ಈ ಒಂದೇ ಒಂದು ಟ್ರಿಕ್‌ನಿಂದ ಟಾಯ್ಲೆಟ್ ರೂಂನ ಪ್ರತಿ ಮೂಲೆಯೂ ಹೊಳೆಯಲಿದೆ
ನಿಮ್ಮ ಟಾಯ್ಲೆಟ್ ರೂಂ ಕಮೋಡ್ ಮೇಲೆ, ಹೊರಗೆ ಕೊಳಕು ಗುರುತುಗಳು ಕಾಣಿಸಿಕೊಂಡರೆ ಅದನ್ನು ಸ್ವಚ್ಛಗೊಳಿಸಲು ಬಹಳಷ್ಟು ಉಜ್ಜಬೇಕು. ಆದರೆ ನೀವೀಗ ವೈರಲ್ ಹ್ಯಾಕ್ ಸಹಾಯದಿಂದ ಯಾವುದೇ ಶ್ರಮವಿಲ್ಲದೆ ಅದನ್ನು ಸ್ವಚ್ಛಗೊಳಿಸಬಹುದು. ಹಾಗಾದರೆ ಕೊಳಕು ಟಾಯ್ಲೆಟ್ ಅನ್ನು ಸ್ವಚ್ಛಗೊಳಿಸುವುದು ಹೇಗೆ ಎಂದು ತಿಳಿಯೋಣ.
- FB
- TW
- Linkdin
Follow Us
)
ಟಾಯ್ಲೆಟ್ ರೂಂ ಅನ್ನು ಸ್ವಚ್ಛವಾಗಿಡುವುದು ಬಹಳ ಮುಖ್ಯ. ಟಾಯ್ಲೆಟ್ ಸೀಟ್ ಸ್ವಚ್ಛವಾಗಿಲ್ಲದಿದ್ದರೆ, ರೋಗಗಳು ಹರಡುವ ಅಪಾಯ ಹೆಚ್ಚಾಗುತ್ತದೆ. ನಿಮ್ಮ ಟಾಯ್ಲೆಟ್ ಸೀಟ್ ಸ್ವಚ್ಛವಾಗಿದ್ದಷ್ಟೂ ಮನೆಯ ಆರೋಗ್ಯ ಮತ್ತು ಪರಿಸರ ಉತ್ತಮವಾಗಿರುತ್ತದೆ. ಟಾಯ್ಲೆಟ್ ರೂಂನಿಂದ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳು ಬಹಳ ವೇಗವಾಗಿ ಹರಡುತ್ತವೆ. ಬೇಸಿಗೆಯಲ್ಲಿ ಇದು ಹೆಚ್ಚಾಗಿ ಸಂಭವಿಸುತ್ತದೆ.
ಅಂದಹಾಗೆ ನಿಮ್ಮ ಟಾಯ್ಲೆಟ್ ರೂಂನಲ್ಲೂ ಕೊಳಕು ಮತ್ತು ಮೊಂಡುತನದ ಕಲೆಗಳು ಗೋಚರಿಸಿದರೆ, ನೀವು ಇನ್ನು ಮುಂದೆ ಚಿಂತಿಸಬೇಕಾಗಿಲ್ಲ. ಒಂದು ಉತ್ತಮ ಹ್ಯಾಕ್ ಸಹಾಯದಿಂದ, ನೀವು ಕಮೋಡ್ ಅನ್ನು ಉಜ್ಜದೆಯೇ ಸ್ವಚ್ಛಗೊಳಿಸಬಹುದು. ಇದಕ್ಕಾಗಿ ನೀವು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಟಾಯ್ಲೆಟ್ ಸೀಟನ್ನು ಪದೇ ಪದೇ ಸ್ವಚ್ಛಗೊಳಿಸುವುದರಿಂದ ಟೈಂ ವೇಸ್ಟ್ ಆಗುತ್ತಿತ್ತು ಅಲ್ಲವೇ, ಆದರೆ ಈಗ ನಿಮ್ಮ ಸಮಯ ಉಳಿತಾಯವಾಗುತ್ತದೆ ಮತ್ತು ಟಾಯ್ಲೆಟ್ ಸೀಟ್, ರೂಂ ಕೂಡ ಸ್ವಚ್ಛವಾಗಿರುತ್ತದೆ. ಹಾಗಾದ್ರೆ ಟಾಯ್ಲೆಟ್ ಸೀಟನ್ನು ಉಜ್ಜದೆಯೇ ಹೇಗೆ ಸ್ವಚ್ಛಗೊಳಿಸಬೇಕೆಂದು ತಿಳಿಯೋಣವೇ?.
ಕ್ಲೀನರ್‌ಗೆ ಬೇಕಾಗುವ ಸಾಮಗ್ರಿಗಳೆಂದರೆ
ಟೂತ್‌ಪೇಸ್ಟ್
ಅಡುಗೆ ಸೋಡಾ
ಲಾಂಡ್ರಿ ಸೋಪ್
ಫಾಯಿಲ್ ಪೇಪರ್ (ವೆಸ್ಟರ್ನ್ ಟಾಯ್ಲೆಟ್ ಆದ್ರೆ ಬೇಕಾಗುವುದು)
ಟಾಯ್ಲೆಟ್ ಸೀಟ್ ಅಥವಾ ರೂಂ ಸ್ವಚ್ಛಗೊಳಿಸುವ ಒಂದು ಟ್ರಿಕ್ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ಹ್ಯಾಕ್ ಮಾಡಲು, ನೀವು ಮೊದಲು ಯಾವುದೇ ಲಾಂಡ್ರಿ ಸೋಪನ್ನು ತುರಿಯುವ ಮಣೆಯ ಸಹಾಯದಿಂದ ತುರಿಯಿರಿ. ತುರಿದ ಸೋಪನ್ನು ಒಂದು ಬಟ್ಟಲಿನಲ್ಲಿ ಹಾಕಿ ಅದರಲ್ಲಿ ಟೂತ್‌ಪೇಸ್ಟ್ ಮತ್ತು ಅಡುಗೆ ಸೋಡಾ ಮಿಶ್ರಣ ಮಾಡಿ. ಈಗ ನೀವು ನಿಮ್ಮ ಸೋಪಿನ ದ್ರಾವಣದಿಂದ ಉಂಡೆಗಳನ್ನು ಕಟ್ಟಬೇಕು. ಅಲ್ಲಿಗೆ ಕ್ಲೀನರ್ ರೆಡಿಯಾಗುತ್ತದೆ.
ಉಂಡೆಗಳ ಮೇಲೆ ಫಾಯಿಲ್ ಪೇಪರ್ (ಎಲ್ಲೆಡೆ ಲಭ್ಯ) ಸುತ್ತಿ, ಅವುಗಳಿಗೆ ಚೆಂಡಿನ ಆಕಾರ ನೀಡಿ. ಪಿನ್ ಸಹಾಯದಿಂದ ಅವುಗಳ ಒಳಗೆ ಸಣ್ಣ ಸಣ್ಣ ರಂಧ್ರಗಳನ್ನು ಮಾಡಿ. ಇಂಡಿಯನ್ ಟಾಯ್ಲೆಟ್ ಉಪಯೋಗಿಸುವವರು ಸಹ ಈ ಟ್ರಿಕ್ ಬಳಸಬಹುದು. ಆದರೆ ಉಂಡೆ ಕಟ್ಟುವ ಬದಲು ರೆಡಿ ಮಾಡಿಕೊಂಡ ಕ್ಲೀನರ್ ಅನ್ನು ಸೀಟ್ ಮೇಲೆ, ರೂಂ ತುಂಬಾ ಸಿಂಪಡಿಸಿ, ಹದಿನೈದು ಅಥವಾ ಅರ್ಧ ಗಂಟೆಯ ನಂತರ ಲೈಟಾಗಿ ಉಜ್ಜಿದರೂ ಕೊಳೆ ಸುಲಭವಾಗಿ ಬಿಡುತ್ತದೆ.
ವೆಸ್ಟರ್ನ್ ಟಾಯ್ಲೆಟ್ ಉಪಯೋಗಿಸುವವರು ರೆಡಿಯಾದ ಉಂಡೆಗಳನ್ನು ಮಾತ್ರ ಫ್ಲಶ್ ಟ್ಯಾಂಕ್‌ನಲ್ಲಿ ಹಾಕಬೇಕು. ಉಂಡೆಗಳಲ್ಲಿರುವ ರಂಧ್ರಗಳಿಂದ ಕ್ಲೀನರ್ ಸೋರಿಕೆಯಾಗಲು ಕಾರಣವಾಗುತ್ತದೆ ಮತ್ತು ನೀರಿನೊಂದಿಗೆ ಬೆರೆತು ಟಾಯ್ಲೆಟ್ ಸೀಟ್ ಅನ್ನು ಸ್ವಚ್ಛಗೊಳಿಸುತ್ತಲೇ ಇರುತ್ತದೆ. ನೀವು ಪ್ರತಿ ಬಾರಿ ಫ್ಲಶ್ ಮಾಡಿದಾಗ, ಟಾಯ್ಲೆಟ್ ಸೀಟ್ ಸ್ವಚ್ಛವಾಗಿರುತ್ತದೆ ಮತ್ತು ಅದರ ವಾಸನೆಯೂ ಹೋಗುತ್ತದೆ.
ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ
*ಶೌಚಾಲಯದಿಂದ ವಾಸನೆ ಬರದಂತೆ ತಡೆಯಲು, ವೆಂಟಿಲೇಶನ್ ಬಗ್ಗೆ ವಿಶೇಷ ಕಾಳಜಿ ವಹಿಸಿ. *ಕಿಟಕಿಯ ಬಳಿ ಎಕ್ಸಾಸ್ಟ್ ಫ್ಯಾನ್ ಅಳವಡಿಸಲು ಮರೆಯಬೇಡಿ.
ವಾರಕ್ಕೊಮ್ಮೆಯಾದರೂ ಶೌಚಾಲಯವನ್ನು ಡೀಪ್ ಆಗಿ ಸ್ವಚ್ಛಗೊಳಿಸಿ.