ಮಕ್ಕಳ ಹೈಟ್ ಹೆಚ್ಚಿಸಬೇಕಾ, ಈ ಯೋಗಾಸನ ಮಾಡಿ ನೋಡಿ
ಎಲ್ಲಾ ಪೋಷಕರು ಮಗುವಿನ ಎತ್ತರ ಮತ್ತು ಆರೋಗ್ಯದ ಬಗ್ಗೆಯೇ ಹೆಚ್ಚು ಯೋಚ್ನೆ ಮಾಡ್ತಾರೆ. ಮಕ್ಕಳ ಎತ್ತರವು ಒಂದು ನಿರ್ದಿಷ್ಟ ವಯಸ್ಸಿನವರೆಗೆ ಮಾತ್ರ ಹೆಚ್ಚಾಗಬಹುದು, ಆದ್ದರಿಂದ ಪೋಷಕರು ಮಕ್ಕಳನ್ನು ಬಾಲ್ಯದಿಂದಲೇ ಸಕ್ರಿಯವಾಗಿಡಲು ಪ್ರಯತ್ನಿಸುತ್ತಾರೆ. ಅದಕ್ಕಾಗಿ ವಿವಿಧ ರೀತಿಯ ಅಕ್ಟಿವಿಟಿಗಳಲ್ಲಿ ಮಕ್ಕಳನ್ನು ತೊಡಗಿಸುತ್ತಾರೆ.. ನೀವು ನಿಮ್ಮ ಮಕ್ಕಳ ಹೈಟ್ ಹೆಚ್ಚಿಸಲು ಬಯಸುತ್ತೀರಾ? ಹಾಗಿದ್ರೆ ನಿಮ್ಮ ಮಕ್ಕಳ ಆಕ್ಟಿವಿಟಿಯಲ್ಲಿ ಈ ಯೋಗಾಸನ ಸೇರಿಸಿ, ಇದರಿಂದ ಮಕ್ಕಳ ಹೈಟ್ ಹೆಚ್ಚಾಗೋದು ಖಂಡಿತಾ.
ಎತ್ತರವನ್ನು (Height) ಹೆಚ್ಚಿಸಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು, ವಯಸ್ಕರೊಂದಿಗೆ ಮಕ್ಕಳು ದೈನಂದಿನ ದಿನಚರಿಯಲ್ಲಿ ವ್ಯಾಯಾಮ ಮತ್ತು ಯೋಗವನ್ನು ಸಹ ಸೇರಿಸಬೇಕಾಗುತ್ತೆ. ಹೈಟ್ ಹೆಚ್ಚಿಸುವಲ್ಲಿ ತಾಡಾಸ ಅತ್ಯಂತ ಪರಿಣಾಮಕಾರಿ ಯೋಗಾಸನವೆಂದು ಹೇಳಲಾಗುತ್ತೆ. ಇದನ್ನು ನಿಯಮಿತವಾಗಿ ಅಭ್ಯಾಸ ಮಾಡೋದರಿಂದ, ಹೈಟ್ ಹೆಚ್ಚಾಗುತ್ತೆ ಎಂದು ಹೇಳಲಾಗುತ್ತೆ, ಜೊತೆಗೆ ಒಟ್ಟಾರೆ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತೆ.
ಮಗುವಿನ ಎತ್ತರ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು, ದಿನಕ್ಕೆ ಕನಿಷ್ಠ ಒಂದು ಗಂಟೆಗಳ ಕಾಲ ದೈಹಿಕ ಚಟುವಟಿಕೆಯನ್ನು ಮಾಡೋದು ಬಹಳ ಮುಖ್ಯ. ಮಕ್ಕಳನ್ನು ಆರೋಗ್ಯವಾಗಿಡಲು ಯಾವ ಯೋಗಾಸನ (Yoga) ಮತ್ತು ವ್ಯಾಯಾಮಗಳನ್ನು ಬಳಸಬಹುದು ಎಂದು ತಿಳಿಯೋಣ. ಅದಕ್ಕಾಗಿ ನೀವು ಮುಂದೆ ಓದಬೇಕು.
ತಾಡಾಸನವು (Tadasana) ತುಂಬಾ ಪ್ರಯೋಜನಕಾರಿ
ಮಗುವು ನಿಯಮಿತವಾಗಿ ತಾಡಾಸನವನ್ನು ಮಾಡಬೇಕು. ತಾಡಾಸನದಿಂದ ಎತ್ತರವು ಹೆಚ್ಚಾದಂತೆ, ಮಗುವಿನಲ್ಲಿ ಸಮತೋಲನ ಕೌಶಲ್ಯಗಳನ್ನು ಸಹ ಅಭಿವೃದ್ಧಿಪಡಿಸಲಾಗುತ್ತೆ. ಹಾಗಿದ್ರೆ ತಾಡಾಸನ ಮಾಡೋದು ಹೇಗೆ? ಇದರಿಂದ ಮಕ್ಕಳಿಗೆ ಏನೆಲ್ಲಾ ಪ್ರಯೋಜನ ಸಿಗಲಿದೆ ಅನ್ನೋದರ ಬಗ್ಗೆ ತಿಳಿಯಲು ನೀವು ಮುಂದೆ ಓದಿ.
ತಾಡಾಸನವನ್ನು ಮಾಡಲು ನೇರವಾಗಿ ನಿಂತುಕೊಳ್ಳಿ. ನಂತರ ಎರಡೂ ಕೈಗಳನ್ನು ಒಟ್ಟಿಗೆ ಮೇಲೆತ್ತಬೇಕು.
ಕೈಗಳ ಮುಷ್ಟಿ ಕಟ್ಟಿ, ನಂತರ ಒಂದು ಕಾಲನ್ನು ಮೇಲೆತ್ತಿ ಇನ್ನೊಂದು ಕಾಲಿನ ತೊಡೆಯ ಮೇಲೆ ಇಡಬೇಕು. ಈ ಭಂಗಿಯಲ್ಲಿ ಸ್ವಲ್ಪ ಕಾಲ ಇರಿ, ನಂತರ ಕೈಗಳು ಮತ್ತು ಪಾದಗಳನ್ನು ಕೆಳಗಿಳಿಸಿ.
ಇದೇ ಪ್ರಕ್ರಿಯೆಯನ್ನು ಇನ್ನೊಂದು ಕಾಲಿನಿಂದ ಪುನರಾವರ್ತಿಸಿ. ಪ್ರತಿದಿನ ತಾಡಾಸನ ಮಾಡೋದರಿಂದ ಎತ್ತರವನ್ನು ಹೆಚ್ಚಿಸಲು ಸಹಾಯ ಮಾಡುತ್ತೆ.
ಈ ವ್ಯಾಯಾಮಗಳು ಆರೋಗ್ಯವನ್ನು ಸುಧಾರಿಸುತ್ತವೆ
ತಾಡಾಸನ ಮಾತ್ರವಲ್ಲ ಮಕ್ಕಳ ಹೈಟ್ ಮತ್ತು ಆರೋಗ್ಯ ಹೆಚ್ಚಿಸಲು ಮಕ್ಕಳು ಓಡುವುದು ಅಂದರೆ ರನ್ನಿಂಗ್ (Running) ಮಾಡೋದು ಸಹ ಮುಖ್ಯವಾಗಿದೆ. ಎತ್ತರವನ್ನು ಹೆಚ್ಚಿಸಲು ರನ್ನಿಂಗ್ ಅತ್ಯಂತ ಪ್ರಮುಖ ವ್ಯಾಯಾಮವೆಂದು ಪರಿಗಣಿಸಲಾಗುತ್ತೆ. ಓಟವನ್ನು ಮಕ್ಕಳು ಮಾತ್ರವಲ್ಲದೆ ವಯಸ್ಕರು ಸಹ ಮಾಡಬೇಕು.
ಮಕ್ಕಳ(Children) ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲು ಓಡೋದು ಅತ್ಯುತ್ತಮ ವ್ಯಾಯಾಮವಾಗಿದೆ. ಮಕ್ಕಳು ಈ ವ್ಯಾಯಾಮವನ್ನು ಯಾವಾಗ ಬೇಕಾದರೂ ಮಾಡಬಹುದು. ರನ್ನಿಂಗ್ ಗೆ ಮಕ್ಕಳ ನಡುವೆ ಸ್ಪರ್ಧೆಗಳನ್ನು ಆಯೋಜಿಸಬಹುದು, ಇದು ಅವರು ಮುಂದೆ ಸಾಗಲು ಸಹಾಯ ಮಾಡುತ್ತೆ. ಜೊತೆಗೆ ಮಕ್ಕಳು ಸಹ ಹೆಚ್ಚು ಆಕ್ಟಿವ್ ಆಗಿರುತ್ತಾರೆ.
ಸ್ಕಿಪ್ಪಿಂಗ್ ರೋಪ್(Skipping): ಸ್ಕಿಪ್ಪಿಂಗ್ ಎಂಬುದು ಸಮತೋಲನ ಮತ್ತು ಸಮನ್ವಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಒಂದು ರೀತಿಯ ಏರೋಬಿಕ್ ಚಟುವಟಿಕೆಯಾಗಿದೆ. ಸ್ಕಿಪ್ಪಿಂಗ್ ಬೊಜ್ಜು ಕಡಿಮೆ ಮಾಡುತ್ತೆ ಮತ್ತು ಮಗುವಿನ ಡಯಟ್ ಹೆಚ್ಚಿಸುತ್ತೆ . ಸ್ಕಿಪ್ಪಿಂಗ್ ಹೃದಯ ಬಡಿತವನ್ನು ಹೆಚ್ಚಿಸಲು ಸಹಾಯ ಮಾಡುತ್ತೆ, ಇದರಿಂದಾಗಿ ರಕ್ತ ಪರಿಚಲನೆ ಸುಧಾರಿಸುತ್ತೆ .