MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಹೇರ್​ಸ್ಟೈಲ್​ಗಾಗಿ ಬ್ಯೂಟಿ ಪಾರ್ಲರ್​ಗೆ ಹೋಗುವವರೇ ಎಚ್ಚರ ಎಚ್ಚರ! ಎಡವಟ್ಟಾದರೆ ಭಾರಿ ಅನಾಹುತ...

ಹೇರ್​ಸ್ಟೈಲ್​ಗಾಗಿ ಬ್ಯೂಟಿ ಪಾರ್ಲರ್​ಗೆ ಹೋಗುವವರೇ ಎಚ್ಚರ ಎಚ್ಚರ! ಎಡವಟ್ಟಾದರೆ ಭಾರಿ ಅನಾಹುತ...

ಹೇರ್​ಸ್ಟೈಲ್​ಗಾಗಿ ಬ್ಯೂಟಿ ಸಲೂನ್​ಗಳಿಗೆ ಹೋಗ್ತಿದ್ದೀರಾ? ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಅಪಾಯ? ಏನಿದು ಎಚ್ಚರಿಕೆ? ಇಲ್ಲಿದೆ ನೋಡಿ ಡಿಟೇಲ್ಸ್​... 

2 Min read
Suchethana D
Published : Aug 04 2025, 10:25 PM IST
Share this Photo Gallery
  • FB
  • TW
  • Linkdin
  • Whatsapp
19
ಕೇಶವಿನ್ಯಾಸ ಮಾಡಿಸಿಕೊಳ್ಳುವ ಮುನ್ನ ಇರಲಿ ಎಚ್ಚರ
Image Credit : Google

ಕೇಶವಿನ್ಯಾಸ ಮಾಡಿಸಿಕೊಳ್ಳುವ ಮುನ್ನ ಇರಲಿ ಎಚ್ಚರ

ಹೇರ್​ಸ್ಟೈಲ್​ ಎನ್ನುವುದು ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಮಾತ್ರವಲ್ಲದೇ ಪುರುಷರಲ್ಲಿಯೂ ಈ ಕ್ರೇಜ್​ ಹೆಚ್ಚಾಗಿದೆ. ಅದರಲ್ಲಿಯೂ ಯಾವುದಾದರೂ ಸಿನಿಮಾ ನಟರಂತೆ ಕೇಶ ವಿನ್ಯಾಸ ಮಾಡಿಸಿಕೊಳ್ಳಲು ಪುರುಷರು ಮುಗಿ ಬೀಳುವುದು ಇದೆ. ಇನ್ನು ಬ್ಯೂಟಿ ವಿಷಯದಲ್ಲಿ ಹೆಣ್ಣುಮಕ್ಕಳ ಬಗ್ಗೆ ಹೇಳುವುದೇ ಬೇಡ ಬಿಡಿ. ಇದೇ ಕಾರಣಕ್ಕೆ ತಾನೇ ಬ್ಯೂಟಿ ಸಲೂನ್​ಗಳು ನಾಯಿ ಕೊಡೆಗಳಂತೆ ತಲೆ ಎತ್ತಿ ಎಲ್ಲೆಡೆ ನಿಂತಿರೋದು. ಬ್ಯೂಟಿ ಪಾರ್ಲರ್​ಗಳಲ್ಲಿಯೂ ನೂರೆಂಟು ಬಗೆಗಳ ಸ್ಟೈಲ್​ಗಳು ರಾರಾಜಿಸುತ್ತವೆ. ಅವುಗಳಲ್ಲಿ ಹೆಚ್ಚಿನ ಪ್ರಾಧಾನ್ಯ ಇರುವುದು ಹೇರ್​ಸ್ಟೈಲ್​ಗೆ. ಪುರುಷರ ಹೇರ್​ಸ್ಟೈಲ್​ಗಳಿಗೆ ಇಂದು ಸಕತ್​ ಡಿಮಾಂಡ್​ ಇರುವ ಕಾರಣಕ್ಕಾಗಿಯೇ, ಚಿತ್ರ-ವಿಚಿತ್ರ ಎನ್ನಿಸುವ ಹೇರ್​ಸ್ಟೈಲ್​ಗಳಿಗಾಗಿ ಸಲೂನ್​ಗಳು ಹುಟ್ಟಿಕೊಂಡಿವೆ.

29
ಕೇಶವಿನ್ಯಾಸದಿಂದ ಪ್ರಾಣಕ್ಕೆ ಕುತ್ತಾಗಲೂಬಹುದು!
Image Credit : Google

ಕೇಶವಿನ್ಯಾಸದಿಂದ ಪ್ರಾಣಕ್ಕೆ ಕುತ್ತಾಗಲೂಬಹುದು!

ಅಂದ ಹೆಚ್ಚಿಸಿಕೊಳ್ಳಲು, ಸುಂದರ ಕೇಶ ವಿನ್ಯಾಸದ ಆಸೆಯಿಂದ ಬ್ಯೂಟಿ ಪಾರ್ಲರ್​ಗೆ ಹೋಗುವುದು ತಪ್ಪೇನಲ್ಲ. ಆದರೆ ಕೇಶ ವಿನ್ಯಾಸದ ಸಮಯದಲ್ಲಿ ಮಾಡುವ ಸ್ವಲ್ಪ ಎಡವಟ್ಟು, ಬ್ರೈನ್​ ಸ್ಟ್ರೋಕ್​ಗೆ ಕಾರಣವಾಗಬಹುದು ಎನ್ನುವ ಎಚ್ಚರಿಕೆಯನ್ನು ಸಂಶೋಧಕರು ನೀಡಿದ್ದಾರೆ.

39
ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್‌
Image Credit : Google

ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್‌

ಇದಕ್ಕೆ ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್‌ಗೆ (Beauty Parlour Stroke Syndrome) ಎನ್ನುತ್ತಾರೆ. ಇದನ್ನು salon stroke or beauty treatment stroke ಎಂದೂ ಕರೆಯುತ್ತಾರೆ. ಇಂಥ ಸಮಸ್ಯೆಗೆ ವಿರಳಾತಿವಿರಳ ಜನರು ಒಳಗಾಗಿದ್ದರೂ, ಎಚ್ಚರಿಕೆಯಿಂದ ಇರುವುದು ಒಳಿತು ಎನ್ನುವುದು ಅವರ ಮಾತು.

49
ಕೂದಲು ತೊಳೆಯುವಾಗ ಎಡವಟ್ಟು
Image Credit : Google

ಕೂದಲು ತೊಳೆಯುವಾಗ ಎಡವಟ್ಟು

ಇದು ಹೆಚ್ಚಾಗಿ ಸಮಸ್ಯೆ ಉಂಟು ಮಾಡುವುದು ಕೇಶ ವಿನ್ಯಾಸಕ್ಕೆಂದು ಕೂದಲು ತೊಳೆಯುವಾಗ ಮಾಡಿಕೊಳ್ಳುವ ಎಡವಟ್ಟಿನಿಂದಾಗಿ. ಕೂದಲು ತೊಳೆಯುವಾಗ ಕುತ್ತಿಗೆಯನ್ನು ಸಿಂಕ್​ನಲ್ಲಿ ಇರಿಸಲಾಗುತ್ತದೆ. ಈ ಸಮಯದಲ್ಲಿ ಕುತ್ತಿಗೆಯನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಳ್ಳದೇ ನರಕ್ಕೆ ಪೆಟ್ಟಾಗುವಂತೆ ಇಟ್ಟುಕೊಳ್ಳುವುದರಿಂದ ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್‌ಗೆ ಕಾರಣವಾಗುತ್ತದೆ.

59
ಪಾರ್ಶ್ವವಾಯು ಲಕ್ಷಣ
Image Credit : Google

ಪಾರ್ಶ್ವವಾಯು ಲಕ್ಷಣ

ಇದು ಪಾರ್ಶ್ವವಾಯು ಲಕ್ಷಣಗಳನ್ನು ಅನುಕರಿಸುವ ಅಪರೂಪದ ಸ್ಥಿತಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ. 'ಕೇಶ ವಿನ್ಯಾಸಕರ ಬಳಿಗೆ ಹೋಗಿ ತಲೆಗೆ ಮಸಾಜ್​ ಮಾಡಿಸಿಕೊಳ್ಳುವುದು, ಕೂದಲನ್ನು ತೊಳೆದುಕೊಳ್ಳುವುದು ತುಂಬಾ ಸುಂದರ ಅನುಭೂತಿಯನ್ನು ನೀಡುತ್ತದೆ. ಟೆನ್ಷನ್​ ಆಗಿರುವ ತಲೆಯನ್ನು ಇದು ರಿಲ್ಯಾಕ್ಸ್​ ಮಾಡುತ್ತದೆ, ಇಡೀ ಮೈಗೆ ವಿಶ್ರಾಂತಿ ಸಿಕ್ಕ ಅನುಭವವಾಗುತ್ತದೆ.

69
ಸ್ವಲ್ಪ ಯಾಮಾರಿದ್ರೆ ಇದೇ ಜೀವಕ್ಕೆ ಅಪಾಯ
Image Credit : Google

ಸ್ವಲ್ಪ ಯಾಮಾರಿದ್ರೆ ಇದೇ ಜೀವಕ್ಕೆ ಅಪಾಯ

ಆದರೆ ಸ್ವಲ್ಪ ಯಾಮಾರಿದ್ರೆ ಇದೇ ಜೀವಕ್ಕೆ ಅಪಾಯ ಆಗುತ್ತದೆ' ಎನ್ನುತ್ತಾರೆ ಅವರು. ಆದ್ದರಿಂದ ಕೂದಲನ್ನು ತೊಳೆಯುವ ಸಂದರ್ಭದಲ್ಲಿ ಸ್ವಲ್ಪವೇ ನೋವಾದರೂ, ಅಸಹಜ ಎನ್ನಿಸಿದರೂ ಕೂಡಲೇ ಕುತ್ತಿಗೆಯನ್ನು ಸರಿಪಡಿಸಿಕೊಳ್ಳಬೇಕು ಎನ್ನುವುದು ಅವರ ಮಾತು.

79
ಶ್ಯಾಂಪೂವಿನಿಂದಲೂ ಅಡ್ಡ ಪರಿಣಾಮ
Image Credit : Google

ಶ್ಯಾಂಪೂವಿನಿಂದಲೂ ಅಡ್ಡ ಪರಿಣಾಮ

ಮೊದಲಿಗೆ ಕೇಶ ವಿನ್ಯಾಸಕರು ಬಳಸುವ ಶಾಂಪೂಗಳನ್ನು ಗಮನಿಸಬೇಕು. ಇದು ಕೂಡ ಗಂಭೀರ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡಬಹುದು. ಇದಕ್ಕಿಂತ ಹೆಚ್ಚಾಗಿ ಪಾರ್ಶ್ವವಾಯುವಿಗೆ ಒಳಗಾಗಬಹುದು. ಪಾರ್ಶ್ವವಾಯು ಎಂದರೆ ಮೆದುಳಿಗೆ ರಕ್ತದ ಹರಿವು ಹಠಾತ್ ಕಡಿಮೆಯಾಗುವುದರಿಂದ ಉಂಟಾಗುವ ಮಿದುಳಿನ ದಾಳಿ ಎಂದಿದ್ದಾರೆ.

89
ಬ್ಯಾಕ್‌ವಾಶ್ ಬೇಸಿನ್‌ನಿಂದ ಸಮಸ್ಯೆ
Image Credit : Google

ಬ್ಯಾಕ್‌ವಾಶ್ ಬೇಸಿನ್‌ನಿಂದ ಸಮಸ್ಯೆ

ಅನೇಕ ಸಲೂನ್‌ಗಳಲ್ಲಿ ಕೂದಲು ತೊಳೆಯಲು ಬಳಸುವ ಬ್ಯಾಕ್‌ವಾಶ್ ಬೇಸಿನ್‌ಗಳಲ್ಲಿ ಕುತ್ತಿಗೆಯನ್ನು ಇರಿಸಿದಾಗ, ನೀವೇನಾದರೂ ವಿಚಿತ್ರ ಕೋನದಲ್ಲಿ ಕುಳಿತುಕೊಂಡರೆ ಕುತ್ತಿಗೆಗೆ ನೋವು, ಗಾಯ ಆಗಬಹುದು. ಇದು ಮಾರಣಾಂತಿಕ ಪಾರ್ಶ್ವವಾಯುವಿಗೆ ಕಾರಣವಾಗಬಹುದು ಎಂದು ಸಂಶೋಧನೆ ಸೂಚಿಸುತ್ತದೆ. ಕುತ್ತಿಗೆಯ ಅಸಾಮಾನ್ಯ ಸ್ಥಾನ, ಕುತ್ತಿಗೆಯ ತಿರುಗುವಿಕೆ ಅಥವಾ ಹಠಾತ್ ಜರ್ಕಿಂಗ್ ಚಲನೆಗಳು ಮೆದುಳಿನ ಹಿಂಭಾಗ ಮತ್ತು ಕೆಳಭಾಗಕ್ಕೆ ರಕ್ತವನ್ನು ಪೂರೈಸುವ ಪ್ರಮುಖ ರಕ್ತನಾಳಗಳಲ್ಲಿ ಒಂದನ್ನು ತಳ್ಳಬಹುದು.

99
 ರಕ್ತ ಹೆಪ್ಪುಗಟ್ಟುವಿಕೆ
Image Credit : Google

ರಕ್ತ ಹೆಪ್ಪುಗಟ್ಟುವಿಕೆ

ಇದು ಸಮಸ್ಯೆಯನ್ನು ತಂದೊಡ್ಡುತ್ತದೆ. ಆ ಸಮಯದಲ್ಲಿ, ರಕ್ತ ಹೆಪ್ಪುಗಟ್ಟುವಿಕೆಯಿಂದ ಉಂಟಾಗುವ ಅಡಚಣೆ ಉಂಟಾಗುತ್ತದೆ ಅಥವಾ ಮೆದುಳಿನಲ್ಲಿರುವ ಪ್ರಮುಖ ರಕ್ತನಾಳವು ಸಿಡಿಯುವುದರಿಂದ - ಆಮ್ಲಜನಕ, ಗ್ಲೂಕೋಸ್ ಮತ್ತು ಪೋಷಕಾಂಶಗಳ ಇಳಿಕೆಗೆ ಕಾರಣವಾಗುತ್ತದೆ, ಇದು ಮೆದುಳಿನ ಕೋಶಗಳನ್ನು ಹಾನಿಗೊಳಿಸುತ್ತದೆ ಮತ್ತು ಕೊಲ್ಲುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಸೌಂದರ್ಯ ಸಲಹೆಗಳು
ಆರೋಗ್ಯ
ಮಹಿಳೆಯರು
ಆರೋಗ್ಯ ಸಮಸ್ಯೆಗಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved