂತ ಹಳೆಯದಾದ ಟೂತ್ ಬ್ರಷ್ ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿ ಜಾಗವಾಗಿದೆ. ಬಾತ್ ರೂಮ್ ನಲ್ಲಿರುವ ತೇವಾಂಶ ಮತ್ತು ಟಾಯ್ಲೆಟ್ ಫ್ಲಶ್ನಿಂದ ಬರುವ ಸೂಕ್ಷ್ಮಜೀವಿಗಳು ಬ್ರಷ್ ಮೇಲೆ ಕುಳಿತುಕೊಳ್ಳುತ್ತವೆ. ಈ ಬ್ರಷ್ನಿಂದ ಹಲ್ಲುಜ್ಜಿದಾಗ, ಬ್ಯಾಕ್ಟೀರಿಯಾಗಳು ನೇರವಾಗಿ ನಿಮ್ಮ ಬಾಯಿಗೆ ಹೋಗುತ್ತೆ. ಇದು ಬಾಯಿ ಹುಣ್ಣು, ದುರ್ವಾಸನೆ ಮತ್ತು ಒಸಡು ಕಾಯಿಲೆಗೆ ಕಾರಣವಾಗಬಹುದು. ಆರೋಗ್ಯ ತಜ್ಞರು ಪ್ರತಿ ಎರಡು ಮೂರು ತಿಂಗಳಿಗೊಮ್ಮೆ ನಿಮ್ಮ ಟೂತ್ ಬ್ರಷ್ ಅನ್ನು ಬದಲಾಯಿಸಲು ಸಲಹೆ ನೀಡುತ್ತಾರೆ. ಅದೇ ರೀತಿ ಕ್ಯಾಪ್ ಇರುವ ಬ್ರಷ್ ಬಳಸಲು ಸಲಹೆ ನೀಡುತ್ತಾರೆ.
ಒದ್ದೆ ಟವೆಲ್
ಅನೇಕರು ಒದ್ದೆಯಾದ ಟವೆಲನ್ನು ಬಾತ್ ರೂಮಿನಲ್ಲಿ ನೇತುಹಾಕ್ತಾರೆ. ಇದು ಚರ್ಮಕ್ಕೆ ಹಾನಿಕಾರಕ. ಒದ್ದೆಯಾದ ಬಟ್ಟೆಗಳಲ್ಲಿ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆ ವೇಗಗೊಳ್ಳುತ್ತದೆ. ಇದು ಚರ್ಮದ ದದ್ದುಗಳು, ತುರಿಕೆ ಮತ್ತು ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ಒಂದೇ ಟವೆಲನ್ನು ಅನೇಕರು ಹಂಚಿಕೊಂಡಾಗ ಇದ್ರ ಅಪಾಯ ಹೆಚ್ಚು. ಪ್ರತಿದಿನ ಬಿಸಿಲಿನಲ್ಲಿ ಟವೆಲ್ಗಳನ್ನು ಒಣಗಿಸಬೇಕು, ಹಾಗೆಯೇ ವಾರಕ್ಕೆ ಎರಡು ಬಾರಿ ತೊಳೆಯಬೇಕು.
ಸ್ಕ್ರಬ್ಬರ್
ದೇಹವನ್ನು ಸ್ಕ್ರಬ್ ಮಾಡಲು ಸ್ಕ್ರಬ್ಬರ್ ಬಳಸಲಾಗುತ್ತದೆ. ಇದರಲ್ಲಿ ಡೆಡ್ ಸ್ಕಿನ್ತೇವಾಂಶ ಮತ್ತು ಸೋಪ್ ಕಣಗಳು ಸಂಗ್ರಹವಾಗುತ್ತವೆ. ಇದರಿಂದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಬೆಳೆಯುತ್ತವೆ. ಇದು ಚರ್ಮದ ಸೋಂಕು, ದದ್ದು ಮತ್ತು ತುರಿಕೆಗೆ ಕಾರಣವಾಗಬಹುದು. ತಜ್ಞರ ಪ್ರಕಾರ, ಸ್ಕ್ರಬ್ಬರನ್ನು ಪ್ರತಿ ಮೂರು ವಾರಗಳಿಗೊಮ್ಮೆ ಬದಲಾಯಿಸಬೇಕು.ಬಳಸಿದ ನಂತ್ರ ಅದನ್ನು ಒಣಗಿಸಬೇಕು.
ಪಿವಿಸಿ ಶವರ್ ಕರ್ಟನ್
ಪಿವಿಸಿ ಶವರ್ ಕರ್ಟನ್ ಸುಂದರವಾಗಿ ಕಾಣಿಸುತ್ತದೆ. ಆದ್ರೆ ಅವುಗಳಿಂದ ಬಿಡುಗಡೆಯಾಗುವ ಥಾಲೇಟ್ಗಳಂತಹ ರಾಸಾಯನಿಕಗಳು ಬಿಸಿನೀರು ಮತ್ತು ಉಗಿಗೆ ಒಡ್ಡಿಕೊಂಡಾಗ ಗಾಳಿಯಲ್ಲಿ ಕರಗುತ್ತವೆ. ನೀವು ಸ್ನಾನ ಮಾಡುವಾಗ, ಈ ರಾಸಾಯನಿಕಗಳು ನಿಮ್ಮ ಉಸಿರಾಟದ ಮೂಲಕ ನಿಮ್ಮ ದೇಹವನ್ನು ಸೇರುತ್ತವೆ. ಇದು ಹಾರ್ಮೋನುಗಳ ಅಸಮತೋಲನ, ಅಲರ್ಜಿ, ಉಸಿರಾಟದ ಸಮಸ್ಯೆ ಹಾಗೂ ದೀರ್ಘಾವಧಿಯಲ್ಲಿ ಕ್ಯಾನ್ಸರ್ನಂತಹ ರೋಗಗಳ ಅಪಾಯಕ್ಕೆ ಕಾರಣವಾಗಬಹುದು.
ಶೇವಿಂಗ್ ರೇಜರ್
ಶೇವಿಂಗ್ ರೇಜರನ್ನು ದೀರ್ಘಕಾಲದವರೆಗೆ ಬಾತ್ ರೂಮಿನಲ್ಲಿ ಇಡುವುದು ಅಪಾಯಕಾರಿ. ತೇವಾಂಶದಿಂದಾಗಿ ರೇಜರ್ ಬ್ಲೇಡ್ ಬೇಗನೆ ತುಕ್ಕು ಹಿಡಿಯುತ್ತದೆ. ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ರೇಜರ್ನಿಂದ ಶೇವಿಂಗ್ ಮಾಡಿದಾಗ ಚರ್ಮದ ಗಾಯಗಳು ಮತ್ತು ಸೋಂಕು ಉಂಟಾಗಬಹುದು. ಬಳಕೆಯ ನಂತರ ರೇಜರ್ ಅನ್ನು ಚೆನ್ನಾಗಿ ತೊಳೆದು ಒಣಗಿಸಿ. ಪ್ರತಿ 5 ರಿಂದ 7 ಬಾರಿ ಬಳಸಿದ ನಂತರ ಅದನ್ನು ಎಸೆಯಬೇಕು.
ಶವರ್ ಹೆಡ್
ಹಳೆಯ ಶವರ್ ಹೆಡ್ ಬಳಸೋದು ಅಪಾಯಕಾರಿ. ಬ್ಯಾಕ್ಟೀರಿಯಾಗಳು ಕಾಲಾನಂತರದಲ್ಲಿ ಶವರ್ ಹೆಡ್ನ ರಂಧ್ರಗಳಲ್ಲಿ ಸಂಗ್ರಹವಾಗುತ್ತವೆ. ಇವು ಮೈಕೋಬ್ಯಾಕ್ಟೀರಿಯಂ ಏವಿಯಂನಂತಹ ಬ್ಯಾಕ್ಟೀರಿಯಾಗಳನ್ನು ಹೊಂದಿರುತ್ತವೆ. ಶ್ವಾಸಕೋಶದ ಸೋಂಕಿಗೆ ಇದು ಕಾರಣವಾಗುತ್ತದೆ. ಪ್ರತಿ 6-12 ತಿಂಗಳಿಗೊಮ್ಮೆ ನಿಮ್ಮ ಶವರ್ ಹೆಡ್ ಅನ್ನು ಸ್ವಚ್ಛಗೊಳಿಸಲು ಮರೆಯಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

