MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • 230 ಕೆಜಿಯಿಂದ 75ಕೆಜಿಗೆ ಇಳಿದ ಗಾಯಕ: ಹೇಗಿದ್ದೋರು ಹೇಗಾದ್ರು ನೋಡಿ ಅದ್ನಾನ್ ಸಾಮಿ!

230 ಕೆಜಿಯಿಂದ 75ಕೆಜಿಗೆ ಇಳಿದ ಗಾಯಕ: ಹೇಗಿದ್ದೋರು ಹೇಗಾದ್ರು ನೋಡಿ ಅದ್ನಾನ್ ಸಾಮಿ!

ಜನಪ್ರಿಯ ಗಾಯಕ ಅದ್ನಾನ್ ಸಾಮಿ ಅವರು ಮೊದಲು ಬರೋಬ್ಬರಿ 230 ಕೆಜಿ ತೂಕ ಹೊಂದಿದ್ದರು. ಅವರನ್ನು ನೋಡಿದ್ರೇನೆ, ಅಯ್ಯೋ ಇವರೆಷ್ಟು ದಪ್ಪಗಿದ್ದಾರೆ ಎಂದು ಹೇಳುವಷ್ಟು ತೂಕ ಹೊಂದಿದ್ದರು. ಆದರೆ ಅವರು ಈಗ ಹೇಗಾಗಿದ್ದಾರೆ ಗೊತ್ತಾ? ನೋಡಿದ್ರೇನೆ ಶಾಕ್ ಆಗುತ್ತೆ. 

2 Min read
Suvarna News
Published : Oct 03 2023, 06:09 PM IST
Share this Photo Gallery
  • FB
  • TW
  • Linkdin
  • Whatsapp
110

ಬಾಲಿವುಡ್ ನ ಖ್ಯಾತ ಗಾಯಕ ಅದ್ನಾನ್ ಸಾಮಿ (Adnan Sami) ತಮ್ಮ ಗಾಯನದಿಂದಲೇ ಜನಮನ ಗೆದ್ದಿದ್ದರು. ಆದರೆ ಅವರು ಅದಕ್ಕಿಂತ ಹೆಚ್ಚಾಗಿ ತಮ್ಮ ತೂಕದಿಂದ ಸುದ್ದಿಯಲ್ಲಿರುತ್ತಿದ್ದರು. ಅವರು ಬಾಲಿವುಡ್ ಗೆ ಎಂಟ್ರಿ ಕೊಟ್ಟ ಸಮಯದಲ್ಲಿ ಬರೋಬ್ಬರಿ 230 ಕೆಜಿ ಹೊಂದಿದ್ದರು, ಆದರೆ ಇದೀಗ ಕೇವಲ 75 ಕೆಜಿ ಹೊಂದಿದ್ದಾರೆ. ಹೇಗಿದ್ದ ನಟ, ಹೇಗಾದರು. ಅವರ ಡಯಟ್ ಜರ್ನಿ ಹೇಗಿತ್ತು ನೋಡೋಣ. 
 

210

ಇವರ ವೈಟ್ ಲಾಸ್ ಜರ್ನಿ ಇತರರಿಗೆ ಪ್ರೇರಣೆ: ಅದ್ನಾನ್ ಸಾಮಿ ಅವರ ತೂಕ ಇಳಿಸುವ ಜರ್ನಿಯು (weight loss journey) ಅನೇಕ ಜನರಿಗೆ ಸದೃಢ ಮತ್ತು ಆರೋಗ್ಯವಾಗಿರಲು ಸ್ಫೂರ್ತಿ ನೀಡುತ್ತದೆ. ಇವರು ಹೇಗೆ ತೂಕ ಇಳಿಸಿಕೊಂಡರು ಅನ್ನೋದನ್ನು ನೋಡೋಣ. 

310

155 ಕೆಜಿ ತೂಕ ಇಳಿಸಿಕೊಂಡ ಗಾಯಕ: ಅದ್ನಾನ್ ಸಾಮಿ 155 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಗಾಯಕ ಅದ್ನಾನ್ ಬರೋಬ್ಬರಿ 230 ಕೆಜಿಯಿಂದ 75 ಕೆಜಿಗೆ ಇಳಿದಿದ್ದಾರೆ. ಅದಕ್ಕಾಗಿ ಅವರು ಏನೇನು ಮಾಡಿದ್ದಾರೆ ಗೊತ್ತಾ? 
 

410

ಸ್ಥೂಲಕಾಯತೆಯನ್ನು ತೊಡೆದುಹಾಕಿ: ಅದ್ನಾನ್ ಸಾಮಿ ಅವರ ಫಿಟ್ನೆಸ್ ದಿನಚರಿ (Fitness schedule) ಮತ್ತು ಆಹಾರ ಯೋಜನೆಯನ್ನು ಅನುಸರಿಸುವ ಮೂಲಕ, ನೀವೂ ಕೂಡ ನಿಮ್ಮ ಬೆಳೆಯುತ್ತಿರುವ ಬೊಜ್ಜನ್ನು ತೊಡೆದುಹಾಕಬಹುದು. ಅದಕ್ಕಾಗಿ ಇಲ್ಲಿದೆ ಸಂಪೂರ್ಣ ಫಿಟ್ನೆಸ್ ಟಿಪ್ಸ್ . 

510

ಹಾರ್ಡ್ ವರ್ಕ್ ಮಾಡಲೇಬೇಕು: ನೀವು ಸಹ ತೂಕ ಇಳಿಸಿಕೊಳ್ಳಲು ಬಯಸಿದರೆ, ಗಾಯಕನಂತೆ ಕಷ್ಟಪಟ್ಟು ಕೆಲಸ ಮಾಡುವ ಮೂಲಕ ನೀವು ಸಾಕಷ್ಟು ಬೆವರು ಹರಿಸಬೇಕು. ಅದಕ್ಕಾಗಿ ಹೆವಿ ವರ್ಕ್ ಔಟ್ ಮಾಡಬೇಕು. 
 

610

ಹೆವಿ ವರ್ಕ್ ಔಟ್: ತರಬೇತುದಾರರಿಂದ ಸಲಹೆ ಪಡೆಯುವ ಮೂಲಕ ಹೆವಿ ವ್ಯಾಯಾಮಗಳನ್ನು (heavy workout) ಸಹ ಮಾಡಬಹುದು. ಅದ್ನಾನ್ ಸಾಮಿ ಕೂಡ ವ್ಯಾಯಾಮದ ಸಹಾಯದಿಂದ ಫಿಟ್ ಆಗಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. 

710

ಕಡಿಮೆ ಕಾರ್ಬ್ ಆಹಾರಗಳನ್ನು ಸೇರಿಸಿ: ಗಾಯಕ ಅದ್ನಾನ್ ಸಾಮಿ ಬೊಜ್ಜನ್ನು ದೂರ ಮಾಡಲು ಕಡಿಮೆ ಕಾರ್ಬ್ ಹೊಂದಿರುವ ಆಹಾರಗಳನ್ನು ತಮ್ಮ ಆಹಾರದ ಒಂದು ಭಾಗವನ್ನಾಗಿ ಮಾಡಿಕೊಂಡರು. ಇದು ತೂಕ ಇಳಿಸಲು ಸಹಾಯ ಮಾಡಿದೆ. 

810

ಎಣ್ಣೆಯುಕ್ತ ಆಹಾರವನ್ನು ತಪ್ಪಿಸಿ: ಆರೋಗ್ಯ ತಜ್ಞರ ಪ್ರಕಾರ, ನೀವು ನಿಜವಾಗಿಯೂ ಆರೋಗ್ಯವಾಗಿರಲು ಬಯಸಿದರೆ ಎಣ್ಣೆಯುಕ್ತ ಆಹಾರ ಪದಾರ್ಥಗಳನ್ನು ತಪ್ಪಿಸಬೇಕು. ಎಣ್ಣೆಯುಕ್ತ ಆಹಾರ ಸೇವಿಸಿದ್ರೆ ದೇಹದಲ್ಲಿ ಬೊಜ್ಜು ಬೆಳೆಯುತ್ತಾ ಹೋಗುತ್ತದೆ. ಹಾಗಾಗಿ ಇವುಗಳನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ 
 

910

ಸಮತೋಲನವನ್ನು ಕಾಪಾಡಿಕೊಳ್ಳಿ: ನಿಮ್ಮ ವರ್ಕ್ ಔಟ್ ಶೆಡ್ಯೂಲ್ ಮತ್ತು ಅದ್ನಾನ್ ಸಾಮಿಯಂತಹ ಆಹಾರ ಯೋಜನೆಯ ನಡುವೆ ನೀವು ಸಮತೋಲನವನ್ನು ಕಾಪಾಡಿಕೊಳ್ಳಬೇಕಾದ್ದು ತುಂಬಾನೆ ಮುಖ್ಯ. ಸದೃಢವಾಗಿರಲು ಆಹಾರ ಮತ್ತು ವ್ಯಾಯಾಮ ಎರಡೂ ಮುಖ್ಯ. 

1010

ನಿಯಮಗಳನ್ನು ಪಾಲಿಸಿ: ನೀವು ನಿಜವಾಗಿಯೂ ತೂಕ ಇಳಿಸಲು ಬಯಸಿದ್ರೆ, ತುಂಬಾನೆ ಡೆಡಿಕೇಟ್ ಆಗಿ ಎಲ್ಲವನ್ನೂ ಮಾಡಬೇಕು. ಅಪ್ಪಿ ತಪ್ಪಿಯೂ ನಿಮ್ಮ ವರ್ಕ್ ಔಟ್ ಶೆಡ್ಯೂಲನ್ನು ಮಿಸ್ ಮಾಡುವಂತಿಲ್ಲ. ಅಷ್ಟೇ ಅಲ್ಲ ಚೀಟ್ ಮೀಲ್ ಅಂತೂ ಇಲ್ಲವೇ ಇಲ್ಲ. ಹೀಗೆ ಮಾಡಿದ್ರೆ ಮಾತ್ರ ನಿಮ್ಮ ತೂಕ ಇಳಿಕೆಯಾಗುತ್ತೆ. 
 

About the Author

SN
Suvarna News
ಆಹಾರಕ್ರಮ
ಆಹಾರ
ಆರೋಗ್ಯ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved